BBK 12: ಗ್ರೇ ಏರಿಯಾ ಮಂಜು ಅಲ್ಲ.. ಮಲೇರಿಯಾ ಮಂಜು; ಉಗ್ರಂ ಮಂಜು ಮತ್ತೆ ರೋಸ್ಟ್
ಬಿಗ್ ಬಾಸ್ ಮನೆಗೆ ಐವರು ಅತಿಥಿಗಳು ಬಂದಿದ್ದಾರೆ. ಸೀಸನ್ 11 ರ ಸದಸ್ಯರು ಗೆಸ್ಟ್‌ಗಳಾಗಿ ಮನೆಯೊಳಗೆ ಕಾಲಿಟ್ಟಿದ್ದಾರೆ. ಆದರೆ, ಕಾಲಿಟ್ಟ ಕ್ಷಣದಿಂದ ಗಿಲ್ಲಿ ಕೈಗೆ ಸಿಕ್ಕು ರೋಸ್ಟ್ ಆಗುತ್ತಿದ್ದಾರೆ. ಅದರಲ್ಲೂ ಉಗ್ರಂ ಮಂಜು ಅನ್ನೇ ಹೆಚ್ಚು ಟಾರ್ಗೆಟ್ ಮಾಡಿದ್ದಾರೆ. ಬ್ಯಾಚುಲರ್ ಪಾರ್ಟಿ ಮಾಡುವುದಕ್ಕೆ ಬಿಗ್ ಬಾಸ್ ಮನೆ ಬಂದಿರೋ ಮಂಜುಗೆ ಪಾರ್ಟಿ ಮಾಡೋಕೆ ಬಿಡುತ್ತಿಲ್ಲ.
ಬಿಗ್ ಬಾಸ್ ಕನ್ನಡ ಸೀಸನ್ 11ರ ಸದಸ್ಯರು ಉಗ್ರಂ ಮಂಜು, ಮೋಕ್ಷಿತಾ ಪೈ, ರಜತ್ ಕಿಶನ್, ತ್ರಿವಿಕ್ರಮ್ ಹಾಗೂ ಚೈತ್ರಾ ಕುಂದಾಪುರ ಮನೆಗೆ ಆಗಮಿಸಿದ್ದಾರೆ. ಸೀಸನ್ 12ರ ಸದಸ್ಯರು ಅತಿಥಿಗಳ ಸತ್ಕಾರ ಮಾಡಬೇಕು ಅನ್ನೋದು ಟಾಸ್ಕ್. ಆದ್ರೀಗ ಉಲ್ಟಾ ಆಗುತ್ತಿದೆ. ಮನೆಗೆ ಬಂದ ಅತಿಥಿಗಳನ್ನು ಹಿಗ್ಗಾ-ಮುಗ್ಗಾ ರೋಸ್ಟ್ ಮಾಡುತ್ತಿದ್ದಾರೆ. ಅದರಲ್ಲೂ ಗಿಲ್ಲಿ ಮಾತುಗಳಿಗೆ ಉಗ್ರಂ ಮಂಜು ಕೆಂಡಾಮಂಡಲವಾಗಿ ನೆಮ್ಮದಿಯನ್ನೇ ಕಳೆದುಕೊಂಡಂತೆ ಆಡುತ್ತಿದ್ದಾರೆ.

ಐವರು ಅತಿಥಿಗಳು ಬಿಗ್ ಬಾಸ್ ಮನೆಯೊಳಗೆ ಬರುವವರೆಗೂ ಅಶ್ವಿನಿ ಗೌಡ ಹಾಗೂ ಜಾಹ್ನವಿಯನ್ನು ರೋಸ್ಟ್ ಮಾಡಿ ರೊಚ್ಚಿಗೆಬ್ಬಿಸುತ್ತಿದ್ದರು. ಆದ್ರೀಗ ಅವರಿಬ್ಬರನ್ನೂ ಬಿಟ್ಟು ಗಿಲ್ಲಿ ಅತಿಥಿಗಳನ್ನು ಹಿಡಿದುಕೊಂಡಿದ್ದಾರೆ. ಅದರಲ್ಲೂ ಮದುವೆ ಗಂಡು ಉಗ್ರಂ ಮಂಜು ಬಿಗ್ ಬಾಸ್ ಮನೆಯಲ್ಲಿ ತಾಳ್ಮೆಯನ್ನೇ ಕಳೆದುಕೊಳ್ಳುವಂತೆ ಮಾಡುತ್ತಿದ್ದಾರೆ. ಅದರಲ್ಲೂ ರೋಸ್ಟ್ ಮಾಡುವ ನೆಪದಲ್ಲಿ ಗ್ರೇ ಏರಿಯಾ ಮಂಜು ಅಲ್ಲ.. ಮಲೇರಿಯಾ ಮಂಜು ಎಂದು ಕಮೆಂಟ್ ಮಾಡಿದ್ದು, ವೈರಲ್ ಆಗುವುದಕ್ಕೆ ಶುರುವಾಗಿದೆ.
