ಹಸೆಮಣೆ ಏರಲೆಂದೇ ಬಿಗ್‌ಬಾಸ್‌ನಿಂದ ಹೊರ ಬಂದ್ರಾ ಸೂರಜ್? ಮದುವೆ ಮಂಟಪದಲ್ಲಿ ಯಾಕೀ ಗೊಂದಲ?
ಬಿಗ್ ಬಾಸ್ ಕನ್ನಡ 12ನೇ ಸೀಸನ್ ಇನ್ನೇನು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಒಬ್ಬೊಬ್ಬರೇ ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಾರೆ. ಬಿಗ್ ಬಾಸ್ ಫಿನಾಲೆಗೆ ಹೋಗುವ ಆ ಆರು ಮಂದಿ ಯಾರು ಅಂತ ವೀಕ್ಷಕರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಇತ್ತ ಮನೆಯ ಸದಸ್ಯರು ಕೂಡ ಫಿನಾಲೆ ತಲುಪುವುದಕ್ಕೆ ಪೈಪೋಟಿ ನಡೆಸಿದ್ದಾರೆ.
ಮನೆಯೊಳಗೆ ಇರುವ ಬಿಗ್ ಬಾಸ್ ಸ್ಪರ್ಧಿಗಳಿಗೆ ಫಿನಾಲೆ ತಲುಪುವ ಟೆನ್ಷನ್ ಆಗಿದ್ರೆ, ಈಗಾಗಲೇ ಎಲಿಮಿನೇಟ್ ಆದವರು ಲೈಫ್‌ನಲ್ಲಿ ಹೊಸ ಜರ್ನಿಯನ್ನು ಶುರು ಮಾಡಿದ್ದಾರೆ. ಇದೇ ಜನಪ್ರಿಯತೆಯನ್ನು ಮುಂದಿಟ್ಟುಕೊಂಡು ಹೊಸ ಹೊಸ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಅದರಲ್ಲಿ ಯುವತಿಯರ ಫೇವರಿಟ್ ಸೂರಜ್ ಇತ್ತೀಚೆಗೆ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದರು. ಅವರು ಹೊರ ಬರುತ್ತಿದ್ದಂತೆ ಹೊಸ ಜರ್ನಿಯನ್ನು ಆರಂಭಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸೂರಜ್ ಮದುವೆ ಆಗುತ್ತಿರುವ ಫೋಟೋಗಳು ವೈರಲ್ ಆಗುತ್ತಿವೆ. ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಸೂರಜ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆಂಬ ಸುದ್ದಿ ಹಲ್‌ಚಲ್ ಎದ್ದಿದೆ. ಅಷ್ಟಕ್ಕೂ ಸೂರಜ್ ಮದುವೆ ಆದರೇ? ಇಲ್ಲ ಅವರ ಹೊಸ ಪ್ರಾಜೆಕ್ಟ್ ದೃಶ್ಯಗಳಾ? ಅನ್ನೋದನ್ನು ತಿಳಿದುಕೊಳ್ಳುವುದಕ್ಕೆ ಹೆಚ್ಚು ಸಮಯ ಬೇಕಾಗಲಿಲ್ಲ. ಅಷ್ಟಕ್ಕೂ ಈ ಫೋಟೊ ಹಾಗೂ ವಿಡಿಯೋದ ಗುಟ್ಟೇನು? ತಿಳಿಯುವುದಕ್ಕೆ ಮುಂದೆ ಓದಿ.
ಹೌದು, ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಸೂರಜ್‌ಗೆ ಭರ್ಜರಿ ಆಫರ್ ಸಿಕ್ಕಿದೆ. ಕಲರ್ಸ್ ಕನ್ನಡದ ಹೊಸ ಧಾರಾವಾಹಿಯಲ್ಲಿ ಸೂರಜ್ ನಟಿಸುತ್ತಿದ್ದಾರೆ. ಅದುವೇ 'ಪವಿತ್ರ ಬಂಧನ'. ಈ ಧಾರಾವಾಹಿಯ ಪ್ರೋಮೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸೂರಜ್ ನಟಿಸಿರುವ 'ಪವಿತ್ರ ಬಂಧನ' ಧಾರಾವಾಹಿಯ ಪ್ರೋಮೊಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿವೆ.
