BBK 12: ಬಿಗ್ ಬಾಸ್‌ನ ಕಟ್ಟಪ್ಪ ರಘು; ಗಿಲ್ಲಿ ಬೆನ್ನಿಗೆ ಚೂರಿ.. ಕಟ್ಟಪ್ಪ ಸೀಸ್‌ಗೆ ಹೋಲಿಕೆ ಮಾಡಿ ವೈರಲ್

ಬಿಗ್ ಬಾಸ್ ಮನೆಯಲ್ಲಿ ಆಗಾಗ ರಣರಂಗವಾಗುತ್ತೆ. ಆಗಾಗ ಭಾವನಾ ಲೋಕದಲ್ಲಿ ಮುಳುಗಿ ಹೋಗುತ್ತೆ. ಕೆಲವೊಮ್ಮೆ ಸಿಕ್ಕಾಪಟ್ಟೆ ಟ್ವಿಸ್ಟ್ ಸಿಗುತ್ತೆ. ಇನ್ನು ಕೆಲವೊಮ್ಮೆ ಟಾಸ್ಕ್ ಭಯಂಕರ ಅಂತ ಅನಿಸುತ್ತೆ. ಸ್ನೇಹಿತರಾಗಿದ್ದವರು ಕಿತ್ತಾಡುತ್ತಾರೆ. ನಾನೊಂದು ತೀರ ನೀನೊಂದು ತೀರಾ ಅಂತಾರೆ. ವಾರಗಳ ಕಾಲ ಕಿತ್ತಾಡಿಕೊಂಡಿದ್ದವರು ಬೆಸ್ಟ್ ಫ್ರೆಂಡ್ಸ್ ಆಗಿಬಿಡುತ್ತಾರೆ. ಅದೇ ಬಿಗ್ ಬಾಸ್‌ನ ಸೊಗಸು.

ಪ್ರತಿ ಸೀಸನ್‌ನಲ್ಲಿ ಸಿಕ್ಕಂತೆ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲೂ ಫ್ರೆಂಡ್, ದ್ವೇಷ, ಸೇಡು ಇವೆಲ್ಲವನ್ನೂ ನೋಡಬಹುದು. ನಿನ್ನೆ (ಡಿಸೆಂಬರ್ 1) ಎಪಿಸೋಡ್‌ನಲ್ಲಿ ಬಿಗ್ ಬಾಸ್ ಒಂದು ಟ್ರಿಕ್ಕಿಯಾಗಿರುವಂತಹ ಟಾಸ್ಕ್ ಅನ್ನು ಕೊಟ್ಟಿತ್ತು. ಆ ಟಾಸ್ಕ್‌ನಲ್ಲಿ ಕುಚಿಕು ಗೆಳೆಯರಾಗಿದ್ದ ಗಿಲ್ಲಿ ಹಾಗೂ ರಘು ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಇನ್ನು ಇದನ್ನೆಲ್ಲ ನೋಡುತ್ತಿದ್ದ ಕಿರುತೆರೆ ವೀಕ್ಷಕರಿಗೆ ಆಶ್ವರ್ಯ ಆಗಿದೆ. ಕುಚಿಕು ಗೆಳೆಯವರು ಪರಸ್ಪರ ಕಿತ್ತಾಡಿಕೊಂಡಿದ್ದು ಹೈಲೈಟ್ ಆಗಿದೆ.

BBK 12 Raghu Vs Gilli fans remembered Baahubali Prabhas and Sathyaraj Kattappa Scene

ನಿನ್ನೆ (ಡಿಸೆಂಬರ್ 1) ರಘು ಹಾಗೂ ಗಿಲ್ಲಿ ನಟ ಕಿತ್ತಾಡಿದನ್ನು ನೋಡಿದ ಬಳಿಕೆ ನೆಟ್ಟಿಗರು ಅಲರ್ಟ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರಘು ಹಾಗೂ ಗಿಲ್ಲಿ ಫೈಟ್ ಅನ್ನು ಪ್ರಭಾಸ್ ಪ್ಯಾನ್ ಇಂಡಿಯಾ ಮೆಗಾ ಬ್ಲಾಕ್ ಬಸ್ಟರ್ 'ಬಾಹುಬಲಿ' ಸಿನಿಮಾದ 'ಕಟ್ಟಪ್ಪ' ಸೀಸನ್‌ಗೆ ಹೋಲಿಕೆ ಮಾಡಿ ಶೇರ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವುದಕ್ಕೆ ಶುರು ಮಾಡಿದೆ.


ರಘು Vs ಗಿಲ್ಲಿ

ಈ ವಾರ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಧನುಷ್. ಇವರಿಗೆ ಇದೂವರೆಗೂ ಬಿಗ್ ಬಾಸ್‌ ಮನೆಯಲ್ಲಿ ಯಾರು ಉತ್ತಮವಾಗಿ ಆಟ ಆಡಿದ್ದಾರೆ? ಇದನ್ನು ಗಮನದಲ್ಲಿ ಇಟ್ಟುಕೊಂಡು ಮನೆಯ ಸದಸ್ಯರಿಗೆ ರಾಂಕಿಂಗ್ ಕೊಡುವಂತೆ ಸೂಚಿಸಿದ್ದರು. ಇದರ ಆಧಾರದ ಮೇಲೆ ಧುನುಷ್ ರಾಕಿಂಗ್ ಕೊಟ್ಟಿದ್ದರು. ಧನುಷ್ ಕೊಟ್ಟ ರಾಂಕಿಂಗ್‌ನಲ್ಲಿ ರಘು 6ನೇ ಸ್ಥಾನದಲ್ಲಿ ಇದ್ದರು. ಗಿಲ್ಲಿ ನಟ 2ನೇ ಸ್ಥಾನದಲ್ಲಿ ಇದ್ದರು. ಈ ವೇಳೆ ಇವರಿಬ್ಬರ ನಡುವೆ ವಾದ-ವಿವಾದ ಇಲ್ಲಿಂದ ಶುರುವಾಗಿತ್ತು.

