BBK 12: "ಕಾನ್ಫಿಡೆನ್ಸ್ ಇರಲಿ.. ಅಧಿಕ ಪ್ರಸಂಗ.. ಓವರ್ ಕಾನ್ಫಿಡೆನ್ಸ್ ಇಬ್ಬರಿಗೂ ಬೇಡ"; ಗಿಲ್ಲಿ-ರಕ್ಷಿತಾ ಕಿಚ್ಚ ವಾರ್ನಿಂಗ್
ವೀಕೆಂಡ್ ಬಂತು ಅಂದರೆ, ಬಿಗ್ ಬಾಸ್ ಕನ್ನಡ 12 ಇನ್ನೂ ರಂಗೇರುತ್ತೆ. ಕಿಚ್ಚ ಸುದೀಪ್ ಆಡೋ ಒಂದೊಂದು ಮಾತುಗಳಿಗೂ ಮನೆಯೊಳಗೆ ಇರುವ ಸ್ಪರ್ಧಿಗಳು ಪತರಗುಟ್ಟಿ ಹೋಗುತ್ತಾರೆ. ಅದರಲ್ಲೂ ಈ ವಾರ ಬಿಗ್ ಬಾಸ್ ಮನೆಯ ಸದಸ್ಯರನ್ನು ಒಬ್ಬೊಬ್ಬರನ್ನು ಕ್ಲಾಸ್ ತೆಗೆದುಕೊಂಡಿದ್ದಾರೆ. ಅದರಲ್ಲೂ ವೀಕ್ಷಕರ ಫೇವರಿಟ್ ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಗಿಲ್ಲಿ ನಟ ಇಷ್ಟು ದಿನ ಮನೆಯಲ್ಲಿ ಕಾಮಿಡಿ ಮಾಡಿಕೊಂಡು ಸದಸ್ಯರ ಕಾಲೆಳೆದುಕೊಂಡಿದ್ದರು. ಅದರಲ್ಲೂ ಅಶ್ವಿನಿ ಗೌಡ ಅವರನ್ನು ಟಾರ್ಗೆಟ್ ಮಾಡುತ್ತಿದ್ದರು. ಉಳಿದ ಸ್ಪರ್ಧಿಗಳನ್ನು ಕಾಲೆಳೆದು ತಮಾಷೆ ಮಾಡುತ್ತಿದ್ದರು. ಗಿಲ್ಲಿ ನಟನ ಹಾಸ್ಯ ಪ್ರಜ್ಞೆಗೆ ವೀಕ್ಷಕರು ಕೂಡ ಎಂಜಾಯ್ ಮಾಡಿದ್ದರು. ಹಾಗೇ ರಕ್ಷಿತಾ ಶೆಟ್ಟಿಯನ್ನು ಮೆಚ್ಚಿಕೊಂಡಿದ್ದರು. ಆದರೆ, ಈ ವಾರ ಕಿಚ್ಚ ಸುದೀಪ್ ಇವರಿಬ್ಬರಿಗೂ ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಕಳೆದ ವಾರ ಮಾಳು ನಿಪನಾಳ ಕ್ಯಾಪ್ಟನ್ ಆಗಿದ್ದರು. ಅವರು ಬಿಗ್ ಬಾಸ್ ಮಂದಿಯನ್ನು ನಾಮಿನೇಟ್ ಮಾಡುವಾಗ ಕೊಟ್ಟ ಕಾರಣಗಳ ಬಗ್ಗೆ ಕಿಚ್ಚ ಸುದೀಪ್ ಚರ್ಚೆ ಮಾಡುತ್ತಿದ್ದರು. ಮನೆಯವರೆಲ್ಲರೂ ಮಾಳು ನಿಪನಾಳ ಕೊಟ್ಟ ಕಾರಣಗಳು ಸರಿಯಿಲ್ಲ ಎಂದು ಟೀಕೆ ಮಾಡಿದ್ದರು. ಆದರೆ, ಗಿಲ್ಲಿ ನಟ ಮಾತ್ರ ಮೆಚ್ಚಿಕೊಂಡಿದ್ದರು. ಅದೂ ಸರಿಯಾಗಿರಲಿಲ್ಲ ಎಂದು ಗಿಲ್ಲಿ ನಟನನ್ನು ತರಾಟೆಗೆ ತೆಗೆದುಕೊಂಡರು. ಇನ್ನೊಂದು ಸನ್ನಿವೇಶದಲ್ಲಿ ಟಾಸ್ಕ್‌ನಲ್ಲಿ ಗಿಲ್ಲಿ ಹಾಗೂ ರಕ್ಷಿತಾ ಮಾಡಿದ ಯಡವಟ್ಟು ಗಳಿಗೂ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಮನೆಯವರೆಲ್ಲ ವಿರೋಧಿಸಿ, ಗಿಲ್ಲಿ ನಟ ಮಾತ್ರ ಮಾಳು ನಿಪನಾಳ ಅವರನ್ನು ಹೊಗಳಿಸಿದ್ದರು. ಅದ್ಯಾಕೆ ಅಂತ ಕಿಚ್ಚ ಸುದೀಪ್ ಹೇಳಿದ್ದರು. ಅದಕ್ಕೆ ಗಿಲ್ಲಿ ನಟ ಸ್ಪಷ್ಟನೆ ಕೊಡುವುದಕ್ಕೆ ಮುಂದಾಗಿದ್ದರು. ಆದರೂ, ಸಮಂಜಸ ಅಂತ ಅನಿಸಲೇ ಇಲ್ಲ. ಆದರೂ ಕಿಚ್ಚ ಸುದೀಪ್ ಅವರನ್ನು ಬಿಡಲಿಲ್ಲ. ಕೊನೆಗೆ ಉತ್ತರ ಕೊಡುವುದಕ್ಕೆ ಆಗದೆ ಪರದಾಡುತ್ತಿದ್ದ ಗಿಲ್ಲಿ ಪೇಚಿಗೆ ಸಿಲುಕಿದ್ದರು.
