ರಕ್ಷಿತಾಗೆ "ನೀನು ಸೇವಕಿ" ಎಂದು ರಾಶಿಕಾ; "ಯಾಕೋ ಅಶ್ವಿನಿ-ಜಾನ್ವಿ ತರಾನೇ ಆಡ್ತಿದ್ದಾಳೆ" ಎಂದ ನೆಟ್ಟಿಗರು
ಮೂರು ಮಂದಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಮೇಲೆ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಏನೇನೋ ನಡೀತಿದೆ. ವೀಕ್ಷಕರ ಲೆಕ್ಕಾಚಾರಗಳೆಲ್ಲ ತಲೆ ಕೆಳಗಾಗುತ್ತಿದೆ. ಒಟ್ಟಿಗೆ ಇದ್ದವರು ಬೇರೆಯಾಗುತ್ತಿದ್ದಾರೆ. ಸೈಲೆಂಟ್ ಆಗಿ ಇದ್ದವರು ವೈಲೆಂಟ್ ಆಗುತ್ತಿದೆ. ಬಿಗ್ ಬಾಸ್‌ನಲ್ಲಿ ಹಿಂದೆಂದೂ ಇಲ್ಲದ ಸದ್ದು ಈಗ ಕಾಣಿಸುವುದಕ್ಕೆ ಶುರುವಾಗಿದೆ. ಮನೆಯ ಸದಸ್ಯರು ಮೈಂಡ್ ಗೇಮ್ ಆಡುವುದಕ್ಕೆ ಶುರು ಮಾಡಿದ್ದಾರೆ.
ರಿಶಾ ಗೌಡ ಎಂಟ್ರಿ ಕೊಟ್ಮೇಲೆ ಗಿಲ್ಲಿ ನಟ ಹಾಗೂ ಕಾವ್ಯಾ ಶೈವ ನಡುವೆ ಅಂತರ ಏರ್ಪಟ್ಟಿದೆ. ಸಹೋದರನ ಸಮಾನ ಅಂದುಕೊಂಡು ಹೊರಟಿದ್ದ ಕಾವ್ಯಾ ಶೈವಗೆ ಪಾಠ ಕಳಿಸೋಕೆ ಹೋಗಿ ಗಿಲ್ಲಿ ನಟ ಪೇಚಿಗೆ ಸಿಕ್ಕಿಕೊಂಡಿರುವ ಹಾಗಿದೆ. ಇನ್ನೊಂದು ಕಡೆ ಕಾವ್ಯಾಗೂ ಮನೆಯೊಳಗೆ ಹೊಸದಾಗಿ ಎಂಟ್ರಿ ಕೊಟ್ಟಿರೋ ಹ್ಯಾಂಡ್ಸಮ್ ಹಂಕ್ ಸೂರಜ್ ಮೇಲೆ ಮನಸಾಗಿರೋ ಹಾಕಿದೆ.

ಬಿಗ್ ಬಾಸ್ ರಿಲೀಸ್ ಮಾಡಿರೋ ಬೆಳಗಿನ ಪ್ರೋಮೊದಲ್ಲಿ ರಾಶಿಕಾ ಶೆಟ್ಟಿ ಹಾಗೂ ರಕ್ಷಿತಾ ಶೆಟ್ಟಿ ನಡುವೆ ವಾಗ್ಯುದ್ಧವೇ ನಡೆದಿದೆ. ಈ ಮಾತಿನ ಚಕಮಕಿಯಲ್ಲಿ ಅಶ್ವಿನಿ ಗೌಡ ಹಾದಿ ಹಿಡಿದು ರಕ್ಷಿತಾ ಶೆಟ್ಟಿಯನ್ನು ಹೀಯಾಳಿಸಲಾಗಿದೆ. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಮೂರನೇ ವಾರಕ್ಕೆ ನಿರೀಕ್ಷೆ ಮಾಡದೇ ಇರೋದೆಲ್ಲ ನಡೆಯುತ್ತಿದೆ.
ರಕ್ಷಿತಾ ವಿರುದ್ಧ ತಿರುಗಿ ಬಿದ್ದ ರಾಶಿಕಾ
ಬಿಗ್ ಬಾಸ್ ಕನ್ನಡದ ಈ ದಿನದ (ಅಕ್ಟೋಬರ್ 21) ಬೆಳಗಿನ ಪ್ರೋಮೋ ನೆಟ್ಟಿಗರ ಕಣ್ಣುಗಳನ್ನು ಕೆಂಪಗಾಗುವಂತೆ ಮಾಡಿದೆ. ಅಷ್ಟಕ್ಕೂ ಪ್ರೋಮೊದಲ್ಲಿ ಅಂತಹದ್ದೇನಿದೆ ಎಂದು ನೋಡುವುದಾರೇ, ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ. ಇದರಲ್ಲಿ ರಕ್ಷಿತಾ ಶೆಟ್ಟಿ ನಾಮಿನೇಷನ್ ಮಾಡುವ ಸಂದರ್ಭ ಬಂದಾಗ, ರಾಶಿಕಾ ಶೆಟ್ಟಿಯನ್ನು ನಾಮಿನೇಟ್ ಮಾಡಿದ್ದಾರೆ. ಅದಕ್ಕೆ ಅವರು ಕೊಟ್ಟ ಕಾರಣ ರಾಶಿಕಾ ಶೆಟ್ಟಿಗೆ ಕೋಪ ತರಿಸಿದೆ.
