BBK 12:ಅಶ್ವಿನಿ ಗೌಡ ಎತ್ತಲಾರದೆ ಪರದಾಡಿದ ಗಿಲ್ಲಿ; ಆದ್ರೂ ಶಿಳ್ಳೆ ಸಿಕ್ಕಿದ್ದು ಈ ಜೋಡಿಗೇನೆ!
ಬಿಗ್ ಬಾಸ್ ಕನ್ನಡ 12ನೇ ಸೀಸನ್ ವೀಕ್ಷಕರನ್ನು ಮೆಚ್ಚುಗೆ ಗಳಿಸುತ್ತಾ ಮುನ್ನುಗ್ಗುತ್ತಿದೆ. ಮನೆಯೊಳಗೆ ಇರುವ ಮಹಿಳಾ ಮಣಿಗಳ ಕಿತ್ತಾಟ ಕೊಂಚ ಹೆಚ್ಚಾಗಿದ್ದರೂ, ಆಗಾಗ ಸಿಗುತ್ತಿರೋ ಟ್ವಿಸ್ಟ್ ಅಂಡ್ ಟರ್ನ್ ಬಿಗ್ ಬಾಸ್ ಮುಂದೆ ಪ್ರೇಕ್ಷಕರನ್ನು ಕೂರುವಂತೆ ಮಾಡುತ್ತಿದೆ. ಇನ್ನು ವೈಲ್ಡ್ ಕಾರ್ಡ್ ಮೂಲಕ ರಘು, ರಿಶಾ ಹಾಗೂ ಸೂರಜ್ ಈ ಮೂವರು ಎಂಟ್ರಿ ಕೊಟ್ಮೇಲೆ ಇನ್ನಷ್ಟು ಕಳೆ ಬಂದಿದೆ.
ಹಿಂದೆಂದಿಗಿಂತಲೂ ಈ ಬಾರಿಯ ಬಿಗ್ ಬಾಸ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಹೀಗಾಗಿ ಕಲರ್ಸ್ ಕನ್ನಡ ಬಹಳ ವರ್ಷಗಳ ಬಳಿಕ ಟಿಆರ್‌ಪಿಯಲ್ಲಿ ಜೀ ಕನ್ನಡವನ್ನು ಹಿಂದಿಕ್ಕಿ ಮತ್ತೆ ನಂಬರ್ ಒನ್ ಸ್ಥಾನಕ್ಕೇರಿದೆ. ಇದು ಬಿಗ್ ಬಾಸ್‌ಗಿರುವ ಜನಪ್ರಿಯತೆಯನ್ನು ಸಾರಿ ಹೇಳುತ್ತಿದೆ.

ಸದ್ಯ ವೀಕ್ಷಕರ ನೆಚ್ಚಿನ ಸ್ಪರ್ಧಿಗಳಲ್ಲಿ ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿಗೆ ಹೆಚ್ಚು ಫಾಲೋವರ್ಸ್ ಹುಟ್ಟಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರ ಫೋಟೊಗಳನ್ನು, ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ತಮ್ಮ ಬೆಂಬಲವನ್ನು ಸೂಚಿಸುತ್ತಿದ್ದಾರೆ. ಅದರಲ್ಲೂ ಗಿಲ್ಲಿ ನಟ ಕಾಮಿಡಿ ಪಂಚ್‌ಗಳಿಗೆ ವೀಕ್ಷಕರು ಟಿವಿ ಬಿಟ್ಟು ಎದ್ದೇಳುತ್ತಿಲ್ಲ. ಅದರಲ್ಲೂ ಇವತ್ತಿನ ಎಪಿಸೋಡ್‌ನ ಕೊನೆಯ ಕ್ಷಣಗಳು ಕಿರುತೆರೆ ವೀಕ್ಷಕರಿಗೆ ಸಿಕ್ಕಾಪಟ್ಟೆ ಮನರಂಜನೆ ನೀಡಿದೆ.
ಬಿಗ್ ಬಾಸ್ ಕಾಲೇಜ್‌ನಲ್ಲಿ ಫೆಸ್ಟ್
ರಘು ಕ್ಯಾಪ್ಟನ್ ಆಗಿರುವ ಈ ವಾರದಲ್ಲಿ ಬಿಗ್ ಬಾಸ್ ಕಾಲೇಜ್ ಹಾಗೂ ಸ್ಟುಡೆಂಟ್‌ಗಳ ಟಾಸ್ಕ್ ಕೊಟ್ಟಿದೆ. ಹೀಗಾಗಿ ರಘು ಕಾಲೇಜು ಪ್ರಿನ್ಸಿಪಾಲ್ ಆಗಿದ್ದರೆ, ಉಳಿದವರು ಸ್ಟುಡೆಂಟ್‌ಗಳಾಗಿದ್ದಾರೆ. ಈ ಟಾಸ್ಕ್‌ನಲ್ಲಿ ಗಿಲ್ಲಿ ನಟ, ಚಂದ್ರಪ್ರಭ, ಸೂರಜ್ ಸೇರಿದಂತೆ ಎಲ್ಲರೂ ಉತ್ತಮ ಪ್ರದರ್ಶನ ಕೊಟ್ಟಿದ್ದಾರೆ. ಇದರ ಭಾಗವಾಗಿ ಬಿಗ್ ಬಾಸ್ ಕಾಲೇಜಿನಲ್ಲಿ ಫೆಸ್ಟ್ ನಡೆದಿದೆ. ಇದರಲ್ಲಿ ಸ್ಟುಡೆಂಟ್‌ಗಳಾಗಿರುವ ಮನೆಯವರು ಡ್ಯಾನ್ಸ್ ಪರ್ಫಾಮೆನ್ಸ್ ನೀಡಿದ್ದಾರೆ.
ಮನೆ ಬಂದ ಸ್ಪೆಷಲ್ ಗೆಸ್ಟ್
ಬಿಗ್ ಬಾಸ್ ಮನೆಯೊಳಗೆ ನಡೆಯುತ್ತಿರುವ ಫೆಸ್ಟ್‌ಗೆ ಇಬ್ಬರು ನಟಿಯರು ಅತಿಥಿಗಳಾಗಿ ಆಗಮಿಸಿದ್ದರು. ಅದರಲ್ಲಿ ಒಬ್ಬರು ಕಲರ್ಸ್ ಕನ್ನಡದ 'ಭಾಗ್ಯಲಕ್ಷ್ಮಿ' ಧಾರಾವಾಹಿಯ ಸುಷ್ಮಾ ರಾವ್ ಹಾಗೂ ಇಬ್ಬರು ಪ್ರಿಯಾ ಆಚಾರ್. ಇವರ ಸಮ್ಮುಖದಲ್ಲಿ ಮನೆಯ ಸದಸ್ಯರು ಡ್ಯಾನ್ಸ್ ಪರ್ಫಾಮೆನ್ಸ್ ಮಾಡಿದ್ದಾರೆ. ಇವರಲ್ಲಿ ಸೂರಜ್ ಹಾಗೂ ಕಾವ್ಯಾ ಜೋಡಿ ರೊಮ್ಯಾಂಟಿಕ್ ಸ್ಟೆಪ್ ಹಾಕಿದ್ದರೆ, ಉಪ್ಪಿ ಹಾಡಿಗೆ ಚಂದ್ರಪ್ರಭ, ಧ್ರುವಂತ್ ಹಾಗೂ ಅಭಿಷೇಕ್ ಹೆಜ್ಜೆ ಹಾಕಿದ್ದರು. ಈ ಎರಡೂ ಡ್ಯಾನ್ಸ್‌ಗಳಿಗೆ ಮೆಚ್ಚುಗೆ ಸಿಕ್ಕಿದ್ದವು.

