BBK 12: "ಧ್ರುವಂತ್‌ಗೆ ಬೈ ಹೇಳಬೇಕು ಅನಿಸಲಿಲ್ಲ.. ಹೇಳಿ ಬರೋದು ಇಷ್ಟವಿರಲಿಲ್ಲ" ರಾಶಿಕಾ

ಬಿಗ್ ಬಾಸ್ ಕನ್ನಡ ಸೀಸನ್ 12 ಮುಕ್ತಾಯದ ಹಂತಕ್ಕೆ ಬಂದಿದೆ. ಇನ್ನೇನು ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಮುಗಿಯುವುದಕ್ಕೆ ಇನ್ನೇನು ಕೆಲವೇ ದಿನಗಳ ಬಾಕಿ ಉಳಿದಿವೆಯಷ್ಟೇ. ಅಷ್ಟರಲ್ಲೇ ಬಿಗ್ ಬಾಸ್ ಮನೆಯಲ್ಲಿ ಒಂದೊಂದೇ ಸರ್ಪ್ರೈಸ್ ಸಿಗುತ್ತಿದೆ. ಈಗ ಬಿಗ್ ಬಾಸ್ ಮನೆಯಿಂದ ಮತ್ತೊಬ್ಬ ಸ್ಪರ್ಧಿ ಔಟ್ ಆಗಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.

ಕೆಲವು ದಿನಗಳ ಹಿಂದಷ್ಟೇ ಬಿಗ್ ಬಾಸ್ ಫಿನಾಲೆಯ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿದ್ದ ರಾಶಿಕಾ ಎಲಿಮಿನೇಟ್ ಆಗಿದ್ದರು. ಬಿಗ್‌ ಬಾಸ್ ವೀಕ್ಷಕರಿಗೆ ರಾಶಿಕಾ ಎಲಿಮಿನೇಷನ್ ಶಾಕಿಂಗ್ ಆಗಿತ್ತು. ಈಗ ರಾಶಿಕಾ ಬಿಗ್ ಬಾಸ್ ಮನೆಯಲ್ಲಿ ಸಿಕ್ಕಾಪಟ್ಟೆ ದ್ವೇಷಿಸುತ್ತಿದ್ದ ಧ್ರುವಂತ್ ಕೂಡ ಎಲಿಮಿನೇಟ್ ಆಗಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಇಬ್ಬರೂ ಮನೆಯೊಳಗೆ ಹಾವು-ಮುಂಗುಸಿಯಂತೆ ಕಿತ್ತಾಡಿಕೊಳ್ಳುತ್ತಿದ್ದರು. ಅದು ರಾಶಿಕಾ ಮನೆಯಿಂದ ಬಂದ ಮೇಲೂ ಮುಂದುವರೆದಿದೆ.

BBK 12 Rashika revealed why she didn t say bye to Dhruvanth Here is the reason

ರಾಶಿಕಾ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಫಿಲ್ಮಿಬೀಟ್ ಕನ್ನಡಕ್ಕೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಬಿಗ್ ಬಾಸ್ ಜರ್ನಿಯ ಬಗ್ಗೆ ಎಳೆ ಎಳೆಯಾಗಿ ಹೇಳಿಕೊಂಡಿದ್ದಾರೆ. ಇದೇ ವೇಳೆ ಬಿಗ್ ಬಾಸ್ ಮನೆಯಿಂದ ಹೊರ ಬರುವಾಗ ತಾನೇಕೆ ಧ್ರುವಂತ್‌ಗೆ ಬೈ ಕೂಡ ಹೇಳಿಲ್ಲ ಅನ್ನೋದಕ್ಕೆ ಕಾರಣಗಳನ್ನು ಕೊಟ್ಟಿದ್ದಾರೆ. ರಾಶಿಕಾ ಏನು ಹೇಳಿದ್ದಾರೆಂದು ತಿಳಿಯುವುದಕ್ಕೆ ಮುಂದೆ ಓದಿ.

