BBK 12: ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ; "ಎ.ಅಶ್ವಿನಿ" ಎಂದಾಗ ಹೇಗಿತ್ತು ರಿಯಾಕ್ಷನ್?

ಕಳೆದ ಕೆಲವು ದಿನಗಳಿಂದ ಬಿಗ್ ಬಾಸ್ ಮನೆ ರಣರಂಗವಾಗಿದೆ. ಅಶ್ವಿನಿ ಗೌಡ ಕಿರುಚಾಟ ಒಂದ್ಕಡೆ, ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯೋ ಮಂದಿ ಇನ್ನೊಂದು ಕಡೆ. ಹೀಗಾಗಿ ಬಿಗ್ ಬಾಸ್ ಮನೆಯಲ್ಲಿ ಪ್ರತಿ ದಿನ ಜಗಳ, ಕಿತ್ತಾಟ. ಕೈ ಕೈ ತೋರಿಸುವ ದೃಶ್ಯಗಳು ಕಾಮನ್ ಆಗಿ ಬಿಟ್ಟಿದೆ. ಈಗ ಮತ್ತೆ ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟನ ನಡುವೆ ಕಿಡಿ ಹೊತ್ತಿಕೊಂಡಿದೆ.

ಬಿಗ್ ಬಾಸ್ ಆರಂಭ ಆದ ದಿನದಿಂದಲೂ ಅಶ್ವಿನಿ ಗೌಡ ಹಾಗೂ ಗಿಲ್ಲಿ ನಡುವೆ ಕಿತ್ತಾಟ ನಡೆಯುತ್ತಲೇ ಇರುತ್ತೆ. ಒಂದಲ್ಲ ಒಂದು ಕಾರಣಕ್ಕೆ ಇಬ್ಬರೂ ಜಗಳ ಆಡೋದು ಕಾಮನ್ ಆಗಿದೆ. ಆದರೆ, ಕಳೆದೆರಡು ದಿನಗಳಿಂದ ಇದು ಎರಡನೇ ಬಾರಿ ಮನೆಯ ಕ್ಯಾಪ್ಟನ್ ಆಗಿರುವ ರಘು ಕಡೆಗೆ ತಿರುಗಿತ್ತು. ರಘು ಏಕವಚನದಲ್ಲಿ ಮಾತಾಡಿಸಿದರು ಎನ್ನುವ ಕಾರಣಕ್ಕೆ ಅಶ್ವಿನಿ ಗೌಡ ಗರಂ ಆಗಿದ್ದರು.

BBK 12 November 21st promo Gilli Nata again teases Ashwini Gowda

ರಘು ಹಾಗೂ ಅಶ್ವಿನಿ ಗೌಡ ನಡುವೆ ಮಾತಿಗೆ ಮಾತು ಬೆಳೆದು ವಾಗ್ಯುದ್ಧವೇ ನಡೆದಿತ್ತು. ಇದರಿಂದ ಮನೆಯಲ್ಲಿ ಕೋಲಾಹಲವೇ ನಡೆದಿತ್ತು. ರಘು ವಿರುದ್ಧ ಕಿಡಿಕಾಡಿದ್ದ ಅಶ್ವಿನಿ ಗೌಡ ಊಟ ಮಾಡುವುದನ್ನೇ ಬಿಟ್ಟಿದ್ದರು. ಮೊದಲೇ ಕೆರಳಿ ಕೆಂಡವಾಗಿರುವ ಅಶ್ವಿನಿ ಗೌಡಗೆ ಗಿಲ್ಲಿ ನಟ ಇನ್ನಷ್ಟು ಉರಿಸಿದ್ದಾರೆ. ಇವತ್ತಿನ (ನವೆಂಬರ್ 21) ಬೆಳಗ್ಗೆಯ ಬಿಗ್ ಬಾಸ್ ಪ್ರೋಮೊದಲ್ಲಿ ಗಿಲ್ಲಿ-ಅಶ್ವಿನಿ ಗೌಡ ಸಂಭಾಷಣೆಯೇ ಹೈಲೈಟ್ ಆಗಿದೆ.

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ವರ್ತನೆ ಕೆಲವರಿಗೆ ಹಿಡಿಸುತ್ತಿಲ್ಲ. ಸುಖಾ ಸುಮ್ಮನೆ ಮನೆಯ ಸದಸ್ಯರನ್ನು ಕೆರಳಿಸುತ್ತಾರೆ. ಹಾಸ್ಯದ ನೆಪದಲ್ಲಿ ಬೇಕಂತಲೇ ಕಾಲೆಳೆಯುತ್ತಾರೆ. ವಿತಂಡವಾದ ಮಾಡುತ್ತಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. ಅದರಲ್ಲೂ ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ, ಜಾಹ್ನವಿಯವರನ್ನು ಟಾರ್ಗೆಟ್ ಮಾಡಿದ್ದಾರೆಂಬ ಕೂಗಿ ಕೇಳಿ ಬರುತ್ತಿದೆ.