ಅಶ್ವಿನಿ ಗೌಡ-ಗಿಲ್ಲಿ ನಟನಿಗೆ ಶಿಳ್ಳೆ
ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ಇಬ್ಬರೂ ಅಭಿ ಸಿನಿಮಾದ ಸುಮ್ ಸುಮ್ನೆ ಓಳು ಬಿಡೋ ಸುಂದರಿ ಹಾಡಿಗೆ ಹೆಜ್ಜೆ ಹಾಕಿದ್ದರು. ಹಾವು ಮುಂಗುಸಿಯಂತೆ ಆಡುತ್ತಿರುವ ಇವರಿಬ್ಬರೂ ಒಂದೇ ಹಾಡಿಗೆ ಸ್ಟೆಪ್ ಹಾಕುವ ಪರಿಸ್ಥಿತಿ ಎದುರಾಗಿತ್ತು. ಇಬ್ಬರೂ ಚಾಲೆಂಜಿಂಗ್ ಆಗಿ ತೆಗೆದುಕೊಂಡಿದ್ದರು. ಇದರಲ್ಲಿ ಗಿಲ್ಲಿ ನಟ ಅಶ್ವಿನಿ ಗೌಡರನ್ನು ಎತ್ತಲು ಪರದಾಡಿದ ದೃಶ್ಯ ವೀಕ್ಷಕರಿಗೆ ಮನರಂಜನೆ ಕೊಟ್ಟಿದೆ. ಹಾಗೇ ಈ ಜೋಡಿ ತೀರ್ಪುಗಾರರ ಗಮನ ಸೆಳೆಯುವಲ್ಲಿ ಯಶಸ್ವಿ ಆಯ್ತು.
ಮನೆಯಲ್ಲಿ ಮತ್ತೆ ಕಿತ್ತಾಟ
ಬಿಗ್ ಬಾಸ್ ಮನೆಯಲ್ಲಿ ಪ್ರತಿ ದಿನ ಅಶ್ವಿನಿ ಗೌಡ, ಕಾವ್ಯಾ ಹಾಗೂ ರಕ್ಷಿತಾ ಶೆಟ್ಟಿ ಮಧ್ಯೆ ಕಿತ್ತಾಟ ನಡೆಯುತ್ತಲೇ ಇದೆ. ಒಂದಲ್ಲ ಒಂದು ವಿಷಯಕ್ಕೆ ಈ ಮೂವರು ಕಿತ್ತಾಡುತ್ತಲೇ ಇರುತ್ತಾರೆ. ಇಂದಿನ ಎಪಿಸೋಡ್‌ನಲ್ಲೂ ಕೂಡ ಈ ಮೂವರೂ ಜೋರಾಗಿ ಕಿತ್ತಾಡಿಕೊಂಡಿದ್ದಾರೆ.


Click it and Unblock the Notifications











