BBK 12 Live: ಬಿಗ್‌ ಬಾಸ್ ಕನ್ನಡ 12 ಫಿನಾಲೆಗೆ ಕ್ಷಣಗಣನೆ.. ಪ್ರಿ-ಫಿನಾಲೆಯ ಹೈಲೈಟ್ಸ್ ಏನೇನು?

ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಅದಕ್ಕೂ ಮುನ್ನ ಅಂದರೆ ಇವತ್ತು ಪ್ರಿ-ಫಿನಾಲೆ ನಡೆಯಲಿದೆ. ಇಂದು (ಜನವರಿ 17) ರಾತ್ರಿ 9 ಗಂಟೆಯಿಂದ ಪ್ರಿ-ಫಿನಾಲೆ ಪ್ರಸಾರ ಆಗಲಿದೆ. ಪ್ರತಿ ವರ್ಷ ಎರಡು ದಿನಗಳ ಕಾಲ ಫಿನಾಲೆ ನಡೆಯುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಒಂದೇ ದಿನ ಫಿನಾಲೆ ನಡೆಯಲಿದೆ. ಇದು ಕಿರುತೆರೆ ವೀಕ್ಷಕರಲ್ಲಿ ಕುತೂಹಲವನ್ನು ಕೆರಳಿಸಿದೆ.

ಈ ಬಾರಿಯ ಬಿಗ್ ಬಾಸ್ ಕಿರೀಟವನ್ನು ಗೆಲ್ಲುವಲ್ಲಿ ಸಿಕ್ಕಾಪಟ್ಟೆ ಪೈಪೋಟಿಯಿದೆ. ಅಖಾಡದಲ್ಲಿ ಸುಮಾರು 6 ಮಂದಿ ಇದ್ದಾರೆ. ಗಿಲ್ಲಿ ನಟ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಧನುಷ್, ಕಾವ್ಯಾ ಹಾಗೂ ರಘು ಇದ್ದಾರೆ. ಇವರಲ್ಲಿ ಯಾರು ಗೆಲ್ಲುತ್ತಾರೆ ಅನ್ನೋದು ನಾಳೆ (ಜನವರಿ 18) ನಡೆಯಲಿರುವ ಪ್ರೀ ಫಿನಾಲೆಯಲ್ಲಿ ಗೊತ್ತಾಗಲಿದೆ. ಸದ್ಯದ ಟ್ರೆಂಡ್ ಪ್ರಕಾರ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ನಡುವೆ ತೀವ್ರ ಪೈಪೋಟಿಯಿದೆ.

BBK 12 Pre-Finale Live updates about Gilli Ashwini Gowda Rakshitha Shetty Kavya Dhanush Raghu Details

ಇನ್ನು ಇಂದಿನ ಪ್ರಿ-ಫಿನಾಲೆಯಲ್ಲಿ ಈ ಆರು ಮಂದಿಯಲ್ಲಿ ಯಾರಾದೂ ಎಲಿಮಿನೇಟ್ ಆಗುತ್ತಾರಾ? ಇಲ್ಲ ಇಂದು ಕೇವಲ ಮಾತುಕತೆ ಅಷ್ಟೇ ನಡೆಯುತ್ತಾ? ಅನ್ನೋದು ಗೊತ್ತಾಗಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕಿಚ್ಚ ಸುದೀಪ್ ಇವತ್ತು ಪ್ರಿ-ಫಿನಾನೆಯನ್ನು ನಡೆಸಿಕೊಡುತ್ತಾರಾ? ಅನ್ನೋದು ಅಷ್ಟೇ ಕುತೂಹಲವನ್ನು ಕೆರಳಿಸಿದೆ. ಈ ಪ್ರಿ-ಫಿನಾಲೆಯ ಕ್ಷಣ ಕ್ಷಣದ ಮಾಹಿತಿ ಫಿಲ್ಮಿಬೀಟ್‌ನ ಈ ಲೈವ್ ಬ್ಲಾಗ್‌ನಲ್ಲಿ ಸಿಗಲಿದೆ.

  • Jan 18, 2026 12:56 AM
    ಗ್ರ್ಯಾಂಡ್ ಫಿನಾಲೆ ಮತ್ತು ಕಿಚ್ಚನ ಅದ್ಧೂರಿ ಎಂಟ್ರಿ: ಮಹಾ ಸಂಘರ್ಷ

    ಬಿಗ್ ಬಾಸ್ ಕನ್ನಡ ಸೀಸನ್ 12ರ ಅಸಲಿ ಆಟದ ಕ್ಲೈಮ್ಯಾಕ್ಸ್ ಕ್ಷಣಗಣನೆ ಶುರುವಾಗಿದೆ. ಇಂದು ನಡೆದ ಪ್ರಿ-ಫಿನಾಲೆ ಎಪಿಸೋಡ್‌ನಲ್ಲಿ ಸ್ಪರ್ಧಿಗಳ ಪಯಣದ VT ನೋಡಿ ಎಲ್ಲರೂ ಭಾವುಕರಾಗಿದ್ದರೆ, ನಾಳೆ (ಜನವರಿ 18, ಭಾನುವಾರ) ಸಂಜೆ 6 ಗಂಟೆಯಿಂದ ಕಿಚ್ಚ ಸುದೀಪ್ ಅವರ ಅದ್ಧೂರಿ ನಿರೂಪಣೆಯಲ್ಲಿ ಗ್ರ್ಯಾಂಡ್ ಫಿನಾಲೆ ಪ್ರಸಾರವಾಗಲಿದೆ. ಕಿಚ್ಚ ಸುದೀಪ್ ಅವರು ಈ ಬಾರಿ ವೋಟಿಂಗ್ ದಾಖಲೆಗಳ ಬಗ್ಗೆ ಮಾತನಾಡಿ, "ಒಟ್ಟು 37 ಕೋಟಿ ಮತಗಳು ಚಲಾವಣೆಯಾಗಿವೆ" ಎಂಬ ಅಚ್ಚರಿಯ ವಿಷಯ ಹಂಚಿಕೊಂಡಿದ್ದಾರೆ. ನಾಳೆಯ ಫಿನಾಲೆಯಲ್ಲಿ ಅಂತಿಮವಾಗಿ ಆ 37 ಕೋಟಿ ಮತಗಳ ಒಡೆಯ ಯಾರು ಮತ್ತು ಆ ಭವ್ಯ ಟ್ರೋಫಿ ಯಾರ ಪಾಲಾಗಲಿದೆ ಎಂಬುದು ಅಧಿಕೃತವಾಗಿ ನಿರ್ಧಾರವಾಗಲಿದೆ.

  • Jan 18, 2026 12:55 AM
    ಟ್ರೋಫಿ ಅನಾವರಣ...

    ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ವೇದಿಕೆಯ ಮೇಲೆ ಕಣ್ಮನ ಸೆಳೆಯುವ ಭವ್ಯವಾದ ಟ್ರೋಫಿಯನ್ನು ಅನಾವರಣಗೊಳಿಸಲಾಗಿದೆ. ಈ ಸೀಸನ್ ಮತದಾನದ ವಿಷಯದಲ್ಲಿ ಹೊಸ ಇತಿಹಾಸವನ್ನೇ ಬರೆದಿದ್ದು, ಕಳೆದ ಬಾರಿ ಹನುಮಂತ ಅವರು ಪಡೆದಿದ್ದ 5.23 ಕೋಟಿ ಮತಗಳ ದಾಖಲೆಯನ್ನು ಮೀರಿಸಿ, ಈ ಬಾರಿ ವಿನ್ನರ್ ಅಂಕಣದಲ್ಲಿರುವ ಸ್ಪರ್ಧಿಗೆ ಬರೋಬ್ಬರಿ 37 ಕೋಟಿಗೂ ಅಧಿಕ ಮತಗಳು ಬಂದಿವೆ ಎಂದು ಕಿಚ್ಚ ಸುದೀಪ್ ಘೋಷಿಸಿದರು. ಮನೆಯೊಳಗೆ ಬರುವಾಗ 'ಒಂಟಿ' ಮತ್ತು 'ಜಂಟಿ'ಯಾಗಿ ಬಂದಿದ್ದ ಸ್ಪರ್ಧಿಗಳ ಇಡೀ ಪಯಣದ VT ಪ್ರಸಾರವಾದಾಗ ಎಲ್ಲರೂ ಭಾವುಕರಾದರು. ಪ್ರಸ್ತುತ ಟ್ರೋಫಿಗಾಗಿ ಗಿಲ್ಲಿ ನಟ, ಅಶ್ವಿನಿ ಗೌಡ, ಧನುಷ್ ಗೌಡ, ರಕ್ಷಿತಾ ಶೆಟ್ಟಿ, ಮ್ಯೂಟಂಟ್ ರಘು ಮತ್ತು ಕಾವ್ಯ ಶೈವ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, 37 ಕೋಟಿ ಮತಗಳ ಬೆಂಬಲ ಯಾರ ಪಾಲಾಗಿದೆ ಎಂಬ ಕುತೂಹಲ ಮನೆಮಾಡಿದೆ.

  • Jan 18, 2026 12:55 AM
    ದಾಖಲೆ ಬರೆದ ಸೀಸನ್ 12: 37 ಕೋಟಿ ಮತಗಳ ಮಹಾಪೂರ

    ಕಳೆದ ಸೀಸನ್ (ಸೀಸನ್ 11) ನಲ್ಲಿ ವಿನ್ನರ್ ಹನುಮಂತ ಅವರು 5.23 ಕೋಟಿ ಮತಗಳನ್ನು ಪಡೆಯುವ ಮೂಲಕ ಅಂದಿನ ಕಾಲಕ್ಕೆ ಅತಿ ದೊಡ್ಡ ದಾಖಲೆ ಬರೆದಿದ್ದರು. ಆದರೆ, ಈ ಬಾರಿ ಸೀಸನ್ 12 ರಲ್ಲಿ ಜನಪ್ರಿಯತೆ ಯಾವ ಮಟ್ಟಕ್ಕೆ ಏರಿದೆಯೆಂದರೆ, ಸ್ವತಃ ಕಿಚ್ಚ ಸುದೀಪ್ ಅವರೇ ಫಿನಾಲೆ ವೇದಿಕೆಯ ಮೇಲೆ ಆಘಾತಕಾರಿ ಮತ್ತು ಖುಷಿಯ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಈ ಸೀಸನ್‌ನಲ್ಲಿ ಕೇವಲ ಮೊದಲ ಸ್ಥಾನದಲ್ಲಿರುವ ಸ್ಪರ್ಧಿಗೆ ಬರೋಬ್ಬರಿ 37 ಕೋಟಿಗೂ ಅಧಿಕ ಮತಗಳು ಬಂದಿವೆ. ಕಳೆದ ಬಾರಿಗಿಂತ ಈ ಬಾರಿ ಮತಗಳ ಸಂಖ್ಯೆ ಸುಮಾರು 7 ಪಟ್ಟು ಹೆಚ್ಚಾಗಿರುವುದು ಬಿಗ್ ಬಾಸ್ ಕನ್ನಡದ ಕ್ರೇಜ್ ಎಷ್ಟು ಬೆಳೆದಿದೆ ಎಂಬುದಕ್ಕೆ ಸಾಕ್ಷಿ. ಈ ಬೃಹತ್ ಮೊತ್ತದ ಮತಗಳನ್ನು ಕಂಡು ಮನೆಯೊಳಗಿದ್ದ ಸ್ಪರ್ಧಿಗಳೂ ಕೂಡ ದಂಗಾದರು. 37 ಕೋಟಿ ಮತಗಳನ್ನು ಪಡೆದಿರುವ ಆ 'ಮಹಾ ವಿನ್ನರ್' ಯಾರಿರಬಹುದು ಎಂಬ ಕುತೂಹಲ ಈಗ ಇಡೀ ಕರ್ನಾಟಕವನ್ನು ಆವರಿಸಿದೆ.

  • Jan 17, 2026 10:55 PM
    ಸೋಶಿಯಲ್ ಮೀಡಿಯಾದಲ್ಲಿ ಫಿನಾಲೆ ಫಿವರ್: ಯಾರಿಗೆ ಸಿಗಲಿದೆ ಬಿಗ್ ಬಾಸ್ ಟ್ರೋಫಿ?

    ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಹತ್ತಿರವಾಗುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಅಬ್ಬರ ಜೋರಾಗಿದೆ. ಪ್ರತಿಯೊಬ್ಬ ಸ್ಪರ್ಧಿಯ ಬೆಂಬಲಿಗರು ತಮ್ಮ ನೆಚ್ಚಿನ ಆಟಗಾರನೇ ಫಿನಾಲೆ ವೇದಿಕೆಗೆ ಬರಬೇಕು ಮತ್ತು ಟ್ರೋಫಿ ಗೆಲ್ಲಬೇಕು ಎಂದು ಆಶಿಸಿ ವಿಡಿಯೋಗಳ ಮೂಲಕ ಅಭಿಯಾನ ನಡೆಸುತ್ತಿದ್ದಾರೆ. ಮಾಜಿ ಸ್ಪರ್ಧಿಗಳು ಕೂಡ ತಾವು ಯಾರನ್ನು ಫಿನಾಲೆಯಲ್ಲಿ ನೋಡಲು ಬಯಸುತ್ತೇವೆ ಎಂಬುದನ್ನು ವಿಡಿಯೋಗಳ ಮೂಲಕ ಹಂಚಿಕೊಳ್ಳುತ್ತಿದ್ದು, ವೀಕ್ಷಕರಲ್ಲಿ ಕುತೂಹಲ ದುಪ್ಪಟ್ಟಾಗಿದೆ. ಹ್ಯಾಶ್‌ಟ್ಯಾಗ್‌ಗಳ ಮೂಲಕ ಟ್ರೆಂಡ್ ಸೃಷ್ಟಿಸುತ್ತಿರುವ ಅಭಿಮಾನಿಗಳು, ತಮ್ಮ ನೆಚ್ಚಿನ ಆಟಗಾರನ ನೂರು ದಿನಗಳ ಪಯಣ ಮತ್ತು ಅತ್ಯುತ್ತಮ ಪ್ರದರ್ಶನವನ್ನು ವಿಡಿಯೋಗಳಲ್ಲಿ ಹೈಲೈಟ್ ಮಾಡಿ ಬೆಂಬಲ ಸೂಚಿಸುತ್ತಿದ್ದಾರೆ.

