BBK 12: ಈ ವಾರ ನೇರವಾಗಿ ನಾಮಿನೇಟ್ ಆದವರು 3 ಮಂದಿ; ಎಲಿಮಿನೇಟ್ ಆಗೋದ್ಯಾರು?
ಬಿಗ್ ಬಾಸ್ ಕನ್ನಡ ಸೀಸನ್ 12 ನವೆಂಬರ್ 18ರ ಎಲಿಸೋಡ್ ವೀಕ್ಷಕರಿಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಬಿಗ್ ಬಾಸ್ ಆರಂಭ ಆಗಿ 50 ದಿನಗಳಾಗಿದ್ದರೂ, ಮನೆಯಲ್ಲಿರುವ ಕೆಲವು ಸದಸ್ಯರು ಇನ್ನೂ ಸರಿಯಾಗಿ ಆಟ ಆಡುತ್ತಿಲ್ಲ ಎಂಬ ಆರೋಪ ಮತ್ತೆ ಕೇಳಿ ಬಂದಿದೆ. ಈ ಮೂಲಕ ಮತ್ತೊಂದು ಫಿನಾಲೆಯ ಸೂಚನೆಯನ್ನು ಕೊಟ್ಟಂತೆ ಇದೆ. ಈ ಮಧ್ಯೆ ನೇರವಾಗಿ ಮೂರನೇ ಸ್ಪರ್ಧಿ ನೇರವಾಗಿ ನಾಮಿನೇಟ್ ಆಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಒಮ್ಮೆ ನೇರವಾಗಿ ನಾಮಿನೇಟ್ ಆದರೆ, ಅವರನ್ನು ವೀಕ್ಷಕರೇ ಕಾಪಾಡಬೇಕು. ಈಗಾಗಲೇ ಮನೆಯ ನಿಯಮಗಳನ್ನು ಮುರಿದು ಅಶ್ವಿನಿ ಗೌಡ ಹಾಗೂ ಜಾಹ್ನವಿ ಬಿಗ್ ಬಾಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರಿಬ್ಬರನ್ನು ಸ್ವತ: ಬಿಗ್ ಬಾಸ್ ನೇರವಾಗಿ ನಾಮಿನೇಟ್ ಮಾಡಿದ್ದೂ ಆಗಿದೆ. ಈ ಮಧ್ಯೆ ನೇರವಾಗಿ ನಾಮಿನೇಟ್ ಆದ ಮತ್ತೊಬ್ಬ ಸ್ಪರ್ಧಿ ರಕ್ಷಿತಾ ಶೆಟ್ಟಿ.

ಬಿಗ್ ಬಾಸ್ ಆರಂಭ ಆದಲ್ಲಿಂದ ಮನೆಯೊಳಗಿರುವ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಸದಸ್ಯರು ಇನ್ನೂ ಆಟವನ್ನು ಶುರು ಮಾಡಿ ಇಲ್ಲ. ಮನೆಯೊಳಗೆ ತಮ್ಮಷ್ಟಕ್ಕೆ ತಾವು ಇದ್ದು ಬಿಟ್ಟಿದ್ದಾರೆ. ಈ ಸಂಬಂಧ ಈಗಾಗಲೇ ಒಂದು ಫಿನಾಲೆ ನಡೆಸಿ ಅದರಲ್ಲಿ ಮೂವರು ಮಂದಿಯನ್ನು ಹೊರಗೆ ಕಳುಹಿಸಲಾಗಿತ್ತು. ಅಶ್ವಿನಿ, ಮಂಜು ಭಾಷಿಣಿ ಹಾಗೂ ಡಾಗ್ ಸತೀಶ್ ಅವರನ್ನು ಮನೆಯಿಂದ ಹೊರಗೆ ಕಳುಹಿಸಲಾಗಿತ್ತು. ಈಗ ಬಿಗ್ ಬಾಸ್ ಆರಂಭ ಆಗಿ 50 ದಿನಗಳಾದರೂ ಕೆಲವರು ಸೈಲೆಂಟ್ ಆಗಿದ್ದಾರೆ ಅನ್ನೋದು ಬಿಗ್ ಬಾಸ್ ಆರೋಪ ಆಗಿತ್ತು.
ಇದನ್ನೇ ಇಟ್ಟುಕೊಂಡು ಬಿಗ್ ಬಾಸ್ ಮನೆ ಮಂದಿಗೆ ಒಂದು ಟಾಸ್ಕ್ ಅನ್ನು ನೀಡಿತ್ತು. ಮನೆಯೊಳಗೆ ಇರಲು ಯೋಗ್ಯತೆ ಇರದ ಸ್ಪರ್ಧಿಗಳನ್ನು ಸೂಚಿಸುವಂತೆ ಬಿಗ್ ಬಾಸ್ ಟಾಸ್ಕ್ ನೀಡಿತ್ತು. ಮನೆ ಸದಸ್ಯರು ತಮಗೆ ಇಷ್ಟ ಬಂದ ಇಬ್ಬರು ಸ್ಪರ್ಧಿಗಳ ಹೆಸರನ್ನು ಸೂಚಿಸಿದ್ದರು. 14 ಮಂದಿನೂ ಇಬ್ಬರು ಹೆಸರನ್ನು ತೆಗೆದುಕೊಂಡಿದ್ದರು. ಅದರಲ್ಲಿ ಹೆಚ್ಚು ವೋಟ್‌ಗಳು ರಕ್ಷಿತಾ ಶೆಟ್ಟಿ, ಮಾಳು ನಿಪನಾಳ, ಧ್ರುವಂತ್ ಅವರಿಗೆ ಬಿದ್ದಿದ್ದವು.
