BBK 12: ಅಶ್ವಿನಿ ಗೌಡ-ಜಾಹ್ನವಿ ಮೇಲೆ ಬಿಗ್ ಬಾಸ್ ಗರಂ: ಇಬ್ಬರೂ ನೇರ ನಾಮಿನೇಟ್

ಬಿಗ್ ಬಾಸ್ ಕನ್ನಡ ಸೀಸನ್ 12 ವಿಚಿತ್ರವಾಗಿ ಸಾಗುತ್ತಿದೆ. ಈಗತಾನೇ 50 ದಿನಗಳನ್ನು ಪೂರೈಸಿದೆ. ಹೀಗಿದ್ದರೂ ಇನ್ನೂ ಮನೆಯ ಸದಸ್ಯರಿಗೆ ಮಾತ್ರ ಹೇಗೆ ಆಟ ಆಡಬೇಕು ಅನ್ನೋದು ಮಾತ್ರ ಗೊತ್ತಾಗುತ್ತಿಲ್ಲ. ಅದರಲ್ಲೂ ಅಶ್ವಿನಿ ಗೌಡ ಹಾಗೂ ಜಾಹ್ನವಿ ಇಬ್ಬರೂ ಬಿಗ್ ಬಾಸ್ ಮನೆಯ ನೀತಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಇದೇ ಕಾರಣಕ್ಕೆ ಇಂದಿನ ಎಪಿಸೋಡ್‌ನಲ್ಲಿ ಸ್ವತ: ಬಿಗ್ ಬಾಸ್ ಗರಂ ಆಗಿದ್ದಾರೆ.

ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು. ಅಶ್ವಿನಿ ಗೌಡ ಹಾಗೂ ಜಾಹ್ನವಿ ಬಿಗ್ ಬಾಸ್ ನಿಯಮಗಳನ್ನು ಮುರಿದಿದ್ದರು. ಡ್ರೆಸಿಂಗ್ ರೂಮ್‌ನಲ್ಲಿ ಪಿಸು ಮಾತುಗಳನ್ನು ಆಡಿದ್ದರು. ಇದನ್ನು ಕಿಚ್ಚ ಸುದೀಪ್ ಮುಂದೆ ಅವರೇ ಒಪ್ಪಿಕೊಂಡಿದ್ದರು. ಅದಕ್ಕೆ ಕಿಚ್ಚ ಬುದ್ದಿ ಮಾತುಗಳನ್ನು ಹೇಳಿ, ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಆದರೂ ಮತ್ತದೇ ತಪ್ಪು ಮಾಡಿದ್ದಾರೆ.

BBK 12 November 17th episode Bigg Boss directly nominated Ashwini Gowda and Jhanvi

ಬಿಗ್ ಬಾಸ್‌ನಲ್ಲಿ ಕೆಲವು ನಿಯಮಗಳಿವೆ. ಸ್ಪರ್ಧಿಗಳು ಪಿಸುಮಾತುಗಳನ್ನು ಆಡುವಂತಿಲ್ಲ. ಮೈಕ್ ಅನ್ನು ತೆಗೆದು ಇಟ್ಟು ಮಾತುಕತೆ ನಡೆಸುವುದಕ್ಕೆ ಅವಕಾಶವಿಲ್ಲ. ಇದೆಲ್ಲವೂ ಬಿಗ್ ಬಾಸ್‌ ರೂಲ್ಸ್‌ಗೆ ತೀರಾ ವಿರುದ್ಧವಾಗಿದೆ. ಹೀಗಾಗಿ ಎಚ್ಚರಿಕೆಯನ್ನು ಕೊಟ್ಟು ಕಳುಹಿಸಿದ್ದರು. ಆದರೂ ವೀಕೆಂಡ್ ಎಪಿಸೋಡ್‌ ಮುಗಿದ ಬಳಿಕ ಮತ್ತದೇ ಕೆಲಸ ಮಾಡಿದ್ದಾರೆ. ಡ್ರೆಸ್ ಚೇಂಜ್ ಮಾಡುವ ನೆಪದಲ್ಲಿ ಗುಟ್ಟಾಗಿ ಮಾತಾಡಿಕೊಂಡಿದ್ದಾರೆ. ಇದು ಬಿಗ್ ಬಾಸ್ ಅನ್ನೇ ಕೆರಳಿಸಿದೆ.

ಡ್ರೆಸ್ಸಿಂಗ್ ರೂಮ್‌ಗೆ ತೆರಳಿದ ಅಶ್ವಿನಿ ಗೌಡ ಹಾಗೂ ಜಾಹ್ನವಿ ಗುಟ್ಟಾಗಿ ಮಾತಾಡುವುದಕ್ಕೆ ಶುರು ಮಾಡಿದ್ದರು. ಇದರ ಬಗ್ಗೆ ಬಿಗ್ ಬಾಸ್ ಎಚ್ಚರಿಕೆ ಕೊಟ್ಟಿತ್ತು. ಆಗ ಧನುಷ್ ಹಾಗೂ ಸ್ಪಂದನಾ ಇಬ್ಬರೂ ಕ್ಯಾಪ್ಟನ್ ಆಗಿರುವ ರಘು ಅವರಿಗೆ ಹೇಳಿದರು. ಅವರು ಹೋಗಿ ಇವರಿಬ್ಬರಿಗೂ ಎಚ್ಚರಿಕೆಯನ್ನು ಕೊಟ್ಟರಾದರೂ, ಅಷ್ಟರೊಳಗೆ ಬಿಗ್ ಬಾಸ್ ಕೆಂಗಣ್ಣಿಗೆ ಗುರಿಯಾಗಿ ಆಗಿತ್ತು.

