BBK 12: ರಕ್ಷಿತಾ-ಧ್ರುವಂತ್ ಎಲಿಮಿನೇಷನ್ ಆಗಿಲ್ಲ.. ಬಿಗ್ ಬಾಸ್ ಕಳಿಸಿದ್ದೆಲ್ಲಿಗೆ?
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡಬೇಕು ಅಂತ ನಿರ್ಧಾರ ಮಾಡಿದಂತೆ ಇದೆ. ಪ್ರತಿ ವೀಕೆಂಡ್‌ನಲ್ಲೂ ಏನಾದರೂ ಒಂದು ಅಚ್ಚರಿ ಮನೆಯವರಿಗೆ ಎದುರಾಗಿದೆ. ಈ ವಾರ ಕೂಡ ಡಬಲ್ ಎಲಿಮಿನೇಷನ್ ಅಂತ ಪ್ರೋಮೋ ಬಿಟ್ಟು ವೀಕ್ಷಕರಿಗೆ ನಿದ್ದೆ ಕೆಡಿಸಿದ್ದರು. ಅದರಲ್ಲೂ ವೀಕ್ಷಕರ ಫೇವರಿಟ್ ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಇಬ್ಬರೂ ಎಲಿಮಿನೇಟ್ ಆಗಿರೋದನ್ನು ರಿವೀಲ್ ಮಾಡಿದ್ದರು.
ಇದು ವೀಕ್ಷಕರ ಅಚ್ಚರಿಗೂ ಕಾರಣವಾಗಿತ್ತು. ಸಾಮಾನ್ಯವಾಗಿ ಎಲಿಮಿನೇಷನ್ ವಿಚಾರವನ್ನು ಗೌಪ್ಯವಾಗಿಯೇ ಇಡುವ ಬಿಗ್ ಬಾಸ್, ಇದೇ ಮೊದಲ ಬಾರಿಗೆ ಪ್ರೋಮೊದಲ್ಲಿಯೇ ರಿವೀಲ್ ಮಾಡಿತ್ತು. ಇದು ವೀಕ್ಷಕರ ಅಚ್ಚರಿಗೆ ಕಾರಣವಾಗಿತ್ತು. ಇಲ್ಲೇನೋ ಟ್ವಿಸ್ಟ್ ಇದೆ ಅನ್ನೋದು ಗೊತ್ತಾಗಿದ್ದರೂ, ಕೊನೆಗೂ ಬಿಗ್ ಬಾಸ್ ಕೂಡ ಆ ಕುತೂಹಲವನ್ನು ಹಾಗೇ ಉಳಿಸಿಕೊಂಡಿತ್ತು.

ಇನ್ನು ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ಕೊನೆಯಲ್ಲಿ ಎಲಿಮಿನೇಟ್ ಆಗಿದ್ದು ನೋಡಿ ಶಾಕ್ ಆಗಿದ್ದರು. ಹಾಗೇ ಮನೆ ಮಂದಿನೂ ತಲೆಕೆಡಿಸಿಕೊಂಡಿದ್ದರು. ಅದರಲ್ಲೂ ರಕ್ಷಿತಾ ಶೆಟ್ಟು ಎಲಿಮಿನೇಟ್ ಆಗಿದ್ದು ಮನೆಯ ಸದಸ್ಯರಿಗೆ ನಂಬೋಕೆ ಆಗುತ್ತಿಲ್ಲ. ಎಂದಿನಂತೆ ವೀಕ್ಷಕರಿಗೆ ಟ್ವಿಸ್ಟ್ ಕಾದಿತ್ತು. ಇಬ್ಬರೂ ಎಲಿಮಿನೇಟ್ ಆಗಿಲ್ಲ. ಹೀಗಾಗಿ ವೇದಿಕೆ ಮೇಲೆ ಬಂದಿಲ್ಲ. ಹಾಗಿದ್ದರೆ, ಎಲ್ಲಿಗೆ ಹೋದರು?
ಬಿಗ್ ಬಾಸ್ ಮನೆಯಲ್ಲಿ ಸೀಕ್ರೆಟ್ ರೂಮ್ ಕಾನ್ಸೆಪ್ಟ್ ಕಳೆದ ಸೀಸನ್‌ನಲ್ಲಿ ಇರಲಿಲ್ಲ. ಹೀಗಾಗಿ ಈ ವಾರ ಮತ್ತೆ ಸೀಕ್ರೆಟ್ ರೂಮ್ ಅನ್ನು ಇಟ್ಟಿದ್ದಾರಾ? ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ಇಬ್ಬರನ್ನೂ ಅಲ್ಲಿಗೆ ಕಳುಹಿಸುತ್ತಾರಾ? ಈ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಯಾಕಂದ್ರೆ, ಕಿಚ್ಚ ಸುದೀಪ್ ಈ ಸುಳಿವನ್ನು ಬಿಟ್ಟುಕೊಟ್ಟಿಲ್ಲ. ಆದರೆ, ಎಲ್ಲೋ ಕಳಿಸುತ್ತಾರೆ. ಮತ್ತೆ ಮನೆಯೊಳಗೆ ಹೋಗ್ತಾರೆ ಅನ್ನೋ ಸುಳಿವನ್ನಂತೂ ಬಿಟ್ಟು ಕೊಟ್ಟಿದ್ದಾರೆ.
ಹೀಗಾಗಿ ಬಿಗ್ ಬಾಸ್ ಮುಂದಿನ ನಡೆಯೇನು? ಇವರಿಬ್ಬರನ್ನು ಎಲ್ಲಿಗೆ ಕಳಿಸಿದ್ದಾರೆ? ಅನ್ನೋದು ಸೋಮವಾರದ ಎಪಿಸೋಡ್‌ನಲ್ಲಿ ಗೊತ್ತಾಗಲಿದೆ. ಆದರೆ, ಕಹಾನಿ ಮೇ ಟ್ವಿಸ್ಟ್ ಅನ್ನೋ ಹಾಗೇ. ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಇಬ್ಬರಿಗೂ ಆತ್ಮೀಯತೆ ಏನೂ ಇಲ್ಲ. ಇಬ್ಬರೂ ಮನೆಯೊಳಗೆ ಕಿತ್ತಾಡಿಕೊಂಡವರೇ. ಅದರಲ್ಲೂ ರಕ್ಷಿತಾ ಶೆಟ್ಟಿ ಮೇಲೆ ಧ್ರುವಂತ್‌ಗೆ ಸಿಕ್ಕಾಪಟ್ಟೆ ಅಸಮಧಾನವಿದೆ. ಇವರಿಬ್ಬರನ್ನೂ ಸೀಕ್ರೆಟ್ ರೂಮ್‌ಗೆ ಕಳುಹಿಸಿದರೆ, ಅಲ್ಲಿ ವಾತಾವರಣ ಹೇಗಿರುತ್ತೆ? ಅನ್ನೋ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ.

