BBK 12: ಇಂತಹ ಮಾತು ಯಾಕೆ ಗಿಲ್ಲಿ? ಉಗ್ರ ಸ್ವರೂಪ ತಾಳಿದ ಮಂಜು.. ರಜತ್ ಕೆಂಡಾಮಂಡಲ
ಕಳೆದ ಕೆಲವು ದಿನಗಳಿಂದ ಬಿಗ್ ಬಾಸ್ ಮನೆಯ ಸದಸ್ಯರು ಒಬ್ಬರ ಮೇಲೆ ಮತ್ತೊಬ್ಬರು ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದರು. ವೀಕ್ಷಕರು ಕೂಡ ಕಳೆದೆರಡು ದಿನಗಳಿಂದ ಈ ಕಿತ್ತಾಟವನ್ನು ನೋಡಿ ನೋಡಿ ಸುಸ್ತಾಗಿದ್ದರು. ಹೀಗಾಗಿ ವೀಕ್ಷಕರಿಗೂ, ಮನೆ ಮಂದಿಗೂ ರಿಲೀಫ್ ಕೊಡುವುದಕ್ಕೆ ಬಿಗ್ ಬಾಸ್ ಮನೆಗೆ ಅತಿಥಿಗಳು ಎಂಟ್ರಿ ಕೊಟ್ಟಿದ್ದಾರೆ.
ಈಗಾಗಲೇ ಕಲರ್ಸ್ ಕನ್ನಡ ರಿಲೀಸ್ ಮಾಡಿರುವ ಪ್ರೋಮೊದಲ್ಲಿ ಮನೆಯೊಳಗೆ ಬಂದಿರುವ ಅತಿಥಿಗಳು ಯಾರು ಅನ್ನೋದು ರಿವೀಲ್ ಆಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಮಿಂಚಿದ್ದ ಉಗ್ರಂ ಮಂಜು, ರಜತ್ ಕಿಶನ್, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಮ್ ಬಿಗ್ ಬಾಸ್ ಮನೆಗೆ ಅತಿಥಿಗಳಾಗಿ ಆಗಮಿಸಿದ್ದಾರೆ.

ಮನೆಗೆ ಬಂದ ಅತಿಥಿಗಳಿಗೆ ಅತಿಥಿ ಸತ್ಕಾರ ಮಾಡದೇ ಹೋದರೆ ಹೇಗೆ? ಅದಕ್ಕೆ ಬಿಗ್ ಬಾಸ್ ಟಾಸ್ಕ್ ಅನ್ನು ಕೊಟ್ಟಿರುವಂತೆ ಕಾಣುತ್ತಿದೆ. ಮನೆಯೊಳಗಿರುವ ಸದಸ್ಯರಲ್ಲಿ ಕೆಲವು ಅಡುಗೆ ಮಾಡುವವರಾಗಿಯೂ, ಇನ್ನು ಕೆಲವರು ಸರ್ವೆಂಟ್‌ಗಳಾಗಿಯೂ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಬಂದ ಅತಿಥಿಗಳಿಗೂ ಹಾಗೂ ಗಿಲ್ಲಿಗೂ ಮಧ್ಯೆ ಏನೋ ನಡೆದಿದೆ. ಉಗ್ರಂ ಮಂಜು ಹಾಗೂ ರಜತ್ ಇಬ್ಬರೂ ಗರಂ ಆಗಿದ್ದಾರೆ. ಅಷ್ಟಕ್ಕೂ ಪ್ರೋಮೋದಲ್ಲಿ ಏನಿದೆ ಅನ್ನೋದನ್ನು ನೋಡುವುದಾರೇ.
ಬಿಗ್ ಬಾಸ್ ನೋಡುವ ವೀಕ್ಷಕರಿಗೆ ಇಂದಿನ (ನವೆಂಬರ್ 25) ಎಪಿಸೋಡ್ ಮಸ್ತ್ ಕಿಕ್ ಕೊಡಲಿದೆ. ಸೀಸನ್ 12 ಶುರುವಾಗಿ ಸುಮಾರು 50 ದಿನಗಳು ಕಳೆದಿವೆ. ಇಲ್ಲಿವರೆಗೂ ಮನೆಯೊಳಗಿರುವ ಸದಸ್ಯರನ್ನೇ ನೋಡಿರುವ ವೀಕ್ಷಕರಿಗೆ ಇಂದಿನ ಎಪಿಸೋಡ್ ವಿಶೇಷ ಮನರಂಜನೆ ನೀಡಲಿದೆ. ಬಿಗ್ ಬಾಸ್ ಕನ್ನಡ ಸೀಸನ್ 11ರ ಕಂಟೆಸ್ಟೆಂಟ್‌ಗಳು ಹಳೆಯ ನೆನೆಪುಗಳನ್ನು ಮೆಲುಕು ಹಾಕಬಹುದು. ವೀಕ್ಷಕರಿಗೆ ಒಂದಿಷ್ಟು ಮನರಂಜನೆ ಸಿಗಬಹುದು.
