BBK 12: ಬಿಗ್ ಬಾಸ್ ಮನೆಯಲ್ಲಿ ಯಾರು ನಂ 1? ಎರಡನೇ ಸ್ಥಾನಕ್ಕೆ ಕುಸಿದ ಗಿಲ್ಲಿ.. ಯಾರಿಗೆ ಯಾವ ಸ್ಥಾನ?
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ ಸಿಗುತ್ತಿದೆ. ಇನ್ನೇನು ಬಿಗ್ ಬಾಸ್ ಮುಗಿಯುವುದಕ್ಕೆ ಕೆಲವೇ ವಾರಗಳು ಬಾಕಿ ಉಳಿದಿರುವಾಗಲೇ ಕಳೆದ ಸೀಸನ್‌ನ ರಜತ್ ಹಾಗೂ ಚೈತ್ರಾ ಕುಂದಾಪುರ ಅವರಿಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದೆ. ಈಗಾಗಲೇ ಮನೆಯೊಳಗೆ ಇರುವವರಿಗೆ ಇವರಿಬ್ಬರೂ ಟಫ್ ಕಾಫಿಟೇಷನ್ ಕೊಡುತ್ತಾರಾ? ಇಲ್ಲ ಇಲ್ಲೂ ಏನಾದರೂ ಟ್ವಿಸ್ಟ್ ಇದೆಯಾ? ಅನ್ನೋ ಕುತೂಹಲವಿದೆ.
ರಜತ್ ಹಾಗೂ ಚೈತ್ರಾ ಕುಂದಾಪುರ ಮನೆಯೊಳಗೆ ಎಂಟ್ರಿ ಕೊಟ್ಟಿದ್ದು, ಉಳಿದವರಂತೆ ಇವರೂ ಈಗ ಸ್ಪರ್ಧಿಗಳು. ಹೀಗಾಗಿ ಮನೆಯೊಳಗೆ ಈಗಾಗಲೇ ಪೈಪೋಟಿ ಹೆಚ್ಚಾಗಿದೆ. ಈ ಮಧ್ಯೆ ಬಿಗ್ ಬಾಸ್ ಇಂದಿನ ಎಪಿಸೋಡ್‌ನಲ್ಲಿ ಕ್ಯಾಪ್ಟನ್ ಧನುಷ್‌ಗೆ ವಿಶಿಷ್ಠವಾದ ಒಂದು ಟಾಸ್ಕ್ ಅನ್ನು ನೀಡಿತ್ತು. ಆ ಟಾಸ್ಕ್ ಬಿಗ್ ಬಾಸ್ ಮನೆಯವರ ಅಸಮಧಾನಕ್ಕೆ ಕಾರಣವಾಗಿದೆ.

ಇಲ್ಲಿವರೆಗೂ ಬಿಗ್ ಬಾಸ್ ಮನೆಯಲ್ಲಿ ಆಟ ಆಡಿಕೊಂಡಿರುವ ಸದಸ್ಯರಿಗೆ ಅಂಕಗಳನ್ನು ಕೊಡುವ ಟಾಸ್ಕ್ ಅನ್ನು ಕ್ಯಾಪ್ಟನ್ ಆಗಿರುವ ಧನುಷ್‌ಗೆ ನೀಡಲಾಗಿತ್ತು. ರಜತ್ ಹಾಗೂ ಚೈತ್ರಾ ಕುಂದಾಪುರ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವುದರಿಂದ ಇಬ್ಬರನ್ನೂ ಈ ಟಾಸ್ಕ್‌ನಿಂದ ಹೊರಗೆ ಇಡಲಾಗಿತ್ತು. ಇವರನ್ನು ಪ್ರೇಕ್ಷಕರಾಗಿ ಕೂರಿಸಲಾಗಿತ್ತು. ಉಳಿದ 11 ಮಂದಿಯಲ್ಲಿ ಧನುಷ್ ಯಾರಿಗೆ ಯಾವ ಸ್ಥಾನ ಕೊಟ್ಟರು? ನಂ 1 ಆಗಿದ್ದವರು ಬಿಗ್ ಬಾಸ್ ಕೊಟ್ಟ ಟ್ವಿಸ್ಟ್ ಏನು? ತಿಳಿಯುವುದಕ್ಕೆ ಮುಂದೆ ಓದಿ.
ಬಿಗ್ ಬಾಸ್‌ನಲ್ಲಿ ನಂ 1 ಟಾಸ್ಕ್
ಬಿಗ್ ಬಾಸ್ ಮನೆಯ ಸದಸ್ಯರಿಗೆ ಅಂಕಿಗಳನ್ನು ಕೊಡುವ ಟಾಸ್ಕ್‌ನಲ್ಲಿ ಧನುಷ್ 11ನೇ ಸ್ಥಾನ ಕೊಟ್ಟಿದ್ದು ಮಾಳು ನಿಪನಾಳಗೆ, 10ನೇ ಸ್ಥಾನ ಸೂರಜ್‌ಗೆ, 9ನೇ ಸ್ಥಾನ ಧ್ರುವಂತ್, 8ನೇ ಸ್ಥಾನ ರಾಶಿಕಾ, 7ನೇ ಸ್ಥಾನ ಸ್ಪಂದನಾ, 6ನೇ ಸ್ಥಾನ ರಘು, 4ನೇ ಸ್ಥಾನ ರಕ್ಷಿತಾ ಶೆಟ್ಟಿ ಹಾಗೂ 3ನೇ ಸ್ಥಾನವನ್ನು ಅಶ್ವಿನಿ ಗೌಡಗೆ ನೀಡಲಾಗಿತ್ತು. ಈ ಎಲ್ಲಾ ಸದಸ್ಯರಿಗೂ ಈ ಅಂಕಗಳು ಸಮಾಧಾನ ತಂದಿಲ್ಲ. ಇವೆಲ್ಲರೂ ಧನುಷ್ ಜೊತೆ ವಾಗ್ವಾದಕ್ಕೆ ಇಳಿದಿದ್ದರು.
ಗಿಲ್ಲಿಗೆ 2ನೇ ಸ್ಥಾನ
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟನಿಗೆ ಯಾವ ಸ್ಥಾನ ಸಿಗಬಹುದೆಂಬ ನಿರೀಕ್ಷೆ ವೀಕ್ಷಕರಲ್ಲಿ ಇತ್ತು. ಯಾಕಂದ್ರೆ, ಕಳೆದ ಎರಡು ವಾರಗಳಿಂದ ಗಿಲ್ಲಿ ಮೇಲೆ ಮನೆ ಮಂದಿ ಗಂಭೀರ ಆರೋಪಗಳನ್ನು ಮಾಡುತ್ತಿದ್ದರು. ಗಿಲ್ಲಿ ಮೇಲೆ ಹಲವು ದೂರುಗಳು ಇದ್ದವು. ಇಂತಹ ದೂರುಗಳನ್ನು ಮಾಡಿದವರಲ್ಲಿ ಧನುಷ್ ಕೂಡ ಇಬ್ಬರು. ಹೀಗಾಗಿ ಗಿಲ್ಲಿಗೆ ಈ ವಾರದ ಕ್ಯಾಪ್ಟನ್ ಧನುಷ್ ಯಾವ ಸ್ಥಾನ ಕೊಡಬಲ್ಲರು? ಎನ್ನುವ ಪ್ರಶ್ನೆ ಎದ್ದಿತ್ತು. ಗಿಲ್ಲಿಗೆ ಧನುಷ್ 2ನೇ ಸ್ಥಾನ ಕೊಟ್ಟಿದ್ದರು.

