BBK 12: "ಗಿಲ್ಲಿ.. ಬಿಗ್ ಬಾಸ್ ಮನೆಗೆ ನಿನ್ನ ಒಬ್ಬನ್ನು ಮೆಚ್ಚಿಸುವುದಕ್ಕೆ ಬಂದಿಲ್ಲ"; ಅಶ್ವಿನಿ ಗೌಡ 2.0 ಶುರು!
ಬಿಗ್ ಬಾಸ್ ಮನೆಯ ಇಂದಿನ (ನವೆಂಬರ್ 24) ಎಪಿಸೋಡ್‌ನಲ್ಲಿ ನಾಮಿನೇಷನ್ ಪ್ರಕ್ರಿಯೆ ಆರಂಭ ಆಗಿದೆ. ಇದಕ್ಕೊಂದು ಟಾಸ್ಕ್ ಅನ್ನು ಬಿಗ್ ಬಾಸ್ ಕೊಟ್ಟಿತ್ತು. ಈ ಮನೆಯಲ್ಲಿ ಇರುವುದಕ್ಕೆ ಯಾರು ಯೋಗ್ಯರಲ್ಲ ಅನ್ನೋದನ್ನು ಅವರ ಬಟ್ಟೆಯನ್ನು ಒಗೆಯುತ್ತಾ ಕಾರಣಗಳನ್ನು ಕೊಡಬೇಕಿತ್ತು. ಈ ವೇಳೆ ಗಿಲ್ಲಿ ನಟ ಇಬ್ಬರ ಹೆಸರನ್ನು ತೆಗೆದುಕೊಂಡಿದ್ದರು. ಅದರಲ್ಲಿ ಒಬ್ಬರು ಜಾಹ್ನವಿ ಆದರೆ, ಇನ್ನೊಬ್ಬರು ಅಶ್ವಿನಿ ಗೌಡ.
ಇಬ್ಬರು ಸದಸ್ಯರ ಹೆಸರನ್ನು ತೆಗೆದುಕೊಂಡರೆ, ಅದಕ್ಕೆ ಸೂಕ್ತ ಕಾರಣವನ್ನು ನೀಡಬೇಕಿತ್ತು. ಗಿಲ್ಲಿ ನಟ ಇಬ್ಬರು ಹೆಸರುಗಳನ್ನು ತೆಗೆದುಕೊಂಡು ಅದಕ್ಕೆ ಕಾರಣಗಳನ್ನು ಕೊಡುವುದಕ್ಕೆ ಶುರು ಮಾಡಿದ್ದರು. ಮೊದಲನೆಯದಾಗಿ ಜಾಹ್ನವಿ ಹೆಸರು ತೆಗೆದುಕೊಂಡರು. ಅವರಿಬ್ಬರ ನಡುವೆ ವಾಗ್ಯುದ್ಧ ನಡೆದಿತ್ತು. ಎರಡನೇಯ ಹೆಸರು ಅಶ್ವಿನಿ ಗೌಡ ಅವರ ಹೆಸರನ್ನು ತೆಗೆದುಕೊಂಡಿದ್ದರು. ಅದಕ್ಕೆ ಗಿಲ್ಲಿ ಕೊಟ್ಟ ಕಾರಣವೇನು? ಅಶ್ವಿನಿ ಗೌಡ ಕೊಟ್ಟ ತಿರುಗೇಟು ಏನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

"ನಾನು ಅಶ್ವಿನಿ ಮೇಡಂ ಅವರನ್ನು ನಾಮಿನೇಟ್ ಮಾಡುವುದಕ್ಕೆ ಒಂದೇ ಒಂದು ಕಾರಣ ಏನಂದ್ರೆ, ಅವರು ಟಫ್ ಕಾಂಪಿಟೇಟರ್ ಅಂದುಕೊಂಡಿದ್ದೆ. ನಿಜವಾಗಲೂ ಮೆಂಟಲಿ ತುಂಬಾನೇ ಸ್ಟ್ರಾಂಗ್ ಇರೋರು ಅಂದುಕೊಂಡಿದ್ದೆ. ಯಾವಾಗ ಸಣ್ಣ ಜಗಳವನ್ನು ದೊಡ್ಡದು ಮಾಡಿ, ನಾನು ಮನೆ ಬಿಟ್ಟು ಹೋಗುತ್ತೇನೆ. ಬಾಗಿಲು ತೆಗೆಯಿರಿ ನಾನು ಮನೆ ಬಿಟ್ಟು ಹೋಗುತ್ತೇನೆ ಎಂದು ಹೇಳಿದರೋ ಆಗ ಅವರ ಮೇಲಿನ ಓಪಿನಿಯನ್ ಬದಲಾಯ್ತು. ಏನಿದು ಚೆನ್ನಾಗಿ ಆಡುತ್ತಿರುವವರು ಮನೆ ಬಿಟ್ಟು ಹೋಗುತ್ತೇನೆ ಎನ್ನುತ್ತಿದ್ದಾರಲ್ಲ. ಇದು ಸ್ಟ್ರಾಂಗ್ ಮೈಂಡ್ ಇರೋರು ಅಲ್ಲ. ವೀಕ್ ಮೈಂಡ್ ಇರೋರು ಮಾತ್ರ ಆ ಮಾತು ಹೇಳೋದು."
ಕ್ಯಾಪ್ಟನ್ಸಿ ಟಾಸ್ಕ್ ಬರುತ್ತೆ. ಅದರಲ್ಲಿ ನಾನು ಹೇಳುತ್ತೇನೆ. ಅಶ್ವಿನಿ ಮೇಡಂ ಟಾಸ್ಕ್ ಅರ್ಥ ಆಗಿಲ್ಲ ಅಂತ. ಅದನ್ನು ಅವರು ತಿರುಚಿ ಬಿಟ್ಟರು. ನನಗೆ ಅರ್ಥ ಆಗಿತ್ತು. ಅವರ ಬಾಯಲ್ಲಿ ಏನೇನು ಬರುತ್ತೋ ಅದನ್ನು ನೋಡುವುದಕ್ಕೆ ಕೂತುಕೊಂಡೆ ಅಂತ ತಿರುಚಿದರು.

