ರಾತ್ರಿಯೆಲ್ಲ ಸಿನಿಮಾ ವೀಕ್ಷಣೆ..ತಂದೆ ಜೊತೆ ಜಗಳ..ಮನೆ ಬಿಟ್ಟು ಹೋಗಿದ್ದ ಗಿಲ್ಲಿ; ಮತ್ತೆ ಹಿಂತಿರುಗಿದ್ದೇಗೆ?

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಗಿಲ್ಲಿ ನಟ ಗಮನ ಸೆಳೆಯುತ್ತಿದ್ದಾರೆ. ಕಾಮಿಡಿ ಮಾಡಿ ಕಿರಿತೆರೆ ವೀಕ್ಷಕರನ್ನು ಮೋಡಿ ಮಾಡುತ್ತಿರುವ ಗಿಲ್ಲಿಗೆ ಫೇಮಸ್ ಆಗಿದ್ದಾರೆ. ಎಲ್ಲರೂ ಗಿಲ್ಲಿ ನಟನ ಹಾಸ್ಯಕ್ಕೆ ಫಿದಾ ಆಗಿದ್ದಾರೆ. ಕಾಮಿಡಿ ಕಿಲಾಡಿಗಳು ವೇದಿಕೆ ಮೇಲೆ ಇವರ ನಟನೆಯನ್ನು ನೋಡಿ ನಕ್ಕು ಸುಸ್ತಾಗುತ್ತಿದ್ದ ಜನರು ಈಗ ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಕ್ವಾಟ್ಲೆ ಕೊಡುವುದನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ.

ಗಿಲ್ಲಿ ನಟ ಇಂದು ಪ್ರತಿಯೊಬ್ಬ ಕನ್ನಡಿಗರಿಗೂ ಗೊತ್ತು. ಬಿಗ್ ಬಾಸ್ ಕನ್ನಡ ಸೀಸನ್ 12 ಗೆಲ್ಲುವ ಸ್ಪರ್ಧಿಗಳ ಪಟ್ಟಿಯಲ್ಲಿ ಇವರೂ ಇದ್ದಾರೆ. ಬಿಗ್ ಬಾಸ್‌ಗೆ ಎಂಟ್ರಿ ಕೊಡುತ್ತಿದ್ದಂತೆ ಗಿಲ್ಲಿಗೆ ಹುಟ್ಟಿಕೊಂಡಿರುವ ಅಭಿಮಾನಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಆದರೆ, ಮಂಡ್ಯ ಜಿಲ್ಲೆಯ ಚಿಕ್ಕ ಹಳ್ಳಿಯೊಂದರಲ್ಲಿ ಜನಿಸಿದ ಗಿಲ್ಲಿ ನಟ ಬಿಗ್‌ಬಾಸ್‌ವರೆಗೂ ಬಂದಿದ್ದೇಗೆ? ಗಿಲ್ಲಿ ನಟನ ಅಸಲಿ ಹೆಸರೇನು? ಮನೆ ಬಿಟ್ಟು ಹೋಗಿದ್ದ ಗಿಲ್ಲಿ ಮತ್ತೆ ಹಿಂತಿರುಗಿದ್ದು ಯಾವಾಗ? ಇದೆಲ್ಲವನ್ನೂ ಗಿಲ್ಲಿ ನಟನ ತಂದೆ ಕನ್ನಡ ಸುದ್ದಿ ಸಮಾಚಾರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಅದರದ್ದೊಂದು ಝಲಕ್ ಇಲ್ಲಿದೆ.