ಬಿಗ್ ಬಾಸ್ ಮನೆಯೊಳಗೆ ರಾಶಿಕಾ ಪ್ರಬಲ ಸ್ಪರ್ಧಿಯಾಗಿದ್ದರು. ಟಾಸ್ಕ್‌ನಲ್ಲಿ ಆಕ್ಟಿವ್ ಆಗಿ ಭಾಗವಹಿಸುತ್ತಿದ್ದರು. ಎದುರಾಳಿಗಳ ವಿರುದ್ಧ ತಮ್ಮ ಖಡಕ್ ಧ್ವನಿಯಿಂದ ತಿರುಗೇಟು ನೀಡುತ್ತಿದ್ದರು. ಕೆಲವೊಮ್ಮೆ ಕಿರುಚಾಡುತ್ತಿದ್ದಾರೆ ಅಂತ ಅನಿಸಿದ್ದೂ ಉಂಟು. ಅದಕ್ಕೆ ರಾಶಿಕಾ ಕೊಡುವ ಕಾರಣ ಹೀಗಿದೆ. "ನಾನು ಮನೆಯಲ್ಲಿ ಇದ್ದಾಗಲೂ ಹೀಗೆ ಕಿರುಚಾಡುತ್ತಿದ್ದೆ. ಫ್ರೆಂಡ್ಸ್ ಜೊತೆ ಜಗಳ ಮಾಡಿದಾಗ, ಮನೆಯಲ್ಲಿ ಇದ್ದಾಗ ಕಿರುಚಾಡುತ್ತಿದ್ದೆ. ಆದರೆ, ಈ ಮಟ್ಟಿಗೆ ಕಿರುಚಾಡುತ್ತಿದ್ದೆ ಅನ್ನೋದು ಗೊತ್ತಿರಲಿಲ್ಲ. ಇದು ಬಿಗ್ ಬಾಸ್ ಮನೆಗೆ ಹೋದ ಮೇಲೆ ಗೊತ್ತಾಯ್ತು. ಬಿಗ್ ಬಾಸ್‌ ಮನೆಯಲ್ಲಿ ಕೇಳಿಸಿಕೊಳ್ಳಿ ನನ್ನ ಮಾತು ಅನ್ನೋದೆಲ್ಲ ಆಗಲ್ಲ. ಇಲ್ಲಿ ಜೋರಾಗಿ ಕಿರುಚಾಡಿದರೆ ಮಾತ್ರ ಗೊತ್ತಾಗೋದು." ಎನ್ನುತ್ತಾರೆ ರಾಶಿಕಾ.

ಬಿಗ್ ಬಾಸ್ ಮನೆಯಿಂದ ಹೊರ ಬರುವಾಗ ಎಲ್ಲರಿಗೂ ಅಪ್ಪಿಕೊಂಡು ಹೊರ ಬಂದರು. ಆದರೆ, ಧ್ರುವಂತ್ ಅವರನ್ನು ಮಾತೂ ಆಡಿಸದೆ ಹೊರ ಬಂದರು. ಧ್ರುವಂತ್ ಕೂಡ ರಾಶಿಕಾ ಮನೆಯಿಂದ ಹೊರ ಬಂದ ಬಳಿಕ ಆಚೆ ಬಂದರು. ಇದಕ್ಕೆ ಕಾರಣವೇನು? ಅನ್ನೋದನ್ನು ಓಪನ್ ಆಗಿ ಹೇಳಿದ್ದಾರೆ. ರಾಶಿಕಾ ಎಲಿಮಿನೇಟ್ ಆಗಿ ಹೊರ ಬಂದಾಗ ಈ ಘಟನೆ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಅದಕ್ಕೆ ಇಲ್ಲಿದೆ ಉತ್ತರ.

