"ನನ್ನ ಜೊತೆ ಜಗಳ ಆಡಿದ್ದು ಬಿಟ್ರೆ, ಗಿಲ್ಲಿ ವ್ಯಕ್ತಿತ್ವವೇನು ಅನ್ನೋದು ಯಾರಿಗೂ ಗೊತ್ತೇ ಇಲ್ಲ"- ಅಶ್ವಿನಿ ಗೌಡ
ಬಿಗ್ ಬಾಸ್ ಕನ್ನಡ ಸೀಸನ್ 12 ಯಶಸ್ವಿಯಾಗಿ ಮುಗಿದಿದೆ. ಗಿಲ್ಲಿ ನಟ ಈ ಸೀಸನ್‌ಗೆ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಅಶ್ವಿನಿ ಗೌಡ ರನ್ನರ್‌ಅಪ್ ಆಗಬಹುದೆಂಬ ನಿರೀಕ್ಷೆಯಿತ್ತು. ಆದರೆ, 2ನೇ ರನ್ನರ್‌ಅಪ್‌ಗೆ ತೃಪ್ತಿ ಪಟ್ಟುಕೊಳ್ಳಬೇಕಿದೆ. ಬಿಗ್ ಬಾಸ್ ಮುಗಿದ ದಿನದಿಂದ ಅಶ್ವಿನಿ ಗೌಡ ಈ ಬಗ್ಗೆ ಒಂದಲ್ಲ ಒಂದು ರೀತಿ ಅಸಮಧಾನವನ್ನು ಹೊರ ಹಾಕುತ್ತಲೇ ಇದ್ದಾರೆ. ಅದರಲ್ಲೂ ಗಿಲ್ಲಿ ವಿರುದ್ಧ ವಾಕ್ಸಮರ ಸಾರುತ್ತಲೇ ಇದ್ದಾರೆ.
ಗಿಲ್ಲಿ ದಾಖಲೆ ವೋಟ್‌ಗಳನ್ನು ಪಡೆದು ಗೆದ್ದು ಬೀಗಿದ್ದಾರೆ. ಫಿನಾಲೆಯಂದೇ ಅವರಿಗಿರುವ ಫ್ಯಾನ್ ಫಾಲೋವಿಂಗ್ ಏನು ಅನ್ನೋದು ಸಾಬೀತಾಗಿದೆ. ಆದರೆ, ಬಿಗ್ ಬಾಸ್ ಫಿನಾಲೆವರೆಗೂ ಗಿಲ್ಲಿ ಹಾಗೂ ಅಶ್ವಿನಿ ಗೌಡ ನಡುವೆಯೇ ಪ್ರಬಲ ಪೈಪೋಟಿ ಇತ್ತು. ಇಬ್ಬರಲ್ಲಿ ಒಬ್ಬರು ಗೆಲ್ಲೋದು ಪಕ್ಕಾ ಅಂತಲೇ ಭಾವಿಸಲಾಗಿತ್ತು. ಅಚ್ಚರಿ ಎಂಬಂತೆ ಅಶ್ವಿನಿ ಗೌಡ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಮುಗಿಸಿ ಬಂದಿರೋ ಅಶ್ವಿನಿ ಗೌಡ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಗಿಲ್ಲಿ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯ ಅನುಭವದಿಂದ ಹಿಡಿದು ಗಿಲ್ಲಿ ಮೇಲಿನ ಅಸಮಧಾನವನ್ನು ಹೊರ ಹಾಕಿದ್ದಾರೆ. ಅದರಲ್ಲೂ "ಗಿಲ್ಲಿ ತನ್ನ ಜೊತೆ ಜಗಳ ಆಡಿದ್ದು ಬಿಟ್ಟರೆ, ಅವರ ವ್ಯಕ್ತಿತ್ವವೇನು ಅನ್ನೋದು ಯಾರಿಗೂ ಗೊತ್ತೇ ಇಲ್ಲ ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ಈ ಸಂದರ್ಶನದ ತುಣುಕು ಇಲ್ಲಿದೆ.
