BBK 12: ಬಿಗ್ ಬಾಸ್ ಮನೆಯಿಂದ ಹೊರ ಬಂದ ಜಾಹ್ನವಿ; ಮಗ ಕೊಟ್ಟ ಕಾರಣಗಳೇನು?
ಬಿಗ್ ಬಾಸ್ ಕನ್ನಡ ಸೀಸನ್ 12ರ ಮತ್ತೊಬ್ಬ ಸದಸ್ಯ ಹೊರ ಬಂದಿದ್ದಾರೆ. ಈ ವಾರ ಬಿಗ್ ಬಾಸ್ ಇಬ್ಬರಿಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿತ್ತು. ಆದರೆ, ಒಬ್ಬರನ್ನು ಮನೆಯಿಂದ ಹೊರಗೆ ಕರೆದುಕೊಂಡು ಬಂದಿದೆ. ಈ ವೀಕೆಂಡ್‌ನಲ್ಲಿ ಜಾಹ್ನವಿ ಮನೆಯಿಂದ ಹೊರಗೆ ಬರುತ್ತಾರೆಂದು ನಿರೀಕ್ಷೆ ಮಾಡಿರಲಿಲ್ಲ. ಧ್ರುವಂತ್ ಹಾಗೂ ಮಾಳು ನಿಪನಾಳ ಇಬ್ಬರ ಮೇಲೆ ತೂಗುಗತ್ತಿ ತೇಲಾಡುತ್ತಿತ್ತು.
ಕಳೆದ ಮೂರು ನಾಲ್ಕು ವಾರಗಳಿಂದ ಬಿಗ್ ಬಾಸ್ ಮನೆಯಲ್ಲಿ ಅಚ್ಚರಿಯ ಎಲಿಮಿನೇಷನ್ ಆಗುತ್ತಿದೆ. ಚಂದ್ರಪ್ರಭ ಅವರಿಂದ ಶುರುವಾಗಿದ್ದ ಎಲಿಮಿನೇಷನ್ ಪ್ರಕ್ರಿಯೆ ಜಾಹ್ನವಿವರೆಗೂ ಮುಂದುವರೆದಿದೆ. ಗಿಲ್ಲಿ ಜೊತೆ ಕಾವ್ಯಾ ಹೆಸರು ತಳುಕು ಹಾಕಿಕೊಂಡಂತೆ, ಅಶ್ವಿನಿ ಜೊತೆ ಜಾಹ್ನವಿ ಹೆಸರು ಸೇರಿಕೊಂಡಿತ್ತು. ಇಡೀ ಶೋ ಉದ್ದಕ್ಕೂ ಅಶ್ವಿನಿ ಹಾಗೂ ಜಾಹ್ನವಿ ಹೆಸರುಗಳೇ ಕೇಳಿ ಬಂದಿದ್ದೇ ಹೆಚ್ಚು.

ಈ ಹಿಂದೆನೇ ಜಾಹ್ನವಿಯವರಿಗೆ ಅವರ ಮಗ ಬರೆದ ಪತ್ರ ಬರೆದಿದ್ದರು. ಆ ಲೆಟರ್‌ನಲ್ಲಿ ಚಿಕ್ಕದೊಂದು ಸುಳಿವನ್ನು ನೀಡಿದ್ದರು. ಬಿಗ್ ಬಾಸ್ ಕೂಡ ಎಲ್ಲಾ ಸ್ಪರ್ಧಿಗಳಿಗೆ ನೀಡದಂತೆ ಜಾಹ್ನವಿಗೂ ಸುಳಿವು ನೀಡಿದ್ದೂ ಇದೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ದಿನದಿಂದಲೂ ಜಾಹ್ನವಿಯವರು ಚರ್ಚೆಯಲ್ಲಿ ಇದ್ದರು. ಹೀಗಿದ್ದೂ ಎಲಿಮಿನೇಟ್ ಆಗುವುದಕ್ಕೆ ಏನು ಕಾರಣ? ಅವರ ಮಗನೇ ಕೊಟ್ಟ ಉತ್ತರವೇನು? ತಿಳಿಯುವುದಕ್ಕೆ ಮುಂದೆ ಓದಿ.
ಜಾಹ್ನವಿ ಸದಾ ಅಶ್ವಿನಿ ಗೌಡ ಜೊತೆ ಅಂಟಿಕೊಂಡಿದ್ದರೂ ಅವರು ಹೆಸರು ಚಾಲ್ತಿಯಲ್ಲಿ ಇತ್ತು. ಬಿಗ್ ಬಾಸ್ ಕೊಟ್ಟ ಟಾಸ್ಕ್‌ಗಳಲ್ಲಿ ಆಕ್ವೀವ್ ಆಗಿಯೇ ಭಾಗವಹಿಸಿದ್ದರು. ಈ ಟಾಸ್ಕ್‌ಗಳಲ್ಲಿ ಗೆದ್ದು ಮನೆ ಮಂದಿಯ ಮೆಚ್ಚುಗೆಯನ್ನೂ ಗಳಿಸಿದ್ದರು. ಮನೆ ಮಂದಿಗೆ ಒಳ್ಳೊಳ್ಳೆ ಅಡುಗೆ ಮಾಡಿ ಬಡಿಸಿದ್ದರು. ವಾದ-ವಿವಾದ ಅಂತ ಬಂದಾಗಲೂ ಜಾಹ್ನವಿ ಮುಂದಿದ್ದರು. ಹಾಗಿದ್ದರೂ ಮಿಸ್ ಆಗಿದ್ದು ಎಲ್ಲಿ?
ಜಾಹ್ನವಿಯವರನ್ನು ಕಿಚ್ಚ ಸುದೀಪ್ ವೇದಿಕೆ ಮೇಲೆ ಕರೆದು ಕಾರಣಗಳನ್ನು ಕೇಳಿದ್ದರು. ಈ ವೇಳೆ ಬಿಗ್ ಬಾಸ್ ಮನೆಯಲ್ಲಿ ಜಾಹ್ನವಿಯವರ ಜರ್ನಿಯ ವಿಟಿ ಕೂಡ ಪ್ಲೇ ಆಗಿತ್ತು. ಜಾಹ್ನವಿ ಇನ್ನೂ ಎಮೋಷನಲ್ ಆಗಿಯೇ ಇದ್ದಿದ್ದು ಕಂಡು ಬಂದಿತ್ತು. ಈ ವೇಳೆ ಜಾಹ್ನವಿಯವರ ಅಮ್ಮ ಬಳಿ ಕಿಚ್ಚ ಸುದೀಪ್ ಕಾರಣಗಳನ್ನು ಕೇಳಿದ್ದರು. ಆಗ ಅವರು ಕಿಚ್ಚನಿಗೆ ಕಾರಣಗಳನ್ನು ಹೇಳುವಂತೆ ಹೇಳಿದ್ದರು. ಈ ವೇಳೆ ಜಾಹ್ನವಿ ಪುತ್ರನನ್ನು ಕಿಚ್ಚ ಸುದೀಪ್ ವೇದಿಕೆಗೆ ಕರೆದರು. ಆಗ ಜಾಹ್ನವಿ ಹೊರ ಬರುವುದಕ್ಕೆ ಎರಡು ಕಾರಣಗಳನ್ನು ಕೊಟ್ಟರು.