ಇಂಟ್ರೆಸ್ಟಿಂಗ್ ಅಲ್ಲ.. ಇರಿಟೇಟಿಂಗ್
ಬಿಗ್ ಬಾಸ್ ಮನೆಯಲ್ಲಿ ಅತಿಥಿಗಳು ಬಂದು ಎರಡು ದಿನ ಕಳೆದಿದೆ. ಸೀಸನ್ 11ರ ಅತಿಥಿಗಳು ಹೊಸ ಮನೆಯಲ್ಲಿ ಸೆಟಲ್ ಆಗಿದ್ದಾರೆ. ಹೀಗಾಗಿ ಅತಿಥಿಗಳನ್ನೇ ರೋಸ್ಟ್ ಮಾಡುವಂತೆ ಬಿಗ್ ಬಾಸ್ ಟಾಸ್ಕ್ ಕೊಟ್ಟಿತ್ತು. ಗಿಲ್ಲಿಗೂ ಇದೇ ಬೇಕಾಗಿತ್ತು ಶುರುವಿಟ್ಕೊಂಡು ಬಿಟ್ರು. "ಇವರು ಬಂದಿದ್ದು ನೋಡಿ ಇಂಟ್ರೆಸ್ಟಿಂಗ್ ಆಗಿರುತ್ತೆ ಅಂದುಕೊಂಡಿದ್ದೆ. ಆದರೆ, ಇಷ್ಟೊಂದು ಇರಿಟೇಟಿಂಗ್ ಆಗಿರುತ್ತೆ ಅಂದುಕೊಂಡಿರಲಿಲ್ಲ. ಇವರು ಮಾಡಿದ ಸೆಟಪ್ಪು.. ಕೊಟ್ಟ ಬಿಲ್ಡಪ್ ನೋಡಿ ವಾವ್ಹ್ ಅನ್ನೋತರ ಯಾರೋ ಬರುತ್ತಾರೆ ಅಂದುಕೊಂಡಿದ್ದೆ. ವ್ಯಾಕ್ ಅನ್ನೋತರ ಆಗಿ ಹೋಯ್ತು." ಎಂದು ಅತಿಥಿಗಳ ಕಾಲೆಳೆದಿದ್ದಾರೆ.
ಗ್ರೇ ಏರಿಯಾ ಮಂಜು ಅಲ್ಲ 'ಮಲೇರಿಯಾ ಮಂಜು'
ಬಿಗ್ ಬಾಸ್ ಮನೆಯೊಳಗೆ ಉಗ್ರಂ ಮಂಜು ಎಂಟ್ರಿ ಕೊಟ್ಟಲ್ಲಿಂದ ಗಿಲ್ಲಿ ರೋಸ್ಟ್ ಮಾಡುತ್ತಲೇ ಇದ್ದಾರೆ. ಅದಕ್ಕೆ ಉಗ್ರಂ ಮಂಜು ಉರಿದು ಬೀಳುತ್ತಲೇ ಇದ್ದಾರೆ. ಮಂಜಣ್ಣ.. ಮಂಜಣ್ಣ ಎನ್ನುತ್ತಲೇ ಮಾತು ಮಾತಿಗೂ ಟಾಂಗ್ ಕೊಡುತ್ತಲೇ ಇದ್ದಾರೆ. "ಇವರಿಗೆ ಹೇಗೆ ಗೊತ್ತಾ ಬಿಲ್ಡಪ್ ಕೊಟ್ಟಿದ್ದು, ಗ್ರೇ ಏರಿಯಾ ಮಂಜು.. ಗ್ರೇ ಏರಿಯಾ ಮಂಜು ಅಂತ. ಇಲ್ಲಿ ನೋಡಿದರೆ ಮಲೇರಿಯಾ ಮಂಜು ತರ ಬಂದು ಕೂತಿದ್ದಾರೆ." ಎಂದು ಉಗ್ರಂ ಮಂಜುನ ಮತ್ತೆ ರೋಸ್ಟ್ ಮಾಡಿದ್ದಾರೆ.