BBK 12 Contestant Gilli Nata s Father Reveals Why He Left Home After Completing ITI Exam

"ಅವನಿಗೆ ಸಿಕ್ಕಾಪಟ್ಟೆ ಕೆಲಸ ಕೊಡುತ್ತಿದ್ದೆ. ಬಿಗ್‌ಬಾಸ್‌ನಲ್ಲಿ ಶರ್ಟ್‌ ಬಿಚ್ಚಿಟ್ಟು ಬನಿಯಾನ್‌ನಲ್ಲಿ ಇರುತ್ತಾನೆ. ಅದೇ ರೀತಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ನನಗೆ ಹುಷಾರಿಲ್ಲ ಅಂದಾಗ ಕುರಿಗಳನ್ನೂ ಮೇಯಿಸಿಕೊಂಡು ಬಂದಿದ್ದಾನೆ. ಅಂತಹ ಮನುಷ್ಯ ಇವತ್ತು ನನ್ನ ಮುಂದೆ ಮೈಕ್ ಹಿಡಿಸಿದ್ದಾನೆ ಅಂದರೆ, ಬಹಳ ಹೆಮ್ಮೆ ಎನಿಸುತ್ತೆ." ಎಂದು ಗಿಲ್ಲಿ ನಟನ ತಂದೆ ಹೇಳಿದ್ದಾರೆ.

ಗಿಲ್ಲಿ ನಟ ಅವರ ಹಳ್ಳಿಯ ಸಮೀಪವಿರುವ ಬಂಡೂರಿನ ಶಾಲೆಯಲ್ಲಿ ಹೈಸ್ಕೂಲ್‌ ಮುಗಿಸಿದ್ದರು. ಆಮೇಲೆ ಕೆಎಂ ದೊಡ್ಡಿಯಲ್ಲಿ ಶಿಕ್ಷಣ ಮುಂದುವರೆಸಿದ್ದರು. ನಂತರ ಐಟಿಐ ಪಾಸ್ ಮಾಡಿದ್ದರು. ಅವರ ತಂದೆ ಮಗನನ್ನು ಬಿಎಚ್‌ಇಎಲ್‌ನಲ್ಲಿ ಕೆಲಸಕ್ಕೆ ಸೇರಿಸಬೇಕು ಅಂದುಕೊಂಡಿದ್ದರು. ಆದರೆ, ಐಟಿಐ ರಿಸಲ್ಟ್ ಬರುವುದಕ್ಕೂ ಮುನ್ನವೇ ಗಿಲ್ಲಿ ಮನೆ ಬಿಟ್ಟು ಹೋಗಿದ್ದರು. ಐಟಿಐನಲ್ಲಿ ಮೊದಲೇ ಎರಡು ಸಬ್ಜೆಕ್ಟ್‌ನಲ್ಲಿ ಫೇಲ್ ಆಗಿದ್ದರು. ಈ ಬಾರಿ ಕೂಡ ಫೇಲ್ ಆಗಿರಬೇಕು. ಅದಕ್ಕೆ ಮನೆ ಬಿಟ್ಟು ಹೋಗಿದ್ದಾನೆ ಎಂದು ತಂದೆ ಅಂದುಕೊಂಡಿದ್ದರು. ಆದರೆ, ಮನೆಯಲ್ಲಿ ಕೆಲಸಕ್ಕೆ ಕಳುಹಿಸುತ್ತಾರೆಂದು ಗಿಲ್ಲಿ ನಟ ಊರು ಬಿಟ್ಟು ಹೋಗಿದ್ದರೆಂದು ತಂದೆ ನೆನಪಿಸಿಕೊಂಡಿದ್ದಾರೆ.

BBK 12 Contestant Gilli Nata s Father Reveals Why He Left Home After Completing ITI Exam

