BBK 12: ಬಿಗ್ ಬಾಸ್ ಗೆದ್ದ ಗಿಲ್ಲಿ; ವರ್ಕ್ ಔಟ್ ಆಗಿದ್ದು ಎಲ್ಲಿ? ಟಕ್ಕರೆ ಟಕ್ಕರೆ ತಮಟೆ ಏಟು.. ಗಿಲ್ಲಿ ಅಲ್ಟಿಮೆಟು

ಬಿಗ್ ಬಾಸ್ ಕನ್ನಡ ಸೀಸನ್ 12 ಯಶಸ್ವಿಯಾಗಿ ಮುಕ್ತಾಯಗೊಂಡಿದೆ. 12ನೇ ಸೀಸನ್‌ಗೂ ಮುನ್ನ ಬಂದಿದ್ದ ಶೋಗಳಿಗಿಂತ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಈ ಸೀಸನ್‌ನಿಂದ ಕಲರ್ಸ್ ಕನ್ನಡ ನಂ ಸ್ಥಾನಕ್ಕೂ ಏರಿತು. ಎಲ್ಲಕ್ಕಿಂತ ಹೆಚ್ಚಾಗಿ ಇದೂವರೆಗೂ ಬಿಗ್ ಬಾಸ್ ಶೋಗೆ ಬಂದಿದ್ದ ಸ್ಪರ್ಧಿಗಳಲ್ಲೇ ಅತೀ ಹೆಚ್ಚು ಜನಪ್ರಿಯತೆ ಪಡೆದವರಲ್ಲಿ ಗಿಲ್ಲಿ ನಟ ಹೊರ ಹೊಮ್ಮಿದ್ದಾರೆ.

ಗಿಲ್ಲಿ ನಟ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟ ದಿನದಿಂದಲೇ ವೀಕ್ಷಕರಿಗೆ ಹತ್ತಿರ ಆಗುತ್ತಾ ಹೋದರು. ಒಂದೊಂದು ಎಪಿಸೋಡ್‌ನಲ್ಲೂ ಗಿಲ್ಲಿ ಅಭಿಮಾನಿಗಳನ್ನು ಸಂಪಾದಿಸುತ್ತಾ ಮುಂದಕ್ಕೆ ಹೋಗಿದ್ದು ವಿಶೇಷ. ಯಾರೇ ಬಂದರೂ, ಯಾರೋ ಹೋದರೂ ಗಿಲ್ಲಿ ನಟನ ಖದರ್ ಮಾತ್ರ ಕಮ್ಮಿಯಾಗಿರಲಿಲ್ಲ. ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲಿಯೇ ಅತೀ ಹೆಚ್ಚು ವೋಟ್ ಪಡೆದ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.

BBK 12 Grand Finale Gilli Nata winner of Bigg Boss Kannada 12 these are the reasons

ಇಷ್ಟು ದಿನ ಇದ್ದ ಕುತೂಹಲಕ್ಕೆ ಈಗ ತೆರೆಬಿದ್ದಿದೆ. ಗಿಲ್ಲಿ ನಟ ಬಿಗ್ ಬಾಸ್ ಕನ್ನಡ ಸೀಸನ್‌ 12ರ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಈ ಸೀಸನ್‌ನ ವಿಶೇಷ ಅಂದರೆ, ಎರಡೂ ಹಾಗೂ ಮೂರು ಸ್ಥಾನದಲ್ಲಿದ್ದ ರಕ್ಷಿತಾ ಶೆಟ್ಟಿ ಹಾಗೂ ಅಶ್ವಿನಿ ಗೌಡ ಇಬ್ಬರೂ ಈ ಸೀಸನ್ ಅನ್ನು ಗೆಲ್ಲಬಹುದಿತ್ತು. ಆದರೆ, ಒಂದಿಷ್ಟು ತಪ್ಪುಗಳು ಅವರಿಗೆ ಬಿಗ್ ಬಾಸ್ ಕಿರೀಟ ಸಿಗದೇ ಇರುವಂತೆ ಮಾಡಿದೆ. ಹಾಗಿದ್ದರೆ, ಗಿಲ್ಲಿಗೆ ಬಿಗ್ ಬಾಸ್ ಗೆದ್ದಿದ್ದು ಹೇಗೆ? ಗಿಲ್ಲಿಯ ಬಿಗ್ ಬಾಸ್‌ ಗೆಲ್ಲಲು ಬಳಸಿದ ತಂತ್ರಗಳೇನು? ತಿಳಿಯುವುದಕ್ಕೆ ಮುಂದೆ ಓದಿ.

ಗಿಲ್ಲಿ ಗೆಲ್ಲಲು ಕಾರಣ 1; 112 ದಿನವೂ ಕಂಟೆಂಟ್

ಗಿಲ್ಲಿ ನಟ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡುವುದಕ್ಕೂ ಮುನ್ನ ಫೇಮಸ್ ಆಗಿದ್ದರು. ಅವರ ಕಾಮಿಡಿ ಸೆನ್ಸ್‌ ಮೊದಲೇ ವೀಕ್ಷಕರು ಮೆಚ್ಚಿಕೊಂಡಿದ್ದರು. ಕಾಮಿಡಿ ಶೋಗಳಲ್ಲಿ ಗಿಲ್ಲಿಯನ್ನು ನೋಡಿದ್ದವರಿಗೆ ಬಿಗ್ ಬಾಸ್ ಮನೆಯಲ್ಲಿ ಮತ್ತಷ್ಟು ಮನರಂಜನೆ ನೀಡಿದರು. ಪ್ರತಿ ಎಪಿಸೋಡ್‌ನಲ್ಲೂ ಗಿಲ್ಲಿ ನಟ ಕಂಟೆಂಟ್ ಕೊಟ್ಟಿದ್ದರು. ಕಾಮಿಡಿನೇ ತನ್ನ ತಾಕತ್ತು. ಅದನ್ನು ಸಮರ್ಥವಾಗಿ ಬಳಸಿಕೊಂಡರು. ಇದು ಅವರು ಗೆಲುವಿಗೆ ಪ್ರಮುಖ ಕಾರಣ.

