BBK 12: ಬಿಗ್‌ ಬಾಸ್ ಮನೆಯಿಂದ ಹೊರಬಂದ ಮಲ್ಲಮ್ಮ; ಮಾಳು ನಿರ್ಧಾರ ಒಪ್ಪದ ಕಿಚ್ಚ

ಬಿಗ್ ಬಾಸ್ ರಿಯಾಲಿಟಿ ಶೋ ಕೆಲವು ತೀರಾ ಭಾವುಕ ಅಂತ ಅನಿಸಿಬಿಡುತ್ತೆ. ಅದರಲ್ಲೂ ವೀಕೆಂಡ್‌ನಲ್ಲಿ ಆಗುವ ಎಲಿಮಿನೇಷನ್‌ ರೌಂಡ್ ಸ್ಪರ್ಧಿಗಳಿಗೂ ಕಷ್ಟ. ಕಿಚ್ಚನಿಗೂ ಕಷ್ಟ. ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮೂರನೇ ವಾರ ನಡೆದ ಮೊದಲ ಫಿನಾಲೆ ವಾರದಲ್ಲಿ ಮೂವರು ಮಂದಿಯನ್ನು ಎಲಿಮಿನೇಟ್ ಮಾಡಿದ್ದಷ್ಟೇ. ಆಮೇಲೆ ಎಲಿಮಿನೇಷನ್ ಅನ್ನೋದು ನಡೆದಿರಲಿಲ್ಲ. ಆದರೆ, ಈ ವಾರ ಯಾರಾದರೂ ಒಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಹೋಗೋದು ಖಚಿತವಿತ್ತು.

ಈ ವಾರ ಬಿಗ್‌ ಬಾಸ್ ಯಾರಾದರೂ ಒಬ್ಬರನ್ನು ಎಲಿಮಿನೇಟ್ ಮಾಡೋದು ಕನ್ಫರ್ಮ್ ಆಗಿತ್ತು. ಬಿಗ್ ಬಾಸ್ ಮನೆಯಿಂದ ಯಾರು ಹೊರಬರಬಹುದೆಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದ ಮಲ್ಲಮ್ಮ ಇಲ್ಲಿವರೆಗೂ ಬಿಗ್ ಬಾಸ್ ಮನೆಯಲ್ಲಿದ್ದು, ವೀಕ್ಷಕರ ಗಮನ ಸೆಳೆದಿದ್ದರು. ಈ ವಾರ ಅವರು ಎಲಿಮಿನೇಟ್ ಆಗಿದ್ದಾರೆ.

BBK 12 contestant Mallamma eliminated from Bigg Boss Kannada Rakshitha Shetty Dhruvanth emotional

ಎಲಿಮಿನೇಷನ್ ರೌಂಡ್‌ನಲ್ಲಿ ಕೊನೆಯದಾಗಿ ಇಬ್ಬರು ಉಳಿದುಕೊಂಡಿದ್ದರು. ಗಾಯಕ ಮಾಳು ನಿಪನಾಳ ಹಾಗೂ ಮಲ್ಲಮ್ಮ. ಇವರಿಬ್ಬರಲ್ಲಿ ಒಬ್ಬರು ಮನೆಯಿಂದ ಹೊರ ಹೋಗುವುದಕ್ಕೆ ಖಚಿತ ಎಂದು ಕಿಚ್ಚ ಸುದೀಪ್ ಹೇಳುತ್ತಿದ್ದಂತೆ ಮನೆ ಮಂದಿ ಭಾವುಕರಾಗಿದ್ದರು. ಗ್ರಾಮೀಣ ಪ್ರದೇಶದಿಂದ ಬಂದು, ಎಜ್ಯುಕೇಷನ್ ಲಿಮಿಟೇಷನ್ ಇಟ್ಕೊಂಡು, ಹಣಕಾಸಿನ ಹಿನ್ನೆಲೆ ಇಲ್ಲದೆ. ತಾವೇ ತಮ್ಮ ವ್ಯಕ್ತಿತ್ವದಿಂದ ಹೆಸರು ಮಾಡಿ, ಬಿಗ್ ಬಾಸ್‌ಗೆ ಬಂದಿದ್ದೀರ ಅಂದರು ಅದು ಸಾಧಾರಾಣ ಅಲ್ಲ ಎಂದು ಈ ವೇಳೆ ಕಿಚ್ಚ ಸುದೀಪ್ ಹೇಳಿದ್ದು ಎಲ್ಲರನ್ನೂ ಭಾವುಕರನ್ನಾಗಿಸಿತ್ತು.

ಈ ಹಂತದಲ್ಲಿ ಮಾಳು ನಿಪನಾಳ ಅವರಿಗೆ ಕಿಚ್ಚ ಸುದೀಪ್ ಈ ವಾರ ಮನೆಯಿಂದ ನೀವು ಹೋಗಬೇಕೋ? ಮಲ್ಲಮ್ಮ ಹೊರ ಬರಬೇಕೋ? ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಮಾಳು "ಇಬ್ಬರೂ ಇನ್ನೊಂದಿಷ್ಟು ದಿನ ಇರಬೇಕು" ಎಂದು ಹೇಳಿದ್ದರು. ಆಗ ಈ ಪ್ರಶ್ನೆ ಮಲ್ಲಮ್ಮನ ಕಡೆಗೆ ಬಂತು. " ಯಾರು ಉಳಿದುಕೊಳ್ಳಬೇಕು ಅಂತ ನೀವೇ ತೀರ್ಮಾನ ಮಾಡಬೇಕು" ಎಂದು ಹೇಳಿದರು. ಇಬ್ಬರ ಉತ್ತರವನ್ನು ಕೇಳಿದ ಬಳಿಕ, ಕಿಚ್ಚ ಒಬ್ಬರ ಜರ್ನಿ ವಿಡಿಯೋ ಪ್ರಸಾರ ಆಗುತ್ತೆ. ಅವರು ಮನೆಯಿಂದ ಹೊರಬರುತ್ತಾರೆ ಎಂದು ಹೇಳಿದರು.

BBK 12 contestant Mallamma eliminated from Bigg Boss Kannada Rakshitha Shetty Dhruvanth emotional

ಈ ವೇಳೆ ಮಲ್ಲಮ್ಮನ ವಿಡಿಯೋ ಪ್ರಸಾರ ಆಯ್ತು. ಇದು ಧ್ರುವಂತ್ ಹಾಗೂ ರಕ್ಷಿತಾ ಕಣ್ಣಲ್ಲಿ ನೀರು ಬರುವಂತೆ ಮಾಡಿದ್ದವು. ಈ ವಿಡಿಯೋ ನೋಡುತ್ತಿದ್ದಂತೆ ಮಾಳು ನಿಪನಾಳ ಕಿಚ್ಚ ಸುದೀಪ್ ಬಳಿ ಒಂದು ಮನವಿ ಮಾಡಿಕೊಂಡಿದ್ದರು. "ಮಲ್ಲಮ್ಮ ಅವರೇ ಇಲ್ಲಿ ಇರಲಿ ಅಂತ ಹೇಳುವುದಕ್ಕೆ ಇಷ್ಟ ಪಡುತ್ತೇನೆ." ಎಂದು ಹೇಳಿದ್ದರು. ಆಗ ಕಿಚ್ಚ ನಿಮ್ಮ ಒಳ್ಳೆಯತನಕ್ಕೆ ನಾನು ಗೌರವ ಕೊಡುತ್ತೇನೆ. ಆದರೆ, ನಾವು ಗೌರವ ಕೊಡಬೇಕಾಗಿದ್ದು, ಹೊರಗಡೆ ಜನತೆಯಿಂದ ಬಂದ ವೋಟ್‌ಗಳಿಗೆ. ನಿಮ್ಮ ಹಾಗೂ ಮನೆಯವರ ಮನಸ್ಥಿತಿ ಅರ್ಥ ಆಗುತ್ತೆ. ಆದರೆ, ನಾವು ಗೌರವ ಕೊಡೋದು ಜನರ ತೀರ್ಪು" ಎಂದು ಕಿಚ್ಚ ಹೇಳಿ ಸಮಾಧಾನ ಮಾಡಿದ್ದರು.

ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಲಿಮಿನೇಟ್ ಆದ ಸ್ಪರ್ಧಿಗೆ ವಿಶೇಷ ಗೌರವದೊಂದಿಗೆ ಬೀಳ್ಕೊಡುಗೆ ನೀಡಲಾಯಿತು. ಮಲ್ಲಮ್ಮ ಮನೆಯಿಂದ ನಿರ್ಗಮಿಸುವಾಗ ಮನೆಯೊಳಗೆ ಇದ್ದ ಸ್ಪರ್ಧಿಗಳ ಕಣ್ಣುಗಳಲ್ಲಿ ನೀರಿದ್ದವು. ಮನೆಯಿಂದ ನಿರ್ಗಮಿಸಿದ ಬಳಿಕ ಮನೆಯೊಳಗೆ ಇರುವವರು ಮಿಸ್ ಮಾಡಿಕೊಳ್ಳುತ್ತಿದ್ದರು. ಮನೆಯಿಂದ ತೆರಳುವಾಗ ಮಲ್ಲಮ್ಮಗೆ ಮತ್ತೊಂದು ಒಗಟು ಹೇಳುವಂತೆ ಕೇಳಿದ್ದರು. ಆಗ ಮಲ್ಲಮ್ಮ "ಅತ್ತೆ-ಸೊಸೆ ಇಬ್ಬರು, ಗಂಡ-ಹೆಂಡತಿ ಇಬ್ಬರು, ತಾಯಿ-ಮಗ ಇಬ್ಬರು, ಮೂರು ಹೋಳಿಗೆ, ಹರಿಯದಂತೆ ಹಂಚಬೇಕು" ಎಂದರು. ಬಿಗ್ ಬಾಸ್ ಮಲ್ಲಮ್ಮನ ಒಗಟನ್ನು ಬಿಡಿಸಲಾರದೆ ಸೋಲೋಪ್ಪಿಕೊಂಡು ಬೀಳ್ಕೊಟ್ಟಿದ್ದಾರೆ.

More from Filmibeat

English summary
BBK 12 contestant Mallamma eliminated from Bigg Boss Kannada Rakshitha Shetty Dhruvanth emotional.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X