  • Jan 17, 2026 10:50 PM
    ಬಿಗ್ ಬಾಸ್ ಸೀಸನ್ 12: ಒಂಟಿ-ಜಂಟಿ ಪಯಣದ ಭಾವಪೂರ್ಣ ಸಮಾರೋಪ.

    ಬಿಗ್ ಬಾಸ್ ಕನ್ನಡ ಸೀಸನ್ 12ರ ಆರಂಭವೇ ಬಹಳ ವಿಭಿನ್ನವಾಗಿತ್ತು, ಏಕೆಂದರೆ ಸ್ಪರ್ಧಿಗಳು ಮನೆಗೆ ಬರುವಾಗಲೇ 'ಒಂಟಿ' ಮತ್ತು 'ಜಂಟಿ' ಎಂಬ ಕಾನ್ಸೆಪ್ಟ್ ಅಡಿಯಲ್ಲಿ ಪ್ರವೇಶ ಮಾಡಿದ್ದರು. ಕೆಲವರು ಒಬ್ಬೊಬ್ಬರೇ ಬಂದರೆ, ಇನ್ನು ಕೆಲವರು ಜೋಡಿಗಳಾಗಿ ಕಾಲಿಟ್ಟು ಆಟಕ್ಕೆ ಹೊಸ ತಿರುವು ನೀಡಿದ್ದರು. ಫಿನಾಲೆ ವೇದಿಕೆಯ ಮೇಲೆ ಇಡೀ ಪಯಣದ ಸುಂದರ ಕ್ಷಣಗಳನ್ನು VT ಮೂಲಕ ಕಂಡಾಗ ಇಡೀ ವೇದಿಕೆ ಭಾವುಕವಾಯಿತು. ಅಪರಿಚಿತರಾಗಿ ಒಂಟಿಯಾಗಿ ಬಂದವರು, ನೂರು ದಿನಗಳ ಕಾಲ ನಗು-ಅಳು ಮತ್ತು ಜಗಳ-ಸ್ನೇಹದ ನಡುವೆ ಅದ್ಭುತ ಬಾಂಧವ್ಯ ಬೆಳೆಸಿಕೊಂಡು ಜಂಟಿಯಾಗಿ ಹೊರಬರುತ್ತಿರುವ ಚಿತ್ರಣ ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸಿತು. ರಣರೋಚಕ ಟಾಸ್ಕ್‌ಗಳು ಮತ್ತು ಕಿಚ್ಚನ ಮಾರ್ಗದರ್ಶನದ ಈ ಜರ್ನಿ, ಕೇವಲ ಒಂದು ಆಟವಲ್ಲ ಬದಲಾಗಿ ಒಂದು ಜೀವನದ ಪಾಠ ಎಂದು ಸ್ಪರ್ಧಿಗಳು ಭಾವಪರವಶರಾದರು.

  • Jan 17, 2026 10:35 PM
    ವೀಕ್ಷಕರಿಗೆ ಧ್ರುವಂತ್ ಧನ್ಯವಾದ:

    ವೇದಿಕೆಯ ಮೇಲೆ ನಿಂತ ಧ್ರುವಂತ್, ತಮ್ಮನ್ನು ಇಷ್ಟು ದಿನ ಬೆಂಬಲಿಸಿದ ವೀಕ್ಷಕರಿಗೆ ಮತ್ತು ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು. "ನಾನು ಇಂದು ಇಲ್ಲಿ ನಿಂತಿದ್ದೇನೆ ಎಂದರೆ ಅದಕ್ಕೆ ಕಾರಣ ಜನರ ಪ್ರೀತಿ ಮತ್ತು ಅವರು ಹಾಕಿದ ವೋಟುಗಳು. ಬಿಗ್ ಬಾಸ್ ಮನೆಯೊಳಗೆ ನಾನು ಏನೇ ಮಾಡಿದ್ದರೂ ಅದನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ ಎಂಬ ನಂಬಿಕೆ ನನಗಿದೆ" ಎಂದು ಹೆಮ್ಮೆಯಿಂದ ಹೇಳಿದರು. ತಮ್ಮ ಆಟದ ವೈಖರಿಯನ್ನು ಗೌರವಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದ ಧ್ರುವಂತ್, ಮನೆಯಿಂದ ಹೊರಬಂದ ಮೇಲೆ ಸಿಗುತ್ತಿರುವ ಈ ಪ್ರೀತಿಯನ್ನು ಕಂಡು ತುಂಬಾ ಖುಷಿಯಾಗುತ್ತಿದೆ ಎಂದು ಅಭಿಮಾನಿಗಳ ಮುಂದೆ ಮನಬಿಚ್ಚಿ ಮಾತನಾಡಿದರು.

  • Jan 17, 2026 10:29 PM
    ಧ್ರುವಂತ್ ಜರ್ನಿ ವಿಡಿಯೋ: ತಮ್ಮದೇ ಪಯಣ ನೋಡಿ ಭಾವುಕರಾದ ಸ್ಫರ್ಧಿ

    ವೇದಿಕೆಯ ಮೇಲೆ ಧ್ರುವಂತ್ ಅವರ ಬಿಗ್ ಬಾಸ್ ಪಯಣದ ಸುಂದರ ಕ್ಷಣಗಳ VT ಪ್ಲೇ ಮಾಡಿದಾಗ, ಅದನ್ನು ನೋಡಿ ಧ್ರುವಂತ್ ಅತೀವ ಸಂತೋಷ ಪಟ್ಟರು. ಮನೆಯೊಳಗೆ ಕಳೆದ ನೂರು ದಿನಗಳ ಆಟ, ನಗು, ಗೆಳೆತನ ಮತ್ತು ಅವರು ಎದುರಿಸಿದ ಸವಾಲುಗಳನ್ನು ಪರದೆಯ ಮೇಲೆ ಕಂಡಾಗ ಅವರ ಮುಖದಲ್ಲಿ ದೊಡ್ಡ ನಗು ಮೂಡಿತು. ಈ ವಿಡಿಯೋ ನೋಡಿ ಬಹಳ ಖುಷಿಪಟ್ಟ ಧ್ರುವಂತ್, "ನನ್ನ ಈ ಜರ್ನಿ ಇಷ್ಟು ಅದ್ಭುತವಾಗಿತ್ತು ಎಂದು ಈಗ ಅರಿವಾಗುತ್ತಿದೆ" ಎಂದು ಕಿಚ್ಚನ ಮುಂದೆ ಸಂಭ್ರಮ ಹಂಚಿಕೊಂಡರು. ಅವರ ಈ ಸಂಭ್ರಮವನ್ನು ಕಂಡು ಅಭಿಮಾನಿಗಳು ಕೂಡ ಸಖತ್ ಖುಷಿಯಾದರು.