ಕಾವ್ಯಾಗೆ ನಂ 1 ಪಟ್ಟ ಕೊಟ್ಟ ಧನುಷ್
ಬಿಗ್ ಬಾಸ್ ಮನೆಯ ಸದಸ್ಯರಿಗಷ್ಟೇ ಅಲ್ಲ. ವೀಕ್ಷಕರನ್ನೂ ಧನುಷ್ ಅಚ್ಚರಿಗೊಳಿಸಿದ್ದರು. ಕಾವ್ಯಾಗೆ ನಂ 1 ಸ್ಥಾನವನ್ನು ಕೊಟ್ಟಿದ್ದರು. ಸದಾ ಗಿಲ್ಲಿ ಜೊತೆನೇ ಇರುತ್ತಾರೆಂಬ ಆರೋಪ ಹೊತ್ತಿದ್ದ ಕಾವ್ಯಾಗೆ ಧನುಷ್ ನಂ 1 ಸ್ಥಾನ ಕೊಟ್ಟಿದ್ದೇಕೆ? ಅನ್ನೋದಕ್ಕೆ ಸರಿಯಾದ ಕಾರಣ ಕೊಟ್ಟಿಲ್ಲ. ಹೀಗಾಗಿ ಮನೆ ಮಂದಿಯೆಲ್ಲ ಧನುಷ್ ನಿರ್ಧಾರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ತಮಗೆ ಸಿಗಬೇಕಾದ ಸ್ಥಾನ ಸಿಕ್ಕಿಲ್ಲವೆಂದು ಕಿಡಿಕಾರಿದ್ದಾರೆ.
ಕಾವ್ಯಾಗೆ ಕೊನೆಯಲ್ಲಿ ಟ್ವಿಸ್ಟ್
ಇನ್ನೇನು ಕಾವ್ಯಾ ನಂ 1 ಆಗಿಬಿಟ್ಟರು ಅನ್ನೋವಾಗಲೇ ಬಿಗ್ ಬಾಸ್ ಮತ್ತೊಂದು ಟ್ವಿಸ್ಟ್ ಕೊಟ್ಟಿತ್ತು. ಪ್ರೇಕ್ಷಕರಾಗಿ ಕೂತಿದ್ದ ರಜತ್ ಹಾಗೂ ಚೈತ್ರಾ ಕುಂದಾಪುರ ಅವರಿಗೆ ವಿಶೇಷವಾದ ಒಂದು ಅಧಿಕಾರವನ್ನು ಕೊಟ್ಟಿತ್ತು. ಇಬ್ಬರು ಚರ್ಚೆ ಮಾಡಿ ಒಂದು ಸ್ಥಾನವನ್ನು ಅದಲು-ಬದಲು ಮಾಡಬಹುದೆಂಬ ಅವಕಾಶ ನೀಡಿದ್ದರು. ಆಗ ಇಬ್ಬರು ಚರ್ಚೆ ಮಾಡಿ 6ನೇ ಸ್ಥಾನದಲ್ಲಿದ್ದ ರಘು ಅವರಿಗೆ ಮೊದಲನೇ ಸ್ಥಾನ ಮತ್ತು ಕಾವ್ಯಾಗೆ 6ನೇ ಸ್ಥಾನಕ್ಕೆ ಕಳುಹಿಸಿದರು.


Click it and Unblock the Notifications