ಬಿಗ್ ಬಾಸ್ ಜರ್ನಿ ಹೇಗಿತ್ತು?
"ನನ್ನ ಜರ್ನಿ ಬಿಗ್ ಬಾಸ್ ಮನೆಯಲ್ಲಿ ಖಂಡಿತಾ ಸುಲಭದ್ದಾಗಿರಲಿಲ್ಲ. ಒಂದು ಯುದ್ಧವೇ ಆದಂತೆ ಆಯ್ತು. ನನಗೆ ತುಂಬಾನೇ ಕಷ್ಟ ಆಯ್ತು. ಇಷ್ಟನೂ ಆಯ್ತು. ಎರಡೂ ಇದೆ. ಬಿಗ್ ಬಾಸ್ ಮನೆಗೆ ಹೊಂದಿಕೊಂಡೇ ಜೀವಿಸಿದ್ದೆ ಅಂತ ಅನಿಸುತ್ತೆ." ಎಂದು ಅಶ್ವಿನಿ ಗೌಡ ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಹೆಗಲು ಕೊಡೋರು ಬೇಕಾಗುತ್ತೆ?
"ಫ್ರೆಂಡ್‌ಶಿಪ್, ಭಾವನೆಗಳು ಅಂತ ತುಂಬಿಕೊಂಡಾಗ ಎಲ್ಲೊ ಒಂದು ಕಡೆ ಹೆಗಲು ಬೇಕಾಗುತ್ತೆ. ಆದರೆ, ನಿಮ್ಮ ಆಟವನ್ನು ನೀವೇ ಆಡಬೇಕಾಗುತ್ತೆ. ಅಲ್ಲಿ ಯಾರೂ ನಮ್ಮ ಆಟವನ್ನು ಆಡುವುದಕ್ಕೆ ಆಗುವುದಿಲ್ಲ. ಎಮೋಷನಲ್ ಸಪೋರ್ಟ್ ಬೇಕಾಗುತ್ತೆ ಅನ್ನೋದು ಬಿಟ್ಟರೆ, ಆರಂಭದಿಂದ ಹಿಡಿದು ಕೊನೆಯ ದಿನದವರೆಗೂ ನಾನು ಒಂಟಿಯಾಗಿಯೇ ಆಟ ಆಡಿರೋದು. ಇಡೀ ಒಂದು ಕಡೆ.. ನಾನೇ ಒಂದು ಕಡೆ. ನಾನೇ ಒಂದು ದಿಕ್ಕಿನಲ್ಲಿ ಇರುತ್ತಿದ್ದೆ. ಇಡೀ ಮನೆ ಒಂದು ದಿಕ್ಕಲ್ಲಿ ಇರುತ್ತಿದ್ದರು." ಎಂದಿದ್ದಾರೆ.
ನನ್ನ ಜಗಳ ಬಳಸಿಕೊಂಡಿದ್ದು ಗಿಲ್ಲಿ
"ನಾನಾಯ್ತು ನನ್ನ ಲೈಫ್ ಆಯ್ತು. ನನ್ನ ಪಾಡಿಗೆ ನನ್ನನ್ನು ಬಿಟ್ಟು ಬಿಡು ಕೆದುಕಿದರೆ ಮಾತ್ರ ಸುಮ್ಮನಿರೋದಿಲ್ಲ. ಅದೇನಾಯ್ತು ಅಂದ್ರೆ, ಮನೆಯಲ್ಲಿ ಒಂದು ಸ್ಟ್ರಾಟಜಿ ಮಾಡಿಕೊಂಡಿದ್ದರು. ಏಕವಚನದಲ್ಲಿ ಇವರನ್ನು ಕರೆದರೆ, ಇವರು ಜಗಳಕ್ಕೆ ಬರುತ್ತಾರೆ. ಒಂದು ವಾರ ನಾನು ಮನೆಯಲ್ಲಿ ಇರಬಹುದು. ಇದು ಸ್ಟ್ರಾಟಜಿ. ಇದು ನನಗೆ ತುಂಬಾನೇ ತಡವಾಗಿ ಅರ್ಥ ಆಯ್ತು. ಇದನ್ನು ತುಂಬಾ ಚೆನ್ನಾಗಿ ಬಳಸಿಕೊಂಡಿದ್ದು ಗಿಲ್ಲಿ. ತುಂಬಾ ಜನರು ಇದನ್ನು ಬಳಸಿಕೊಂಡರು." ಎಂದು ಹೇಳಿದ್ದಾರೆ.
