BBK 12: ಬಿಗ್‌ ಬಾಸ್‌ನಲ್ಲಿ ಸೇಫ್ ಆದವರು ಯಾರು? ಅನ್‌ಸೇಫ್ ಆದವರು ಯಾರು?

ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭ ಆದಲ್ಲಿಂದ ಅನಿರೀಕ್ಷಿತವಾದದ್ದೇ ನಡೆಯುತ್ತಿದೆ. ಕಿರುತೆರೆ ವೀಕ್ಷಕರಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಲೇ ಇದೆ. ಮೊದಲ ದಿನದಿಂದಲೇ ಟ್ವಿಸ್ಟ್ ಕೊಡುತ್ತಿದೆ. ಇನ್ನು ಇದೇ ಮೊದಲ ಬಾರಿಗೆ ಮೂರನೇ ವಾರದಲ್ಲಿಯೇ ಮಿಡ್ ಸೀಸನ್ ಫಿನಾಲೆ ನಡೆಯುತ್ತಿದೆ. ಈ ಫಿನಾಲೆಯಲ್ಲಿ 11 ಮಂದಿ ನಾಮಿನೇಟ್ ಆಗಿದ್ದರು. ಇವರಲ್ಲಿ ಎಷ್ಟು ಮಂದಿ ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತಾರೆಂಬುದು ಕುತೂಹಲ ಮೂಡಿಸಿದೆ.

ಈಗಾಗಲೇ ಹೇಳಿದಂತೆ ಬಿಗ್ ಬಾಸ್ ಮನೆಯಿಂದ ಕೆಲವು ಸ್ಪರ್ಧಿಗಳು ಹೊರಗೆ ಬರೋದಂತೂ ಕನ್ಫರ್ಮ್. ಎರಡು ದಿನಗಳ ಮಿಡ್‌ ಸೀಸನ್ ಫಿನಾಲೆಯಲ್ಲಿ ಎಮಿನಿನೇಷನ್ ಪ್ರಕ್ರಿಯೆ ಕೂಡ ಇಂಟ್ರೆಸ್ಟಿಂಗ್ ಆಗಿದೆ. ವೀಕ್ಷಕರ ಕುತೂಹಲವನ್ನು ತಣ್ಣಗಾಗಿಸುವುದಕ್ಕೆ ಒಂದು ಟಾಸ್ಕ್ ಅನ್ನು ಮಾಡಿದ್ದಾರೆ. ಇದರಲ್ಲಿ ಯಾರು ಸೇಫ್ ಆಗಿದ್ದಾರೆ. ಯಾರು ಸೇಫ್ ಅಲ್ಲ ಅನ್ನೋದು ರಿವೀಲ್ ಆಗಿದೆ.

BBK 12 Rakshitha Shetty Gilli Nata to Mallamma safe and unsafe contestant list

ಕಿಚ್ಚ ಸುದೀಪ್ ನಾಮಿನೇಟ್ ಆಗಿದ್ದ 11 ಮಂದಿಯ ಕೈಯಿಂದ ಒಂದು ಟಾಸ್ಕ್ ಅನ್ನು ಮಾಡಿಸಿದ್ದರು. ಇದರಲ್ಲಿ 11 ಮಂದಿಯ ಭಾವಚಿತ್ರವಿರುವ ಫೋಟೊ ಮುಂದೆ ಕಪ್ಪು ಬಣ್ಣದ ಗಾಜನ್ನು ಅಳವಡಿಸಲಾಗಿತ್ತು. ಅದರನ್ನು ಸುತ್ತಿಗೆಯಿಂದ ಒಡೆದರೆ, ಯಾರು ಸೇಫ್ ಆಗಿದ್ದಾರೆ. ಯಾರು ಅಲ್ಲ ಅನ್ನೋದು ಗೊತ್ತಾಗುತ್ತಿತ್ತು. ಸೇಫ್ ಆಗದೇ ಇರೋರಲ್ಲಿ ಎಲಿಮಿನೇಟ್ ಆಗಿರೋರು ಯಾರು ಅನ್ನೋದು ಕಾರ್ಯಕ್ರಮದ ಕೊನೆಯಲ್ಲಿ ರಿವೀಲ್ ಆಗಲಿದೆ.

ಸೇಫ್ ಆದವರು ಯಾರು?

