BBK 12: ಬಿಗ್ ಬಾಸ್ ಮನೆಯಿಂದ ಹೊರ ಬಿದ್ದ ರಿಶಾ; ಹೊರ ಬಂದ್ಮೇಲೆ ಕಿಚ್ಚ ಮುಂದೆ ಹೇಳಿದ್ದೇನು?

ಬಿಗ್ ಬಾಸ್ ಕನ್ನಡ ಸೀಸನ್ 12 ಮತ್ತೊಂದು ವೀಕೆಂಡ್ ಮುಗಿದಿದೆ. ಮತ್ತೊಬ್ಬ ಸದಸ್ಯರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. 'ಸೂಪರ್ ಸಂಡೇ ವಿಥ್ ಬಾದ್‌ಷಾ ಸುದೀಪ' ಸಖತ್ ಇಂಟ್ರೆಸ್ಟಿಂಗ್ ಆಗಿತ್ತು. ಭಾನುವಾರದ ಶೋ ಆರಂಭ ಆಗುವುದಕ್ಕೂ ಮುನ್ನ ಬಿಗ್ ಬಾಸ್‌ ಮನೆಯ ಸದಸ್ಯರು ಏನೇನು ಮಾತಾಡಿಕೊಳ್ಳುತ್ತಿದ್ದಾರೆ ಅನ್ನೋದನ್ನು ವೀಕ್ಷಕರು ಮುಂದಿಟ್ಟಿದ್ದರು.

ಕಿಚ್ಚ ಚಪ್ಪಾಳೆ ಸಿಕ್ಕಿದ್ದಕ್ಕೆ ರಕ್ಷಿತಾ ಶೆಟ್ಟಿ ಸಿಕ್ಕಾಪಟ್ಟೆ ಖುಷಿಯಾಗಿದ್ದರು. ಇನ್ನೊಂದು ಕಡೆ ಅಶ್ವಿನಿ ಗೌಡ ಹಾಗೂ ಜಾಹ್ನವಿ ಇಬ್ಬರೂ ಕೂತು ಆತ್ಮಾವಲೋಕನ ಮಾಡಿಕೊಂಡಿದ್ದಾರೆ. ಈ ವೇಳೆ ಅಶ್ವಿನಿ ಗೌಡ ಎಮೋಷನಲ್ ಆಗಿದ್ದಾರೆ. ತಾನು ಜನರ ಮುಂದೆ ವಿಲನ್ ಆಗುವುದಕ್ಕೆ ಇಷ್ಟವಿಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಜಾಹ್ನವಿ ಸ್ವಲ್ಪ ಕೋಪವನ್ನು ಕಡಿಮೆ ಮಾಡಿಕೊಳ್ಳಿ ಎಂದು ಸಲಹೆ ಕೊಟ್ಟಿದ್ದಾರೆ.

BBK 12 Risha Gowda Eliminated from bigg boss kannada shocks viewers

ಈ ಬಾರಿ ಅಶ್ವಿನಿ ಗೌಡ ಹಾಗೂ ಜಾಹ್ನವಿ ನೇರವಾಗಿ ನಾಮಿನೇಟ್ ಆಗಿದ್ದಾರೆ. ಇನ್ನೊಂದು ಕಡೆ ರಘು ಜೊತೆ ಅಶ್ವಿನಿ ಗೌಡ ಕಿತ್ತಾಡಿಕೊಂಡು ಮನೆಯಿಂದ ಹೊರ ಹೋಗುವುದಾಗಿ ಹಠ ಹಿಡಿದಿದ್ದರು. ಹೀಗಾಗಿ ಈ ಬಾರಿ ಬಿಗ್ ಬಾಸ್ ಮನೆಯಿಂದ ಯಾರು ಹೊರ ಬರುತ್ತಾರೆ? ಅನ್ನೋ ಪ್ರಶ್ನೆ ಹುಟ್ಟಿಕೊಂಡಿತ್ತು. ಅದಕ್ಕೀಗ ತೆರೆ ಬಿದ್ದಿದೆ. ರಿಶಾ ಗೌಡ ಎಲಿಮಿನೇಟ್ ಆಗಿದ್ದಾರೆ. ಇದು ಬಿಗ್ ಬಾಸ್ ವೀಕ್ಷಕರಿಗೆ ಶಾಕ್ ಕೊಟ್ಟಿದೆ.

ಕಿಚ್ಚ ಸುದೀಪ್ ಒಬ್ಬೊಬ್ಬರನ್ನೇ ಸೇವ್ ಮಾಡಿಕೊಂಡು ಬಂದಿದ್ದರು. ಈ ಬಾರಿ ಬಿಗ್ ಬಾಸ್ ಮನೆಯಿಂದ ಹೊರ ಹೋಗುವವರ ಲಿಸ್ಟ್‌ನಲ್ಲಿ ಮಾಳು ನಿಪನಾಳ, ಧ್ರುವಂತ್ ಜೊತೆಗೆ ನೇರವಾಗಿ ನಾಮಿನೇಟ್ ಆಗಿದ್ದ ಅಶ್ವಿನಿ ಗೌಡ, ಜಾಹ್ನವಿ ಕೂಡ ಇದ್ದರು. ಇವರಲ್ಲಿ ಯಾರು ಬೇಕಾದರೂ ಹೊರ ಹೋಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ರಿಶಾ ನಾಮಿನೇಟ್ ಆಗಿದ್ದರೂ, ಅವರೇ ಹೊರ ಬರಬಹುದೆಂಬ ನಿರೀಕ್ಷೆಯಿರಲಿಲ್ಲ.