ಆದರೆ, ಗಿಲ್ಲಿ ಮಾತುಗಳು ಇತ್ತೀಚೆಗೆ ಅವರಿಗೆ ಮುಳುವಾಗುತ್ತಿವೆ. ಮನೆಗೆ ಬಂದ ಅತಿಥಿಗಳನ್ನೂ ಬಿಡುತ್ತಿಲ್ಲ. ಪ್ರೋಮೋದಲ್ಲಿ ತೋರಿಸಿರುವಂತೆ ಉಗ್ರಂ ಮಂಜು ಹಾಗೂ ರಜತ್ ಕೆಂಗಣ್ಣಿಗೆ ಗುರಿಯಾಗುವಂತೆ ಮಾತಾಡಿದ್ದಾರೆ. ಅಷ್ಟಕ್ಕೂ ಏನಾಯ್ತು ಅಂತ ನೋಡುವುದಾರೇ, ಅತಿಥಿಯಾಗಿ ಬಂದಿರುವ ಉಗ್ರಂ ಮಂಜು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆಂದು ಬಿಗ್ ಬಾಸ್ ಅನೌನ್ಸ್ ಮಾಡುತ್ತಾರೆ. "ನಮ್ಮ ನಲ್ಮೆಯ ಮಹಾರಾಜ ಮಂಜು ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ." ಎಂದು ಅನೌನ್ಸ್ ಮಾಡುತ್ತಿದ್ದಂತೆ ಗಿಲ್ಲಿ ನಟ "ಎರಡನೆಯದ್ದಾ.. ಮೂರನೆಯದ್ದಾ?" ಎಂದು ಪ್ರಶ್ನೆ ಮಾಡುತ್ತಾರೆ.
ಗಿಲ್ಲಿಯ ಈ ಮಾತು ಉಗ್ರಂ ಮಂಜುರನ್ನು ಕೆರಳಿಸಿದೆ. "ಪರ್ಸನಲ್ ಅಂತ ಬಂದು ಬಿಟ್ಟರೆ, ಸಪ್ಲೇಯರೂ ಅಲ್ಲ. ನಾನು ಅತಿಥಿನೂ ಅಲ್ಲ. ಬೇರೆನೇ ಆಗುತ್ತೆ" ಎಂದು ಉಗ್ರಂ ಮಂಜು ಕೋಪದಲ್ಲಿ ಹೇಳಿದ್ದಾರೆ. ಇನ್ನೊಂದು ಸಂದರ್ಭದಲ್ಲಿ ಮೋಕ್ಷಿತಾ ಪೈ ಬಿಗ್ ಬಾಸ್ ಮನೆಗೆ ಉಗ್ರಂ ಮಂಜು ಅವರ ಬ್ಯಾಚುಲರೇಟ್ ಪಾರ್ಟಿ ಮಾಡುವುದಕ್ಕೆ ಬಂದಿದ್ದೇವೆ ಎನ್ನುತ್ತಾರೆ. ಆಗ ಗಿಲ್ಲಿ ಬಿಟ್ಟಿ ಊಟ ಮಾಡಿಕೊಂಡು ಹೋಗುವುದಕ್ಕೆ ಬಂದಿದ್ದೀರಾ? ಎನ್ನುತ್ತಾರೆ. ಈ ಮಾತಿಗೆ ರಜತ್ ಕೆಂಡ ಕಾರಿದ್ದಾರೆ.
"ನೀನು ಕೊಡ್ತಾ ಇದ್ದೀಯನಪ್ಪ ಬಿಟ್ಟು ಊಟ. ಮಾತುಗಳು ಕರೆಕ್ಟ್ ಆಗಿ ಬರಲಿ. ಎಲ್ಲರ ಹತ್ತಿರ ಮಾತಾಡುವಂತೆ ನನ್ನ ಹತ್ತಿರ ಮಾತಾಡುವುದಕ್ಕೆ ಬರಬೇಡ. ಎಷ್ಟರಲ್ಲಿ ಇರಬೇಕು. ಅಷ್ಟರಲ್ಲಿ ಇರಬೇಕು" ಅಂತ ರಜತ್ ಅವಾಜ್ ಹಾಕಿದ್ದಾರೆ. ಉಗ್ರಂ ಮಂಜು, ರಜತ್ ಸೇರಿದಂತೆ ಮನೆಯವರೊಂದಿಗೆ ಗಿಲ್ಲಿ ನಡೆದುಕೊಂಡ ರೀತಿಗೆ ಕೆಲ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಗಿಲ್ಲಿಗೆ ಬೆಂಬಲವಾಗಿ ನಿಂತಿದ್ದಾರೆ. ಅಸಲಿಗೆ ಅಲ್ಲೇನಾಗಿದೆ ಅನ್ನೋದನ್ನು ನೋಡುವುದಕ್ಕೆ ಇಂದಿನ ಎಪಿಸೋಡ್ ನೋಡಲೇಬೇಕು.


Click it and Unblock the Notifications