"ಚೆನ್ನಾಗಿ ಆಡುತ್ತಿದ್ದರು. ಸೂಪರ್ ಆಗಿ ಆಡುತ್ತಿದ್ದರು. ಬರೀ ಕಿರುಚಾಡದೇ.. ಮನೆಯಲ್ಲೂ ಕಿರುಚಾಡದೇ, ಇಲ್ಲೂ ಕಿರುಚಾಡದೇ. ಅಶ್ವಿನಿಯವರು ಅಮ್ಮ ಇಬ್ಬರೂ ಯಾವಾಗಲೂ ಒಟ್ಟಿಗೆ ಇರುತ್ತಾರೆ. ಎಲ್ಲರ ಜೊತೆಗೂ ಮಾತಾಡಬೇಕಿತ್ತು." ಎಂದು ಜಾಹ್ನವಿ ಪುತ್ರ ಹೇಳಿದ್ದರೆ, ಕಿಚ್ಚ ಜಾಹ್ನವಿ ಅಮ್ಮನ ಕಡೆಗೆ ಮುಖ ಮಾಡಿ, ತಾಯಿ ಕರುಳು ಇವೆಲ್ಲವನ್ನೂ ನೋಡಿರಲ್ಲ ಎಂದು ತಮಾಷೆ ಮಾಡಿದ್ದಾರೆ.
ಇದೇ ವೇದಿಕೆ ಮೇಲೆ ಎಲ್ಲಿ ಮಿಸ್ ಆಯ್ತು ಅನ್ನೋದನ್ನು ಜಾಹ್ನವಿಯವೇ ವಿವರಿಸಿದ್ದಾರೆ. "ಕೆಲವರು ಅರ್ಥ ಮಾಡಿಕೊಳ್ಳದೆ ನನ್ನ ಬಗ್ಗೆ ಮಾತಾಡಿದ್ದು, ಚಿಣಿಮಿಣಿ ರೀಸನ್ ಎಲ್ಲವೂ ಅರ್ಥ ಮಾಡಿಕೊಳ್ಳದೆ ಹೇಳಿದರು ಅಂತ ಅನಿಸಿತ್ತು. ಮನೆಯಲ್ಲಿ ಅಶ್ವಿನಿಯವರನ್ನು ತುಂಬಾನೇ ಮಿಸ್ ಮಾಡುತ್ತೇನೆ. ಬಿಗ್ ಬಾಸ್ ಮನೆಗೆ ಬಂದಾಗ ನನಗೆ ಅಶ್ವಿನಿಯವರೊಂದಿಗೆ ಸೆಟ್ ಆಗುತ್ತಿರಲಿಲ್ಲ. ಅವರು ನನ್ನನ್ನು ನಾಮಿನೇಟ್ ಮಾಡಿರುತ್ತಾರೆ. ಅಸುರ ಟಾಸ್ಕ್‌ನಲ್ಲಿ ನಾವು ಒಂದಾಗುತ್ತೇವೆ. ಆಗ ತುಂಬಾ ವಿಷಯ ಮಾತಾಡಿಕೊಂಡಿದ್ದೇವೆ. ನಾನು ಸಿಂಗಲ್ ಪೇರೆಂಟ್. ಅವರೂ ಸಿಂಗಲ್ ಪೇರೆಂಟ್. ಕೆಲವು ವಿಷಯಗಳನ್ನು ನಿಧಾನವಾಗಿ ಹೇಳಿದರೆ ಕೇಳುತ್ತಾರೆ" ಎಂದು ಜಾಹ್ನವಿ ಹೇಳಿದ್ದಾರೆ.


Click it and Unblock the Notifications