  • Jan 17, 2026 10:24 PM
    ವೇದಿಕೆಗೆ ಧ್ರುವಂತ್ ಸ್ಟೈಲಿಶ್ ಎಂಟ್ರಿ

    ಬಿಗ್ ಬಾಸ್ ಮನೆಯಿಂದ ಮೊನ್ನೆ ತಾನೇ ಹೊರಬಂದ ಧ್ರುವಂತ್, ಈಗ ಫಿನಾಲೆ ಸಂಭ್ರಮದ ಭಾಗವಾಗಿ ವೇದಿಕೆಯ ಮೇಲೆ ಅದ್ಧೂರಿ ಎಂಟ್ರಿ ಕೊಟ್ಟರು. ಫಿನಾಲೆ ಹಂತದ ವರೆಗೂ ಬಂದು ಸ್ವಲ್ಪದರಲ್ಲೇ ಅವಕಾಶ ತಪ್ಪಿಸಿಕೊಂಡರೂ, ಧ್ರುವಂತ್ ಮುಖದಲ್ಲಿ ಯಾವುದೇ ಬೇಸರವಿಲ್ಲದೆ ನಗುನಗುತ್ತಲೇ ಸ್ಟೇಜ್ ಮೇಲೆ ಬಂದರು. ಕಿಚ್ಚ ಸುದೀಪ್ ಅವರು ಧ್ರುವಂತ್ ಅವರ ಜರ್ನಿಯನ್ನು ಮೆಚ್ಚಿಕೊಂಡರು ಮತ್ತು ಮನೆಯಿಂದ ಹೊರಬಂದ ನಂತರದ ಅನುಭವಗಳ ಬಗ್ಗೆ ಮಾತನಾಡಿದರು. ಧ್ರುವಂತ್ ಅವರ ಸ್ಟೈಲಿಶ್ ಎಂಟ್ರಿ ಮತ್ತು ಅವರ ಎನರ್ಜಿ ಕಂಡು ವೇದಿಕೆಯಲ್ಲಿದ್ದ ಅಭಿಮಾನಿಗಳು ಸಖತ್ ಚಪ್ಪಾಳೆ ತಟ್ಟಿದರು.

  • Jan 17, 2026 10:18 PM
    ಧ್ರುವಂತ್​​ಗೆ ಕಿಚ್ಚನ ಚಪ್ಪಾಳೆ-ಪ್ರತಿಕ್ರಿಯೆ ನೀಡಿದ ಸುದೀಪ್

    ಗಿಲ್ಲಿಯ ಬದಲು ಧ್ರುವಂತ್‌ಗೆ ಕಿಚ್ಚನ ಚಪ್ಪಾಳೆ ಸಿಕ್ಕಾಗ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಗಿಲ್ಲಿಗೆ ಸಿಗಬೇಕಿತ್ತು ಎಂದು ಕೆಂಡ ಕಾರಿದ್ದರು. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ವೇದಿಕೆಯ ಮೇಲೆ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ಕಿಚ್ಚನ ಚಪ್ಪಾಳೆ ನನ್ನ ಅನಿಸಿಕೆ. ಯಾರು ಅರ್ಹರೋ ಅವರನ್ನು ಹುರಿದುಂಬಿಸಬೇಕು ಎಂದು ಶಾಲೆಯಲ್ಲಿ ಟೀಚರ್ ಹೇಳಿಕೊಟ್ಟಿದ್ದರು. ಬಿಗ್ ಬಾಸ್ ಒಬ್ಬ ವ್ಯಕ್ತಿ ಇಂದ ಅಲ್ಲ, ಒಬ್ಬ ಸುದೀಪ್ ಇಂದ ಅಲ್ಲ. ಬಿಗ್ ಬಾಸ್ ಎಲ್ಲರ ಕೊಡುಗೆ. ಪ್ರತಿಯೊಬ್ಬರೂ ಇದ್ದರೇನೆ ಬಿಗ್ ಬಾಸ್. ಅವರು ಗೆಲ್ಲದೆ ಇರಬಹುದು. ಆದರೆ, ಬಿಗ್ ಬಾಸ್ ಮನೆಗೆ ಅವರ ಕೊಡುಗೆ ಇದೆ ಎಂಬುದನ್ನು ಒಪ್ಪಲೇಬೇಕು ಎಂದು ಹೇಳಿದ್ದಾರೆ.

  • Jan 17, 2026 10:14 PM
    Ranking ಸವಾಲು: ಯಾರು ಮೇಲೆ? ಯಾರು ಹೊರಗೆ?

    ಕಿಚ್ಚ ಸುದೀಪ್ ಹೂಡಿದ ಈ ಗೇಮ್‌ನಲ್ಲಿ ಪ್ರತಿಯೊಬ್ಬ ಸ್ಪರ್ಧಿಯೂ ಯಾರು ಮೇಲಿದ್ದಾರೆ, ಯಾರು ಕೆಳಗಿದ್ದಾರೆ ಮತ್ತು ಯಾರು ಮನೆಯಿಂದ ಹೊರಹೋಗಬಹುದು ಎಂಬ ಬಗ್ಗೆ ನೇರವಾದ ಅಭಿಪ್ರಾಯ ನೀಡಿದರು. ಟಾಸ್ಕ್‌ನಲ್ಲಿನ ಪ್ರದರ್ಶನ ಮತ್ತು ನಡವಳಿಕೆಯ ಆಧಾರದ ಮೇಲೆ ಒಬ್ಬೊಬ್ಬರಾಗಿ ತಮ್ಮ ಒಪೀನಿಯನ್ ಹಂಚಿಕೊಳ್ಳುವ ಮೂಲಕ ಈ ಹಂತವನ್ನು ಪೂರ್ಣಗೊಳಿಸಿದರು. ಯಾವುದೇ ಮುಲಾಜಿಲ್ಲದೆ ತಮ್ಮ ದೃಷ್ಟಿಯಲ್ಲಿ ಯಾರು ಅನರ್ಹರು ಎಂಬ ಸತ್ಯವನ್ನು ಹೊರಹಾಕಿದ್ದು ಮನೆಯಲ್ಲಿ ಸಂಚಲನ ಮೂಡಿಸಿತು. ಅಂತಿಮವಾಗಿ ಸುದೀಪ್ ಅವರು ಎಲ್ಲರ ನಿರ್ಧಾರಗಳನ್ನು ಆಲಿಸಿ, ಫಿನಾಲೆ ಕದನದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದರು.

