BBK 12: "ಈ ಮನೆಯಲ್ಲಿ ಇರುವ ಹುಡುಗರು ಸತ್ತ ಹೆಣ ತರ ಇರ್ತಾರೆ" ಜಾಹ್ನವಿ ಹೇಳಿಕೆಗೆ ಕಿಚ್ಚನೇ ಶಾಕ್

ಬಿಗ್ ಬಾಸ್ ಕನ್ನಡ ಸೀಸನ್ 12 ವೀಕೆಂಡ್‌ ಎಪಿಸೋಡ್ ಮಜವಾಗಿತ್ತು. ನಿನ್ನೆ (ನವೆಂಬರ್ 15) ಮನೆಯ ಪ್ರತಿಯೊಬ್ಬ ಸದಸ್ಯನಿಗೂ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು. ಆದರೆ ಇಂದಿನ (ನವೆಂಬರ್ 16) ಎಪಿಸೋಡ್ ಸಿಕ್ಕಾಪಟ್ಟೆ ಮಸ್ತಿಯಿಂದ ಕೂಡಿತ್ತು. ವೀಕ್ಷಕರು ಈ ಎಪಿಸೋಡ್ ಅನ್ನು ಸಖತ್ ಆಗಿ ಎಂಜಾಯ್ ಮಾಡಿದ್ದರು.

ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಯಲ್ಲಿರುವ ಸದಸ್ಯರಲ್ಲಿ ಹೆಣ್ಣು ಮಕ್ಕಳು ಸ್ಟ್ರಾಂಗ್ ಇದ್ದಾರೋ? ಗಂಡು ಮಕ್ಕಳು ಸ್ಟ್ರಾಂಗ್ ಇದ್ದಾರೋ ಅನ್ನೋ ಪ್ರಶ್ನೆ ಹಾಕಿದ್ದರು. ಅದಕ್ಕೆ ಜಾಹ್ನವಿ ಕೊಟ್ಟ ಉತ್ತರ ಮನೆ ಮಂದಿಯನ್ನು ಬೆಚ್ಚಿ ಬೀಳಿಸಿತ್ತು. ಖುದ್ದು ಕಿಚ್ಚ ಸುದೀಪ್ ಶಾಕ್ ಆಗಿದ್ದು ವಿಶೇಷ. ಬಿಗ್ ಬಾಸ್ ಮನೆಯಲ್ಲಿ ಗಂಡು ಮಕ್ಕಳು ಸ್ಟ್ರಾಂಗ್ ಇದ್ದಾರೋ? ಹೆಣ್ಣು ಮಕ್ಕಳು ಸ್ಟ್ರಾಂಗ್ ಇದ್ದಾರೋ? ಅನ್ನೋ ಪ್ರಶ್ನೆಗೆ ಬಂದ ಒಂದೊಂದು ಉತ್ತರವೂ ಕೂಡ ಅಷ್ಟೇ ಮಜವಾಗಿತ್ತು.

BBK 12 Jhanvi s controversial Statement on Male Contestant s Manly Look Goes Viral

ಕಿಚ್ಚ ಸುದೀಪ್ ಮನೆ ಮಂದಿಗೆ ಕೇಳಿದ ಪ್ರಶ್ನೆಗೆ ಮಿಶ್ರ ಪ್ರತಿಕ್ರಿಯೆ ಬಂದಿತ್ತು. ದುಷ್ಯಂತ್ ಒಬ್ಬರನ್ನು ಬಿಟ್ಟು ಉಳಿದ ಎಲ್ಲಾ ಪುರುಷ ಸದಸ್ಯರು ಹೆಣ್ಣು ಮಕ್ಕಳು ಸ್ಟ್ರಾಂಗ್ ಅನ್ನೋದನ್ನು ಒಪ್ಪಿಕೊಂಡಿಲ್ಲ. ಆದ್ರಿಲ್ಲಿ ಜಾಹ್ನವಿ ಕೊಟ್ಟ ಹೇಳಿಕೆ ಪ್ರೋಮೋ ರಿಲೀಸ್ ಆದಲ್ಲಿಂದಲೇ ವೈರಲ್ ಆಗಿತ್ತು. ಅಷ್ಟಕ್ಕೂ ಜಾಹ್ನವಿ ಕೊಟ್ಟ ಹೇಳಿಕೆಗೆ ಕಿಚ್ಚನೇ ಶಾಕ್ ಆಗಿದ್ದಾರೆ ಅಂದ್ಮೇಲೆ ಎಪಿಸೋಡ್‌ನಲ್ಲಿ ಏನು ನಡೀತು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಕಿಚ್ಚನ ಪ್ರಶ್ನೆ ಏನು?