ತ್ರಿವಿಕ್ರಮ್- ರಿಟೈರ್ಡ್ ಆಗಿರೋ ಹೆಡ್‌ಮಾಸ್ಟರ್
ತ್ರಿವಿಕ್ರಮ್ ಅವರನ್ನೂ ಗಿಲ್ಲಿ ಬಿಟ್ಟಿಲ್ಲ. ಇವರಿಗೆ ಬಿಗ್ ಬಾಸ್ ಟಾಸ್ಕ್ ಮಾಸ್ಟರ್ ಅಂತ ಕರೆದಿತ್ತು. ಅದನ್ನೇ ಇಟ್ಟುಕೊಂಡು ಗಿಲ್ಲಿ ರೋಸ್ಟ್ ಮಾಡಿದ್ದಾರೆ. "ಟಾಸ್ಕ್ ಮಾಸ್ಟರ್.. ಟಾಸ್ಕ್ ಮಾಸ್ಟರ್ ಅಂದರು. ಇಲ್ಲಿ ನೋಡಿದರೆ, ರಿಟೈರ್ಡ್ ಆಗಿರೋ ಹೆಡ್ ಮಾಸ್ಟರ್ ತರ ಕೂತಿದ್ದಾರೆ." ಎಂದು ಕಾಲೆಳೆದಿದ್ದಾರೆ. ಈ ಟೈಮ್‌ನಲ್ಲಿ ತ್ರಿವಿಕ್ರಮ್‌ಗೆ ಸ್ವಲ್ಪ ಅವಮಾನ ಆದಂತೆ ಕಂಡರೂ ತೋರಿಸಿಕೊಂಡಿಲ್ಲ.
ರಜತ್-'ಕಳ್‌ನಾಯಕ'.. 'ಚೈತ್ರಾ ಸುಸ್ತುವಾರಿ'
ಇನ್ನು ಕಳೆದ ಸೀಸನ್‌ನಲ್ಲಿ ಉಗ್ರಂ ಮಂಜುಗೆ ಕಾಟ ಕೊಟ್ಟಿದ್ದ ರಜತ್ ಅನ್ನೂ ಬಿಟ್ಟಿಲ್ಲ. "ರಜತ್ ಅಣ್ಣ ಖಳನಾಯಕ ಅಲ್ಲ.. ಕಳ್‌ನಾಯಕ.. ರಜತ್ ಕನ್ಫ್ಯೂಸ್ ಆಗಿದೆ. ನಾನಿಲ್ಲಿ ಕಂಟೆಸ್ಟೆಂಟಾ? ವೈಲ್ಡ್ ಕಾರ್ಡ್ ಎಂಟ್ರಿಯಿಂದ ಬಂದಿರೋದಾ? ಇಲ್ಲ ಗೆಸ್ಟಾ? ನಮ್ಮನ್ನು ನೋಡಿದರೇ ಭಯ ಬೀಳುತ್ತಾರೆ. ನಿಮ್ಮ ಟೈಮ್‌ನಲ್ಲಿ ಸೀಸನ್ ನಂಬರ್ 1 ಇತ್ತು. ನಮ್ಮ ಟೈಮ್‌ನಲ್ಲಿ ಚಾನೆಲ್ ನಂಬರ್ 1 ಆಗಿದೆ" ಎಂದರೆ, ಚೈತ್ರಾಗೆ "ಚೈತ್ರಾ ಪಾಪುಲರ್ ಉಸ್ತುವಾರಿ ಅಲ್ಲ.. ನೋಡುವುದಕ್ಕೆ ಒಳ್ಳೆ ಸುಸ್ತುವಾರಿ ತರ ಕೂತಿದ್ದೀರ" ಎಂದು ಗೇಲಿ ಮಾಡಿದ್ದಾರೆ.


Click it and Unblock the Notifications











