BBK 12: ಮ್ಯೂಟಂಟ್ ರಘು ಅಬ್ಬರ.. ಮನೆಯವರೆಲ್ಲ ತತ್ತರ; "ಆಂಟಿಗಳ ಮದ ಇಳಿಸೋಕೆ ಬಂದ" ಎಂದ ನೆಟ್ಟಿಗರು
ನಿನ್ನೆ (ಅಕ್ಟೋಬರ್ 19) ತಾನೇ ಬಿಗ್ ಬಾಸ್ ಕನ್ನಡ ಸೀಸನ್ 12ರ ಮಿಡ್ ವೀಕ್ ಫಿನಾಲೆ ಹಾಗೂ ಗ್ರ್ಯಾಂಡ್ ಓಪನಿಂಗ್ ಮುಗಿದಿದೆ. ಮೂರು ಮಂದಿ ಬಿಗ್ ಬಾಸ್ ಮನೆಯೊಳಗೆ ವೈಲ್ಡ್ ಕಾರ್ಡ್ ಎಂಟ್ರಿನೂ ಕೊಟ್ಟಾಗಿದೆ. ದೈತ್ಯ ದೇಹದ ಮ್ಯೂಟಂಟ್ ರಘು, ರಿಶಾ ಗೌಡ ಹಾಗೂ ಸೂರಜ್ ಎಂಟ್ರಿ ಆಗಿದೆ. ಆದರೆ, ರಘು ವೈಲ್ಡ್ ಕಾರ್ಡ್ ಎಂಟ್ರಿ ವೈಲೆಂಟ್ ಆಗೇ ಆಗಿದೆ.
ಬಿಗ್ ಬಾಸ್ ಮನೆಯೊಳಗೆ ನೆಮ್ಮದಿಯಾಗಿ ಮಲಗಿದ್ದ ಸ್ಪರ್ಧಿಗಳಿಗೆ ಮ್ಯೂಟಂಟ್ ರಘು ಕಾಡುವುದಕ್ಕೆ ಶುರು ಮಾಡಿದ್ದಾರೆ. ಎಂಟ್ರಿ ಕೊಟ್ಟ ಮೊದಲ ದಿನವೇ ರಘು ಅಬ್ಬರಿಸಿದ್ದಾರೆ. ಅಶ್ವಿನಿ ಗೌಡ ಹಾಗೂ ಜಾಹ್ನವಿ ಇಬ್ಬರ ವಿರುದ್ಧ ತಿರುಗಿಬಿದ್ದಿದ್ದಾರೆ. ಹೀಗಾಗಿ ಮೊದಲ ದಿನವೇ ಈ ಮೂವರ ನಡುವೆ ವಾಗ್ಯುದ್ಧಗಳು ಶುರುವಾಗಿದೆ. ಇತ್ತ ನೆಟ್ಟಿಗರು ಈಗ ಮಜಾ ಬಂತು ಅಂತಿದ್ದಾರೆ.

ರಕ್ಷಿತಾ ಶೆಟ್ಟಿ ಜೊತೆ ಅಶ್ವಿನಿ ಗೌಡ ಹಾಗೂ ಜಾಹ್ನವಿ ಇಬ್ಬರೂ ನಡೆದುಕೊಂಡ ರೀತಿ ವೀಕ್ಷಕರಿಗೆ ಹಿಡಿಸಿರಲಿಲ್ಲ. ರಕ್ಷಿತಾಗೆ ಬಳಸಿದ ಪದಗಳನ್ನು ಖಂಡಿಸಿದ್ದರು. ಮೊದಲೇ ಇವರಿಬ್ಬರ ಮೇಲೆ ವೀಕ್ಷಕರಿಗೆ ಅಸಮಧಾನವಿತ್ತು. ಹೀಗಾಗಿ ಮ್ಯೂಟಂಟ್ ರಘು ಎಂಟ್ರಿ ಕೊಡುತ್ತಿದ್ದಂತೆ ನೆಟ್ಟಿಗರು ಹಿರಿ ಹಿರಿ ಹಿಗ್ಗಿದ್ದಾರೆ. ಅದರಲ್ಲೂ ಮೊದಲ ದಿನವೇ ಅಶ್ವಿನಿ ಗೌಡ ಹಾಗೂ ಜಾಹ್ನವಿ ಎದುರು ನಿಂತಿದ್ದನ್ನು ಕಂಡು ಮಜಾ ಬಂತು ಎನ್ನುತ್ತಿದ್ದಾರೆ.