'ಸೇವಕಿ' ಎಂದು ಕರೆದ ರಾಶಿಕಾ
ರಾಶಿಕಾ ಅವರು ಸ್ಟ್ರಾಂಗ್ ಇಲ್ಲ. ಏಕಾಂಗಿಯಾಗಿ ಆಟ ಆಡುವುದಕ್ಕೆ ಗೊತ್ತಿಲ್ಲ. ಅವರು ಅದು ಇದು ತೆಗೆದುಕೊಂಡು ಬಾ ಎಂದು ಆರ್ಡರ್ ಮಾಡುತ್ತಾರೆ ಎಂದು ದೂರಿದ್ದರು. ಈ ಕಾರಣಗಳನ್ನು ಕೊಟ್ಟು ರಾಶಿಕಾರನ್ನು ರಕ್ಷಿತಾ ಶೆಟ್ಟಿ ನಾಮಿನೇಟ್ ಮಾಡಿದ್ದರು. ಇದು ರಾಶಿಕಾ ಶೆಟ್ಟಿ ಅಸಮಧಾನಕ್ಕೆ ಕಾರಣವಾಗಿದೆ. ಹೀಗಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. "ನಾನು ಇಲ್ಲಿ ಯಾರ ಮೇಲೆ ಡಿಪೆಂಡ್ ಆಗಿದ್ದೀನಿ? ನಿನಗೆ ಏನೂ ಅರ್ಥ ಆಗಲ್ಲ. ಸುಮ್ಮನೆ ಬಂದು ಬಿಟ್ಟಿದ್ದೀಯ ಈ ಬಿಗ್ ಬಾಸ್ ಮನೆಗೆ. ಚೈಲ್ಡಿಶ್ ಆಗಿ ವರ್ತನೆ ಮಾಡುತ್ತಿದ್ದೀಯ." ಎಂದು ರಾಶಿಕಾ ಹೇಳಿದಾಗ. ರಕ್ಷಿತಾ "ನಾನು ಸರ್ವೆಂಟ್ ಅಲ್ಲ ಇಲ್ಲಿ" ಎಂದು ಹೇಳುತ್ತಾರೆ. ಆಗ ರಾಶಿಕಾ " ಹೌದು.. ನೀವು ಇಲ್ಲಿ ಸರ್ವೆಂಟ್" ಎಂದು ಹೇಳುತ್ತಾರೆ. ಇದು ನೆಟ್ಟಿಗರ ನಿದ್ದೆಗೆಡಿಸಿದೆ.
ರಾಶಿಕಾ ವಿರುದ್ಧ ತಿರುಗಿಬಿದ್ದ ನೆಟ್ಟಿಗರು
ಕಳೆದ ವಾರ ರಕ್ಷಿತಾ ಶೆಟ್ಟಿಗೆ 'ಎಸ್' ಅನ್ನೋ ಪದವನ್ನು ಬಳಿಸಿ ಜನರ ಅಶ್ವಿನಿ ಗೌಡ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಆ ದಾರಿಯಲ್ಲಿ ರಾಶಿಕಾ ಸೇರಿಕೊಂಡಂತೆ ಇದೆ. ರಕ್ಷಿತಾ ಶೆಟ್ಟಿಗೆ 'ನೀನು ಸೇವಕಿ' ಎಂದಿದ್ದೇ ತಡ ನೆಟ್ಟಿಗರು ಅಲರ್ಟ್ ಆಗಿದ್ದಾರೆ. "ಈ ರಾಶಿಕಾ ಅಶ್ವಿನಿಯ ಎರಡನೇ ಚೇಲ" ಎಂದು ಕಮೆಂಟ್ ಮಾಡಿದೆ, ಇನ್ನೊಬ್ಬರು "ರಾಶಿಕಾ ಅವರಿಗೂ ಒಂದು ಸಲ ಕ್ಲಾಸ್ ಆಗಬೇಕು. ಯಾಕೋ ಅಶ್ವಿನಿ ಜಾನ್ವಿ ಜೊತೆ ಸೇರಿ ಅವರ ತರಾನೇ ಆಡ್ತಾ ಇದ್ದಾಳೆ" ಅಂತ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಬಿಗ್ ಬಾಸ್ ಮನೇಲಿ individual ಆಗಿ ಆಡ್ತಾ ಇರೋದು ರಕ್ಷಿತಾ ಒಬ್ಬಳೇ" ಎಂದರೆ, "ರಕ್ಷಿತಾ ಬೆಂಕಿ ನೀನು", "ರಕ್ಷಿತಾ.. ಒಂದು ವಿಷಯ ಮಾತಾಡಿದ್ರೆ.. ತುಂಬಾ ಪ್ರಬುದ್ಧಳಾಗಿ ಮಾತಾಡ್ತಾಳೆ" ಎಂದೆಲ್ಲ ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.
ಗಿಲ್ಲಿಗೆ ರಾಖಿ ಕಟ್ಟಿಬಿಟ್ಟರೇ ಕಾವ್ಯಾ
ಇನ್ನೊಂದು ಕಡೆ ಗಿಲ್ಲಿ ನಟ ಹಾಗೂ ಕಾವ್ಯಾ ಶೈವ ನಡುವೆ ಅಂತರ ಕಾಣಿಸಿಕೊಳ್ಳುತ್ತಿದೆ. ಗಿಲ್ಲಿ ನಟನನ್ನು ಕಾವ್ಯಾ ಸಹೋದರನ ರೀತಿ ಎಂದಿದ್ದಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ರಿಶಾ ಗೌಡ ಜೊತೆ ಸಲುಗೆ ಬೆಳೆಸಿಕೊಂಡಿದ್ದಾರೆ. ಅವರ ಭುಜದ ಮೇಲೆ ತಲೆಯಿಟ್ಟು ರೊಮ್ಯಾಂಟಿಕ್ ಮಾತುಗಳನ್ನಾಡುತ್ತಿದ್ದಾರೆ. ಇದು ಕಾವ್ಯಾಗೆ ಉರಿಸೋಕೆ ಹೀಗೆ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications











