BBK 12: 29 ನಿಮಿಷ ಕಾಡಿದ ಬಳಿಕ ಅಶ್ವಿನಿ ಗೌಡಗೆ ಕ್ಷಮೆ ಕೇಳಿದ ಗಿಲ್ಲಿ

ಬಿಗ್ ಬಾಸ್ ಮನೆಯಲ್ಲಿ ಕಳೆದ ಕೆಲವು ದಿನಗಳಿಂದ ವೈಮಸ್ಸು ಹೆಚ್ಚಾಗಿದೆ. ಮೊದಲೇ ಗಿಲ್ಲಿ ಹಾಗೂ ಅಶ್ವಿನಿ ಗೌಡ ಮಧ್ಯೆ ಸಮರ ನಡೆಯುತ್ತಲೇ ಇದೆ. ಈ ಮಧ್ಯೆ ಅಶ್ವಿನಿ ಗೌಡ ಮನೆಯ ಕ್ಯಾಪ್ಟನ್ ಆಗಿದ್ದ ರಘು ಅವರ ಜೊತೆನೂ ಕಿತ್ತಾಡಿಕೊಂಡಿದ್ದರು. ಇದನ್ನೇ ಅಡ್ವಾಂಟೇಜ್ ತೆಗೆದುಕೊಂಡಿದ್ದ ಗಿಲ್ಲಿ ನಟ ಟಾಸ್ಕ್‌ನಲ್ಲಿ ಮತ್ತೆ ಅಶ್ವಿನಿ ಗೌಡ ಅವರನ್ನು ಕಾಡಿದರು. ಅವರನ್ನು ರೊಚ್ಚಿಗೆಬ್ಬಿಸುವುದಕ್ಕೆ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಪಟ್ಟಿದ್ದರು.

ಅಶ್ವಿನಿ ಗೌಡ ಇಮೇಜ್ ಹಿಂದಿ ಹೋಗಿದ್ದಕ್ಕೂ ಮನೆ ಮಂದಿ ಆಡಿಕೊಳ್ಳುತ್ತಿರುವುದಕ್ಕೂ ಸರಿ ಹೋಗಿದೆ. ರಘು ಜೊತೆ ಜಗಳ ಮಾಡಿಕೊಂಡ ಮೇಲೆ ಅಶ್ವಿನಿ ಗೌಡ ಊಟ ಬಿಟ್ಟಿದ್ದರು. ಬಿಗ್ ಬಾಸ್ ಮನೆಯಿಂದ ಹೊರ ಹೋಗುವುದಾಗಿ ಪಟ್ಟು ಹಿಡಿದು ಕೂತಿದ್ದರು. ಇತ್ತ ಮನೆ ಮಂದಿಯೆಲ್ಲ ಸಮಾಧಾನ ಮಾಡುವುದಕ್ಕೆ ಪ್ರಯತ್ನ ಪಟ್ಟರೂ ಅಶ್ವಿನಿ ಗೌಡ ಮಾತ್ರ ಜಗ್ಗಲೇ ಇಲ್ಲ.

BBK 12 November 21 episode Gilli asked apology for Ashwini Gowda

ಇಂದಿನ ಎಪಿಸೋಡ್‌ನಲ್ಲಿ ಅಶ್ವಿನಿ ಗೌಡ ಅವರನ್ನು ಕರೆದು ಬಿಗ್ ಬಾಸ್ ಕುದ್ಧಾಗಿ ಮಾತಾಡಿದೆ. ಬಿಗ್ ಬಾಸ್ ಮುಂದೆ ಗಿಲ್ಲಿ ನಟನಿಂದ ಆಗುತ್ತಿರುವ ಅವಮಾನಗಳ ಬಗ್ಗೆ ಅಶ್ವಿನಿ ಗೌಡ ದೂರನ್ನು ನೀಡಿದ್ದರು. ಆಗ ಬಿಗ್ ಬಾಸ್ ಅಶ್ವಿನಿ ಗೌಡಗೆ ಮನೆಯಲ್ಲಿ ಸದಸ್ಯರು ಆಡುತ್ತಿರುವುದ ಆಟವೆಂದು ಮನವರಿಕೆ ಮಾಡಿಕೊಟ್ಟರು. ಹಾಗೇ ಅಶ್ವಿನಿ ಗೌಡಗೆ ಆಟ ಚೆನ್ನಾಗಿ ಆಡುತ್ತಿದ್ದೀರ. ಆದರೆ, ಊಟ ಬಿಡಬೇಡಿ ಎಂದು ಬುದ್ದಿ ಮಾತು ಹೇಳಿ ಕಳುಹಿಸಿದರು.

ಬಿಗ್ ಬಾಸ್ ಮನವೊಲಿಸಿದ ಬಳಿಕ ಅಶ್ವಿನಿ ಗೌಡ ಉಪವಾಸಕ್ಕೆ ಬ್ರೇಕ್ ಹಾಕಿ ಊಟ ಸೇವಿಸಿದ್ದಾರೆ. ಇಷ್ಟಕ್ಕೆ ಮುಗಿದಿರಲಿಲ್ಲ. ಕ್ಯಾಪ್ಟನ್ಸಿ ಟಾಸ್ಕ್‌ನ ರೇಸ್‌ನಲ್ಲಿ ಅಶ್ವಿನಿ ಗೌಡ ಹಾಗೂ ಅಭಿಷೇಕ್ ಇಬ್ಬರು ಇದ್ದರು. ಇವರಿಬ್ಬರಲ್ಲಿ ಯಾರು ಕ್ಯಾಪ್ಟನ್ ಆಗಬೇಕು ಎನ್ನುವುದಕ್ಕೆ ಒಂದು ಟಾಸ್ಕ್ ಅನ್ನು ನೀಡಿದ್ದರು. ಆ ಟಾಸ್ಕ್‌ನಲ್ಲಿ ಅಶ್ವಿನಿ ಗೌಡ ವಿರುದ್ಧ ಗಿಲ್ಲಿ ಹಾಗೂ ಕಾವ್ಯಾ ಕಾಲೆಳೆಯುತ್ತಿದ್ದರೆ, ಅಭಿಷೇಕ್ ವಿರುದ್ಧ ಜಾಹ್ನವಿ ಹಾಗೂ ರಕ್ಷಿತಾ ಶೆಟ್ಟಿ ಇದ್ದರು.