ಸ್ಪರ್ಧಿಗಳ ಮೇಲೆ ನೀರು ಸುರಿದ ರಘು
ಕೋಪ ಜಾಸ್ತಿ ಅಂತಾನೇ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟ ರಘು ವೈಲೆಂಟ್ ಆಗಿದ್ದಾರೆ. ಬಿಗ್ ಬಾಸ್ ಟಾಸ್ಕ್ ನೀಡಿದಂತೆ ನೆಮ್ಮದಿಯಾಗಿ ಮಲಗಿದ್ದ ಮನೆಯ ಸದಸ್ಯರ ಮೇಲೆ ನೀರು ಸುರಿದಿದ್ದಾರೆ. ಪ್ರತಿಯೊಬ್ಬ ಸ್ಪರ್ಧಿಯ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಈ ವೇಳೆ ರಘು ಹಾಗೂ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಅದರಲ್ಲೂ ಅಶ್ವಿನಿ ಗೌಡ, ಜಾಹ್ನವಿ ಹಾಗೂ ರಘು ನಡುವೆ ವಾಗ್ಯುದ್ಧವೇ ನಡೆದಿದೆ.
ರಘು ಅಬ್ಬರ.. ಮನೆ ಮಂದಿ ತತ್ತರ
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮೂರು ವಾರ ಅಶ್ವಿನಿ ಗೌಡ ಅಬ್ಬರಿಸಿದ್ದು ಬಿಟ್ಟರೆ, ಮತ್ಯಾರೂ ಸದ್ದು ಮಾಡಲಿಲ್ಲ. ಗಿಲ್ಲಿ ನಟನಿಗೆ ವೀಕ್ಷಕರು ಬೆಂಬಲ ಇದ್ದರೂ ಕಾಮಿಡಿ ಮಾಡಿಕೊಂಡೇ ಇದ್ದಾರೆ. ಇನ್ನು ಉಳಿದವರು ಆಗೊಮ್ಮೆ-ಈಗೊಮ್ಮೆ ತಮ್ಮ ತಾಕತ್ತು ತೋರಿಸಿದ್ದಾರಷ್ಟೇ. ಉಳಿದ ಸಮಯದಲ್ಲಿ ಸೈಲೆಂಟ್ ಆಗಿ ಇದ್ದಿದ್ದೇ ಹೆಚ್ಚು. ಈಗ ರಘು ಅಬ್ಬರ ನೋಡಿ ಮನೆ ಮಂದಿ ಕಂಗಾಲಾಗಿದ್ದಾರೆ.
ಏಕವಚನ ಬಳಸಿದ್ದಕ್ಕೆ ರಾದ್ಧಾಂತ
ಮ್ಯೂಟಂಟ್ ರಘುಗೆ ಬಿಗ್ ಬಾಸ್ ವಿಶೇಷ ಟಾಸ್ಕ್ ನೀಡಿದೆ. ಮನೆಯ ಸದಸ್ಯರ ಮೇಲೆ ನೀರು ಸುರಿದು ಅವರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕಿತ್ತು. ಈ ವೇಳೆ ರಘು ಬಾಯಲ್ಲಿ ಏಕವಚನ ಬಂದಿತ್ತು. ಅದಕ್ಕೆ ಅಶ್ವಿನಿ ಗೌಡ ರೊಚ್ಚಿಗೆದ್ದಿದ್ದರು. ರಘು ಕೂಡ ತಮ್ಮ ಧ್ವನಿಯನ್ನು ಏರಿಸುತ್ತಾರೆ. ಈಗಾಗಲೇ ರಿಲೀಸ್ ಆಗಿರುವ ಪ್ರೋಮೋದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನಿರೀಕ್ಷೆಯಂತೆ ಅಶ್ವಿನಿಗೆ ಜಾಹ್ನವಿ ಕೂಡ ಸಾಥ್ ಕೊಟ್ಟಿದ್ದಾರೆ.
ನೆಟ್ಟಿಗರು ಏನಂದ್ರು?
ಅಶ್ವಿನಿ ಗೌಡ ಹಾಗೂ ಜಾಹ್ನವಿ ಎದುರು ರಘು ಅಬ್ಬರಿಸಿದ್ದು ನೆಟ್ಟಿಗರಿಗೆ ಕಿಕ್ ಕೊಟ್ಟಿದೆ. "ಅಶ್ವಿನಿಗೆ ಟಕ್ಕರ್ ಕೊಡುವುದಕ್ಕೆ ರಘುನೇ ಸರಿ ಅನ್ನಿಸುತ್ತೆ" ಎಂದು ಹೇಳಿದ್ದಾರೆ. ಇನ್ನೊಬ್ಬರು "ಅಂತೂ ಇಂತು ಬಿಗ್ ಬಾಸ್‌ಗೆ ಫೈಯರ್ ಬಂತು" ಎಂದರೆ, ಇನ್ನೊಬ್ಬರು "ಬೇಕಿತ್ತು ಬೇಕಿತ್ತು ಆಂಟಿಗಳಿಗೆ ಮದ ಇಳಿಸೋ ಮತ್ತೊಬ್ಬ ಬೇಕಿತ್ತು" ಎಂದು ಕಮೆಂಟ್ ಹಾಕಿದ್ದಾರೆ. ಒಟ್ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮುಂದಿನ ದಿನಗಲ್ಲಿ ವೈಲ್ಡ್ ಆಗೋದು ಗ್ಯಾರಂಟಿ.


Click it and Unblock the Notifications