  • Jan 17, 2026 10:01 PM
    ಯಾರು ಮೇಲೆ? ಯಾರು ಕೆಳಗೆ?: ಕಿಚ್ಚನ ಹೊಸ ಗೇಮ್‌ನಲ್ಲಿ ಸ್ಪರ್ಧಿಗಳ ಫಜೀತಿ...

    ಫಿನಾಲೆ ವೇದಿಕೆಯ ಮೇಲೆ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ಒಂದು ಕುತೂಹಲಕಾರಿ ಗೇಮ್ ನೀಡಿದರು. ಈ ಆಟದ ಪ್ರಕಾರ, ಪ್ರತಿಯೊಬ್ಬ ಸ್ಪರ್ಧಿಯೂ ತಮ್ಮ ದೃಷ್ಟಿಯಲ್ಲಿ ಯಾರು ಮೇಲಿದ್ದಾರೆ ಮತ್ತು ಯಾರು ಅವರಿಗಿಂತ ಕೆಳಗಿದ್ದಾರೆ ಎಂಬುದನ್ನು ನೇರವಾಗಿ ಹೇಳಬೇಕಿತ್ತು. ಈ ಪ್ರಶ್ನೆ ಕೇಳುತ್ತಿದ್ದಂತೆ ಮನೆಯಲ್ಲಿ ಅಲ್ಪಕ್ಷಣ ನಿಶಬ್ದ ಆವರಿಸಿತು. ಸ್ಪರ್ಧಿಗಳು ಒಬ್ಬೊಬ್ಬರಾಗಿ ಬಂದು ತಮ್ಮ ಕಾರಣಗಳನ್ನು ನೀಡುತ್ತಾ, ಆಟದ ಪ್ರದರ್ಶನ ಮತ್ತು ವ್ಯಕ್ತಿತ್ವದ ಆಧಾರದ ಮೇಲೆ ranking ನೀಡಲು ಶುರು ಮಾಡಿದರು. ಇದು ಕೇವಲ ಆಟವಾಗಿದ್ದರೂ, ಫಿನಾಲೆ ಹಂತದಲ್ಲಿ ಇಂತಹ ನೇರವಾದ ಪ್ರಶ್ನೆಗಳು ಸ್ಪರ್ಧಿಗಳ ನಡುವೆ ಸಣ್ಣ ಮಟ್ಟದ ಸಂಚಲನ ಮೂಡಿಸಿದವು. ಕಿಚ್ಚ ಸುದೀಪ್ ಅವರು ಪ್ರತಿಯೊಬ್ಬರ ಉತ್ತರವನ್ನು ತಮ್ಮದೇ ಶೈಲಿಯಲ್ಲಿ ವಿಶ್ಲೇಷಿಸುತ್ತಾ, ಈ ಗೇಮ್ ಅನ್ನು ಮತ್ತಷ್ಟು ರೋಚಕಗೊಳಿಸಿದರು

  • Jan 17, 2026 9:48 PM
    ಬಿಗ್ ಬಾಸ್ ಮನೆಗೆ ಜೀವ ತುಂಬಿದ ಸ್ಪರ್ಧಿಗಳು: ಕಿಚ್ಚನ ಮನದಾಳದ ಮಾತು.

    ಬಿಗ್ ಬಾಸ್ ಮನೆಯ ನೆಚ್ಚಿನ ಜಾಗಗಳ ಬಗ್ಗೆ ಮಾತನಾಡುತ್ತಾ, ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ಅತ್ಯಂತ ಅರ್ಥಪೂರ್ಣವಾದ ಮಾತೊಂದನ್ನು ಹೇಳಿದರು. "ಈ ಬರಿ ಗೋಡೆಗಳ ಮನೆಗೆ ನಿಮ್ಮ ಇರುವಿಕೆಯಿಂದ ನೀವು ಒಂದು ಅದ್ಭುತ ಜೀವವನ್ನು ಕೊಟ್ಟಿದ್ದೀರಿ" ಎಂದು ಕಿಚ್ಚ ಪ್ರಶಂಸಿಸಿದಾಗ ಸ್ಪರ್ಧಿಗಳು ಭಾವುಕರಾದರು. ಪ್ರತಿಯೊಬ್ಬರೂ ತಮ್ಮ ನಗು, ಅಳು, ಜಗಳ ಮತ್ತು ಸ್ನೇಹದ ಮೂಲಕ ಆ ಮನೆಯ ಪ್ರತಿಯೊಂದು ಮೂಲೆಯಲ್ಲೂ ನೆನಪುಗಳನ್ನು ಬಿತ್ತಿ ಬಂದಿರುವುದನ್ನು ಸುದೀಪ್ ಅವರು ಬಹಳ ಸುಂದರವಾಗಿ ವಿವರಿಸಿದರು. ಕಿಚ್ಚನ ಈ ಮಾತುಗಳು ಸ್ಪರ್ಧಿಗಳಿಗೆ ತಾವು ಕಳೆದ ನೂರು ದಿನಗಳ ಪಯಣ ಸಾರ್ಥಕವಾಯಿತು ಎಂಬ ಭಾವನೆ ಮೂಡಿಸಿತು.

  • Jan 17, 2026 9:43 PM
    ಮನೆಯ ನೆಚ್ಚಿನ ಜಾಗ ಮತ್ತು ಭಾವುಕ ಕ್ಷಣಗಳು: ಕಿಚ್ಚನ ಜೊತೆ ಸ್ಪರ್ಧಿಗಳ ಮಾತುಕತೆ..