ಮೊದಲ ಟಾಸ್ಕ್‌ನಲ್ಲಿ 11 ಮಂದಿ ಸ್ಪರ್ಧಿಗಳಲ್ಲಿ ಐವರು ಸೇಫ್‌ ಆಗಿದ್ದರು. ಇವರಲ್ಲಿ ವೀಕ್ಷಕರ ಫೇವರಿಟ್ ರಕ್ಷಿತಾ ಶೆಟ್ಟಿ, ಹಾಗೇ ಕಾವ್ಯಾ ಶೈವ, ಕಾಮಿಡಿಯನ್ ಚಂದ್ರಪ್ರಭ ಹಾಗೂ ಗಿಲ್ಲಿ ನಟ ಜೊತೆಗೆ ವೀಕ್ಷಕರ ಮತ್ತೊಬ್ಬರ ಫೇವರಿಟ್ ಸ್ಪರ್ಧಿ ಮಲ್ಲಮ್ಮ ಸೇಫ್ ಆಗಿದ್ದಾರೆ. ಇವರು ಬಿಗ್ ಬಾಸ್ ಮನೆಯಲ್ಲಿ ಮುಂದುವರೆಯುತ್ತಾರೆ. ಇವರ ಹೆಸರುಗಳನ್ನು ನಿರೀಕ್ಷೆ ಮಾಡಲಾಗಿತ್ತು. ಅದರಂತೆ ಸೇಫ್ ಆಗಿದ್ದಾರೆ.

ಸೇಫ್ ಆಗದವರು

ಇದೇ ಟಾಸ್ಕ್‌ನಲ್ಲಿ ಉಳಿದವರು ಸೇಫ್ ಆಗಿರಲಿಲ್ಲ. ಧ್ರುವಂತ್, ಧನುಷ್, ಅಶ್ವಿನಿ ಎಸ್.ಎನ್, ಅಭಿಷೇಕ್, ಮಂಜು ಭಾಷಿಣಿ ಡೇಂಜರ್ ಝೋನ್‌ನಲ್ಲಿ ಇದ್ದರು. ಹಾಗಂತ ಇದೇ ಅಂತಿಮ ಅಲ್ಲ ಎಂದೂ ಹೇಳಲಾಗಿತ್ತು. ಆದರೆ, ಇವರಲ್ಲಿ ಒಂದಿಷ್ಟು ಮಂದಿ ಹೊರ ಹೋಗುವುದು ಕನ್ಫರ್ಮ್ ಆಗಿತ್ತು.

ಮತ್ತೊಂದು ಟಾಸ್ಕ್

ಡೇಂಜರ್ ಝೋನ್‌ನಲ್ಲಿ ಇದ್ದವರಿಗಾಗಿ ಬಿಗ್ ಬಾಸ್ ಮತ್ತೊಂದು ಚಿಕ್ಕ ಟಾಸ್ಕ್ ನೀಡಲಾಗಿತ್ತು. ಇದರಲ್ಲಿ ಒಂದು ಬೌಲ್‌ನಲ್ಲಿ ಕಡ್ಡಿಯೊಂದರಿಂದ ಹಿಟ್ ಮಾಡಿದಾಗ ಕೆಂಪು ಬಂದರೆ, ಡೇಂಜರ್ ಜೋನ್‌ನಲ್ಲಿ ಮುಂದುವರೆಯುತ್ತಾರೆ. ಅದೇ ಹಸಿರು ಬಣ್ಣಕ್ಕೆ ತಿರುಗಿದರೆ ಸೇಫ್ ಆಗುತ್ತಾರೆ ಎನ್ನಲಾಗಿತ್ತು. ಧನುಷ್ ಹಾಗೂ ಧ್ರುವಂತ್ ಸೇಫ್ ಝೋನ್‌ಗೆ ಹೋಗಿದ್ದಾರೆ. ಆದರೆ, ಮಂಜು ಭಾಷಿಣಿ, ಅಭಿಷೇಕ್, ಸ್ಪಂದನಾ, ಅಶ್ವಿನಿ ಇನ್ನೂ ಡೇಂಜರ್ ಝೋನ್‌ನಲ್ಲಿ ಮುಂದುವರೆದಿದ್ದಾರೆ.

ಎಲಿಮಿನೇಷನ್ ಅಪ್‌ಡೇಟ್

ಬಿಗ್ ಬಾಸ್ ಕನ್ನಡ 12ರ ಮೊದಲ ಫಿನಾಲೆಯ ಮೊದಲ ದಿನದ ಅಂತ್ಯದ ವೇಳೆ ಡೇಂಜರ್ ಜೋನ್‌ನಲ್ಲಿದ್ದ ಇಬ್ಬರು ಎಲಿಮಿನೇಟ್ ಆಗಿದ್ದಾರೆ. ಅವರಲ್ಲಿ ಕಿರುತೆರೆ ನಟಿ ಮಂಜು ಭಾಷಿಣಿ ಒಬ್ಬರಾದರೆ, ಇನ್ನೊಬ್ಬರು ಅಶ್ವಿನಿ. ಇವರಿಬ್ಬರೂ ಕೊನೆಯಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಮೊದಲ ದಿನ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ.

More from Filmibeat

English summary
BBK 12 Rakshitha Shetty Gilli Nata to Mallamma safe and unsafe contestant list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X