ಸೂಪರ್ ಸಂಡೇ ವಿಥ್ ಬಾದ್‌ಷಾ ಸುದೀಪ್‌ ಇವತ್ತಿನ ಸಂಚಿಕೆ ಎಂಟರ್‌ಟೈನಿಂಗ್ ಆಗಿತ್ತು. ಕಿಚ್ಚ ಸುದೀಪ್ ಬಿಗ್ ಬಾಸ್ ಸೀಸನ್ 12ರಲ್ಲಿ ಪುರುಷರಿಗಿಂತ ಹೆಣ್ಣು ಮಕ್ಕಳೇ ಸ್ಟ್ರಾಂಗ್ ಅನ್ನೋ ಮಾತು ಕೇಳಿ ಬರುತ್ತಿದೆ. ನಿಮ್ಮ ಅಭಿಪ್ರಾಯವೇನು ಎಂದು ಎಲ್ಲಾ ಸ್ಪರ್ಧಿಗಳನ್ನು ಕೇಳಿದ್ದರು. ಹಾಗೇ ಅದು ಜಾಹ್ನವಿಯವರ ಕಡೆಗೂ ಬಂದಿತ್ತು. ಆಗ ಅವರು ಈ ಮನೆಯಲ್ಲಿ ಇರುವ ಯಾವ ಹುಡುಗರೂ ಮಾನ್ಲಿ ಅಂತ ಅನಿಸಲ್ಲ. ಸತ್ತ ಹೆಣದ ತರ ಇರುತ್ತಾರೆ ಎಂದು ಹೇಳಿದರು. ಇದು ಕಿಚ್ಚನಿಗೆ ಶಾಕ್ ಎನಿಸಿತ್ತು.

ಜಾಹ್ನವಿ ಯಾರ ಬಗ್ಗೆ ಏನಂದರು?

ಜಾಹ್ನವಿ ಮನೆಯಲ್ಲಿರೋ ಒಬ್ಬೊಬ್ಬರ ಬಗ್ಗೆನೂ ಒಂದೊಂದು ಕಮೆಂಟ್ ಮಾಡಿದರು. ಸೂರಜ್‌ಗೆ ಎನರ್ಜಿಯಿಂದ ಮಾತಾಡೋದಿಲ್ಲ ಎಂದರೆ, ಗಿಲ್ಲಿಗೆ ಸೊಂಟನೇ ಇಲ್ಲ. ರಘು ಅವರ ಮೇಲೆ ಮಲಗಿರುತ್ತಾನೆ. ರಘು ಅವರು ನೋಡುವುದಕ್ಕಷ್ಟೇ ಖಡಕ್, ಗಿಲ್ಲಿಗೆ ಯಾವಾಗಲೂ ಲಾಲಿ ಹಾಡುತ್ತಿರುತ್ತಾರೆ. ಸುಧಿಯವರಂತೂ ಟಾಸ್ಕ್ ಅಂದರೆ, ಹೆದರಿಕೊಂಡು ಓಡುತ್ತಿರುತ್ತಾರೆ. ಇದ್ದಿದ್ರಲ್ಲಿ ಧ್ರುವಂತ್ ಪರ್ವಾಗಿಲ್ಲ. ಗಟ್ಟಿಯಾಗಿ ಮಾತಾಡುತ್ತಾರೆ. ಧನುಷ್, ಅಭಿಯಂತೂ ಮಾತೇ ಆಡುವುದಿಲ್ಲ. ಮಾಳು ಅಂತೂ ಆಕ್ಟಿವ್ ಆಗಿ ಇರೋದಿಲ್ಲ. ಇಡೀ ಮನೆಯಲ್ಲಿ ಹೆಣ್ಣು ಮಕ್ಕಳೇ ಸ್ಟ್ರಾಂಗ್‌ ಎಂದು ಜಾಹ್ನವಿ ಹೇಳಿದ್ದಾರೆ.