    ಬಿಗ್ ಬಾಸ್ ಮನೆಯ ನೆಚ್ಚಿನ ಜಾಗಗಳ ಬಗ್ಗೆ ಕಿಚ್ಚ ಸುದೀಪ್ ಅವರು ಕೇಳಿದ ಪ್ರಶ್ನೆಗೆ ಸ್ಪರ್ಧಿಗಳು ಬಹಳ ಭಾವುಕರಾಗಿ ಉತ್ತರಿಸಿದರು. ಒಬ್ಬೊಬ್ಬರೂ ತಮ್ಮ ಎಂದಿನ ಶೈಲಿಯಲ್ಲಿ ಅಡುಗೆ ಮನೆ, ಗಾರ್ಡನ್ ಏರಿಯಾ ಮತ್ತು ನಲ್ಲಿಯೊಂದಿಗಿನ ನಂಟನ್ನು ನೆನಪಿಸಿಕೊಂಡರು. ಪ್ರತಿಯೊಬ್ಬ ಸ್ಪರ್ಧಿಯೂ ತಾವು ಕಳೆದ ನೂರು ದಿನಗಳ ಸುಂದರ ಕ್ಷಣಗಳನ್ನು ಮತ್ತು ಆ ಮನೆಯ ಪ್ರತಿಯೊಂದು ಮೂಲೆ ತಮಗೆ ಕಲಿಸಿದ ಪಾಠಗಳನ್ನು ಹಂಚಿಕೊಂಡರು. ಕಿಚ್ಚ ಸುದೀಪ್ ಅವರು ಈ ಭಾವನಾತ್ಮಕ ಕ್ಷಣಗಳನ್ನು ಬಹಳ ಆಪ್ತವಾಗಿ ನಿಭಾಯಿಸಿ, ಫಿನಾಲೆಗೂ ಮುನ್ನ ಮನೆಯ ನೆನಪುಗಳನ್ನು ಮತ್ತೊಮ್ಮೆ ಹಸಿರಾಗಿಸಿದರು. ಇದು ಕೇವಲ ಆಟವಲ್ಲ, ಜೀವನದ ಒಂದು ಮರೆಯಲಾಗದ ಪಯಣ ಎಂದು ಎಲ್ಲರೂ ಒಪ್ಪಿಕೊಂಡರು.

  • Jan 17, 2026 9:34 PM
    ನಲ್ಲಿಯ ವಿಷಯ ಎತ್ತಿ ಗಿಲ್ಲಿ ಕಾಲೆಳೆದ ಕಿಚ್ಚ: ಫಿನಾಲೆ ವೇದಿಕೆಯಲ್ಲಿ ನಗೆಯ ಚಟಾಕಿ...

    ಫಿನಾಲೆ ವಾರದ ಸಂಭ್ರಮದಲ್ಲಿ ಕಿಚ್ಚ ಸುದೀಪ್ ಅವರು ಗಿಲ್ಲಿಯ ಕಾಲೆಳೆಯುವ ಒಂದು ಸುವರ್ಣ ಅವಕಾಶವನ್ನೂ ಬಿಡುತ್ತಿಲ್ಲ. ವಿಶೇಷವಾಗಿ ಮನೆಯಲ್ಲಿನ 'ನಲ್ಲಿ' ವಿಷಯ ಮತ್ತು ಗಿಲ್ಲಿ ನೀಡಿದ ವಿಚಿತ್ರ 'ಲಾಸ್ಟ್ ವಿಶ್' ಬಗ್ಗೆ ಸುದೀಪ್ ಅವರು ತಮ್ಮದೇ ಶೈಲಿಯಲ್ಲಿ ಕಾಲೆಳೆದಿದ್ದಾರೆ. "ಮನೆಯಿಂದ ಹೋಗುವ ಮುನ್ನ ನಲ್ಲಿಯ ಜೊತೆ ನಿಮಗೇನು ಅಂತಹ ನಂಟು?" ಎಂದು ಕಿಚ್ಚ ಕೇಳಿದಾಗ ಇಡೀ ವೇದಿಕೆ ನಗೆಗಡಲಲ್ಲಿ ತೇಲಿತು. ಗಿಲ್ಲಿಯ ಕಾಮಿಡಿ ಉತ್ತರಗಳು ಮತ್ತು ಅದಕ್ಕೆ ಕಿಚ್ಚ ನೀಡಿದ ಖಡಕ್ ಕೌಂಟರ್‌ಗಳು ಪ್ರೀ-ಫಿನಾಲೆ ಎಪಿಸೋಡ್‌ನ ಹೈಲೈಟ್ ಆಗಿದ್ದು, ವೀಕ್ಷಕರು ಈ ಜುಗಲ್‌ಬಂದಿಯನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

  • Jan 17, 2026 9:30 PM
    ಅಭಿಮಾನಿಗಳ ಎಂಟ್ರಿ: ಕಿಚ್ಚನ ಪ್ರಶ್ನೆಗೆ ಸ್ಪರ್ಧಿಗಳು ಫಿದಾ...

    ಬಿಗ್ ಬಾಸ್ ಮನೆಗೆ ಅಭಿಮಾನಿಗಳು ಸರ್ಪ್ರೈಸ್ ನೀಡಿದ ಕ್ಷಣ ಹೇಗಿತ್ತು ಎಂದು ಕಿಚ್ಚ ಸುದೀಪ್ ಅವರು ಕೇಳಿದಾಗ ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಯಿತು. "ಸಾಮಾನ್ಯವಾಗಿ ಟಿವಿಯಲ್ಲಿ ನೋಡುವ ಅಭಿಮಾನಿಗಳು ನೇರವಾಗಿ ಮನೆಗೆ ಬಂದಾಗ ನಿಮಗಾದ ಅನುಭವವೇನು?" ಎಂದು ಕಿಚ್ಚ ಪ್ರೀತಿಯಿಂದ ವಿಚಾರಿಸಿದರು. ಇದಕ್ಕೆ ಉತ್ತರಿಸಿದ ಸ್ಪರ್ಧಿಗಳು, ಅಭಿಮಾನಿಗಳ ಪ್ರೀತಿ ಕಂಡು ಕಣ್ಣೀರು ಹಾಕಿದ್ದನ್ನು ಮತ್ತು ಅವರ ಬೆಂಬಲದಿಂದ ತಮಗೆ ಸಿಕ್ಕ ಆನೆಬಲವನ್ನು ಹಂಚಿಕೊಂಡರು. ವಿಶೇಷವಾಗಿ ಗಿಲ್ಲಿ ಅವರ ಅಭಿಮಾನಿಗಳ ಹುಚ್ಚು ಅಭಿಮಾನದ ಬಗ್ಗೆ ಸುದೀಪ್ ಕಾಲೆಳೆದಾಗ ಸಖತ್ ನಗುವಿನ ಅಲೆ ಎದ್ದಿತು.