ಬಿಗ್ ಬಾಸ್‌ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಸೂರಜ್ ಕಿರುತೆರೆ ವೀಕ್ಷಕರ ಮನಗೆದ್ದಿದ್ದರು. ಇತರ ಸ್ಪರ್ಧಿಗಳೊಂದಿಗೆ ಸೂರಜ್ ನಡೆದುಕೊಂಡ ರೀತಿ, ಟಾಸ್ಕ್‌ನಲ್ಲಿ ಭಾಗವಹಿಸುವ ಪರಿ ಎಲ್ಲವೂ ವೀಕ್ಷಕರಿಗೆ ಇಷ್ಟ ಆಗಿತ್ತು. ಹೀಗಾಗಿ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಅವರಿಗೆ 'ಪವಿತ್ರಾ ಬಂಧನ' ಅನ್ನೋ ಹೊಚ್ಚ ಹೊಸ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

'ಪವಿತ್ರಾ ಬಂಧನ' ಧಾರಾವಾಹಿಯ ಪ್ರೋಮೊವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ಸೂರಜ್ ಒಬ್ಬ ಬ್ಯುಸಿನೆಸ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಅಂದರೆ ಪಂಚ ಪ್ರಾಣ. ಅಣ್ಣ ತಮ್ಮಂದಿರ ಸಂಬಂಧದ ಉತ್ತಮ ಎನಿಸುವಾಗಲೇ ಪ್ರೋಮೊದಲ್ಲಿ ಟ್ವಿಸ್ಟ್ ಸಿಕ್ಕಿದೆ. ಸಹೋದರನ ಪ್ರೇಯಸಿಯನ್ನೇ ಮದುವೆ ಆಗುವ ಸನ್ನಿವೇಶ ಎದುರಾಗಿದೆ. ಇದೇ ವಿಡಿಯೋದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸೂರಜ್ ಮದುವೆ ಆದರೇ ಅಂತ ವೀಕ್ಷಕರು ಕನ್ಫ್ಯೂಸ್ ಆಗಿದ್ದಾರೆ.
'ಪವಿತ್ರ ಬಂಧನ' ಸೀರಿಯಲ್ ಪ್ರೋಮೊ ರಿಲೀಸ್ ಆಗುತ್ತಿದ್ದಂತೆ ಸೂರಜ್‌ಗಾಗಿ ಧಾರಾವಾಹಿ ನೋಡುತ್ತೇವೆಂದು ಕಾಮೆಂಟ್ ಮಾಡುತ್ತಿದ್ದಾರೆ. "ನಾನು ಸೀರಿಯಲ್ ನೋಡಲ್ಲ.. ಆದರೆ, ನಮ್ಮ ಸೂರಜ್ ಇರುವಾಗ ನಾವು ನೋಡಲೇಬೇಕು." ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ಸೂಪರ್ ಸೂರಜ್.. ಒಂದು ಕ್ಷಣ ಅರಗಿಣಿ ಸೀರಿಯಲ್ ಸಿದ್ದಾರ್ಥ್ ನೆನಪಾಯ್ತು... ಸೂಪರ್ ಒಳ್ಳೆಯದಾಗಲಿ" ಎಂದು ಇನ್ನೊಬ್ಬರು ಹೇಳಿದ್ದಾರೆ. ಮತ್ತೊಬ್ಬರು "ಏನ್ರೀ ಏನ್ರೀ ಏನ್ರೀ ನಮ್ ಹುಡುಗನ್ನ ಪಕ್ಕದ ಮನೆಯವರು ಎತ್ತಾಕೊಂಡು ಹೋಗ್ತಾರೆ ಅಂತ ಅಷ್ಟು ಬೇಗ ಹೀರೋ ಆಗಿ ಕಾಸ್ಟ್ ಮಾಡಿ ಪ್ರೋಮೊ ಕೂಡ ರಿಲೀಸ್ ಮಾಡ್ಬಿಟ್ಟಿದ್ದೀರ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.


Click it and Unblock the Notifications