ಅಶ್ವಿನಿ ಮೇಡಂ 0.ಓ ಶುರುವಾಗಬೇಕು ಅಂತ ಹೇಳಿದ್ದಾರೆ. ಅದನ್ನು ಅವರು ಹೇಗೆ ತೆಗೆದುಕೊಂಡಿದ್ದಾರೆ ಅಂದರೆ, ಸೈಲೆಂಟ್ ಆಗಿ ಮನೆಯಲ್ಲಿ ಕೆಲಸ ಮಾಡಿಕೊಂಡು, ಓಡಾಡಿಕೊಂಡು, ಅಡುಗೆ ಮಾಡಿಕೊಂಡು, ಸೊಪ್ಪು ಬಿಡಿಸಿಕೊಂಡು ಇದ್ದು ಬಿಡಬೇಕು. ಎಲ್ಲಾ ಮಾಡಬೇಕು ಅಂತ ಹೇಳಿರೋದು. ಸುಮ್ಮನೆ ಸೈಲೆಂಟ್ ಆಗಿ ಇದ್ದು ಬಿಡಿ ಅಂತ ಹೇಳಿದ್ದಲ್ಲ.
"ಗಿಲ್ಲಿ ನಾನು ಬಿಗ್ ಬಾಸ್ ಮನೆಗೆ ನಿನ್ನ ಒಬ್ಬನ್ನು ಮೆಚ್ಚಿಸುವುದಕ್ಕೆ ಬಂದಿಲ್ಲ. ಇಷ್ಟು ಹೊತ್ತು ನೀನು ಹೇಳಿರೋದು ಒಪ್ಪಬೇಕೋ.. ಬಿಡಬೇಕೋ.. ಅದು ನನ್ನ ಸ್ಟ್ರಾಟಜಿಯೋ ನನಗೆ ಗೊತ್ತು. ನಾನು ನಿನ್ನ ವಿಚಾರಗಳನ್ನು ಮಾತಾಡಿದಾಗ ಪ್ರತಿ ಸಂದರ್ಭದಲ್ಲೂ ಸಮರ್ಥನೆ ಕೊಡಬೇಕು ಅಂತೇನೂ ಇಲ್ಲ. ಎಲ್ಲಾ ಮಾತಿನಲ್ಲೂ ನಾನು ಸ್ಪಂದಿಸಬೇಕು ಅಂತೇನೂ ಇಲ್ಲ. ನಿನ್ನಿಂದ ಪ್ರಚೋದನೆಗೆ ಒಳಗಾಗಿ ಹಾಗೆ ಮಾತಾಡಿದ್ದೆ. ನಾನು ಹೇಗೆ ಇದ್ದೀನೋ ಹಾಗೆ ಇರುವುದಕ್ಕೆ ಬಿಡು." ಎಂದು ಅಶ್ವಿನಿ ಗೌಡ ಹೇಳಿದ್ದಾರೆ.
ಸದ್ಯ ಅಶ್ವಿನಿ ಗೌಡ ಗೊಂದಲದಲ್ಲಿ ಇದ್ದಾರೆ. ತಾಳ್ಮೆಯಿಂದ ಸನ್ನಿವೇಶವನ್ನು ಹ್ಯಾಂಡಲ್ ಮಾಡುತ್ತಿದ್ದಾರೆ. ಇದನ್ನು ಅರಿತಿರೋ ಗಿಲ್ಲಿ ಅವರನ್ನು ಕೆಣಕುವ ಪ್ರಯತ್ನ ಮಾಡುತ್ತಿದ್ದಾರೆ. ಸದ್ಯ ಸೈಲೆಂಟ್ ಮೋಡ್‌ಗೆ ಜಾರಿರುವ ಅಶ್ವಿನಿ ಗೌಡ ಮತ್ತೆ ಟ್ರಿಗರ್ ಆಗುತ್ತಾರಾ? ಗಿಲ್ಲಿ ಮೇಲೆ ವಾಗ್ಯುದ್ಧಕ್ಕೆ ಇಳಿಯುತ್ತಾರಾ? ವಾರಾಂತ್ಯದಲ್ಲಿ ಮತ್ತೆ ಕಿಚ್ಚನ ಕೈಗೆ ಸಿಕ್ಕಿ ಬೀಳುತ್ತಾರಾ? ಅನ್ನೋದನ್ನು ಮುಂದಿನ ಸಂಚಿಕೆಗಳಲ್ಲಿ ನೋಡುವುದಕ್ಕೆ ಸಿಗಬಹುದು.


Click it and Unblock the Notifications