  • Jan 17, 2026 9:26 PM
    ಗಿಲ್ಲಿ ಕೈರುಚಿಗೆ ಫಿನಾಲೆ ಫಿದಾ

    ಅಡುಗೆಯಿಂದಲೇ ಶುರುವಾಯ್ತು ಅಸಲಿ ಮಜಾ... ಬಿಗ್ ಬಾಸ್ ಫಿನಾಲೆ ವಾರದ ಸಂಭ್ರಮ ಗಿಲ್ಲಿ ಅವರು ಮಾಡಿದ ಸಖತ್ ಅಡುಗೆಯ ಮೂಲಕ ಭರ್ಜರಿಯಾಗಿ ಆರಂಭಗೊಂಡಿದೆ. ಮನೆಯಲ್ಲಿ ಎಲ್ಲರಿಗೂ ರುಚಿಕರವಾದ ಅಡುಗೆ ಬಡಿಸುವ ಮೂಲಕ ಗಿಲ್ಲಿ ಮನಗೆದ್ದಿದ್ದು, ಆ ಅಡುಗೆಯ ಘಮ ಮನೆಯ ತುಂಬೆಲ್ಲಾ ಹರಡಿತ್ತು. ವಿಶೇಷವೆಂದರೆ, ಗಿಲ್ಲಿ ಅಡುಗೆ ಮಾಡುವಾಗ ನೀಡಿದ ಕಾಮಿಡಿ ರನ್ನಿಂಗ್ ಕಾಮೆಂಟರಿ ಮತ್ತು ಅವರ ಸ್ಟೈಲ್ ಕಂಡು ಸ್ಪರ್ಧಿಗಳು ನಕ್ಕು ಸುಸ್ತಾದರು. ಟಾಸ್ಕ್‌ನ ಟೆನ್ಷನ್ ನಡುವೆಯೂ ಗಿಲ್ಲಿಯ ಈ 'ಅಡುಗೆ ಹವಾ' ಮನೆಯಲ್ಲಿ ನಗು ಉಕ್ಕಿಸಿದ್ದು, ವೀಕ್ಷಕರಿಗೂ ಸಖತ್ ಎಂಟರ್ಟೈನ್ಮೆಂಟ್ ನೀಡಿದೆ.

  • Jan 17, 2026 9:20 PM
    ಗಿಲ್ಲಿ ಕಾಮಿಡಿಗೆ ಸುದೀಪ್ ಫಿದಾ: ಮನೆಯಲ್ಲಿ ನಗೆಯ ಹಬ್ಬ...

    ವೇದಿಕೆ ಮೇಲೆ ಗಿಲ್ಲಿ ತಮ್ಮದೇ ಸ್ಟೈಲಿನಲ್ಲಿ ಮನೆಯನ್ನು "ನನ್ನ ಕುಟುಂಬ" ಎಂದು ಕಾಮಿಡಿಯಾಗಿ ವರ್ಣಿಸಿದ ರೀತಿ ಕಂಡು ಕಿಚ್ಚ ಸುದೀಪ್ ಸಖತ್ ಎಂಜಾಯ್ ಮಾಡಿದರು. ಗಿಲ್ಲಿ ಹೇಳಿದ ತಮಾಷೆಯ ಮಾತುಗಳನ್ನು ಸುದೀಪ್ ಪದೇ ಪದೇ ನೆನಪಿಸಿ ಕಾಲೆಳೆಯುತ್ತಿದ್ದರೆ, ಅತ್ತ ಮನೆಯಲ್ಲಿದ್ದ ಸ್ಪರ್ಧಿಗಳು ನಕ್ಕು ನಲಿದರು. ಕಿಚ್ಚನ ಕಿಚಾಯಿಸುವಿಕೆ ಮತ್ತು ಗಿಲ್ಲಿಯ ಟೈಮಿಂಗ್ ಸೆನ್ಸ್ ನೋಡಿ ವೀಕ್ಷಕರಿಗೂ ಪೂರ್ಣ ಮನರಂಜನೆ ಸಿಕ್ಕಿತು. ಒಟ್ಟಿನಲ್ಲಿ ಈ "ಕುಟುಂಬ" ಪುರಾಣ ಪ್ರೀ-ಫಿನಾಲೆಯಲ್ಲಿ ಭರ್ಜರಿ ನಗೆಯ ಬಾಂಬ್ ಸಿಡಿಸಿದೆ.

  • Jan 17, 2026 9:13 PM
    ಟಾಪ್ 6 ಸ್ಪರ್ಧಿಗಳ ಪಯಣದ ಬಗ್ಗೆ ಕಿಚ್ಚನ ವಿಶ್ಲೇಷಣೆ...

    ಬಿಗ್ ಬಾಸ್ ವೇದಿಕೆಯ ಮೇಲೆ ನಿಂತು ಕಿಚ್ಚ ಸುದೀಪ್ ಅವರು ಟಾಪ್ 6 ಸ್ಪರ್ಧಿಗಳ ಇಡೀ ಸೀಸನ್‌ನ ಪಯಣವನ್ನು ಮೆಲುಕು ಹಾಕಿದರು. ಆರಂಭದ ದಿನಗಳಿಂದ ಇಲ್ಲಿಯವರೆಗೆ ಪ್ರತಿಯೊಬ್ಬ ಸ್ಪರ್ಧಿ ಎದುರಿಸಿದ ಏರಿಳಿತಗಳು, ಸವಾಲುಗಳು ಮತ್ತು ಅವರು ಬದಲಾದ ರೀತಿಗೆ ಕಿಚ್ಚ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿಯೊಬ್ಬರೂ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಮನರಂಜನೆ ನೀಡಿದ್ದನ್ನು ನೆನಪಿಸಿದ ಸುದೀಪ್, ಈ ಪಯಣ ಕೇವಲ ಆಟವಲ್ಲ, ಜೀವನದ ಪಾಠ ಎಂದು ಬಣ್ಣಿಸಿದರು. ಕಿಚ್ಚನ ಈ ವಿಶ್ಲೇಷಣೆಯು ಸ್ಪರ್ಧಿಗಳಲ್ಲಿ ಭಾವುಕತೆ ಮೂಡಿಸಿದ್ದು, ವೀಕ್ಷಕರಿಗೂ ಆ ಕ್ಷಣಗಳು ಬಹಳ ಆಪ್ತವಾಗಿ ಕಂಡವು.

  • Jan 17, 2026 9:02 PM
    ಬಿಗ್ ಬಾಸ್ ಸೀಸನ್ 12: ರೋಚಕ ಕ್ಷಣಗಳ ಆರಂಭ.

    ಬಿಗ್ ಬಾಸ್ ಸೀಸನ್ 12ರ ಪ್ರೀ-ಫಿನಾಲೆ ಈಗಷ್ಟೇ ಅದ್ಧೂರಿಯಾಗಿ ಆರಂಭವಾಗಿದ್ದು, ವೀಕ್ಷಕರಿಗೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ಆಟದ ವೇಗ ಹೆಚ್ಚಾಗಿದ್ದು, ಪ್ರತಿ ಕ್ಷಣವೂ ಕುತೂಹಲ ಮತ್ತು ರೋಚಕತೆಯಿಂದ ಕೂಡಿದೆ. ಅಂತಿಮ ಘಟ್ಟದತ್ತ ಸಾಗುತ್ತಿರುವ ಈ ಹಂತದಲ್ಲಿ ಸ್ಪರ್ಧಿಗಳ ನಡುವೆ ಕಠಿಣ ಪೈಪೋಟಿ ಏರ್ಪಟ್ಟಿದ್ದು, ಅಭಿಮಾನಿಗಳಿಗೆ ಇನ್ಮುಂದೆ ಅನಿರೀಕ್ಷಿತ ತಿರುವುಗಳು ನೋಡಲು ಸಿಗಲಿವೆ.

