BBK 12: ಕಬಡಿ ಟಾಸ್ಕ್‌ನಲ್ಲಿ ರಕ್ಷಿತಾ ಶೆಟ್ಟಿಯ ಮೇಲೆ ಬೇಕಂತ ಎಗರಿದರೇ ರಾಶಿಕಾ-ಸ್ಪಂದನಾ: ಕಿಚ್ಚ ಕೊಟ್ಟ ಕ್ಲಾರಿಟಿಯೇನು?
ಬಿಗ್ ಬಾಸ್ ಕನ್ನಡ 12ರ ಮತ್ತೊಂದು ವೀಕೆಂಡ್ ಬಂದಿದೆ. ವಾರದ ಕತೆಯೊಂದಿಗೆ ಕಿಚ್ಚ ಸುದೀಪ್ ಮತ್ತೆ ಸ್ಪರ್ಧಿಗಳ ಮುಂದೆ ಬಂದಿದ್ದಾರೆ. ವಾರ ಪೂರ್ತಿ ಅವರು ಮಾಡಿರುವ ಸರಿ-ತಪ್ಪುಗಳನ್ನು ಚರ್ಚೆ ಮಾಡಿದ್ದಾರೆ. ಕೆಲವರು ಮಾಡಿರುವ ತಪ್ಪುಗಳನ್ನು ಎತ್ತಿ ತೋರಿಸುತ್ತಿದ್ದಾರೆ. ಅದ್ಭುತವಾಗಿ ಆಡಿದವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ವಾರಗಳಿಂದ ರಕ್ಷಿತಾ ಶೆಟ್ಟಿ ವಿಚಾರವೇ ಹೆಚ್ಚು ಚರ್ಚೆಯಾಗುತ್ತಿದೆ. ಅಶ್ವಿನಿ ಗೌಡ, ಜಾಹ್ನವಿ ಅವರು ರಕ್ಷಿತಾ ಶೆಟ್ಟಿಯನ್ನು ಟಾರ್ಗೆಟ್ ಮಾಡಿದ್ದರು. ಈ ಮ್ಯಾಟರ್ ಅನ್ನು ಕಿಚ್ಚ ಸುದೀಪ್ ಇತ್ಯಾರ್ಥ ಮಾಡಿದ್ದರು. ಅದಾದ ಬಳಿಕ ಕಾಕ್ರೋಚ್ ಸುಧಿ 'ಸಡೆ' ಅನ್ನೋ ಪದವನ್ನು ಬಳಸಿದ್ದರು. ಅದಕ್ಕೂ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು.

ಈ ವಾರ ಮತ್ತೆ ರಕ್ಷಿತಾ ಶೆಟ್ಟಿ ವಿಚಾರವಾಗಿಯೇ ಚರ್ಚೆಯಾಗುತ್ತಿದೆ. ಅದರಲ್ಲೂ ಟಾಸ್ಕ್ ಒಂದರಲ್ಲಿ ರಕ್ಷಿತಾ ಶೆಟ್ಟಿ ಅವರ ಮೇಲೆ ರಾಶಿಕಾ ಹಾಗೂ ಸ್ಪಂದನಾ ಮೇಲೆ ಬಿದ್ದಿದ್ದರು. ಈ ವೇಳೆ ರಕ್ಷಿತಾ ಶೆಟ್ಟಿ ಧರಿಸಿದ್ದ ಬಟ್ಟೆಯ ವಿಚಾರವಾಗಿ ವಾದ-ವಿವಾದ ಎದ್ದಿತ್ತು. ಸ್ಪರ್ಧಿಗಳ ಮನದಲ್ಲಿ ಗೊಂದಲವಿತ್ತು. ಅದನ್ನು ಕಿಚ್ಚ ಸುದೀಪ್ ಕ್ಲಾರಿಟಿ ಕೊಟ್ಟಿದ್ದಾರೆ.