ಈ ವೇಳೆ ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿ ಇಬ್ಬರ ವಿರುದ್ಧವೂ ಕಿಚ್ಚ ಸುದೀಪ್ ರಾಂಗ್ ಆದರು. ಇಬ್ಬರೂ ಕಳೆದ ವಾರ ನಡೆದುಕೊಂಡ ರೀತಿ ಅವರಿಗೆ ಇಷ್ಟ ಆಗಿರಲಿಲ್ಲ. ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿಗೆ ತಮ್ಮ ತಪ್ಪಿನ ಅರಿವು ಮಾಡಿಸಬೇಕಿತ್ತು. ಹೀಗಾಗಿ ಇಬ್ಬರಿಗೂ ಎಚ್ಚರಿಕೆ ನೀಡಿದ್ದಾರೆ. "ಕಾನ್ಫಿಡೆನ್ಸ್ ಓಕೆ.. ಅಧಿಕ ಪ್ರಸಂಗ.. ಓವರ್ ಕಾನ್ಫಿಡೆನ್ಸ್ ಬೇಡ" ಎಂದು ಕಿಚ್ಚ ಸುದೀಪ್ ಎಚ್ಚರಿಕೆ ನೀಡಿದ್ದಾರೆ.
ಇನ್ನು ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿ ಇಬ್ಬರೂ ಟಾಸ್ಕ್ ಅನ್ನು ಹಾಳು ಮಾಡಿದ್ದರು. ಹೀಗಾಗಿ ಇಬ್ಬರಿಗೂ ಆ ಕಾರಣಕ್ಕೆ ಸ್ಪಷ್ಟನೆ ಕೇಳಿದ್ದರು. ಅದರಲ್ಲೂ ರಕ್ಷಿತಾ ಬೇರೆ ಯಾರನ್ನೋ ನಾಮಿನೇಟ್ ಮಾಡಬೇಕಾದವರು ಮ್ಯೂಟಂಟ್ ರಘು ಅವರನ್ನು ಮಾಡಿದ್ದರು. ಅದು ಕಿಚ್ಚ ಸುದೀಪ್‌ಗೆ ಸರಿ ಕಂಡಿಲ್ಲ. ಹೀಗಾಗಿ ರಕ್ಷಿತಾ ಶೆಟ್ಟಿಗೆ ಪ್ರಶ್ನೆ ಮಾಡಿದ್ದರು. ಅದಕ್ಕೂ ರಕ್ಷಿತಾ ಸರಿಯಾದ ಉತ್ತರ ಕೊಡಲಿಲ್ಲ. ಜೊತೆಗೆ ಕಿಚ್ಚನ ತಾಳ್ಮೆ ಕೆಣಕಿದ್ದರು. ಆ ಕಾರಣಕ್ಕೂ ಸುದೀಪ್ ಕ್ಲಾಸ್ ತೆಗೆದು ಕೊಂಡಿದ್ದಾರೆ.
ಇನ್ನು ವಾರದ ಅಂತ್ಯದಲ್ಲಿ ಕಿಚ್ಚ ನಾಮಿನೇಷನ್ ಪ್ರಕ್ರಿಯೆ ಇದೆ. ಈ ವಾರ ಒಬ್ಬರು ಮನೆಯಿಂದ ಆಚೆ ಹೋಗುವುದು ಕನ್ಫರ್ಮ್ ಆಗಿತ್ತು. ಅದರಲ್ಲಿ ಇಬ್ಬರನ್ನು ಇಂದು ಸೇವ್ ಮಾಡಲಾಗಿದೆ. ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗುವುದರಿಂದ ಸೇವ್ ಆಗಿದ್ದಾರೆ. ಇನ್ನೂ ಆರು ಮಂದಿ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಉಳಿದುಕೊಂಡಿದ್ದಾರೆ. ಅವರಲ್ಲಿ ಎಲಿಮಿನೇಟ್ ಆಗುತ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.


Click it and Unblock the Notifications











