BBK 12: ಕ್ರೇಜಿಸ್ಟಾರ್ ಮುಂದೆ ಓಳು ಬಿಟ್ಟು ಸಿಕ್ಕಾಕೊಂಡ ಗಿಲ್ಲಿ; ಎಲ್ಲಾ 'ರಾಜಾಹುಲಿ' ಎಫೆಕ್ಟ್!
ಬಿಗ್ ಬಾಸ್ ಕನ್ನಡ ಮುಗಿಯುವುದಕ್ಕೆ ಇನ್ನು ಕೇವಲ ನಾಲ್ಕು ವಾರಗಳು ಉಳಿದಿವೆ. ಹೆಚ್ಚು ಕಡಿಮೆ ಒಂದು ತಿಂಗಳು. ಕಿರುತೆರೆ ವೀಕ್ಷಕರಿಗೆ ಈ ಎರಡು ತಿಂಗಳು ಹೇಗೆ ಉರುಳಿ ಹೋಯ್ತು ಅನ್ನೋದೇ ಗೊತ್ತಾಗಿಲ್ಲ. ಬಿಗ್ ಬಾಸ್ ಸೀಸನ್ 12 ಅನ್ನು ವೀಕ್ಷಕರು ಎಂಜಾಯ್ ಮಾಡುತ್ತಿದ್ದಾರೆ. ಇನ್ನು ಪ್ರತಿವಾರ ಎಲಿಮಿನೇಷನ್‌ನಲ್ಲಿ ಸಿಕ್ಕಾಪಟ್ಟೆ ಟ್ವಿಸ್ಟ್ ಅನ್ನು ನೋಡುವ ಸಾಧ್ಯತೆಯಿರುತ್ತೆ.
ಈ ಮಧ್ಯೆ ಬಿಗ್ ಬಾಸ್ ತನ್ನ ವೀಕ್ಷಕರಿಗೆ ಟ್ವಿಸ್ಟ್‌ಗಳನ್ನು, ಸರ್ಪ್ರೈಸಗಳನ್ನು ಕೊಟ್ಟು ಸಿಕ್ಕಾಪಟ್ಟೆ ಮನರಂಜನೆಯನ್ನು ನೀಡುತ್ತಿದೆ. ಅದರಲ್ಲೂ ಈ ವಾರ ಬಿಗ್ ಬಾಸ್ ಮನೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿ ಕೊಟ್ಟಿದ್ದರು. ಇದು ಮನೆ ಮಂದಿಗೆ ಸರ್ಪ್ರೈಸ್ ಕೊಟ್ಟಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಸಿನಿಮಾ 'ಪ್ಯಾರ್' ಪ್ರಚಾರ ಮಾಡುವುದಕ್ಕೆ ಬಿಗ್ ಬಾಸ್ ಮನೆಗೆ ಇದೇ ಮೊದಲ ಬಾರಿಗೆ ಪ್ರವೇಶ ಕೊಟ್ಟಿದ್ದರು.

ಕ್ರೇಜಿಸ್ಟಾರ್ ಇದ್ಮೇಲೆ ಪ್ರೀತಿ ಬಗ್ಗೆ ಮಾತುಕತೆ ಇರದೇ ಹೋದರೇ ಹೇಗೆ? 'ಪ್ಯಾರ್' ಸಿನಿಮಾದ ಪ್ರಚಾರದ ಜೊತೆಗೆ ಲವ್ ಸ್ಟೋರಿಗಳನ್ನು ಕೇಳುವ ಅವಕಾಶ ಕ್ರೇಜಿಸ್ಟಾರ್‌ಗೆ ಸಿಕ್ಕಿತ್ತು. ಮನೆ ಮಂದಿಯ ಲವ್ ಸ್ಟೋರಿ ಕೇಳುವುದಕ್ಕೂ ಮುನ್ನ ಕ್ರೇಜಿಸ್ಟಾರ್ ತನ್ನ ಮೊದಲ ಲವ್ ಸ್ಟೋರಿಯನ್ನು ಹೇಳಿದರು. ಆನಂತರ ಬಿಗ್ ಬಾಸ್ ಒಂದು ಟಾಸ್ಕ್ ಅನ್ನು ನೀಡಿತ್ತು. ಅದುವೇ ಮನೆಯ ಸದಸ್ಯರ ಮೊದಲ ಲವ್ ಸ್ಟೋರಿ ಹೇಳುವ ಟಾಸ್ಕ್.
ರಜತ್‌ನಿಂದ ಆರಂಭ ಆಗಿದ್ದ ಈ ಟಾಸ್ಕ್ ರಘು, ರಾಶಿಕಾ ಶೆಟ್ಟಿ, ಚೈತ್ರಾ ಕುಂದಾಪುರ ಹಾಗೂ ಗಿಲ್ಲಿ ಲವ್ ಸ್ಟೋರಿವರೆಗೆ ಬಂದಿತ್ತು. ಒಬ್ಬೊಬ್ಬರು ತಮ್ಮ ಮೊದಲ ಲವ್ ಸ್ಟೋರಿಯನ್ನು ತಮ್ಮದೇ ಶೈಲಿಯಲ್ಲಿ ಸ್ವಾರಸ್ಯಕರವಾಗಿ ಹೇಳಿದ್ದರು. ಕೆಲವು ಈಗಲೂ ಅವರೊಂದಿಗೆ ಸಂಪರ್ಕದಲ್ಲಿ ಇರುವುದಾಗಿ ಹೇಳಿದ್ದಾರೆ. ಆದರೆ, ಗಿಲ್ಲಿ ಹೇಳಿದ ಲವ್ ಸ್ಟೋರಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ಮುಗುಳು ನಗೆ ಬೀರಿದ್ದಾರೆ.

