BBK 12: ಸ್ಪಂದನಾರನ್ನು ಸೇವ್ ಮಾಡುತ್ತಿದೆಯೇ ಕಲರ್ಸ್ ಕನ್ನಡ? ಜಾಹ್ನನಿ ಆರೋಪದ ಬಗ್ಗೆ ಯಾಕಿಷ್ಟು ಚರ್ಚೆ?

ಬಿಗ್ ಬಾಸ್ ಕನ್ನಡ 12 ರಿಯಾಲಿಟಿ ಶೋನಲ್ಲಿ ದಿನಕ್ಕೊಂದು ಬೆಳವಣಿಗೆಯಾಗುತ್ತಿದೆ. ಈ ವಾರ ಮನೆಯಲ್ಲಿ ಇರುತ್ತಾರೆ ಅನ್ನೋದು ಹೊರ ಬರುತ್ತಿದ್ದಾರೆ. ಹೊರಗೆ ಬರ್ತಾರೆ ಅಂದುಕೊಂಡವರು ಒಳಗೆ ಉಳಿದುಕೊಂಡ ಉದಾಹರಣೆಗಳು ಇವೆ. ಇದು ಪ್ರತಿ ಸೀಸನ್‌ನಲ್ಲೂ ಆಗುತ್ತೆ. ವೀಕ್ಷಕರು ಹಾಕುವ ವೋಟ್‌ಗಳ ಆಧಾರದ ಮೇಲೆ ಪ್ರತಿ ವಾರ ಮನೆಯಿಂದ ಯಾರು ಎಲಿಮಿನೇಟ್ ಆಗಬೇಕು ಅನ್ನೋದು ನಿರ್ಧಾರ ಆಗುತ್ತೆ.

ಆದ್ರೀಗ ಜಾಹ್ನವಿ ಕಲರ್ಸ್ ಕನ್ನಡದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಕೆಲವರು ಎಲಿಮಿನೇಟ್ ಆಗಬೇಕಾದವರು ಮನೆಯೊಳಗೆ ಉಳಿದುಕೊಂಡಿದ್ದಾರೆ. ಅವನ್ನು ಕಲರ್ಸ್ ಕನ್ನಡ ಸೇವ್ ಮಾಡುತ್ತಿದೆ ಎಂದು ಜಾಹ್ನವಿ ಹೇಳಿದ್ದಾರೆ. ಅದರಲ್ಲಿ ಸ್ಪಂದನಾ ಸೋಮಣ್ಣ, ಸೂರಜ್ ಹಾಗೂ ರಾಶಿಕಾ ಮೂವರ ಹೆಸರನ್ನು ತೆಗೆದುಕೊಂಡಿದ್ದಾರೆ. ಈ ಹೇಳಿಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

BBK 12 Jhanvi said Colors Kannada of saving Spandana Suraj and Rashika Here is netizens reaction

ಜಾಹ್ನವಿ ನೀಡಿದ ಈ ವಿವಾದಾತ್ಮಕ ಹೇಳಿಕೆ ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಇನ್ನೊಂದು ಕಡೆ ಕಲರ್ಸ್ ಕನ್ನಡ ಸ್ಪರ್ಧಿಗಳ ವಿಚಾರದಲ್ಲಿ ಪಕ್ಷಪಾತ ಮಾಡುತ್ತಿದೆಯಾ? ನಿಜಕ್ಕೂ ಸ್ಪಂದನಾಳನ್ನು ಸೇವ್ ಮಾಡಲಾಗುತ್ತಿದೆಯಾ? ಜಾಹ್ನವಿ ಹೇಳಿಕೆಯಲ್ಲಿ ಸತ್ಯವಿದೆಯೇ? ನೆಟ್ಟಿಗರು ಏನಂತಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ.

ಕಲರ್ಸ್ ಕನ್ನಡ ಪಕ್ಷಪಾತ ಮಾಡುತ್ತಿದೆಯೇ?

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲೀಗ ಹೊಸ ಚರ್ಚೆ ಶುರುವಾಗಿದೆ. ಅದನ್ನು ಹುಟ್ಟಾಕಿದವರು ಜಾಹ್ನವಿ. ಬಿಗ್ ಬಾಸ್ ಮನೆಯೊಳಗಿರುವ ಸ್ಪರ್ಧಿಗಳಲ್ಲಿ ಸ್ಪಂದನಾ ಸೋಮಣ್ಣ ಅವರನ್ನು ಕಲರ್ಸ್ ಕನ್ನಡ ಸೇವ್ ಮಾಡುತ್ತಿದೆ ಅನ್ನೋ ಅರ್ಥದಲ್ಲಿ ಮಾತಾಡಿದ್ದಾರೆ. ಈ ಕಾರಣಕ್ಕೆ ಕಲರ್ಸ್ ಕನ್ನಡ ಸ್ಪರ್ಧಿಗಳ ನಡುವೆ ಪಕ್ಷಪಾತ ಮಾಡುತ್ತಿದೆಯೇ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಜಾಹ್ನವಿ ಹೇಳಿದ್ದೇನು?