BBK 12 Jhanvi s controversial Statement on Male Contestant s Manly Look Goes Viral

ಸೊಂಟನೂ ಇಲ್ಲ ಕಂಠನೂ ಇಲ್ಲ

ಜಾಹ್ನವಿ ಮಾತಿಗೆ ಗಿಲ್ಲಿ ನಟ ತಿರುಗೇಟು ಕೊಡುವುದಕ್ಕೆ ಮುಂದಾದರು. ಬಿಗ್ ಬಾಸ್‌ನಲ್ಲಿ ಸೊಂಟ ಮುಖ್ಯ ಅಲ್ಲ.. ಕಂಠ ಮುಖ್ಯ. ಅದರಿಂದಲೇ ಬಿಗ್ ಬಾಸ್ ಗೆದ್ದುಕೊಂಡು ಹೋಗುತ್ತೇನೆ ಎಂದು ಹೇಳಿದರು. ಅದಕ್ಕೆ ಕಿಚ್ಚ ಮತ್ತೆ ರೇಗಿಸಿದರು. ಗಿಲ್ಲಿ ಕಂಠ ಅಂತ ಬಂದರೆ, ಮೂವರು 'ರಾ'ಗಳು (ರಾಶಿಕಾ, ರಿಶಾ ಹಾಗೂ ರಕ್ಷಿತಾ) ಇದ್ದಾರೆ ಎಂದಾಗ, ಗಿಲ್ಲಿ "ಇಲ್ಲ ಅಣ್ಣ ಸೊಂಟನೂ ಇಲ್ಲ.. ಕಂಠನೂ ಇಲ್ಲ" ಎಂದು ಸೋಲು ಒಪ್ಪಿಕೊಂಡರು.

ಉಳಿದವರು ಏನಂದರು?

ದುಷ್ಯಂತ್: ಹೆಣ್ಣು ಮಕ್ಕಳ ಮಾತಿನ ಮುಂದೆ ನಮ್ಮದ್ಯಾರದ್ದೂ ವರ್ಕ್ ಆಗುತ್ತಿಲ್ಲ. ಅವರು ಸ್ಟ್ರಾಂಗ್ ಎಂದರು.
ರಘು: ನನಗೆ ಹಾಗೆ ಅನಿಸಲೇ ಇಲ್ಲ. ಅವರು ಯಾವಾಗಲೂ ಕೂಗಾಡುತ್ತಾ, ಕಿತ್ತಾಡುತ್ತಾ ಇರುತ್ತಾರೆ. ಅದಕ್ಕೆ ಅವರು ಸ್ಟ್ರಾಂಗ್ ಅಂತ ಹೇಳುವುದಕ್ಕೆ ಆಗುವುದಿಲ್ಲ.
ಕಾವ್ಯ: ಈ ಮನೆಯೊಳಗೆ ಬಂದಾಗಿನಿಂದ ಹೆಣ್ಣು ಮಕ್ಕಳ ವಿಷಯಕ್ಕೆ ಬೇರೆ ಬೇರೆ ಓಪಿನಿಯನ್ ಬಂದಿರೋದು. ಎಮೋಷನಲಿ ನಾವು ತುಂಬಾ ಸ್ಟ್ರಾಂಗ್ ಇದ್ದೀವಿ.
ಅಶ್ವಿನಿ ಗೌಡ: ಮೊದಲನೇ ದಿನದಿಂದ ಇಲ್ಲಿವರೆಗೂ ಯಾವುದೇ ವಿಚಾರದಲ್ಲಾದರೂ, ಮಾತಾಡುವ ವಿಚಾರದಲ್ಲಾಗಲಿ, ಟಾಸ್ಕ್‌ ಮಾಡೋದ್ರಲ್ಲಿ ಆಗಲಿ, ಅದನ್ನು ಅರ್ಥೈಸಿಕೊಂಡು ಮಾಡುವ ವಿಚಾರದಲ್ಲಾಗಲಿ, ಟಾಸ್ಕ್‌ನಲ್ಲೂ ನಾವು ಪ್ರೂವ್ ಮಾಡಿದ್ದೀವಿ.
ಜಾಹ್ನವಿ: ಈ ಮನೆಯಲ್ಲಿ ಇರುವ ಯಾವ ಹುಡುಗರೂ ಮಾನ್ಲಿ ಅಂತ ಅನಿಸಲ್ಲ. ಸತ್ತ ಹೆಣದ ಹಾಗೆ ಇರುತ್ತಾರೆ.

More from Filmibeat

English summary
BBK 12: Jhanvi’s controversial Statement on Male Contestant’s Manly Look Goes Viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X