ಕಾರಣ 2: ಪ್ರತಿ ಸ್ಪರ್ಧಿ ಮೇಲೆ ಸವಾರಿ

ಗಿಲ್ಲಿ ನಟ ಬಿಗ್ ಬಾಸ್ ಸೀಸನ್‌ಗಳನ್ನು ಅರಿತುಕೊಂಡು ಎಂಟ್ರಿ ಕೊಟ್ಟಿರೋ ಹಾಗಿತ್ತು. ಯಾಕಂದ್ರೆ, ಗಿಲ್ಲಿ ಬಿಟ್ಟರೆ, ತನಗೆ ಕಾಂಪಿಟೇಷನ್ ಕೊಡಬಲ್ಲರು ಇಬ್ಬರು ಅನ್ನೋದನ್ನು ಬಹುಬೇಗನೇ ಅರಿತುಕೊಂಡಿದ್ದರು. ಅವರು ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿ. ಗಿಲ್ಲಿ ಇವರಿಬ್ಬರನ್ನೂ ಆರಂಭದಿಂದಲೇ ಸೀರಿಯಸ್‌ ಆಗಿ ತೆಗೆದುಕೊಂಡಿದ್ದರು. ಹೀಗಾಗಿ ಮೊದಲಿನಿಂದ ಅಶ್ವಿನಿ ಗೌಡ ಕೆರಳಿಸುವಲ್ಲಿ ಯಶಸ್ವಿಯಾದರು. ಇನ್ನು ರಕ್ಷಿತಾ ಶೆಟ್ಟಿಯನ್ನು ವಂಶದ ಕುಡಿ ಅಂತ ಕರೆದು ಅವರ ಅಭಿಮಾನಿಗಳನ್ನೂ ತನ್ನ ಸೆಳೆದಿದ್ದು ಸ್ಟ್ರಾಟಜಿಯಾಗಿತ್ತು.

BBK 12 Grand Finale Gilli Nata winner of Bigg Boss Kannada 12 these are the reasons

ಕಾರಣ 3: ಕಾಮಿಡಿ ಡೈಲಾಗ್ಸ್

ಬಿಗ್ ಬಾಸ್ ಕನ್ನಡ 12ನ್ನು ಗಿಲ್ಲಿ ನಟ ಗೆಲ್ಲುವುದಕ್ಕೆ ಮತ್ತೊಂದು ಪ್ರಮುಖ ಕಾರಣ ಅಂದರೆ, ಕಾಮಿಡಿ ಸೆನ್ಸ್. ಪ್ರತಿಯೊಂದು ಎಪಿಸೋಡ್‌ನಲ್ಲೂ ಅವರ ಕಾಮಿಡಿ ಮಿಶ್ರಿತ ಡೈಲಾಗ್ ವೀಕ್ಷಕರಿಗೆ ಸಿಕ್ಕಾಪಟ್ಟೆ ಮನರಂಜನೆ ನೀಡುತ್ತಿತ್ತು. ಪ್ರತಿ ಎಪಿಸೋಡ್‌ನಲ್ಲೂ ಗಿಲ್ಲಿಯನ್ನು ನೋಡುವುದಕ್ಕಂತಲೇ ವೀಕ್ಷಕರು ಕಾದು ಕೂರುವಂತೆ ಮಾಡಿದ್ದರು. ಇದು ಗಿಲ್ಲಿ ನಟನ ತಾಕತ್ತು.

ಕಾರಣ 4: ಫ್ಯಾನ್ಸ್ ಬೆಂಬಲ

ಗಿಲ್ಲಿ ನಟ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಅವರಿಗೆ ಅಭಿಮಾನಿಗಳ ಸಂಘಗಳು ಹುಟ್ಟಿಕೊಂಡವು. ಗಿಲ್ಲಿ ಪ್ರತಿದಿನ ಕೊಡುವ ಕಂಟೆಂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದವು. ನೋಡ ನೋಡುತ್ತಿದ್ದಂತೆ ಕನ್ನಡಿಗರು ಗಿಲ್ಲಿಗೆ ಜೈಕಾರ ಹಾಕುವುದಕ್ಕೆ ಶುರು ಮಾಡಿದ್ದರು. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಗಿಲ್ಲಿನೇ ಕಾಣಿಸುತ್ತಿದ್ದರು. ಇದು ಗಿಲ್ಲಿ ದಾಖಲೆ ವೋಟ್‌ಗಳ ಮೂಲಕ ಗೆಲ್ಲುವುದಕ್ಕೆ ಕಾರಣವಾಯ್ತು.

More from Filmibeat

English summary
BBK 12 Grand Finale Gilli Nata winner of Bigg Boss Kannada 12 these are the reasons.
Read more about: reality show gilli nata
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X