ಬಿಗ್ ಬಾಸ್ ಕನ್ನಡದಲ್ಲಿ ಈ ವಾರ ವೋಟಿಂಗ್ ಪ್ರಕ್ರಿಯೆ ಆರಂಭ ಆಗಿರಲಿಲ್ಲ. ಹಾಗಿದ್ದರೂ ಇಬ್ಬರು ಬಿಗ್ ಬಾಸ್ ಮನೆಯಿಂದ ಹೇಗೆ ಹೊರ ಬಂದರು ಅನ್ನೋದು ವೀಕ್ಷಕರಿಗೆ ಅಚ್ಚರಿಯಾಗಿದ್ದರೂ, ಕೊನೆಯಲ್ಲಿ ಕಿಚ್ಚ ಸುದೀಪ್ ಅಸಲಿ ಮ್ಯಾಟರ್ ಅನ್ನು ರಿವೀಲ್ ಮಾಡಿದ್ದಾರೆ. ಹೀಗಾಗಿ ವೀಕ್‌ಡೇಸ್‌ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಹೊಸ ಆಟ ಶುರುವಾಗಲಿದೆ.
ಸದ್ಯ ಮನೆ ಮಂದಿ ಕೂಡ ಶಾಕ್ ಆಗಿದ್ದಾರೆ. ಅದರಲ್ಲೂ ರಕ್ಷಿತಾ ಶೆಟ್ಟಿ ಮನೆಯಿಂದ ಹೊರ ಹೋಗಿರೋದು ಬಿಗ್ ಬಾಸ್ ಸದಸ್ಯರು ನಂಬಲಾರದ ಸ್ಥಿತಿಯಲ್ಲಿ ಇದ್ದಾರೆ. ರಘು, ಗಿಲ್ಲಿ, ರಜತ್ ಸಿಕ್ಕಾಪಟ್ಟೆ ಬೇಸರ ವ್ಯಕ್ತ ಪಡಿಸಿದ್ದರೆ, ಇತ್ತ ಮಾಳು ನಿಪಾಳ ಹಾಗೂ ಅಶ್ವಿನಿ ಗೌಡ ಕಣ್ಣೀರು ಹಾಕಿದ್ದಾರೆ. ಇನ್ನು ಕೆಲವರು ಬಿಗ್ ಬಾಸ್ ಕೊಟ್ಟಿರೋ ಟ್ವಿಸ್ಟ್‌ಗೆ ಲೆಕ್ಕಾಚಾರ ಹಾಕುತ್ತಾ ಕೂತಿದ್ದಾರೆ. ಧ್ರುವಂತ್ ಹಾಗೂ ರಕ್ಷಿತಾ ಎಲಿಮಿನೇಟ್ ಆಗಿದ್ದು, ಮನೆ ಮಂದಿ ನಂಬಲಾರದ ಸ್ಥಿತಿಯಲ್ಲಿದೆ. ಇನ್ನು ಸೋಮವಾರದ ಎಪಿಸೋಡ್‌ನಿಂದ ಬಿಗ್ ಬಾಸ್ ಮನೆ ಹೇಗಿರುತ್ತೆ? ಎಲಿಮಿನೇಟ್ ಆಗಿದ್ದಾರೆಂದು ನಂಬಿರುವ ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಬಗ್ಗೆ ಏನೆಲ್ಲಾ ಚರ್ಚೆ ಆಗುತ್ತೆ? ಅನ್ನೋದನ್ನು ಮುಂದೆ ತಿಳಿಯುತ್ತಾ ಹೋಗುತ್ತೆ.


Click it and Unblock the Notifications