ಅಷ್ಟಕ್ಕೂ ಗಿಲ್ಲಿ ಹೇಳಿದ ಲವ್ ಸ್ಟೋರಿ ಏನು ಅಂತ ನೋಡುವುದಾರೆ, ಅವರು ಕಾಲೇಜಿಗೆ ಹೋಗುವ ವೇಳೆ ಬಸ್‌ನಲ್ಲಿ ಓಡಾಡುತ್ತಿದ್ದರು. ಆಗ ಒಬ್ಬ ಹುಡುಗಿ ಕೂಡ ಅದೇ ಬಸ್‌ನಲ್ಲಿ ಕಾಲೇಜಿಗೆ ಬರುತ್ತಿದ್ದಳು. ಆದರೆ, ಅರ್ಧ ಮುಖ ಮಾತ್ರ ಕಾಣುತ್ತಿತ್ತು. ಕೊನೆಗೂ ಬಸ್‌ನ ಮುಂಭಾಗಕ್ಕೆ ಹೋಗಿ ನೋಡಿಯೇ ಬಿಟ್ಟರು. ಆ ಹುಡುಗಿ ಮೇಲೆ ಗಿಲ್ಲಿ ಲವ್ ಆಗಿತ್ತು. ಅವಳನ್ನು ಹೇಗಾದರೂ ಮಾಡಿ ಅವಳನ್ನು ಮಾತಾಡಿಸಬೇಕು ಅಂತ ಪ್ರಯತ್ನ ಪಟ್ಟಿದ್ದರಂತೆ. ಕೊನೆಗೆ ಬಸ್‌ನ ಮುಂಭಾಗದಲ್ಲಿ ಸೀಟ್ ಮೇಲೆ ಬುಕ್ ಇಟ್ಟು ಕಾಯ್ದಿರಿಸುತ್ತಾರೆ. ಆದರೆ, ಆಕೆ ಬುಕ್ ಅನ್ನು ಸರಿಸಿ ಕೂರುತ್ತಾಳೆ. ಆಗ ಅವಳನ್ನು ಮಾತಾಡಿಸುವ ಪ್ರಯತ್ನ ಮಾಡುತ್ತಾರೆ. ಆದರೆ, ಆಕೆ ಅಣ್ಣ ಅಂತ ಕರೆದಿದ್ದು ನಿರಾಸೆ ಮಾಡಿದ್ದಾಗಿ ಹೇಳಿದ್ದಾರೆ.
ಗಿಲ್ಲಿಯ ಈ ಲವ್ ಸ್ಟೋರಿಯನ್ನು ಕೇಳಿ ಮನೆ ಮಂದಿಯೆಲ್ಲ ನಗಾಡಿದರು. ಅವರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಸ್ಮೈಲ್ ಮಾಡಿದರು. ಆದರೆ, ಗಿಲ್ಲಿ ಹೇಳಿದ ಲವ್ ಸ್ಟೋರಿಯನ್ನು ಕ್ರೇಜಿಸ್ಟಾರ್ ಸುಲಭವಾಗಿ ಕಂಡು ಹಿಡಿದಿದ್ದರು. ಮನೆ ಮಂದಿಯ ಲವ್ ಸ್ಟೋರಿ ಹೇಳಿ ಮುಗಿಯುತ್ತಿದ್ದಂತೆ ರವಿಚಂದ್ರನ್ ಅಖಾಡಕ್ಕೆ ಇಳಿದಿದ್ದರು. ಅವರಿಗೆ ಮನೆ ಮಂದಿ ಲವ್ ಸ್ಟೋರಿಯನ್ನು ಪೂರ್ಣವಾಗಿ ಹೇಳಿದ್ದಾರೆ ಅಂತ ಅನಿಸಲಿಲ್ಲ. ಅಲ್ಲದೆ ಗಿಲ್ಲಿಗೆ 'ರಾಜಾಹುಲಿ' ಕಥೆ ಹೇಳಿ, ನಿನ್ನ ಲವ್ ಸ್ಟೋರಿ ಅಂತ ಹೇಳುತ್ತೀಯಾ ಎಂದು ತಮಾಷೆ ಮಾಡಿದ್ದಾರೆ. ಕ್ರೇಜಿಸ್ಟಾರ್ ಮುಂದೆ ಓಳು ಬಿಟ್ಟು ಗಿಲ್ಲಿ ಸಿಕ್ಕಿಬಿದ್ದಿದ್ದಾರೆ.


Click it and Unblock the Notifications