ಮನೆಯ ಸದಸ್ಯರನ್ನೆಲ್ಲ ಮನೆಯೊಳಗೆ ಕರೆದು ಅಶ್ವಿನಿ ಗೌಡ ಹಾಗೂ ಜಾಹ್ನವಿಯವರು ಡ್ರೆಸ್ಸಿಂಗ್ ರೂಮ್ ಗುಟ್ಟಾಗಿ ಮಾತಾಡಿಕೊಂಡ ವಿಡಿಯೋ ಮಾಡಲಾಯ್ತು. ಆ ವೇಳೆ ಕೂಡ ಅವರಿಬ್ಬರೂ ತಮ್ಮ ತಪ್ಪನ್ನು ತುಂಬಾನೇ ಲೈಟ್ ಆಗಿ ತೆಗೆದುಕೊಂಡರು. ವಿಡಿಯೋ ನೋಡಿ ನಗುವುದಕ್ಕೆ ಶುರು ಮಾಡಿದ್ದರು. ಇದರಿಂದ ಕೋಪಗೊಂಡ ಬಿಗ್ ಬಾಸ್ ಇಬ್ಬರನ್ನು ನೇರವಾಗಿ ನಾಮಿನೇಟ್ ಮಾಡಿದರು.

BBK 12 November 17th episode Bigg Boss directly nominated Ashwini Gowda and Jhanvi

ನೇರವಾಗಿ ನಾಮಿನೇಟ್ ಆದ ಬಳಿಕ ಅಶ್ವಿನಿ ಗೌಡ ಹಾಗೂ ಜಾಹ್ನವಿಗೆ ತಮ್ಮ ತಪ್ಪಿನ ಅರಿವಾಗಿತ್ತು. ತಾವೇಕೆ ಗುಟ್ಟಾಗಿ ಮಾತಾಡಿದೆವು ಅನ್ನೋದನ್ನು ಕ್ಯಾಮರಾ ಮುಂದೆ ಹೇಳಿಕೊಂಡರು. ನೇರವಾಗಿ ನಾಮಿನೇಟ್ ಮಾಡುವುದು ಬೇಡವೆಂದು ಕ್ಯಾಮರಾ ಮುಂದೆ ಕೇಳಿಕೊಂಡಿದ್ದಾರೆ. ಆದರೆ, ಬಿಗ್ ಬಾಸ್ ಇನ್ನೂ ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಹೀಗಾಗಿ ಇಡೀ ವಾರ ಅವರು ಏನೇ ಟಾಸ್ಕ್ ಮಾಡಿದರೂ ನಾಮಿನೇಷನ್ ಪ್ರಕ್ರಿಯೆಯಿಂದ ಮಾತ್ರ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ.

ಇನ್ನು ಬಿಗ್ ಬಾಸ್ ಮನೆಯಲ್ಲಿ ಇದೂವರೆಗೂ ಯಾರು ಹೆಚ್ಚು ಬಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆಂದು ವೋಟ್ ಮಾಡಲಾಯಿತು. ಅದಕ್ಕೆ ಮನೆ ಮಂದಿ ಎಲ್ಲರೂ ಅಶ್ವಿನಿ ಗೌಡ ಕಡೆಗೆ ಬೆರಳು ಮಾಡಿ ತೋರಿಸಿದರು. ಅದನ್ನು ಅಶ್ವಿನಿ ಗೌಡ ಒಪ್ಪಿಕೊಂಡರು. ಇದಕ್ಕೆ ಶಿಕ್ಷೆಯಾಗಿ ಮನೆಯ ಪ್ರತಿಯೊಬ್ಬ ಸದಸ್ಯರ ಬಳಿಯೂ ಹೋಗಿ ಕ್ಷಮೆ ಕೇಳಬೇಕಿತ್ತು. ಅದನ್ನು ಅಶ್ವಿನಿ ಗೌಡ ಮಾಡಿದ್ದಾರೆ. ಹೀಗಾಗಿ ಅವರ ಹಣೆ ಮೇಲಿನ ನಾಮಿನೇಷನ್ ಪಟ್ಟಿ ತೆಗೆದು ಹಾಕಲಾಗಿದೆ. ಆದರೆ, ನಾಮಿನೇಷನ್ ಪ್ರಕ್ರಿಯೆಯಿಂದ ಮಾತ್ರ ಇನ್ನೂ ಹೊರಗುಳಿದಿಲ್ಲ.

More from Filmibeat

English summary
BBK 12 November 17th episode Bigg Boss directly nominated Ashwini Gowda and Jhanvi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X