ಕಳೆದ ವಾರ ಬಿಗ್ ಬಾಸ್ ಮನೆ ಕಾಲೇಜ್ ಆಗಿ ಬದಲಾಗಿತ್ತು. ರಘು ಆ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದರು. ಒಂದೊಂದು ದಿನ ಒಂದೊಂದು ಟಾಸ್ಕ್ ಇತ್ತು. ಬಿಗ್ ಬಾಸ್ ಮನೆಯ ಒಬ್ಬೊಬ್ಬರ ಸ್ಪರ್ಧಿಯೂ ತನ್ನ ಸಾಮರ್ಥ್ಯ ಪ್ರದರ್ಶನ ಮಾಡಿದ್ದರು. ಈ ವೇಳೆ ಕಬಡಿ ಆಡುವ ಒಂದು ಟಾಸ್ಕ್ ಕೂಡ ಇತ್ತು. ಆ ಟಾಸ್ಕ್‌ನಲ್ಲಿ ರಕ್ಷಿತಾ ಶೆಟ್ಟಿ ಎದುರಾಳಿಯ ಅಖಾಡಕ್ಕೆ ಇಳಿದಿದ್ದರು. ಅಲ್ಲಿ ರಾಶಿಕಾ ಶೆಟ್ಟಿ ಹಾಗೂ ಸ್ಪಂದನಾ ಸೋಮಣ್ಣ ಇದ್ದರು. ಇವರಿಬ್ಬರೂ ಹೇಗಾದರೂ ಮಾಡಿ ರಕ್ಷಿತಾ ಶೆಟ್ಟಿಯನ್ನು ಕಟ್ಟಿ ಹಾಕಲೇಬೇಕೆಂಬ ಹಠಕ್ಕೆ ಬಿದ್ದಿದ್ದರು.
ಈ ವೇಳೆ ಒಂದು ಘಟನೆ ನಡೆದಿತ್ತು. ರಕ್ಷಿತಾ ಶೆಟ್ಟಿಯನ್ನು ಕಟ್ಟಿ ಹಾಕುವ ಪ್ರಯತ್ನದಲ್ಲಿ ರಾಶಿಕಾ ಹಾಗೂ ಸ್ಪಂದನಾ ಎಳೆದಾಡಿದ್ದರು. ಆ ವೇಳೆ ಅವರು ಧರಿಸಿದ್ದ ಡ್ರೆಸ್ ಅಸ್ಥವ್ಯಸ್ಥವಾಗಿತ್ತು. ಕೂಡಲೇ ರೆಫರಿಯಾಗಿದ್ದ ರಘು ಆ ಪಂದ್ಯವನ್ನು ನಿಲ್ಲಿಸಿದ್ದರು. ರಾಶಿಕಾ ಹಾಗೂ ಸ್ಪಂದನಾ ಇಬ್ಬರನ್ನೂ ಮನೆ ಮಂದಿ ತೆಗೆಳಿದ್ದರು. ರಕ್ಷಿತಾ ಶೆಟ್ಟಿ ಕೂಡ ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ರಾಶಿಕಾ ಹಾಗೂ ಸ್ಪಂದನಾ ಇಬ್ಬರ ವಿರುದ್ಧ ಟೀಕೆ ಟಿಪ್ಪಣಿಗಳು ಬಂದಿದ್ದವು. ಈ ಘಟನೆ ಬಗ್ಗೆ ಕಿಚ್ಚ ಸುದೀಪ್ ಎಲ್ಲರಿಗೂ, ಎಲ್ಲಾ ಆಂಗಲ್‌ನಲ್ಲಿಯೂ ಕ್ಲಾರಿಟಿ ಕೊಟ್ಟಿದ್ದಾರೆ.