ಸುದೀಪ್ ಒಬ್ಬೊಬ್ಬರನ್ನೇ ಒಂದೊಂದು ಟಾಸ್ಕ್ ಕೊಟ್ಟು ಸೇವ್ ಮಾಡುತ್ತಾ ಬಂದರು. ಕೊನೆಯಲ್ಲಿ ಧ್ರುವಂತ್ ಹಾಗೂ ರಿಶಾ ಗೌಡ ಉಳಿದುಕೊಂಡರು. ಕಿಚ್ಚ ಸುದೀಪ್ ಈ ಇಬ್ಬರಲ್ಲಿ ಧ್ರುವಂತ್ ಅವರನ್ನು ಸೇವ್ ಮಾಡಿದರು. ರಿಶಾ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಬೇಕಾಗಿ ಬಂತು. ಆದರೆ, ಬಿಗ್ ಬಾಸ್ ರಿಶಾ ಅವರನ್ನು ಮುಖ್ಯ ದ್ವಾರದಿಂದ ಹೊರ ಬರಲು ಬಿಡಲಿಲ್ಲ. ಇನ್ನೊಂದು ಬಾಗಿಲ ಮೂಲಕ ಬರಬೇಕಾಗಿ ಆದೇಶಿಸಿದರು. ಅದಕ್ಕೆ ಕಾರಣವೇನು ಅನ್ನೋದು ಗೊತ್ತಾಗಿಲ್ಲ.

BBK 12 Risha Gowda Eliminated from bigg boss kannada shocks viewers

ಬಿಗ್ ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ಮುಂದೆ ರಿಶಾ ಎಲಿಮಿನೇಟ್ ಆಗಿದ್ದರ ಬಗ್ಗೆ ಮಾತಾಡಿದರು. ಇಷ್ಟು ಬೇಗ ಮನೆಯಿಂದ ಬರುತ್ತೇನೆ ಅಂತ ನಿರೀಕ್ಷೆ ಮಾಡಿರಲಿಲ್ಲ. ಯಾಕೆ ಎಲಿಮಿನೇಟ್ ಆದೆ ಅನ್ನೋ ಬಗ್ಗೆ ನನಗೆ ಗೊತಾಗುತ್ತಿಲ್ಲ. ಮನೆಯಲ್ಲಿ ಚಿಕ್ಕ ಪುಟ್ಟ ತಪ್ಪುಗಳು ನನ್ನಿಂದ ಆಗಿರಬಹುದು. ಇಲ್ಲಿಗೆ ಬಂದಿದ್ದೇ ನಿಮ್ಮ ಪ್ರೀತಿ ಸಂಪಾದಿಸುವುದಕ್ಕೆ. ಹೀಗಾಗಿ ಇನ್ಮುಂದೆನೂ ಇದೇ ಪ್ರೀತಿ ಕೊಡಿ" ಎಂದು ರಿಶಾ ವೇದಿಕೆ ಮೇಲೆ ಹೇಳಿದರು. ಅದಕ್ಕೆ ಕಿಚ್ಚ ನೀವು ಮನೆಗೆ ಹೋಗಿ ಎಲ್ಲಾ ಎಪಿಸೋಡ್‌ಗಳನ್ನು ನೋಡಿ ಆಗ ಗೊತ್ತಾಗುತ್ತೆ ಎಂದು ಹೇಳಿದರು.

ರಿಶಾ ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿ ಆಗಿದ್ದರು. ಆದರೆ, ಅವರ ಕೆಲವು ನಡೆಗಳೇ ಅವರಿಗೆ ಮುಳುವಾದವು. ಧ್ರುವಂತ್ ವಿಚಾರವಾಗಿ ಕಿಚ್ಚನ ಕೆಂಗಣ್ಣಿಗೆ ಗುರಿಯಾಗಿದ್ದರು. ಅಷ್ಟೇ ಅಲ್ಲದೆ ವೀಕ್ಷಕರು ಕೂಡ ಈ ನಡೆಯನ್ನು ವಿರೋಧಿಸಿದ್ದರು. ಇನ್ನು ಮನೆಯಲ್ಲಿ ಬರೀ ಕಿರುಚಾಡಿದ್ದು ಬಿಟ್ಟರೆ, ಟಾಸ್ಕ್‌ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲೇ ಇಲ್ಲ. ಹೀಗಾಗಿ ರಿಶಾ ಎಲಿಮಿನೇಟ್ ಆಗಿದ್ದಾರೆಂದು ಊಹಿಸಲಾಗಿದೆ.

More from Filmibeat

English summary
BBK 12: Risha Gowda Eliminated from bigg boss kannada shocks viewers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X