ಗಿಲ್ಲಿ ಬೆನ್ನಿಗೆ ರಘು ಚೂರಿ

ರಾಂಕಿಂಗ್ ಕೊಡುವ ಟಾಸ್ಕ್ ಮುಗಿಯುತ್ತಿದ್ದಂತೆ ಬೆನ್ನಿಗೆ ಕೃತಕ ಚೂರಿ ಹಾಕಿ ನಾಮಿನೇಟ್ ಮಾಡುವ ಪ್ರಕ್ರಿಯೆ ನಡೆಯಿತು. ಒಬ್ಬೊಬ್ಬ ಸದಸ್ಯನಿಗೂ ಹೀಗೆ ಇಬ್ಬರನ್ನು ನಾಮಿನೇಟ್ ಮಾಡುವ ಅವಕಾಶವಿತ್ತು. ಅದರಲ್ಲಿ ರಘು ಮೊದಲು ಧುಷ್ಯಂತ್‌ಗೆ ನಾಮಿನೇಟ್ ಮಾಡಿದರೆ, ಎರಡನೇಯದಾಗಿ ಗಿಲ್ಲಿಗೆ ನಾಮಿನೇಟ್ ಮಾಡಿದರು. ಇದು ಗಿಲ್ಲಿ ಅಭಿಮಾನಿಗಳಿಗೆ ತಡೆದುಕೊಳ್ಳುವುದಕ್ಕೆ ಆಗಲಿಲ್ಲ. ಹೀಗಾಗಿ ಈ ವಿಡಿಯೋವನ್ನು ಇಟ್ಟುಕೊಂಡು ಕಟ್ಟಪ್ಪ ಸೀನ್‌ಗೆ ಹೋಲಿಕೆ ಮಾಡಲಾಗುತ್ತಿದೆ.

ಕಟ್ಟಪ್ಪ ಸೀಸನ್ ವೈರಲ್

ಗಿಲ್ಲಿ ಹಾಗೂ ರಘು ಇಬ್ಬರ ಗೆಳೆತನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿತ್ತು. ರಘು ಮನೆಗೆ ಎಂಟ್ರಿ ಕೊಟ್ಟ ದಿನದಿಂದ ರಘು ಹಾಗೂ ಗಿಲ್ಲಿ ನಡುವೆ ಒಳ್ಳೆಯ ಬಾಂಡಿಂಗ್ ಬೆಳೆದಿತ್ತು. ಆದರೆ, ನಿನ್ನೆಯ ಸಂಚಿಕೆಯಲ್ಲಿ ಇಬ್ಬರ ನಡುವೆ ಅಸಮಧಾನ ಮೂಡಿದೆ. ಇಬ್ಬರೂ ಕಿತ್ತಾಡಿಕೊಂಡಿದ್ದು, ಗಿಲ್ಲಿ ಬೆನ್ನಿಗೆ ರಘು ಚೂರಿ ಚುಚ್ಚಿ ನಾಮಿನೇಟ್ ಮಾಡಿದ್ದಾರೆ. ಸೀನ್ ನೋಡಿ ನಿರಾಸೆಗೊಂಡಿರುವ ಗಿಲ್ಲಿ ಫ್ಯಾನ್ಸ್ ಕಟ್ಟಪ್ಪ ಸೀಸನ್ ಶೇರ್ ಮಾಡಿ "ಸೇಮ್ ಟು ಸೇಮ್" ಕಮೆಂಟ್ ಮಾಡುತ್ತಿದ್ದಾರೆ.

ಮುಂದೇನು?

ಬಿಗ್ ಬಾಸ್ ಮನೆಯಲ್ಲಿ ಇಂದಿನ (ಡಿಸೆಂಬರ್ 2) ಸಂಚಿಕೆಯ ಪ್ರೋಮೋ ರಿಲೀಸ್ ಆಗಿದೆ. ಇದರಲ್ಲಿ ರಾಶಿಕಾ ಹಾಗೂ ಗಿಲ್ಲಿ ನಡುವೆ ಕಿತ್ತಾಟ ಶುರುವಾಗಿದೆ. ಕಾವ್ಯಾ, ಗಿಲ್ಲಿ ಹಾಗೂ ರಾಶಿಕಾ ಮೂವರ ಮಧ್ಯೆ ವಾಗ್ಯುದ್ಧ ನಡೆದಿದೆ. ಇಂದಿನ ಎಪಿಸೋಡ್‌ನಲ್ಲಿ ಮತ್ತೇನು ಹೈಡ್ರಾಮ ನಡೆಯುತ್ತೆ ಅನ್ನೋದು ನೋಡಬೇಕಿದೆ. ಸದ್ಯ ಕಟ್ಟಪ್ಪ ಸೀನ್ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

More from Filmibeat

English summary
BBK 12 Raghu Vs Gilli fans remembered Baahubali Prabhas and Sathyaraj Kattappa Scene.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X