BBK 12: "ಒಬ್ಬನ ಮರ್ಯಾದೆ, ಅಸ್ತಿತ್ವ, ಗೌರವ.. ಇನ್ನೊಬ್ಬ ಆಸ್ತಿ, ಆಟ-ಸಾಮಾನು ಆಗ್ಬಾರ್ದು"; ಕಿಚ್ಚ ಸುದೀಪ್

ಬಿಗ್ ಬಾಸ್ ಕನ್ನಡ ಸೀಸನ್ 12 ಮಿಡ್ ವೀಕ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಮೊದಲ ದಿನದ ಕಿಚ್ಚ ಸುದೀಪ್ ಮನೆ ಮಂದಿಯನ್ನು ಹೇಗೆಲ್ಲ ಕ್ಲಾಸ್ ತೆಗೆದುಕೊಳ್ಳಬಹುದು? ಯಾರೆಲ್ಲ ಮನೆಯಿಂದ ಹೊರ ಹೋಗಬಹುದು? ಯಾರಿಗೆಲ್ಲ ವೈಲ್ಡ್ ಕಾರ್ಡ್ ಎಂಟ್ರಿ ಕೊಡಲಾಗಿದೆ? ಅನ್ನೋದನ್ನು ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಚಿಕ್ಕದೊಂದು ಸುಳಿವನ್ನು ಬಿಟ್ಟು ಕೊಡದ ಬಿಗ್ ಬಾಸ್ ಕುತೂಹಲವನ್ನು ಹಾಗೇ ಉಳಿಸಿಕೊಂಡಿದೆ.

ಇನ್ನೇನು ಬಿಗ್ ಬಾಸ್ ಮಿಡ್ ವೀಕ್ ಫಿನಾಲೆ ಶುರುವಾಗಬೇಕು ಅನ್ನೋವಾಗಲೇ ಕಲರ್ಸ್ ಕನ್ನಡ ಮತ್ತೊಂದು ಪ್ರೋಮೋ ರಿಲೀಸ್ ಮಾಡಿದೆ. ಈ ಫ್ರೋಮೋಗಾಗಿ ಕಿರುತೆರೆ ವೀಕ್ಷಕರು ಕಾಯುತ್ತಿದ್ದರು. ಕಳೆದೆರಡು ದಿನಗಳಿಂದ ಅಶ್ವಿನಿ ಗೌಡ ಹಾಗೂ ಜಾಹ್ನವಿಯ ನಡೆ ಮನೆ ಮಂದಿಗೆ ಹಿಡಿಸುತ್ತಿಲ್ಲ. ಅದರಲ್ಲೂ ರಕ್ಷಿತಾ ಶೆಟ್ಟಿಯನ್ನು ಟಾರ್ಗೆಟ್ ಮಾಡುತ್ತಿರೋದು ವ್ಯಾಪಕ ಟೀಕೆಗಳಿಗೆ ಗುರಿ ಮಾಡುವಂತೆ ಮಾಡುತ್ತಿದೆ.

BBK 12 Mid Season Finale Kichcha Sudeep charged Ashwini Gowda-Jhanvi for Targeting Rakshitha Shetty

ಇದೇ ವೇಳೆ ಕಿಚ್ಚ ಸುದೀಪ್ ಕಳೆದ ವಾರ ಅಶ್ವಿನಿ ಗೌಡಗೆ ಕ್ಲಾಸ್ ತೆಗೆದುಕೊಳ್ಳಬೇಕಿತ್ತು. ಆ ಬಗ್ಗೆ ಮಾತೇ ಆಡಲಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಬೇಸರ ಹೊರ ಹಾಕಿದ್ದರು. ಅದಕ್ಕೆ ಬಹಳಷ್ಟು ಮಂದಿ ಸಮ್ಮತಿಯನ್ನು ಸೂಚಿಸಿದ್ದರು. ಹೀಗಾಗಿ ಇಂದು (ಅಕ್ಟೋಬರ್ 18) ಕಿಚ್ಚ ಸುದೀಪ್ ಇವರಿಬ್ಬರನ್ನೂ ತರಾಟೆಗೆ ತೆಗೆದುಕೊಳ್ಳಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಈ ವೀಕೆಂಡ್ ಕಿಚ್ಚ ಬೆಂಕಿ ಕಾರುವುದು ಫಿಕ್ಸ್ ಎಂಬ ಮಾತು ಕೇಳಿ ಬರುತ್ತಿತ್ತು. ಹೊಸ ಪ್ರೋಮೊ ಅದಕ್ಕೆ ಉತ್ತರ ಕೊಟ್ಟಿದೆ.