ಗಿಲ್ಲಿ ನಟ ಹಾಗೂ ಕಾವ್ಯಾ ಇಬ್ಬರೂ ಸಿಕ್ಕಿದ್ದೇ ಚಾನ್ಸ್ ಎಂದು ಅಶ್ವಿನಿ ಗೌಡ ಅವರನ್ನು ರೊಚ್ಚಿಗೆಬ್ಬಿಸುವ ಪ್ರಯತ್ನ ಮಾಡಿದ್ದರು. ರಘು ಹಾಗೂ ಅಶ್ವಿನಿ ಗೌಡ ಕಿತ್ತಾಟದ ವಿಚಾರವನ್ನೇ ಇಟ್ಟುಕೊಂಡು ಗಿಲ್ಲಿ ಟಾರ್ಗೆಟ್ ಮಾಡಿದ್ದರು. "ಅಶ್ವಿನಿ ಗೌಡ ಅಂತ ಕರೆಯದೆ ಬೇರೆ ಏನು ಕರೆಯಬೇಕು? ಆಶ್ ಅಂತ ಕರೆಯಬೇಕಾ? ರಘು ನಿಮಗಿಂತ 3 ವರ್ಷ ಚಿಕ್ಕವರು. ಬಿಗ್ ಬಾಸ್ ಮನೆ ಬಿಟ್ಟು ಹೋಗುತ್ತೀನಿ ಎನ್ನುತ್ತೀರಿ. ಇನ್ನೆರಡು ವಾರದಲ್ಲಿ ನಾವೇ ಕಳಿಸುತ್ತೇವೆ. ಇಲ್ಲಾ ಜನರೇ ಕರೆಸಿಕೊಳ್ಳುತ್ತಾರೆ" ಎಂದು ಅಶ್ವಿನಿ ಗೌಡ ಅವರನ್ನು ಮತ್ತೆ ಕೆರಳಿಸುವ ಪ್ರಯತ್ನ ಮಾಡಿದರು.

ಇತ್ತ ಕಾವ್ಯಾ ಕೂಡ "ನಿಮಗೆ ಯಾರಾದರೂ ಏನಾದರೂ ಹೇಳಿದರೆ, ಅವಮಾನ ಆಗುತ್ತೆ. ಅದೇ ನೀವು ಬೇರೆಯವರಿಗೆ ಅವಮಾನ ಮಾಡಲಿಲ್ಲವೇ? ಬಿಗ್ ಬಾಸ್ ಮನೆ ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದೀರಿ. ನೀವು ಈಗಾಗಲೇ ಸೋತಿದ್ದೀರಿ." ಎಂದು ಅಶ್ವಿನಿ ಗೌಡರನ್ನು ಕೆರಳಿಸುವುದಕ್ಕೆ ಯತ್ನಿಸಿದ್ದರು. ಆದರೆ, ಇದ್ಯಾವುದಕ್ಕೂ ಅಶ್ವಿನಿ ಗೌಡ ಪ್ರತಿಕ್ರಿಯೆ ನೀಡಲೇ ಇಲ್ಲ.

ಕೊನೆಯಲ್ಲಿ ಅಶ್ವಿನಿ ಗೌಡ ವಿರುದ್ಧ ತಾನು ಮಾತಾಡಿರುವುದು ತಪ್ಪು ಎಂದು ಕಾವ್ಯಾ ಹಾಗೂ ಗಿಲ್ಲಿ ಇಬ್ಬರಿಗೂ ಅನಿಸಿತ್ತು. ಈ ಕಾರಣಕ್ಕೆ ಅಶ್ವಿನಿ ಗೌಡ ಅವರ ರೂಮಿಗೆ ಹೋಗಿ ಮೊದಲು ಕಾವ್ಯಾ ಕ್ಷಮೆ ಕೇಳಿದರೆ, ಅವರನ್ನೇ ಹಿಂಬಾಲಿಸಿಕೊಂಡು ಗಿಲ್ಲಿ ಕೂಡ ಬಂದಿದ್ದರು. ಅಶ್ವಿನಿ ಗೌಡ ಅವರ ಮುಂದೆ ಇದು ಕೇವಲ ಗೇಮ್ ಅಷ್ಟೇ. ತನ್ನ ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ. ಬಿಗ್ ಬಾಸ್ ಮುಗಿಯುವ ಕೊನೆಯಲ್ಲಿ ಅಶ್ವಿನಿ ಗೌಡ ಅವರಿಗೆ ಕ್ಷಮೆ ಕೇಳಿದ್ದು ಹೈಲೈಟ್ ಆಗಿತ್ತು.

More from Filmibeat

English summary
BBK 12 November 21 episode Gilli asked apology for Ashwini Gowda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X