BBK 12: ಈ 9 ಮಂದಿಯಲ್ಲಿ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗೋದ್ಯಾರು?
ಬಿಗ್ ಬಾಸ್ ಕನ್ನಡ ಸೀಸನ್ 12 ಇನ್ನು ಕೆಲವೇ ವಾರಗಳಲ್ಲಿ ಅಂತ್ಯ ಕಾಣಲಿದೆ. ಈಗಾಗಲೇ ನಿರೀಕ್ಷೆ ಮಾಡದವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಯಾರು ಮನೆಯಲ್ಲಿ ಉಳಿದುಕೊಳ್ಳಬಹುದೆಂದು ನಿರೀಕ್ಷೆ ಮಾಡಿದ್ದರೋ ಅಂತಹವೇ ಮನೆಯಿಂದ ಆಚೆ ಹೋಗಿದ್ದರು. ಈ ವಾರ ಮತ್ತೊಂದು ಎಲಿಮಿನೇಷನ್ ನಡೆಯುತ್ತಿದೆ. ಅದಕ್ಕೆ ವೇದಿಕೆನೂ ರೆಡಿಯಾಗಿದೆ.
ಕಳೆದ ವಾರ ಬಿಗ್ ಬಾಸ್ ಮನೆಯಿಂದ ಜಾಹ್ನವಿ ಹೊರಬಿದ್ದಿದ್ದರು. ಜಾಹ್ನವಿ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಾರೆ ಅನ್ನೋ ಸುಳಿವು ಕೂಡ ಇರಲಿಲ್ಲ. ಆದರೆ, ಜನರ ವೋಟು ಮಾಡಿದ್ದನ್ನು ಗಮನದಲ್ಲಿಟ್ಟುಕೊಂಡು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಮಾಡಲಾಗಿತ್ತು. ಈ ವಾರ ಮತ್ತೆ 9 ಮಂದಿ ನಾಮಿನೇಟ್ ಆಗಿದ್ದು, ಯಾರು ಎಲಿಮಿನೇಟ್ ಆಗಬಹುದೆಂದು ಕಿರುತೆರೆ ವೀಕ್ಷಕರು ಕುತೂಹಲದಿಂದ ನೋಡುತ್ತಿದ್ದಾರೆ.

ಬಿಗ್ ಬಾಸ್ ಸೀಸನ್ ಮುಗಿಯುವ ಹಂತಕ್ಕೆ ಬಂದಿದ್ದರೂ, ಕಳೆದ ವಾರ ಇತ್ತಿಬ್ಬರನ್ನು ವೈಲ್ಡ್ ಕಾರ್ಡ್ ಕೊಟ್ಟು ಒಳಗೆ ಕಳುಹಿಸಲಾಗಿತ್ತು. ಹೀಗಾಗಿ ಬಿಗ್ ಬಾಸ್ ಮನೆಯಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಈ ವಾರ ಡಬಲ್ ಎಲಿಮಿನೇಷನ್ ಮಾಡುತ್ತಾರಾ? ಇಲ್ಲ ಒಬ್ಬರೇ ಎಲಿಮಿನೇಟ್ ಆಗುತ್ತಾರಾ? ಎನ್ನುವ ಕುತೂಹಲ ಮೂಡಿದೆ. ಹಾಗಿದ್ದರೆ, ಈ ವಾರ ನಾಮಿನೇಟ್ ಆಗಿರುವ ಆ 9 ಮಂದಿ ಯಾರು? ಯಾರು ಮನೆಯಿಂದ ಹೊರ ಹೋಗಬಹುದು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ರಜತ್, ರಘು, ಅಶ್ವಿನಿ ಕಿತ್ತಾಟ
ಬಿಗ್ ಬಾಸ್ ಬೆಳ್ಳಂ ಬೆಳಗ್ಗೆನೇ ಒಂದು ಪ್ರೋಮೋ ರಿಲೀಸ್ ಮಾಡಿತ್ತು. ಇದರಲ್ಲಿ ಊಟದ ವಿಚಾರಕ್ಕೆ ರಜತ್, ರಘು, ಅಶ್ವಿನಿ ಕಿತ್ತಾಡಿಕೊಂಡಿದ್ದಾರೆ. ಈ ವಾರ ಬಿಗ್ ಬಾಸ್ ಮನೆಯ ಸದಸ್ಯರು ಮಾಡಿದ ತಪ್ಪಿಗೆ ಲಗ್ಸುರಿ ಬಜೆಟ್ ಅನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಊಟದ ವಿಚಾರದಲ್ಲಿ ಕಿತ್ತಾಟ ನಡೆಯುತ್ತಿದೆ. ಇರೋದರಲ್ಲೇ ಹೊಂದಾಣಿಕೆ ಮಾಡಿಕೊಂಡು ಊಟವನ್ನು ಹಂಚಿಕೊಳ್ಳಬೇಕಿದೆ. ಆದರೆ, ರಘು ಇಲ್ಲಿ ಅಡುಗೆ ಮಾಡಿ ಹಾಕೋಕೆ ನಮಗೇನು ತೆವಲಾ ಅಂದಿದ್ದಕ್ಕೆ ಅಶ್ವಿನಿ ಟ್ರಿಗರ್ ಆಗಿದ್ದರೆ, ಅತ್ತ ರಜತ್ ಕೂಡ ಇದೇ ಪದ ಬಳಕೆ ಮಾಡಿದ್ದಾರೆ. ಹೀಗಾಗಿ ಸದ್ಯ ಬಿಗ್ ಬಾಸ್ ಮನೆಯಲ್ಲಿ ಬಿಸಿ ಬಿಸಿಯಾಗಿದೆ.
ನಾಮಿನೇಟ್ ಆದ 9 ಮಂದಿ ಯಾರು?
ಬಿಗ್ ಬಾಸ್ ಕನ್ನಡ ಸೀಸನ್ 12ರ ಈ ವಾರದ ನಾಮಿನೇಷನ್‌ನಲ್ಲಿ ಒಟ್ಟು 9 ಮಂದಿ ಇದ್ದಾರೆ. ಟಾಸ್ಕ್‌ಗಳು ಹಾಗೂ ವಿಶೇಷ ಅಧಿಕಾರವನ್ನು ಬಳಸಿ ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ 9 ಮಂದಿ ಇದ್ದಾರೆ. ಧ್ರುವಂತ್, ರಾಶಿಕಾ ಶೆಟ್ಟಿ, ಸೂರಜ್ ಸಿಂಗ್, ಮಾಳು ನಿಪನಾಳ, ಕಾವ್ಯಾ ಶೈವ, ಅಭಿಷೇಕ್, ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆನ್ನುವುದು ಕುತೂಹಲ.

