BBK 12: ಹೀಗೆ ಆದ್ರೆ "ಕಾವು ಹೋಗಿ ಬಾ. ಹೊರಗೆ ಬಂದಮೇಲೆ ಸಿಕ್ತೀನಿ..ಅನ್ಬೇಕಾಗುತ್ತೆ"; ಗಿಲ್ಲಿಗೆ ಕಿಚ್ಚನ ಎಚ್ಚರಿಕೆ

ಬಿಗ್ ಬಾಸ್ ಕನ್ನಡ ಸೀಸನ್ 12ರ ಮತ್ತೊಂದು ವೀಕೆಂಡ್ ಬಂದೇ ಬಿಟ್ಟಿದೆ. ಕಿಚ್ಚ ಸುದೀಪ್ ವಾರ ಕಥೆಯನ್ನು ತೆಗೆದುಕೊಂಡು ವೀಕ್ಷಕರ ಮುಂದೆ ಬಂದಿದ್ದಾರೆ. ಮೊದಲ ದಿನ ಕಿಚ್ಚ ವಾರದಲ್ಲಿ ನಡೆದ ಎಲ್ಲಾ ಘಟನೆಗಳನ್ನು ಇಟ್ಕೊಂಡು ಮನೆಯ ಸದಸ್ಯರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಹಾಗೇ ಇಂದು (ಡಿಸೆಂಬರ್ 6) ಕೂಡ ಬಿಗ್ ಬಾಸ್ ಮನೆಯ ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅದರಲ್ಲಿ ಗಿಲ್ಲಿ ನಟ ಹಾಗೂ ಕಾವ್ಯಾ ಹೈಲೈಟ್ ಆಗಿದ್ದಾರೆ.

ಈ ರಿಯಾಲಿಟಿ ಶೋನೇ ಹಾಗೇ. ಮನೆಯೊಳಗೆ ಹೇಗೆ ವರ್ತನೆ ಮಾಡುತ್ತಿದ್ದೇವೆ ಅನ್ನೋದು ವಾರದ ಕೊನೆಯಲ್ಲಿಯೇ ಗೊತ್ತಾಗುತ್ತೆ. ಅದಕ್ಕೂ ಮುನ್ನ ನಮ್ಮ ಇಮೇಜ್ ಹೊರಗಡೆ ಏನಾಗುತ್ತಿದೆ ಅನ್ನೋದು ಗೊತ್ತಾಗುವುದಿಲ್ಲ. ವೇದಿಕೆ ಮೇಲೆ ಕಿಚ್ಚ ಬಂದಾಗ ಒಂದೊಂದೇ ಚಾಪ್ಟರ್‌ಗಳನ್ನು ಬಿಡಿಸುತ್ತಾ ಮುಂದಕ್ಕೆ ಸಾಗುತ್ತಿದ್ದಂತೆ ಮನೆಯ ಸದಸ್ಯರ ಆಟಗಳೆಲ್ಲ ಬಯಲಾಗುತ್ತಾ ಮುಂದಕ್ಕೆ ಹೋಗುತ್ತೆ.

BBK 12 December 6th episode Kichcha Sudeep warns Gilli and Kavya for this reason

ಶನಿವಾರದ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಎರಡು ಜೋಡಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಬಾರಿ ಕೊಂಚ ಮಟ್ಟಿಗೆ ಸೀರಿಯಸ್ ಆಗಿಯೇ ಇತ್ತು. ಬಿಗ್ ಬಾಸ್‌ನಲ್ಲಿ ಜೋಡಿಗಳಾಗೋದು. ಅವರು ಸ್ನೇಹ ಗಾಢವಾಗಿ ಬೆಳೆಯುವುದು ಎಲ್ಲವೂ ಇತ್ತು. ಹಿಂದಿನ ಎಪಿಸೋಡ್‌ಗಳಲ್ಲೂ ಇದನ್ನು ನೋಡಿದ್ದೇವೆ. ಅವರು ಹೊರ ಬಂದ್ಮೇಲೆ ತಮಗೆ ಸಂಬಂಧವೇ ಇಲ್ಲವೇನೋ ಎನ್ನುವಂತೆ ಇದ್ದಿದ್ದೂ ಇದೆ. ಇನ್ನು ಕೆಲವರು ಜೋಡಿಗಳಾಗಿದ್ದೂ ಇದೆ. ಅದೆಲ್ಲವನ್ನೂ ಪಕ್ಕಕ್ಕಿಟ್ಟು, ಈ ಸೀಸನ್‌ನಲ್ಲಿ ಏನಾಗುತ್ತಿದೆಯೆಂದು ಕಿಚ್ಚ ಸುದೀಪ್ ವಿವರಿಸಿದ್ದಾರೆ.