ಸೂರಜ್ ಮುಂದೆ ಜಾಹ್ನವಿ ಕೆಲವು ಆರೋಪಗಳನ್ನು ಮಾಡಿದ್ದರು. ರಾಶಿಕಾ ಮನೆಯಲ್ಲಿ ಉಳಿದುಕೊಳ್ಳುತ್ತಾರೆ. ಅದರಲ್ಲೂ ರಾಶಿಕಾ ಹಾಗೂ ಸೂರಜ್ ಲವ್ ಸ್ಟೋರಿ ನಡೆಯುತ್ತಿದೆ. ಹೀಗಾಗಿ ಚಾನೆಲ್‌ನವರು ಈ ಜೋಡಿಯನ್ನು ಬಿಡುವುದಿಲ್ಲ ಎಂದು ಆರೋಪಿಸಿದ್ದರು. ಹಾಗೇ ಸ್ಪಂದನಾ ಕೂಡ ವೀಕ್ ಅಂತ ಎಲ್ಲರಿಗೂ ಗೊತ್ತು. ಟಾಸ್ಕ್‌ನಲ್ಲಿ ಇಲ್ಲ, ಮಾತಾಡೋದಿಲ್ಲ. ಹೀಗಿದ್ದರೂ ಯಾಕೆ ಸೇವ್ ಆಗುತ್ತಿದ್ದಾಳೆ? ಸೀರಿಯಲ್ ಹೀರೋಯಿನ್, ಫ್ಯಾನ್ಸ್ ಇದ್ದಾರೆ ಅಂತ ಚಾನೆಲ್‌ನನವರ ಸೇವ್ ಮಾಡುತ್ತಿದ್ದಾರೆ. ಅವರ ಚಾನೆಲ್‌ನ ಸೀರಿಯಲ್‌ನಲ್ಲಿ ನಟಿಸಿದ್ದಾರೆ ಅನ್ನೋ ಕಾರಣಕ್ಕೆ ನಮ್ಮವರ ಅಂತಿರಬಹುದು. ಇನ್ನೇನು ಮನೆಯಿಂದ ಹೊರಗೆ ಹೋಗಬಹುದು ಎನ್ನುವಾಗ ಉಳಿಸಿಕೊಳ್ಳುತ್ತಿದ್ದಾರೆಂದು ಆರೋಪಿಸಿದ್ದಾರೆ.

BBK 12 Jhanvi said Colors Kannada of saving Spandana Suraj and Rashika Here is netizens reaction

ಈ ಆರೋಪದಲ್ಲಿ ಹುರುಳಿದೆಯೇ?

ಕಲರ್ಸ್ ಕನ್ನಡದ ಸೀರಿಯಲ್‌ಗಳಲ್ಲಿ ಕೆಲಸ ಮಾಡಿ ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಇರೋದು ನಿಜ. ಅದರಲ್ಲಿ ಸ್ಪಂದನಾ ಕೂಡ ಒಬ್ಬರು. ಜಾಹ್ನವಿ ಕೂಡ ಕಲರ್ಸ್ ಕನ್ನಡದಲ್ಲಿಯೇ ಕೆಲಸ ಮಾಡಿದ್ದಾರೆ. 'ಗಿಚ್ಚಿಗಿಲಿಗಿಲಿ', 'ನಮ್ಮಮ್ಮ ಸೂಪರ್‌ಸ್ಟಾರ್' ಅಂತಹ ಶೋನಲ್ಲಿ ಕೆಲಸ ಮಾಡಿದ್ದಾರೆ. ಇವರೂ ಕಲರ್ಸ್‌ ಕನ್ನಡದಲ್ಲಿ ಕೆಲಸ ಮಾಡಿದವರೇ. ಹೀಗಾಗಿ ಜಾಹ್ನವಿ ಹೇಳಿಕೆಯನ್ನು ನೆಟ್ಟಿಗರ ಖಂಡಿಸುತ್ತಿದ್ದಾರೆ.

ನೆಟ್ಟಿಗರು ಹೇಳಿದ್ದೇನು?

ಕಲರ್ಸ್ ಕನ್ನಡ ಚಾನೆಲ್ ಹೆಸರು ಎತ್ತಿದ್ದಕ್ಕೆ ಜಾಹ್ನವಿ ವಿರುದ್ಧ ನೆಟ್ಟಿಗರು ತಿರುಗಿಬಿದ್ದಾರೆ. ಸ್ಪಂದನಾ ಮಾಡಿದ್ದು ಒಂದೇ ಸೀರಿಯಲ್. ಅದಕ್ಕಿಂತ ಹೆಚ್ಚು ಶೋಗನ್ನು ನೀವೇ ಮಾಡಿದ್ದೀರ ಯಾಕೆ ಅವರ ಹೆಸರು ತೆಗೆದುಕೊಂಡ್ರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಜಾಹ್ನವಿಗೆ ನೀವು ಕೂಡ ಕಲರ್ಸ್ ಕನ್ನಡ ಕೋಟಾದಿಂದಲೇ ಬಂದಿದ್ದಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ. ಒಟ್ನಲ್ಲಿ ಈ ವೀಕೆಂಡ್‌ನಲ್ಲಿ ಕಿಚ್ಚನ ಮುಂದೆ ಈ ವಿಷಯ ಚರ್ಚೆಗೆ ಬರೋದು ಗ್ಯಾರಂಟಿ. ಕಿಚ್ಚ ಕ್ಲಾಸ್ ತೆಗೆದುಕೊಳ್ಳುವುದೂ ಗ್ಯಾರಂಟಿ ಎನ್ನುತ್ತಿದ್ದಾರೆ ನೆಟ್ಟಿಗರು.

More from Filmibeat

English summary
BBK 12: Jhanvi said Colors Kannada of saving Spandana Suraj and Rashika Here is netizens reaction.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X