BBK 12: ಗಿಲ್ಲಿ ನಟನ ಮಾತುಗಳಿಗೆ ನೊಂದು ಕಣ್ಣೀರು ಹಾಕಿದ ಕಾವ್ಯಾ; ಗಿಲ್ಲಿ ಮೇಲೆ ಮುನಿಸಿಕೊಂಡ ಕಾವು

ಬಿಗ್ ಬಾಸ್ ಕನ್ನಡ ಸೀಸನ್ 12 ವೀಕ್ಷಕರಿಗೆ ಮಸ್ತ್ ಮನರಂಜನೆ ನೀಡುತ್ತಿದೆ. ಗಿಲ್ಲಿ ನಟ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ಹಾಗೂ ರಘು ಮಧ್ಯೆ ಪೈಪೋಟಿ ನಡೆಯುತ್ತಿದೆ. ಈ ನಾಲ್ಕು ಮಂದಿ ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಹವಾ ಸೃಷ್ಟಿಸಿದ್ದಾರೆ. ಟಾಸ್ಕ್‌ಗಳಲ್ಲಾಗಲಿ, ಮುಂದಾಳತ್ವ ವಹಿಸಿಕೊಳ್ಳುವುದರಲ್ಲಾಗಲಿ ಇವರು ಮುಂದಿದ್ದಾರೆ. ಇವರೊಂದಿಗೆ ಕಾವ್ಯಾ, ಜಾಹ್ನವಿ, ರಾಶಿಕಾ ಕೂಡ ತಕ್ಕ ಮಟ್ಟಿಗೆ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ.

ಬಿಗ್ ಬಾಸ್ ಆರಂಭ ಆದ ದಿನದಿಂದಲೂ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ನಡುವೆ ಪೈಪೋಟಿ ಇದೆ. ಇಬ್ಬರೂ ಹಾವು ಮುಂಗುಸಿಯಂತೆ ಆಡುತ್ತಿದ್ದಾರೆ. ಇತ್ತೀಚೆಗೆ ಗಿಲ್ಲಿ ನಟ ಬಿಗ್ ಬಾಸ್ ಮನೆಯ ಸದಸ್ಯರನ್ನು ಗೇಲಿ ಮಾಡುತ್ತಿರುವುದು ಯಾರಿಗೂ ಹಿಡಿಸುತ್ತಿಲ್ಲ. ಅದರಲ್ಲೂ ಪ್ರತಿಯೊಂದು ತನ್ನದೇ ಸರಿ ಎಂದು ವಾದಕ್ಕೆ ಬೀಳುವ ಗಿಲ್ಲಿ ಇಲ್ಲಿವರೆಗೂ ಗಳಿಸಿದ್ದ ಜನರ ಪ್ರೀತಿಯನ್ನು ಕಳೆದುಕೊಳ್ಳುತ್ತಿದ್ದಾರೆ ಎನಿಸುತ್ತಿದೆ.

BBK 12 Contestant Kavya Shaiva cried because of Gilli Nata behavior in November 19th episode

ಈ ಮಧ್ಯೆ ಗಿಲ್ಲಿ ನಟ ಹಾಗೂ ನಟಿ ಕಾವ್ಯಾ ಶೈವ ಅವರ ಟ್ರ್ಯಾಕ್ ಬೇರೆ ನಡೆಯುತ್ತಿದೆ. ಕಾವ್ಯಾಗೆ ಸದಾ ಬೆಂಬಲವಾಗಿ ಗಿಲ್ಲಿ ನಿಲ್ಲುತ್ತಿದ್ದರು. ಅತ್ತ ಗಿಲ್ಲಿಗೆ ಸಪೋರ್ಟಿವ್ ಆಗಿ ಕಾವ್ಯಾ ಇರುತ್ತಿದ್ದರು. ಆದರೆ, ಕಳೆದ ಎರಡು ದಿನಗಳಿಂದ ಗಿಲ್ಲಿ ಮೇಲೆ ಕಾವ್ಯಾಗೆ ಬೇಸರ ಆಗಿದೆ. ಕಾವ್ಯಾಗೂ ಕಾಮಿಡಿ ಮಾಡಿ ಬೇಸರ ಮಾಡುತ್ತಿದ್ದಾರೆ. ಇಂದಿನ ಎಪಿಸೋಡ್‌ನಲ್ಲಿ ಗಿಲ್ಲಿ ಈ ವರ್ತನೆ ಕಂಡು ಕಾವ್ಯಾ ಕಣ್ಣೀರು ಹಾಕಿದ್ದಾರೆ.

ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ನಡುವಿನ ಕಿತ್ತಾಟ ತಾರಕ್ಕೇರಿದೆ. ಗಿಲ್ಲಿಯ ವರ್ತನೆ ಅಶ್ವಿನಿ ಗೌಡ ಕಣ್ಣೀರು ಹಾಕುವಂತೆ ಮಾಡಿದೆ. ಬಿಗ್ ಬಾಸ್ ಮನೆಯಿಂದ ಹೊರ ಹೋಗುವುದಕ್ಕೂ ನಿರ್ಧರಿಸಿದ್ದರು. ಅದು ಟಾಸ್ಕ್‌ನಲ್ಲಿಯೂ ಮುಂದುವರೆದಿತ್ತು. ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ಇಬ್ಬರೂ ಒಂದೊಂದು ತಂಡದ ಮುಂದಾಳತ್ವವನ್ನು ವಹಿಸಿಕೊಂಡಿದ್ದರು. ಅಲ್ಲೂ ಇವರ ಕಿತ್ತಾಟ ಮುಂದುವರೆದಿತ್ತು. ಆದರೆ, ಗಿಲ್ಲಿ ನಟನ ತಂಡ ಎರಡೂ ಪಂದ್ಯಗಳನ್ನೂ ಸೋತಿತ್ತು. ಇದರಿಂದ ಗಿಲ್ಲಿ ಮೂಡ್ ಆಫ್ ಆಗಿತ್ತು.

ಇತ್ತ ಕಾವ್ಯಾ ಕೂಡ ಗಿಲ್ಲಿ ನಟನ ಬಗ್ಗೆ ಅಸಮಾಧಾನ ಹೊರ ಹಾಕಿದರು. ಕಾವ್ಯಾರನ್ನು ಸಮಾಧಾನ ಮಾಡುವುದಕ್ಕೆ ಅದೆಷ್ಟೇ ಪ್ರಯತ್ನ ಪಟ್ಟರೂ ಗಿಲ್ಲಿ ನಟನಿಂದ ಸಾಧ್ಯವಾಗಿಲ್ಲ. ಕಾವ್ಯಾ ಮೂಡ್ ಆಫ್ ಆಗಿತ್ತು. ಒಂಟಿಯಾಗಿ ಕೂತುಕೊಂಡಿದ್ದರು. ಅಲ್ಲಿಗೂ ಹೋಗಿ ಕ್ಷಮೆ ಕೇಳಿದರೂ ಕಾವ್ಯಾ ಮನಸ್ಸು ಕರಗಲಿಲ್ಲ. ಅಲ್ಲಿಂದ ಎಂದು ವಾಶ್ ರೂಮ್ ಬಳಿ ಬಂದು ಕಣ್ಣೀರು ಹಾಕಿದ್ದಾರೆ.

BBK 12 Contestant Kavya Shaiva cried because of Gilli Nata behavior in November 19th episode

ಗಿಲ್ಲಿ ಆರಂಭದ ದಿನಗಳಲ್ಲಿ ತಮ್ಮ ಹಾಸ್ಯ ಪ್ರಜ್ಞೆಗಳಿಂದ ವೀಕ್ಷಕರನ್ನು ಹಾಗೂ ಮನೆಯವರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಿದ್ದರು. ಗಿಲ್ಲಿಯ ಕಾಮಿಡಿಗೆ ಪ್ರತ್ಯೇಕ ಫ್ಯಾನ್ ಫಾಲೋವಿಂಗ್ ಕೂಡ ಹುಟ್ಟಿಕೊಂಡಿತ್ತು. ಆದರೆ, ಇತ್ತೀಚೆಗೆ ಯಾಕೋ ಅವರ ಎಲ್ಲೆ ಮೀರಿ ಹಾಸ್ಯ ಮಾಡುತ್ತಿದ್ದಾರೆ ಎಂದು ಎನಿಸುವುದಕ್ಕೆ ಶುರುವಾಗಿದೆ. ಅಶ್ವಿನಿಗೌಡ ಏನೇ ಹೇಳಿದರೂ ಅದಕ್ಕೆ ಬೇಕಂತೆಲೇ ತಿರುಗೆಟು ಕೊಡುವುದು, ಅವರನ್ನು ಹಿಯಾಳಿವುದನ್ನು ಮಾಡಿದ್ದರು. ಇದರಿಂದ ಅಶ್ವಿನಿ ಗೌಡ ಕಣ್ಣೀರು ಹಾಕಿದ್ದರು.

ಇದರ ಹಿಂದೇನೆ ಕಾವ್ಯಾ ಕೂಡ ಗಿಲ್ಲಿಗೆ ಅರ್ಥ ಮಾಡಿಸುವುದಕ್ಕೆ ಪ್ರಯತ್ನ ಪಟ್ಟರು. ಆದರೆ, ಗಿಲ್ಲಿ ನಟ ಇವೆಲ್ಲವನ್ನೂ ಕೇಳಿಸುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಇದರಿಂದ ನೊಂದುಕೊಂಡ ಕಾವ್ಯಾ ಬೇಸರ ಪಟ್ಟುಕೊಂಡು ಅಲ್ಲಿಂದ ಹೊರ ನೆಡೆದು ಬೆಡ್ ರೂಮ್‌ಗೆ ಬಂದಿದ್ದರು. ಅಲ್ಲೂ ಕೂಡ ಬಂದ ಗಿಲ್ಲಿ ಕ್ಷಮೆ ಕೇಳಿದರೂ, ಕಾವ್ಯಾ ಮನಸ್ಸು ಸರಿ ಹೋಗಲಿಲ್ಲ.

More from Filmibeat

English summary
BBK 12 Contestant Kavya Shaiva cried because of Gilli Nata behavior in November 19th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X