ಗಿಲ್ಲಿ ವ್ಯಕ್ತಿತ್ವವೇನು ಅನ್ನೋದು ಯಾರಿಗೂ ಗೊತ್ಯಿಲ್ಲ=
"ಗಿಲ್ಲಿ ಬಿಗ್ ಬಾಸ್ ಆಟವನ್ನು ನೋಡಿಕೊಂಡು ಬಂದಿದ್ದರು. ಇದೊಂದು ಚದುರಂಗದ ಆಟ. ಇದರಲ್ಲಿ ರಾಜ, ಮಂತ್ರಿ ಅಂತ ಏನೇನೋ ಇರುತ್ತವಲ್ಲ. ಮಂತ್ರಿ-ತಂತ್ರಿ ಅಂತೆಲ್ಲ ಹೇಳುತ್ತಾರೆ. ಇನ್ನು ಕುತಂತ್ರಿ ಅನ್ನೋರು ಇರುತ್ತಾರೆ. ಅವರು ಆಟವನ್ನು ಹಾಳು ಮಾಡುವುದಕ್ಕೆ ಅಂತಾನೇ ಬರುತ್ತಾರೆ. ಆ ಗೇಮ್ ಸ್ಟ್ರಾಟಜಿಯನ್ನು ಇಟ್ಟುಕೊಂಡು ಬಂದಿದ್ದರು. ಅವರು ಎಲ್ಲೂ ಟಾಸ್ಕ್ ಆಡಿಲ್ಲ. ಇಡೀ ಮನೆಯಲ್ಲಿ ಗಿಲ್ಲಿ ವ್ಯಕ್ತಿತ್ವವೇನು ಅನ್ನೋದು ಯಾರಿಗೂ ಗೊತ್ಯಿಲ್ಲ. ಅಶ್ವಿನಿ ಜೊತೆ ಜಗಳ ಆಡಿ, ಇಲ್ಲ ಅಶ್ವಿನಿಯನ್ನು ಕೆಳಗಿಟ್ಟು ಗಿಲ್ಲಿ ಆಟ ಆಡಿದ್ದು ಬಿಟ್ಟರೆ, ಬೇರೆ ಕಡೆ ಗಿಲ್ಲಿ ಎಲ್ಲಿ ತೋರಿಸಿ. ಅವರು ತುಂಬಾನೇ ಸ್ಟ್ರಾಟಜಿ ಕಾರ್ಡ್ ಅನ್ನು ಪ್ಲೇ ಮಾಡುತ್ತಾರೆ. ನನ್ನನ್ನು ಟ್ರಿಗರ್ ಮಾಡಿದರೆ ಎಲ್ಲಿ ಜಗಳ ಆಗುತ್ತೆ ಅನ್ನೋದು ಅರಿತುಕೊಳ್ಳುತ್ತಾರೆ. ನಾನು ಕ್ಯಾಪ್ಟನ್ ಆಗಬಾರದು ಅನ್ನೋ ಪ್ಲಾನ್ ತುಂಬಾನೇ ಇತ್ತು. ನಾನು ಸರಿಯಾಗಿ ಆಟ ಆಡದೇ ಇರುವಂತೆ ಮೈಂಡ್ ಡೈವರ್ಟ್ ಮಾಡುತ್ತಾರೆ." ಎಂದು ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.


Click it and Unblock the Notifications