ಇನ್ನು ಈಗಾಗಲೇ ಅಶ್ವಿನಿ ಗೌಡ ಹಾಗೂ ಜಾಹ್ನವಿ ನೇರವಾಗಿ ನಾಮಿನೇಟ್ ಆಗಿದ್ದಾರೆ. ಇವರೊಂದಿಗೆ ಸ್ಪಂದನಾ, ರಿಶಾ ಗೌಡ, ಧ್ರುವಂತ್, ಮಾಳು ನಿಪನಾಳ, ರಕ್ಷಿತಾ ಶೆಟ್ಟಿ, ಸೂರಜ್ ಸಿಂಗ್, ರಾಶಿಕಾ ಶೆಟ್ಟಿ ಹಾಗೂ ಅಭಿಷೇಕ್ ಕೂಡ ನಾಮಿನೇಟ್ ಆಗಿದ್ದಾರೆ. ಈ ವಾರ 10 ಮಂದಿ ನಾಮಿನೇಟ್ ಆಗಿದ್ದು, ಇವರಲ್ಲಿ ಎಷ್ಟು ಮಂದಿ ಮನೆಯಿಂದ ಹೊರ ಹೋಗುತ್ತಾರೋ ಅನ್ನೋ ಕುತೂಹಲ ವೀಕ್ಷಕರಲ್ಲೀಗ ದುಪ್ಪಟ್ಟಾಗಿದೆ.
ಈ ಟಾಸ್ಕ್ ವೇಳೆ ಬಿಗ್ ಬಾಸ್ ಇನ್ನೊಂದು ಟ್ವಿಸ್ಟ್ ಕೊಟ್ಟಿತ್ತು. ಎರಡನೇ ಬಾರಿ ಕ್ಯಾಪ್ಟನ್ ಆಗಿರುವ ರಘುಗೆ ವಿಶೇಷ ಅಧಿಕಾರವನ್ನು ಕೊಡಲಾಗಿತ್ತು. ಈ ಮನೆಯಲ್ಲಿರುವ ಒಬ್ಬ ಸದಸ್ಯನನ್ನು ನೇರವಾಗಿ ನಾಮಿನೇಟ್ ಮಾಡುವುದಕ್ಕೆ ಸೂಚಿಸಲಾಗಿತ್ತು. ಬಿಗ್ ಬಾಸ್ ಸೂಚನೆ ಮೇರೆಗೆ ರಘು ನೇರವಾಗಿ ರಕ್ಷಿತಾ ಶೆಟ್ಟಿಯನ್ನು ನಾಮಿನೇಟ್ ಮಾಡಿದ್ದಾರೆ. ಅದಕ್ಕೆ ಕಾರಣವೂ ಕೊಟ್ಟಿದ್ದು, ಮನೆಯೊಳಗೆ ಬರುವುದಕ್ಕೂ ಮುನ್ನ ಒಳ್ಳೆಯ ಅಭಿಪ್ರಾಯವಿತ್ತು. ಆದ್ರೀಗ ಅದು ಬದಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಕಳೆದ ಬಾರಿ ನಾಮಿನೇಟ್ ಮಾಡಿದ್ದು ನೋವು ಕೊಟ್ಟಿದೆ. ಆ ಕಾರಣಕ್ಕೆ ನೇರವಾಗಿ ನಾಮಿನೇಟ್ ಮಾಡಿದ್ದಾಗಿ ಹೇಳಿದ್ದಾರೆ.
ಸದ್ಯ ಬಿಗ್ ಬಾಸ್ ಮನೆಯಲ್ಲಿ ಟ್ವಸ್ಟ್‌ಗಳ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಸದ್ಯ 14 ಮಂದಿಯಲ್ಲಿ 4 ಮಂದಿ ಮಾತ್ರ ನಾಮಿನೇಷನ್ ಪ್ರಕ್ರಿಯೆಯಿಂದ ತಪ್ಪಿಸಿಕೊಂಡಿದ್ದಾರೆ. ಗಿಲ್ಲಿ ನಟ, ಕಾವ್ಯಾ ಶೈವ, ಕ್ಯಾಪ್ಟನ್ ಆಗಿರುವ ರಘು ಹಾಗೂ ಧ್ರುವಂತ್ ಸೇವ್ ಆಗಿದ್ದಾರೆ. ಹೀಗಾಗಿ 10 ಮಂದಿಯಲ್ಲಿ ಬಿಗ್ ಬಾಸ್ ಯಾರೆಗೆಲ್ಲ ಶಾಕ್ ಕೊಟ್ಟು, ವೀಕ್ಷಕರಿಗೆ ಟ್ವಿಸ್ಟ್ ಕೊಡುತ್ತಾರೆ ಎನ್ನುವುದನ್ನು ವೀಕೆಂಡ್‌ನಲ್ಲಿ ನೋಡಬೇಕು.


Click it and Unblock the Notifications