ರಕ್ಷಿತಾ ಶೆಟ್ಟಿ ಪ್ರತಿಯೊಂದಕ್ಕೂ ಮಧ್ಯ ಪ್ರವೇಶ ಮಾಡುತ್ತಾರೆಂಬ ಕಾರಣಕ್ಕೆ ರಾಶಿಕಾ ಸೇರಿದಂತೆ ಮನೆ ಮಂದಿಗೆ ಸಿಟ್ಟಿದೆ. ಇದೇ ಕಾರಣಕ್ಕೆ ರಾಶಿಕಾ ಹಾಗೂ ಸ್ಪಂದನ ಬೇಕಂತಲೇ ಮಾಡಿದ್ದಾರೆಂಬ ಆರೋಪ ಇವರ ಮೇಲಿತ್ತು. ಹೀಗಾಗಿ ಕಿಚ್ಚ ಸುದೀಪ್ ಖುದ್ದಾಗಿ ರಕ್ಷಿತಾ ಶೆಟ್ಟಿ ಬಳಿ "ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾರೆಂದು ಅನಿಸಿತೇ?" ಎಂದು ಪ್ರಶ್ನೆ ಮಾಡಿದ್ದರು. ಆಗ ರಕ್ಷಿತಾ ಶೆಟ್ಟಿ "ನನಗೆ ಹಾಗೆ ಅನಿಸಲಿಲ್ಲ" ಎಂದು ಹೇಳಿದ್ದರು. ಆಗ ಕಿಚ್ಚ ಸುದೀಪ್ "ಆ ವೇಳೆ ಯಾಕೆ ಮಾತಾಡಿಲ್ಲ? ತಪ್ಪಾದಾಗ ವಿರೋಧಿಸೋ ನೀವು, ಯಾಕೆ ಸುಮ್ಮನಿದ್ರಿ?" ಎಂದು ಪ್ರಶ್ನೆ ಮಾಡಿದ್ದರು. ರಕ್ಷಿತಾ ಶೆಟ್ಟಿ ಇದಕ್ಕೆ ಉತ್ತರ ಕೊಡುವಲ್ಲಿ ವಿಫಲವಾದರು.
ರಘು ಕೂಡ ರಾಶಿಕಾ- ಸ್ಪಂದನಾ ಇಬ್ಬರೂ ರಕ್ಷಿತಾ ಶೆಟ್ಟಿಯ ಮೇಲಿನ ಕೋಪಕ್ಕೆ ಹಾಗೆಲ್ಲ ಮಾಡಿದ್ದರು ಅಂತ ಅನಿಸಿತ್ತು ಎಂದು ಹೇಳಿದರು. ಇತ್ತ ರಾಶಿಕಾ ಹಾಗೂ ಸ್ಪಂದನಾ ಕೂಡ ಉದ್ದೇಶ ಪೂರ್ವಕ ಮಾಡಿದ್ದಲ್ಲವೆಂದು ಕಿಚ್ಚನಿಗೆ ಹೇಳಿದ್ದರು. ಆಗ ಮನೆ ಮಂದಿಗೆ ಬುದ್ಧಿವಾದ ಹೇಳಿದ್ದಾರೆ. ಸರಿಯಾಗಿ ತಿಳಿದುಕೊಳ್ಳದೆ ಆರೋಪ ಮಾಡುವುದು ಅವರ ಬಗ್ಗೆ ಹೊರಗೆ ಕೆಟ್ಟದಾಗಿ ಚರ್ಚೆಯಾಗುತ್ತೆ. ಅದಕ್ಕೆ "ಕೇಳಿದ್ದು ಸುಳ್ಳಾಗಬಹುದು.. ನೋಡಿದ್ದು ಸುಳ್ಳಾಬಹುದು.. ನಿಧಾನಿಸಿ ಯೋಚಿಸಿದ ನಿಜವೂ ತಿಳಿವುದು" ರಾಮ ಲಕ್ಷಣ ಸಿನಿಮಾದ ಹಾಡನ್ನು ಹೇಳಿ ಗಿಲ್ಲಿ ನಟನಿಗೆ ಮನವರಿಕೆ ಮಾಡಿಸಿ ಗೊಂದಲವನ್ನು ತಿಳಿಯಾಗಿಸಿದರು.


Click it and Unblock the Notifications