ಕಿಚ್ಚ ಸುದೀಪ್ ಮನೆಯ ಸದಸ್ಯರಿಗೆ ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ. ಮನೆಯಲ್ಲಿ ಕೆಲವರು ಜೋಡಿಯಾಗಿ ಆಡುತ್ತಿದ್ದಾರೆ. ಇದು ಸರಿಯಿಲ್ಲ. ಒಬ್ಬರ ಮೇಲೆ ಇನ್ನೊಬ್ಬರು ಪ್ರಭಾವವನ್ನು ಬೀರುತ್ತಿದ್ದಾರೆ. ಹಾಗೆ ಮಾಡಿದವರಲ್ಲಿ ಒಬ್ಬರು ಮನೆಯಿಂದ ಹೊರ ಹೋಗಿದ್ದಾರೆ. ಅಶ್ವಿನಿ ಹಾಗೂ ಜಾನ್ವಿಯನ್ನು ಉದಾಹರಣೆ ಕೊಟ್ಟು ಗಿಲ್ಲಿ-ಕಾವ್ಯಾ ಹಾಗೂ ರಾಶಿಕಾ-ಸೂರಜ್‌ಗೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.

ಕಿಚ್ಚ ಸುದೀಪ್ ಕೊಟ್ಟ ಎಚ್ಚರಿಕೆಯಲ್ಲಿ ಗಿಲ್ಲಿ ಹಾಗೂ ಕಾವ್ಯಾ ಜೋಡಿಗೆ ಹಲವು ಸೂಚನೆಗಳನ್ನು ನೀಡಿದಂತೆ ಇತ್ತು. ಅಶ್ವಿನಿ ಹಾಗೂ ಜಾನ್ವಿ ಜೋಡಿಯಾಗಿ ಇದ್ದರು. ಅವರಲ್ಲಿ ಒಬ್ಬರು ಮನೆಯಿಂದ ಹೊರ ಹೋಗಿದ್ದಾರೆ. ಇದನ್ನೇ ಗಿಲ್ಲಿ ಹಾಗೂ ಕಾವ್ಯಾ ಬಳಿನೂ ಸುದೀಪ್ ಚರ್ಚೆ ಮಾಡಿದ್ದಾರೆ. ನಿಮ್ಮಬ್ಬರ ಬಳಿ ಒಳ್ಳೆಯ ಫ್ರೆಂಡ್‌ಶಿಪ್ ಇರಬಹುದು. ಅವರ ಆಟ ಅವರಿಗೆ ಅವರಿಗೆ ಆಡುವುದಕ್ಕೆ ಬಿಡಿ. ನಿಮ್ಮ ಪ್ರಭಾವ ಅವರ ಮೇಲೆ ಬೀಳದೆ ಇರಲಿಲ್ಲ. ಅದರಿಂದಲೇ ಅವರು ಹೊರಗೆ ಹೋದರೆ, "ಕಾವು ಹೋಗಿ ಬಾ. ಹೊರಗೆ ಬಂದಮೇಲೆ ಸಿಕ್ತೀನಿ" ಎಂದು ಹೇಳುತ್ತೀರಾ ಎಂದು ಕೇಳಿದ್ದಾರೆ.

ಹಾಗೇ ರಾಶಿಕಾ ಹಾಗೂ ಸೂರಜ್‌ಗೂ ಇದೇ ಮಾತಿನ ಮೂಲಕ ಎಚ್ಚರಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ರಾಶಿಕಾ ಹಾಗೂ ಸೂರಜ್ ಇಬ್ಬರೂ ಯಾವಾಗಲೂ ಒಟ್ಟಿಗೆ ಇರುತ್ತಾರೆಂಬ ಆರೋಪವಿದೆ. ಮನೆ ಮಂದಿ ನಾಮಿನೇಟ್ ಮಾಡುವಾಗ ಇದೇ ವಿಷಯವನ್ನು ಹಲವು ಬಾರಿ ಪ್ರಸ್ತಾಪ ಮಾಡಿದ್ದೂ ಕೂಡ ಇದೆ. ಹೀಗಾಗಿ ಕಿಚ್ಚ ಇವರಿಗೂ ಎಚ್ಚರಿಕೆ ಕೊಟ್ಟಿದ್ದಾರೆ. ಇಬ್ಬರೂ ಬೇರೆಯಾಗಿರೋಣ ಅಂತ ಹೇಳುತ್ತೀರ. ಆದರೆ, ಬಳಿಕ ಮತ್ತೆ ಒಂದಾಗುತ್ತೀರ ಎಂದಿದ್ದಾರೆ.

ಈ ಎರಡೂ ಜೋಡಿಗೂ ಕಿಚ್ಚ ಸುದೀಪ್ ಹೇಳಿದ್ದು ಇಷ್ಟೇ. ಒಬ್ಬರು ಇನ್ನೊಬ್ಬರ ಆಟದ ಮೇಲೆ ಪ್ರಭಾವ ಬೀರುತ್ತಿದ್ದೀರ. ಇದರಿಂದ ಅವರಿಗೆ ತೊಂದರೆಯಾಗುತ್ತೆ. 11ನೇ ಸೀಸನ್‌ನಲ್ಲೂ ಹೀಗೆ ಜಂಟಿಯಾಗಿ ಆಡಿದವರು ಮನೆಯಿಂದ ಹೊರಗೆ ಹೋಗಿದ್ದಾರೆ. ಗೆಳೆತನ ಇದ್ದರೂ ಆಟ ಅಂತ ಬಂದಾಗ ಒಬ್ಬರ ಮೇಲೆ ಇನ್ನೊಬ್ಬರು ಬೀಳದಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ.

More from Filmibeat

English summary
BBK 12 December 6th episode Kichcha Sudeep warns Gilli and Kavya for this reason.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X