BBK 12: ಡಾಗ್ ಸತೀಶ್ ದುಬಾರಿ ಶರ್ಟ್.. ಚಡ್ಡಿಗಳು ಯಾರ ಹತ್ತಿರ ಇದೆ? ಕಿಚ್ಚ ಪ್ರಶ್ನೆಗೆ ಏನು ಉತ್ತರ ಬಂತು?
ಬಿಗ್ ಬಾಸ್ ಕನ್ನಡ ಸೀಸನ್ 12ರ ಮಾಜಿ ಸ್ಪರ್ಧಿ ಡಾಗ್ ಸತೀಶ್ ನಾಲ್ಕನೇ ವಾರವೇ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ್ದರು. ಅದಾದ್ಮೇಲೆ ನಾಲ್ಕು ವಾರಗಳಾಗಿದ್ದರೂ, ಇನ್ನೂ ಮನೆಯ ಹೊರಗೆ ಅವರ ಹವಾ ಮಾತ್ರ ಕಮ್ಮಿಯಾಗಿಲ್ಲ. ಒಂದರ ಹಿಂದೊಂದು ಸಂದರ್ಶನಗಳನ್ನು ನೀಡುತ್ತಲೇ ಇದ್ದಾರೆ. ಈ ಸಂದರ್ಶನದಲ್ಲಿ ಮನೆಯೊಳಗೆ ಇರುವ ಕೆಲವರ ಬಗ್ಗೆ ಕೆಲವು ಆರೋಪಗಳನ್ನು ಮಾಡಿದ್ದಾರೆ.
ಡಾಗ್ ಸತೀಶ್ ಬಿಗ್ ಬಾಸ್ ಮನೆಯೊಳಗೆ ಇರುವಾಗ ಅವರು ಸ್ಪಂದನಾಗೆ ಒಂದು ದುಬಾರಿ ಶರ್ಟ್ ಕೊಟ್ಟಿದ್ದರು. ಆ ಶರ್ಟ್ ಅನ್ನು ಸ್ಪಂದನಾ ಹಾಳು ಮಾಡಿ ಕೊಟ್ಟಿದ್ದಾರೆಂದು ಯೂಟ್ಯೂಬ್ ಚಾನೆಲ್‌ಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಅವರ ದುಬಾರಿ ಚಡ್ಡಿಗಳನ್ನೂ ಯಾರೋ ತೆಗೆದುಕೊಂಡಿದ್ದಾರೆಂದು ಆರೋಪಿಸಿದ್ದರು. ಅದೇ ವಿಷಯವನ್ನು ಕಿಚ್ಚ ಸುದೀಪ್ 'ಎಸ್' Or 'ನೋ' ವೇಳೆ ಕೇಳಿದ್ದಾರೆ. ಆ ಮಾತುಕಥೆ ಹೀಗಿತ್ತು.