"ನನಗೆ ಧ್ರುವಂತ್‌ಗೆ ಹೇಳಿ ಬರೋದು ಇಷ್ಟವಿರಲಿಲ್ಲ. ಒಂದು ಘಟನೆ ನಡೆದ ಮೇಲೆ ಅವರೊಂದಿಗೆ ಮಾತಾಡಬೇಕು ಅಂತನೂ ಅನಿಸಲಿಲ್ಲ. ಅವರಿಗೆ ಬೈ ಹೇಳಬೇಕು ಅಂತ ಅನಿಸಲೇ ಇಲ್ಲ. ಯಾಕಂದ್ರೆ, ಅವರಿಗೆ ಬೈ ಹೇಳಬೇಕು ಅಂತ ಅನಿಸಿ ಹೇಳಿದರೂ, ಅದಕ್ಕೆ ಇನ್ನೊಂದು ಹೊಸ ಸ್ಟೋರಿ ಕಟ್ಟುತ್ತಾರೆ ಅನ್ನೋದು ನನ್ನ ತಲೆಗೆ ಬಂದು ಬಿಟ್ಟಿತ್ತು. ಈಗಲೂ ನನ್ನ ತಲೆಯಲ್ಲಿ ಅದೇ ಇದೆ. ಟಾಸ್ಕ್‌ನಲ್ಲೂ ಕೂಡ ಮಾತಾಡಿಸಬೇಕು ಅಂತ ಅನಿಸಲಿಲ್ಲ. ಅಲ್ಲೂ ಇಂತಹದ್ದೇ ಒಂದು ಏನಾದರೂ ಆಂಗಲ್‌ನಲ್ಲಿ ಮಾತಾಡುತ್ತಾರೆ ಅಂತ ಅನಿಸುತ್ತಿತ್ತು." ಎನ್ನುತ್ತಾರೆ ರಾಶಿಕಾ.

ಇನ್ನು ಸೂರಜ್‌ ಹಾಗೂ ರಾಶಿಕಾ ನಡುವೆ "ಐ ಲವ್ ಯೂ" ಅನ್ನೋ ಮ್ಯಾಟರ್ ಬಗ್ಗೆನೂ ಸ್ಪಷ್ಟನೆ ಕೊಟ್ಟಿದ್ದಾರೆ. "ಸೂರಜ್ ಯಾವುದೋ ಕ್ಯಾಪ್ಟನ್ಸಿ ವಿಷಯದಲ್ಲಿ ಅಪ್‌ಸೆಟ್ ಆಗಿ ಕೂತಿದ್ದ. ನನಗೆ ಅವನನ್ನು ನಗಿಸಬೇಕಿತ್ತು. ನನ್ನ ಫ್ರೆಂಡ್ ಅನ್ನು ನಾನು ಬೇಜಾರಲ್ಲಿ ಇರುವುದನ್ನು ಹೇಗೆ ನೋಡುವುದಕ್ಕೆ ಆಗುತ್ತೆ. ಅದಕ್ಕೆ ಏನೇನೋ ಟ್ರೈ ಮಾಡುತ್ತಿದ್ದೆ. ತಮಾಷೆಗೆ ಐ ಲವ್ ಯೂ, ಐ ಮಿಸ್ ಯೂ ಎರಡರಲ್ಲಿ ಮಿಸ್‌ ಯೂ ಹೋದರೆ ಏನಾಗುತ್ತೆ ಅಂದಾಗ, ಐ ಲವ್ ಯೂ ಅಂತ ಬರುತ್ತೆ ಎಂದ. ಆಗ ನಾನು ನಾಟ್ ಇಂಟ್ರೆಸ್ಟೆಡ್ ಅಂತ ಹೇಳ್ತೀನಿ ಅಷ್ಟೇ." ಎಂದು ಹೇಳಿದ್ದಾರೆ.

More from Filmibeat

English summary
BBK 12 Rashika revealed why she didn't say bye to Dhruvanth. Here is the reason.
Read more about: reality show controversy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X