BBK 12: ಕಿಚ್ಚನಿಲ್ಲದ ವಾರ ಎಲಿಮಿನೇಟ್ ಆದ ಸೂರಜ್; ಈ ನಿರ್ಗಮನ ಯುವತಿಯರಿಗೆ ನಿರಾಶೆ

ಬಿಗ್ ಬಾಸ್ ಕನ್ನಡ ಸೀಸನ್ 12 ಪ್ರತಿ ದಿನ ಟ್ವಿಸ್ಟ್ ಕೊಡುತ್ತಲೇ ಬರುತ್ತಿದೆ. ಅದರಲ್ಲಿಯೂ ಬಿಗ್ ಬಾಸ್‌ ಎಲಿಮಿನೇಷನ್ ವಿಚಾರದಲ್ಲಂತೂ ಇಂತಹ ಟ್ವಿಸ್ಟ್‌ಗಳು ಕಾಮನ್. ಪ್ರತಿ ಬಾರಿ ಯಾರು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುವುದಿಲ್ಲ ಅಂದುಕೊಳ್ಳುತ್ತೇವೋ ಅಂದೇ ಆ ಸ್ಪರ್ಧಿ ಬಿಗ್ ಬಾಸ್‌ ಮನೆಯಿಂದ ಹೊರ ಬಿದ್ದಿದ್ದಾರೆ. ಈ ವಾರ ಕೂಡ ಬಿಗ್ ಬಾಸ್‌ ಇಂತಹದ್ದೇ ಒಂದು ಸರ್ಪ್ರೈಸ್ ಕೊಟ್ಟಿದೆ.

ಯುವತಿಯರ ಫೇವರಿಟ್ ಹಾಗೂ ಬಿಗ್ ಬಾಸ್ ಸದಸ್ಯರ ಅಚ್ಚು ಮೆಚ್ಚಿನ ಸ್ಪರ್ಧಿ ಸೂರಜ್. ಎಲ್ಲರೊಂದಿಗೂ ಮಾತಾಡಿಕೊಂಡು ಅನ್ಯೋನ್ಯವಾಗಿದ್ದರು. ಆದರೆ, ಈ ಬಾರಿ ಬಿಗ್ ಮನೆಯಿಂದ ಹೊರ ಹೋಗುವವರ ಲಿಸ್ಟ್‌ನಲ್ಲಿ ಸೂರಜ್ ಸಿಂಗ್ ಇರುತ್ತಾರೆಂಬ ಸಣ್ಣ ಸುಳಿವು ಮನೆಯಲ್ಲಿರುವ ಸ್ಪರ್ಧಿಗಳಿಗೆ ಸಿಕ್ಕಿರಲಿಲ್ಲ. ಸ್ಪರ್ಧಿಗಳನ್ನು ಎಲಿಮಿನೇಟ್ ಮಾಡುವ ಇಂತಹದ್ದೇ ಒಂದು ಕಳೆದ ಸೀನ್ ಕೊನೆಯಲ್ಲಿ ನಡೆದಿತ್ತು.

BBK 12 contestant Suraj Surprise elimination what is the reason

ಸಿನಿಮಾ ಬ್ಯಾಕ್‌ಗ್ರೌಂಡ್ ಇಲ್ಲದೆ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದ ಸೂರಜ್ ವೀಕ್ಷಕರ ಗಮನ ಸೆಳೆದಿದ್ದರು. ಬಹುಬೇಗನೇ ಮನೆಯಲ್ಲಿ ತನ್ನದೇ ಅಸ್ಥಿತ್ವವನ್ನು ಹುಡುಕಿಕೊಂಡಿದ್ದರು. ಮನೆಯೊಳಗೆ ಯಾವುದೇ ಸಮಸ್ಯೆ ಎದುರಾದರೂ ಅಲ್ಲಿ ಸೂರಜ್ ಇರುತ್ತಿದ್ದರು. ಹೀಗಾಗಿ ಫಿನಾಲೆವರೆಗೂ ಇರುವ ಸ್ಪರ್ಧಿಗಳಲ್ಲಿ ಸೂರಜ್ ಕೂಡ ಇರುತ್ತಾರೆಂಬ ಭಾವನೆ ಎಲ್ಲರಲ್ಲೂ ಇತ್ತು.

ಈ ಬಾರಿಯ ಎಲಿಮಿನೇಷನ್ ಪ್ರಕ್ರಿಯೆ ವಿಶೇಷವಾಗಿತ್ತು. ಯಾಕಂದ್ರೆ ಕಿಚ್ಚ ಸುದೀಪ್ ತಮ್ಮ ಸಿನಿಮಾ 'ಮಾರ್ಕ್' ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಕಳೆದ ವಾರವೇ ಬಿಗ್ ಬಾಸ್ ನಡೆಸಿಕೊಡುವುದಕ್ಕೆ ಆಗುವುದಿಲ್ಲವೆಂದು ಹೇಳಿದ್ದರು. ಹೀಗಾಗಿ ವೀಕ್ಷಕರಲ್ಲಿ ಸುದೀಪ್ ಇಲ್ಲದೆ ಕಾರ್ಯಕ್ರಮ ಹೇಗೆ ನಡೆಯುತ್ತೆ? ಅನ್ನೋ ಕುತೂಹಲವಿತ್ತು. ಇದರೊಂದಿಗೆ ಬಿಗ್ ಬಾಸ್ ವೀಕೆಂಡ್ ಆರಂಭ ಆಗಿತ್ತು.