ದುಬಾರಿ ಶ್ವಾನಗಳೊಂದಿಗೆ ಕಾಣಿಸಿಕೊಳ್ಳುವ ಸತೀಶ್ ಅವರನ್ನು ಅಭಿಮಾನಿಗಳು ಡಾಗ್ ಸತೀಶ್ ಅಂತಲೇ ಕರೆಯುತ್ತಾರೆ. ಬಿಗ್ ಬಾಸ್ ಮನೆಯೊಳಗೆ ಹೋದ್ಮೇಲಂತೂ ಡಾಗ್ ಸತೀಶ್ ಇನ್ನಷ್ಟು ಫೇಮಸ್ ಆಗಿದ್ದರು. ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಮಾಜಿ ಬಿಗ್ ಬಾಸ್ ಸ್ಪರ್ಧಿಗಳನ್ನು ಕರೆದು ಪಾರ್ಟಿ ಕೊಟ್ಟಿದ್ದರು. ಲೈಫ್‌ನಲ್ಲಿ ಸದಾ ಬಿಂದಾಸ್ ಆಗಿರುವ ಡಾಗ್ ಸತೀಶ್ ಬಿಗ್ ಬಾಸ್ ಮನೆಯೊಂದ ಹೊರ ಬರುತ್ತಿದ್ದ ಹಾಗೇ ಕೆಲ ಸ್ಪರ್ಧಿಗಳ ಮೇಲೆ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದರು.
'ಸೂಪರ್ ಸಂಡೇ ವಿಥ್ ಬಾದ್‌ಷಾ ಸುದೀಪ' ಸಂಚಿಕೆಯಲ್ಲಿ ಡಾಗ್ ಸತೀಶ್ ಮ್ಯಾಟರ್ ಅನ್ನು ಕಿಚ್ಚ ಸುದೀಪ್ ಎತ್ತಿಕೊಂಡಿದ್ದರು. 'ಎಸ್' Or 'ನೋ' ಟಾಸ್ಕ್‌ನಲ್ಲಿ ವಾರ್ಮ್‌ಅಪ್ ಪ್ರಶ್ನೆ ಅಂತ ಗಾಡ್ ಸತೀಶ್ ಅವರ ಆರೋಪಗಳನ್ನೇ ಎತ್ತಿ ಹಿಡಿದರು. ಮನೆಯೊಳಗೆ ಇರುವ ಸ್ಪರ್ಧಿಗಳಿಗೆ ಡಾಗ್ ಸತೀಶ್ ಬಗ್ಗೆ ಕಿಚ್ಚ ಹೇಳಿದ್ದು ಇದು.
ಮಾಜಿ ಸ್ಪರ್ಧಿ ಡಾಗ್ ಸತೀಶ್ ಅವರ ದುಬಾರಿ ಶರ್ಟ್ ತೆಗೆದುಕೊಂಡು, ಸ್ಪಂದನಾ ಅವರು ಅದನ್ನು ಹಾಳು ಮಾಡಿ, ವಾಪಾಸ್ ಕೊಟ್ಟಿದ್ದಾರೆ. ಏನೋ ಒಂದು ಸ್ಪಂದನಾ ಗೊತ್ತಿಲ್ಲ. ಅವರು ಇರೋ ಬರೋ ಚಾನೆಲ್‌ನಲ್ಲಿ ಕೂತ್ಕೊಂಡು ಇದನ್ನೇ ಹೇಳುತ್ತಿದ್ದಾರೆ. "ಅವರದ್ದು ನಾಲ್ಕು ಚಡ್ಡಿ ಇದೆಯಂತೆ ಅದನ್ನು ಕೊಟ್ಟಿಲ್ವಂತೆ. ಅವರ ಬ್ರಶ್ ಇದೆಯಂತೆ ಅದನ್ನು ಕೊಟ್ಟಿಲ್ವಂತೆ. ಇರೋ ಬರೋ ಚಾನೆಲ್‌ನಲ್ಲಿ ಹಿಡ್ಕೊಂಡು ಜಡೀತಾ ಇದ್ದಾರೆ. ಇದಕ್ಕಾಗಿ ಕಾಯುತ್ತಿದ್ದಾರಂತೆ ಹೊರಗೆ ಬಂದ್ಮೇಲೆ ಬೇಕಂತೆ". ಎಂದು ಕಿಚ್ಚ ಸುದೀಪ್ ಹೇಳಿದ್ರು.

ಕಿಚ್ಚ ಹೀಗೆ ಹೇಳುತ್ತಿದ್ದಂತೆ ಸ್ಪಂದನಾ 'ನೋ' ಬೋರ್ಡ್ ತೋರಿಸಿ, "ವೀಕೆಂಡ್ ಎಪಿಸೋಡ್‌ನಲ್ಲಿ ಅವರತ್ತು ಕೊಟ್ಟಿದ್ದರು. ಅದಾದ್ಮೇಲೆ ಆ ಶರ್ಟ್ ಅನ್ನು ಅವರು ವಾಪಸ್ ತೆಗೆದುಕೊಂಡು ಬಿಟ್ಟರು. ಆ ಶರ್ಟ್ ಮನೆಯಲ್ಲಿ ಎಲ್ಲೂ ಇಲ್ಲ." ಎಂದು ಹೇಳಿದ್ದಾರೆ.
ಇಲ್ಲಿಗೆ ಬಿಡದ ಕಿಚ್ಚ ಸುದೀಪ್ ಬಳಿಕ ಜಾಹ್ನವಿಯವರಿಗೆ ಹಾಗೂ ಅಶ್ವಿನಿ ಗೌಡ ಅವರ ಬಳಿ ಬಂದು ನೀವೇನಾದರೂ ತೆಗೆದುಕೊಂಡಿದ್ದೀರಾ? ಎಂದು ಕಾಲೆಳೆದರು. ಅವರೆಲ್ಲರೂ ಡಾಗ್ ಸತೀಶ್ ಅವರ ಶರ್ಟ್ ಅನ್ನು ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ. ಹಾಗೇ ಧನುಷ್ ಅವರನ್ನು ಕೇಳಿದಾಗ "ನಾನು ಅವರನ್ನು ಮಾತಾಡಿಸುತ್ತಲೇ ಇರಲಿಲ್ಲ" ಎಂದರು. ಆಗ ಕಿಚ್ಚ ಮಾತಿನ ಬಗ್ಗೆ ಬರುತ್ತಿಲ್ಲ. ಚಡ್ಡಿ ಬಗ್ಗೆ ಮಾತಾಡುತ್ತಿದ್ದೇನೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಒಟ್ನಲ್ಲಿ ಶಾರ್ಟ್ ಅಂಡ್ ಸ್ವೀಟ್ ಆಗಿ ಮುಗಿದು ಈ ಪ್ರಶ್ನೋತ್ತರ ವೀಕ್ಷಕರ ಮುಖದಲ್ಲಿ ನಗು ತರಿಸಿತ್ತು.


Click it and Unblock the Notifications