ಮೊದಲೇ ರಘು ಮೇಲೆ ಗರಂ ಆಗಿರುವ ಅಶ್ವಿನಿ ಗೌಡ ಕೋಪ ಮೂಗಿನ ತುದಿಯಲ್ಲಿದೆ. ಇದೇ ವೇಳೆ ಬಿಗ್ ಬಾಸ್ ಮತ್ತೊಂದು ಭಯಂಕರ ಟಾಸ್ಕ್ ಅನ್ನು ಕೊಟ್ಟಂತಿದೆ. ಈ ಮಿರರ್ ಟಾಸ್ಕ್‌ನಲ್ಲಿ ಮತ್ತೆ ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ಮುಖಾ ಮುಖಿಯಾಗಿದ್ದಾರೆ. ಗಿಲ್ಲಿ ಮತ್ತೆ ರಘು ವಿಷಯವನ್ನು ಇಟ್ಟುಕೊಂಡು ಅಶ್ವಿನಿ ಗೌಡರನ್ನು ಕೆರಳಿಸಿದ್ದಾರೆ. "ರಘು ಅಣ್ಣ ನಿಮ್ಮ ಅಶ್ವಿನಿ ಅಂತ ಕರೆಯರು ಆಶು ಅಂತ ಕರೆಯಬೇಕಿತ್ತಾ? ಅಶ್ವಿನಿ.. ಮೇಡಂ. ನಿಮ್ಮ ಇನಿಷಿಯಲ್ ಎ ಅಂತ ಏನಾದರೂ ಇದ್ದಿದ್ದರೆ.. ಎ.ಅಶ್ವಿನಿ ಮೇಡಂ ಅಂತ ಕರೆಯುತ್ತಿದ್ದರು" ಎಂದು ಟಾಂಗ್ ಕೊಟ್ಟಿದ್ದಾರೆ.

ಹಾಗೇ ಮಾತೆತ್ತಿದರೆ ನಾನು ಮನೆಗೆ ಹೋಗುತ್ತೇನೆ.. ಮನೆಗೆ ಹೋಗುತ್ತೇನೆ ಅಂತೀರ. ಮನೆಗೆ ಹೋಗುತ್ತೇನೆ ಅಂದರೆ ಹೋಗಿ. ನಾವೇನು ನಿಮ್ಮನ್ನು ಬೇಡ ಅಂತ ಹಿಡಿದುಕೊಂಡಿದ್ದೇವಾ?" ಎಂದು ಅಶ್ವಿನಿ ಗೌಡರನ್ನು ಕೆರಳಿಸಿದ್ದಾರೆ. ರಘು ಜೊತೆ ಕಿತ್ತಾಡಿಕೊಂಡು ಕೆಂಡಕಾರುತ್ತಿರುವ ಅಶ್ವಿನಿಗೆ ಕೋಪ ನೆತ್ತಿಗೇರುವಂತೆ ಮಾಡಿದ್ದಾರೆ. ಅಶ್ವಿನಿ ಗೌಡ ಕೂಡ ಸುಮ್ಮನೆ ಇರಲಿಲ್ಲ " ನಿನ್ನಂಥವರನ್ನು ಎಷ್ಟು ಜನ ನೋಡಿಲ್ಲ" ಎನ್ನುತ್ತಾರೆ. ಅದಕ್ಕೆ ಗಿಲ್ಲಿ "ನನ್ನಂಥವರನ್ನು ನೋಡಿರಲ್ಲ" ಎಂದು ಮತ್ತೆ ಟಾಂಗ್ ಕೊಟ್ಟಿದ್ದಾರೆ.

ಅದರಲ್ಲೂ ಅಶ್ವಿನಿ ಗೌಡ ಮುಂದೆ ಕಾಲ ಮೇಲೆ ಕಾಲು ಹಾಕೊಂಡು ಕೂತಿರುವ ಗಿಲ್ಲಿಯ ಈ ಪ್ರೋಮೋ ವೈರಲ್ ಆಗುತ್ತಿದೆ. ನೆಟ್ಟಿಗರು ಕಮೆಂಟ್‌ಗಳ ಮೇಲೆ ಕಮೆಂಟ್ ಮಾಡುತ್ತಿದ್ದಾರೆ. "ಇದೇ ಮೊದಲ ಸಲ ಒಂದು ಪ್ರೋಮೋನ 10 ಸಲ ನೋಡಿರೋದು.." ಅಂತ ಕಿರಿಕ್ ಕೀರ್ತಿ ಕಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು "ನಿಜವಾಗಲೂ ಗಿಲ್ಲಿ ನಟ ಭಯಂಕರನೇ" ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಕೊಡಣ್ಣ ಕೊಡಣ್ಣ ಕೊಡಣ್ಣ..ಗಿಲ್ಲಿ" ಎಂದು ಕಮೆಂಟ್ ಮಾಡಿದ್ದಾರೆ.

More from Filmibeat

English summary
BBK 12 November 21st promo Gilli Nata again teases Ashwini Gowda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X