  • Jan 17, 2026 8:47 PM
    ಕಿಚ್ಚನ ಗತ್ತು, ಫಿನಾಲೆ ಮಸ್ತ್: ನಾಳೆ ಸಂಜೆ 6ಕ್ಕೆ ಮಹಾಸಮರ...

    ಲುಕ್ಕಲ್ಲಿ ಗತ್ತು, ಸ್ಟೈಲ್‌ನಲ್ಲಿ ಮಸ್ತ್ ಎನಿಸಿರುವ ಕಿಚ್ಚ ಸುದೀಪ್ ಅವರ ಸಾರಥ್ಯದ ಬಿಗ್ ಬಾಸ್ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ನಾಳೆ ಸಂಜೆ 6 ಗಂಟೆಗೆ ಅದ್ಧೂರಿಯಾಗಿ ಆರಂಭವಾಗಲಿದೆ. "ಕಿಚ್ಚನಿಗೆ ಕಿಚ್ಚನೇ ಸಾಟಿ" ಎನ್ನುವಂತೆ ಸುದೀಪ್ ಅವರ ಖಡಕ್ ನಿರೂಪಣೆಯಲ್ಲಿ ಅಂತಿಮ ಹಣಾಹಣಿ ನಡೆಯಲಿದ್ದು, ವಿಜೇತರು ಯಾರಾಗಲಿದ್ದಾರೆ ಎಂಬ ಕುತೂಹಲ ತುತ್ತತುದಿಯಲ್ಲಿದೆ. ಈಗಾಗಲೇ ಪ್ರೀ-ಫಿನಾಲೆಯಲ್ಲಿ ಗಿಲ್ಲಿ ಹವಾ ಜೋರಾಗಿದ್ದು, ನಾಳೆಯ ರೋಚಕ ಕ್ಷಣಗಳಿಗಾಗಿ ಇಡೀ ಕರ್ನಾಟಕವೇ ಕಾತರದಿಂದ ಕಾಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚನ ಸ್ಟೈಲಿಶ್ ಫೋಟೋಗಳು ಮತ್ತು ವಿನ್ನರ್ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿವೆ.

  • Jan 17, 2026 8:18 PM
    ಗಿಲ್ಲಿಗೆ ಹನುಮಂತನ ಬೆಂಬಲ

    ಕಳೆದ ಸೀಸನ್‌ನಲ್ಲಿ 5.23 ಕೋಟಿ ಮತ ಪಡೆಯುವ ಮೂಲಕ ದಾಖಲೆ ಬರೆದಿದ್ದ ಹನುಮಂತ ಲಮಾಣಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಇದೇ ಸಮಯದಲ್ಲಿ ಎಲ್ಲರೂ ಬಿಗ್ ಬಾಸ್ ನೋಡ್ತಿದ್ದೀರೋ, ಇಲ್ವೋ? ನಿಮ್ಮ ವೋಟು ಯಾರಿಗೆ? ಎಂದು ವೇದಿಕೆ ಮೇಲೆಯೇ ಕೇಳಿದರು. ಆಗ ಆಡಿಯೆನ್ಸ್ ಕಡೆಯಿಂದ ಗಿಲ್ಲಿ ಎಂದು ಜೋರು ಕೂಗು ಬಂತು. ಆಗ ಹನುಮಂತ ಲಮಾಣಿ ಥಂಬ್ಸ್ ಅಪ್‌ ಮಾಡಿದರು. ಇದರಿಂದ ಗಿಲ್ಲಿ ಫ್ಯಾನ್ಸ್‌ ಫುಲ್‌ ಖುಷ್‌ ಆಗಿದ್ದು ಸದ್ಯ ಈ ವಿಡಿಯೋ ವೈರಲ್ ಆಗಿದೆ.

  • Jan 17, 2026 7:54 PM
    ಇನ್‌ಸ್ಟಾಗ್ರಾಮ್‌ನಲ್ಲಿ ಗಿಲ್ಲಿ ಹಿಂದೆ ಅಭಿಮಾನಿಗಳ ಮಹಾಪೂರ

    ''ಬಿಗ್ ಬಾಸ್‌'' ಮನೆಯಲ್ಲಿ ದಿನಗಳು ಉರುಳಿದಂತೆ ಜನ ಮನ ಗೆದ್ದ ಗಿಲ್ಲಿ ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಒಂದು ಲಕ್ಷದಿಂದ ಹತ್ತು ಲಕ್ಷ ಫಾಲೋವರ್ಸ್‌ಗಳನ್ನು ಗಳಿಸಿದ್ದ ಗಿಲ್ಲಿ ಈಗ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾದ ಸಮಯದಲ್ಲಿ 15 ಲಕ್ಷದ ಗಡಿಯನ್ನು ದಾಟಿದ್ದಾರೆ.

  • Jan 17, 2026 6:29 PM
    37+ ಕೋಟಿ ವೋಟ್‌ಗಳು

    ಬಿಗ್ ಬಾಸ್‌ ಕನ್ನಡ ಸೀಸನ್ 12ರ ಪ್ರೀ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಕಲರ್ಸ್ ಕನ್ನಡ ಹೊಚ್ಚ ಪ್ರೋಮೊ ರಿಲೀಸ್ ಮಾಡಿದ್ದು, ಇದರಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಇಂದಿನ ಸಂಚಿಕೆಯನ್ನು ಅವರೇ ನಿರೂಪಣೆ ಮಾಡುವ ಸೂಚನೆಯನ್ನು ಕೊಟ್ಟಿದೆ. ಈ ಪ್ರೋಮೋದ ಮತ್ತೊಂದು ಹೈಲೈಟ್ ಅಂದರೆ, ಈ ಸಂಚಿಕೆಯಲ್ಲಿ ಸುಮಾರು 37 ಕೋಟಿಗೂ ಅಧಿಕ ವೋಟ್‌ಗಳು ಬಂದಿವೆ ಎಂದು ರಿವೀಲ್ ಮಾಡಲಾಗಿದೆ. ಸೀಸನ್‌ 11ರಲ್ಲಿ 5.23 ಕೋಟಿ ವೋಟ್‌ಗಳು ಬಂದಿರೋ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

More from Filmibeat

English summary
BBK 12 Pre-Finale Live updates about Gilli, Ashwini Gowda, Rakshitha Shetty, Kavya, Dhanush, Raghu Details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X