ಈ ವಾರ ಬಿಗ್ ಬಾಸ್ ಮನೆಯಲ್ಲಿ 10 ಮಂದಿ ನಾಮಿನೇಟ್ ಆಗಿದ್ದರು. ಕಾವ್ಯಾ ಅವರನ್ನು ಹೊರತು ಪಡಿಸಿ ಎಲ್ಲರೂ ನಾಮಿನೇಟ್ ಆಗಿದ್ದರು. ಈ ಮೂಲಕ ಬಿಗ್ ಬಾಸ್‌ ಒಬ್ಬೊಬ್ಬರನ್ನೇ ಸೇವ್ ಮಾಡುವ ಪ್ರಕ್ರಿಯೆಯನ್ನು ಮುಂದುವರೆಸಿದ್ದರು. ಸುದೀಪ್ ಅನುಪಸ್ಥಿತಿಯಲ್ಲಿ ಮನೆಯೊಳಗೆ ಒಬ್ಬೊಬ್ಬರೇ ಅತಿಥಿಗಳನ್ನು ಎಂಟ್ರಿ ಕೊಟ್ಟು ನಾಮಿನೇಟ್ ಆದವರನ್ನು ಸೇವ್ ಮಾಡಿದರು. ಭಾಗ್ಯಲಕ್ಷ್ಮಿ ತಂಡವರು ಮೊದಲು ಗಿಲ್ಲಿಯನ್ನು ಉಳಿಸಿಕೊಂಡರೆ, ನಂತರ ಬಂದ ಜೋಗಿ ಪ್ರೇಮ್ ಅಶ್ವಿನಿ ಗೌಡ ಅವರನ್ನು ಸೇವ್ ಮಾಡುತ್ತಾರೆ.

ಆ ಬಳಿಕ ರಘು ಸೇವ್ ಆಗುತ್ತಾರೆ. ಹೀಗೆ ಒಬ್ಬೊಬ್ಬರೇ ಬಿಗ್ ಬಾಸ್ ಮನೆಯಿಂದ ಸೇವ್ ಆಗುತ್ತಾ ಹೋಗುತ್ತಾರೆ. ಆದರೆ, ಕೊನೆಯಲ್ಲಿ ನಾಲ್ಕು ಮಂದಿ ಉಳಿದುಕೊಳ್ಳುತ್ತಾರೆ. ಅವರಲ್ಲಿ ಒಬ್ಬರು ಮನೆಯಿಂದ ಹೊರ ಹೋಗುತ್ತಾರೆಂಬ ಸುಳಿವನ್ನು ಬಿಗ್ ಬಾಸ್ ಕೊಟ್ಟಿತ್ತು. ರಾಶಿಕಾ, ಸೂರಜ್, ಧ್ರುವಂತ್ ಹಾಗೂ ಸಂಜನಾರಲ್ಲಿ ಒಬ್ಬರು ಮನೆಯಿಂದ ಹೊರ ಹೋಗುವುದು ಗ್ಯಾರೆಂಟಿ ಆಗಿತ್ತು.

ವಿಶೇಷವಾದ ವ್ಹೀಲ್‌ವೊಂದನ್ನು ಇಡಲಾಗಿತ್ತು. ಇದರಲ್ಲಿ ಈ ನಾಲ್ಕು ಮಂದಿಯನ್ನು ನಿಲ್ಲಿಸಿದ್ದರು. ವ್ಹೀಲ್ ತಿರುಗಿತ್ತಿದ್ದಂತೆ ಒಬ್ಬರು ಈ ಮನೆಯಿಂದ ನಿರ್ಗಮಿಸುತ್ತಾರೆಂದು ಹೇಳಲಾಗಿತ್ತು. ಅದರಂತೆ ವ್ಹೀಲ್ ತಿರುಗಿ ನಿಲ್ಲುತ್ತಿದ್ದಂತೆ ಸೂರಜ್ ಅದರಲ್ಲಿ ಇರಲಿಲ್ಲ. ಇದು ಬಿಗ್ ಬಾಸ್ ಮನೆಯ ಮಂದಿಗೆ ಶಾಕ್ ಆಗಿದೆ. ಸೂರಜ್ ಫಿನಾಲೆ ತಲುಪುವ ಸ್ಪರ್ಧಿಗಳ ಪೈಕಿ ಒಬ್ಬರಾಗಿದ್ದರು. ಶನಿವಾರವೇ ಒಬ್ಬರು ಬಿಗ್ ಬಾಸ್ ಮನೆಯಿಂದ ನಿರ್ಗಮಿಸಿದ್ದಾರೆ. ಇನ್ನು ಭಾನುವಾರ ಮತ್ತೊಬ್ಬರು ಎಲಿಮಿನೇಟ್ ಆಗುತ್ತಾರೆ. ಧ್ರುವಂತ್, ಸ್ಪಂದನಾ ಹಾಗೂ ರಾಶಿಕಾ ಈ ಮೂವರಲ್ಲಿ ಯಾರು ಹೊರ ಬರಬಹುದು? ಅನ್ನೋದು ಇಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X