"ರಜೆ ಸಿಕ್ಕಿತು ಅಂದರೆ, ಬೆಳಗ್ಗೆವರೆಗೂ ಸಿನಿಮಾಗಳನ್ನು ನೋಡಿದ್ದ. ಅವನಿಗೂ ನನಗೂ ಬೆಳಗ್ಗೆ ಆಗೋವರೆಗೂ ಗಲಾಟೆ ನಡೆಯುತ್ತಿತ್ತು. ಯಾಕಿಷ್ಟು ನಿದ್ದೆ ಮಾಡುವುದಕ್ಕೆ ಬಿಡುತ್ತಿಲ್ಲ ಎಂದು ಗಲಾಟೆ ಮಾಡುತ್ತಿದ್ದೆ. ಆದರೆ, ಕುರಿ ಮೇಯಿಸುವವನ ಮಗ ಇವತ್ತು ಹೀಗಾಗಿದ್ದಾನೆ ಅಂದರೆ, ಬಹಳ ಸಂತೋಷ ಆಗುತ್ತೆ." ಎಂದು ಗಿಲ್ಲಿ ನಟನ ತಂದೆ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಮನೆಬಿಟ್ಟು ಹೋಗಿದ್ದ ಗಿಲ್ಲಿ ನಟ 'ನಲ್ಲಿ ಮೂಳೆ' ಅಂತ ಒಂದು ಸಿನಿಮಾದಲ್ಲಿ ನಟಿಸಿದ್ದರು. ಆಗಲೇ ಊರಿಗೆ ಹಿಂತಿರುಗಿ ಬಂದಿದ್ದರು ಎಂದು ತಂದೆ ನೆನಪಿಸಿಕೊಳ್ಳುತ್ತಾರೆ. "ಮನೆ ಬಿಟ್ಟು ಹೋದ್ಮೇಲೆ ಸೆಟ್ಟಿ ಕೆಲಸ ಒಂದೆರಡಲ್ಲ. ಏನೇನೋ ವಿಚಿತ್ರ ಕೆಲಸ ಮಾಡಿದ್ದಾನೆ. ಈ ನಲ್ಲಿ ಮೂಳೆ ಅನ್ನೋ ಸಿನಿಮಾ ತೆಗೆದು, ಅದನ್ನು ಮೊಬೈಲ್‌ಗೆ ಬಿಟ್ಮೇಲೆ ಊರಿಗೆ ವಾಪಸ್ ಬಂದಿದ್ದು." ಎನ್ನುತ್ತಾರೆ.

'ನಲ್ಲಿ ಮೂಳೆ' ಶಾರ್ಟ್‌ ಫಿಲ್ಮ್‌ನಲ್ಲಿ ನಟಿಸಿದ ಬಳಿಕ ಕಾಮಿಡಿ ಕಿಲಾಡಿಗಳು ಸೇರಿಕೊಂಡರು. ಅಸಲಿಗೆ ಅವರ ನಿಜವಾದ ಹೆಸರೇನು ಗೊತ್ತೇ? ಮನೆಯಲ್ಲಿ ಅಪ್ಪ-ಅಮ್ಮ ಇಟ್ಟ ಹೆಸರು ನಟರಾಜ್. ಶಾರ್ಟ್ ಫಿಲ್ಮ್‌ನಲ್ಲಿ ನಟಿಸಿದ ಮೇಲೆ ಗಿಲ್ಲಿ ನಟ ಅಂತ ಫೇಮಸ್ ಆದರು. ಅಂದಿನಿಂದ ಇಂದಿನವರೆಗೂ ಕನ್ನಡಿಗರಿಗೆ ಗಿಲ್ಲಿ ನಟ ಅಂತಲೇ ಜನಪ್ರಿಯರಾಗಿ ಬಿಟ್ಟರು. ಕಿರು ಚಿತ್ರದಲ್ಲಿ ಗಿಲ್ಲಿ ನಟಿಸುತ್ತಿದ್ದಂತೆ ಅವರ ತಂದೆ ಕೂಡ ಏನಾದರೂ ಮಾಡಲಿ ಅಂತ ಬಿಟ್ಟು ಬಿಟ್ಟಿದ್ದರು. ಈಗ ಬಿಗ್ ಬಾಸ್‌ವರೆಗೂ ಬಂದು ನಿಂತಿದ್ದಾರೆಂದು ಯೂಟ್ಯೂಬ್ ಚಾನೆಲ್‌ಗೆ ಹೇಳಿದ್ದಾರೆ.

More from Filmibeat

English summary
BBK 12 Contestant Gilli Nata’s Father Reveals Why He Left Home After Completing ITI Exam;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X