ಅಸಲಿ ಮ್ಯಾಟರ್ ಏನಂದರೆ, ಮಧ್ಯರಾತ್ರಿಯಲ್ಲಿ ಗೆಜ್ಜೆ ಸದ್ದು ಮಾಡಿ ಮನೆ ಮಂದಿಯನ್ನು ಬೆದರಿಸಿದ್ದರು. ಇದು ರಕ್ಷಿತಾ ಶೆಟ್ಟಿಯದ್ದೇ ಕೆಲಸ ಅಂತ ಅಶ್ವಿನಿ ಗೌಡ ಹಾಗೂ ಜಾಹ್ನವಿ ಆಕೆಯ ವಿರುದ್ಧ ತಿರುಗಿಬಿದ್ದಿದ್ದರು. ರಕ್ಷಿತಾ ಶೆಟ್ಟಿಯ ಪರವಾಗಿ ಮನೆಯ ಕೆಲವು ಮಂದಿ ಬಂದರೂ, ಅವರನ್ನೂ ಅಶ್ವಿನಿ ಗೌಡ ವಾಪಸ್ ಕಳುಹಿಸಿದ್ದರು. ಗೆಜ್ಜೆಯ ಸದ್ದು ರೂವಾರಿಗಳು ಸ್ವತ: ಅಶ್ವಿನಿ ಗೌಡ ಹಾಗೂ ಜಾಹ್ನವಿ ಅನ್ನೋದು ಮನೆ ಮಂದಿಗೆ ಗೊತ್ತಾಗಿದೆ.

ಈಗ ಅಶ್ವಿನಿ ಗೌಡ ಹಾಗೂ ಜಾಹ್ನವಿ ಮನೆ ಮಂದಿಯನ್ನು ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದೊಂದು ಕಡೆಯಾದರೆ, ಇವರಿಬ್ಬರೂ ಕಿಚ್ಚ ಸುದೀಪ್ ಅನ್ನು ಎದುರಿಸಬೇಕಿದೆ. ಅದರದ್ದೊಂದು ಝಲಕ್ ಈಗ ಪ್ರೋಮೊದಲ್ಲಿ ರಿವೀಲ್ ಆಗಿದೆ. ಇವರಿಬ್ಬರನ್ನೂ ಕಿಚ್ಚ ಹೇಗೆ ಕ್ಲಾಸ್ ತೆಗೆದುಕೊಂಡಿದ್ದಾರೆಂದು ಕೆಲವೇ ಸೆಕೆಂಡುಗಳ ತುಣುಕು ಹೇಳುತ್ತಿದೆ.

ಕಿಚ್ಚ ಮೊದಲಿಗೆ ಅಶ್ವಿನಿ ಗೌಡ ಹಾಗೂ ಜಾಹ್ನವಿಗೆ "ಯಮ್ಮ ಅಂತೆಲ್ಲ ಕರೀಬೇಡ.. ನನಗೊಂದು ಹೆಸರಿದೆ ಅಂತೀರಿ. ಈಗ ನೀವು ಈಡಿಯಟ್ ಅಂತೀರ. ಎಲ್ಲಿಂದ ಬಂದಿದ್ದೀಯಾ.. ನೀನು ಕಾರ್ಟೂನ್ ಅಂತ ಹೇಳುತ್ತೀರಿ" ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಜಾಹ್ನವಿ "ಇದು ತಮಾಷೆ ಮಾಡಿದ್ದು ಬಿಟ್ಟರೆ, ಯಾರಿಗೂ ಹರ್ಟ್ ಮಾಡಬೇಕು ಅನ್ನೋದು ಇರಲಿಲ್ಲ" ಎಂದು ಹೇಳುತ್ತಾರೆ. ಆಗ ಸುದೀಪ್ ಕೆರಳಿ ಕೆಂಡವಾಗಿರುವ ಮಸ್ತ್ ಡೈಲಾಗ್ ಬಿಡುವ ಪ್ರೋಮೊದಲ್ಲಿ ಹಲಚಲ್ ಎಬ್ಬಿಸಿದೆ.

"ನೀವು ತಮಾಷೆ ಮಾಡಿಕೊಂಡು ನಿಮ್ಮ ನಿಮ್ಮ ವ್ಯಕ್ತಿತ್ವವನ್ನು ಕೊಲೆ ಮಾಡಿಕೊಂಡು ಹೋಗ್ತಿದ್ದೀರಾ. ಇದು ನಿಮಗೆ ಓಕೆನಾ? ಒಬ್ಬನ ಮರ್ಯಾದೆ, ಒಬ್ಬನ ಅಸ್ತಿತ್ವ, ಒಬ್ಬನ ಗೌರವ.. ಇನ್ನೊಬ್ಬನ ಆಸ್ತಿ, ಆಟ-ಸಾಮಾನು ಆಗಬಾರದು. ಅದು ಯಾರಪ್ಪನ ಆಸ್ತಿನೂ ಅಲ್ಲ." ಎಂದು ಕಿಚ್ಚ ಸುದೀಪ್ ಇವರಿಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

More from Filmibeat

English summary
BBK 12 Mid Season Finale: Kichcha Sudeep charged Ashwini Gowda-Jhanvi for Targeting Rakshitha Shetty:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X