ಯಾರು ಹೊರ ಹೋಗಬಹುದು?
ಬಿಗ್ ಬಾಸ್ ಮನೆಯಿಂದ ಯಾರು ಹೊರ ಹೋಗಬಹುದೆಂಬ ಲೆಕ್ಕಾಚಾರ ನಾಮಿನೇಷನ್ ಪ್ರಕ್ರಿಯೆ ಆರಂಭ ಆದಲ್ಲಿಂದ ನಡೆಯುತ್ತಲೇ ಇದೆ. ಈಗಾಗಲೇ ಕಳೆದ ವಾರದಿಂದ ಧ್ರುವಂತ್ ಮನೆಯಿಂದ ಹೊರ ಹೋಗುವ ಮಾತಾಡುತ್ತಿದ್ದಾರೆ. ಈ ವಾರ ಕೂಡ ಮನೆಯಿಂದ ಹೊರ ಹೋಗಬೇಕು ಅನ್ನೋ ಜಪ ಮಾಡುತ್ತಲೇ ಇದ್ದಾರೆ. ಹೀಗಾಗಿ ಹೊರ ಹೋಗುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಧ್ರುವಂತ್ ಇದ್ದಾರೆಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
2ನೇ ಲಿಸ್ಟ್‌ನಲ್ಲಿ ಇರೋದ್ಯಾರು?
ಧ್ರುವಂತ್ ಬಿಟ್ಟರೆ, ಎಲಿಮಿನೇಟ್ ಆಗಬಹುದಾದ ಎರಡನೇ ಪಟ್ಟಿಯಲ್ಲಿ ಇರೋರು ಮಾಳು ನಿಪನಾಳ. ಬಿಗ್ ಬಾಸ್ ಮನೆಗೆ ಬಂದಲ್ಲಿಂದ ಆಕ್ಟಿವ್ ಆಗಿ ಇರುವುದಿಲ್ಲ ಎಂಬ ಆರೋಪ ಇವರ ಮೇಲಿದೆ. ಇನ್ನು ಅಭಿಷೇಕ್, ರಾಶಿಕಾ ಶೆಟ್ಟಿ, ಸೂರಜ್ ಸಿಂಗ್ ಕೂಡ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಇದ್ದಾರೆ. ಹೀಗಾಗಿ ಈ ವಾರ ಎಲಿಮಿನೇಷನ್ ಸಖತ್ ಇಂಟ್ರೆಸ್ಟಿಂಗ್ ಆಗಿ ಇದೆ.


Click it and Unblock the Notifications











