BBK 12: ಬಿಗ್ ಬಾಸ್ ಮನೆಯೊಳಗೆ ಉಗ್ರಂ ಮಂಜು ಲವ್ ಸ್ಟೋರಿ; ಮಂಗಳೂರು ಲಾಂಗ್ ಡ್ರೈವ್‌ನಿಂದ ನಿಶ್ಚಿತಾರ್ಥದವರೆಗೆ

ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಕಳೆದ ಸೀಸನ್‌ನ ಸದಸ್ಯರು ಅತಿಥಿಗಳಾಗಿ ಬಂದಿರೋದು ಗೊತ್ತೇ ಇದೆ. ಅತಿಥಿಗಳ ನೆಪದಲ್ಲಿ ಮನೆಯ ಸದಸ್ಯರ ತಾಳ್ಮೆ ಪರೀಕ್ಷಿಸುತ್ತಿದ್ದಾರೆ. ಇನ್ನೊಂದು ಕಡೆ ಅತಿಥಿಗಳೇ ಮನೆಯವರಿಗಾಗಿ ಟಾಸ್ಕ್‌ಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇಲ್ಲಿವರೆಗೂ ಬಿಗ್ ಬಾಸ್‌ ನೀಡಿದ ಸರ್ಪ್ರೈಸ್‌ನಲ್ಲಿ ಇದೊಂತರ ವಿಶೇಷ ಅಂತ ಹೇಳಬಹುದು. ಅದರಲ್ಲೂ ಉಗ್ರಂ ಮಂಜು ಬ್ಯಾಚುಲರ್ ಪಾರ್ಟಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರೋದು ವೀಕ್ಷಕರಿಗಂತೂ ಕಿಕ್ ಕೊಟ್ಟಿದೆ.

ಕಳೆದ ಸೀಸನ್‌ನಲ್ಲಿ ವೇದಿಕೆ ಮೇಲೆ ಕಿಚ್ಚ ಸುದೀಪ್ ಮುಂದೆ ಉಗ್ರಂ ಮಂಜು ಮದುವೆ ವಿಚಾರವೇ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಉಗ್ರಂ ಮಂಜು ಮದುವೆ ಬಗ್ಗೆ ಅವರ ತಂದೆ-ತಾಯಿಗೆ ಕಿಚ್ಚ ಸುದೀಪ್ ಇದೇ ವೇದಿಕೆ ಮೇಲೆ ಕೇಳಿದ್ದರು. 11ನೇ ಸೀಸನ್ ಮುಗಿದು 12ನೇ ಸೀಸನ್‌ಗೆ ಮುಗಿಯುವುದರೊಳಗೆ ಉಗ್ರಂ ಮಂಜು ನಿಶ್ಚಿತಾರ್ಥ ನಡೆದಿದೆ. ಇನ್ನೇನು ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಅದಕ್ಕೂ ಮುನ್ನ ಬಿಗ್ ಬಾಸ್ ಬಿಗ್ ಸರ್ಪ್ರೈಸ್ ಕೊಟ್ಟಿದೆ.

BBK 12 Ugramm Manju Love Story revealed in Bigg Boss house

ಇನ್ನು ಬಿಗ್ ಬಾಸ್ ಮನೆಯೊಳಗೆ ಎಂಜಾಯ್ ಮಾಡುತ್ತಿರುವ ಉಗ್ರಂ ಮಂಜುಗೆ ಬಿಗ್ ಬಾಸ್ ಅವರ ಲವ್ ಸ್ಟೋರಿ ಬಗ್ಗೆ ಕೇಳಿದ್ದರು. ಇಂದಿನ ಸಂಚಿಕೆಯಲ್ಲಿ ಅವರಿಗೆ ಉಗ್ರಂ ಮಂಜು ಲವ್ ಸ್ಟೋರಿ ಕೇಳುವುದಕ್ಕೆ ಒಂದು ಸೆಟಪ್ ಕೂಡ ಮಾಡಲಾಗಿತ್ತು. ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿಸಿ, ಗೆಳತಿಯೊಂದಿಗೆ ಮಂಗಳೂರಿಗೆ ಲಾಂಗ್ ಡ್ರೈವ್ ಹೋಗಿ ಹಿಂತಿರುಗಿ ಬರುವಾಗ ಚಿಗುರಿದ ಪ್ರೀತಿ ಬಗ್ಗೆ ಉಗ್ರಂ ಮಂಜು ಹೇಳಿಕೊಂಡಿದ್ದಾರೆ.

ಬಿಗ್ ಬಾಸ್ ಉಗ್ರಂ ಮಂಜುಗಾಗಿ ಒಂದು ಸೆಟಪ್ ಮಾಡಿತ್ತು. ಅದರಲ್ಲಿ ಉಗ್ರಂ ಮಂಜು ಹಾಗೂ ಅವರ ಭಾವಿ ಪತ್ನಿ ಸಾಯಿ ಪಲ್ಲವಿಯವರ ಫೋಟೋಗಳನ್ನು ನೇತು ಬಿಡಲಾಗಿತ್ತು. ಅವುಗಳ ಮಧ್ಯೆ ಉಗ್ರಂ ಮಂಜು ಹಾಗೂ ಅವರ ಲವ್ ಸ್ಟೋರಿ ಲಾಂಗ್ ಡ್ರೈವ್‌ನಿಂದ ಶುರು ಮಾಡಿತ್ತು.

"ನನ್ನ ಲೈಫ್‌ನಲ್ಲಿ ಲಾಸ್ಸ್ ಸೀಸನ್ ಅನ್ನು ಕೊನೆಯ ಉಸಿರು ಇರೋವರೆಗೂ ಮರೆಯೋಕೆ ಆಗಲ್ಲ. ಎಲ್ಲಾ ಕರ್ನಾಟಕದ ತಾಯಿಯಂದಿರ ಪ್ರೀತಿ, ನಮ್ಮ ತಂದೆ-ತಾಯಿ ಪ್ರೀತಿ ಇವತ್ತು ನಮಗೆ ಸಿಕ್ಕಿರೋದು. ಸಾಯಿ ಸಂಧ್ಯಾ.. ನಾನು ಮಾಡಿರುವ ಅದೃಷ್ಟನೋ, ನನ್ನ ತಂದೆ-ತಾಯಿ ಮಾಡಿರುವಂತಹ ಪುಣ್ಯನೋ.. ಈ ನೇಚರ್ ಕಳಿಸಿಕೊಟ್ಟಿರುವ ಗಿಫ್ಟ್ ಇರಬಹುದಾ ನನಗೆ ಗೊತ್ತಿಲ್ಲ." ಎಂದು ತನ್ನ ಭಾವಿ ಪತ್ನಿ ಬಗ್ಗೆ ಹೇಳಿಕೊಂಡಿದ್ದಾರೆ.

BBK 12 Ugramm Manju Love Story revealed in Bigg Boss house

ಉಗ್ರಂ ಮಂಜು ಹಾಗೂ ಸಾಯಿ ಸಂಧ್ಯಾ ಅವರದ್ದು ಎರಡು ತಿಂಗಳ ಪ್ರೀತಿ. ಮಂಗಳೂರಿಗೆ ಲಾಂಗ್ ಡ್ರೈವ್ ಹೋಗುವುದರಿಂದ ಶುರುವಾಗಿದ್ದು, ನಿಶ್ವಿತಾರ್ಥದವರೆಗೂ ಬಂದು ನಿಂತಿದೆ. "ಅಷ್ಟೊಂದು ಇಂಟ್ರೆಸ್ಟಿಂಗ್ ಏನೂ ಇಲ್ಲ. ಇದು ಎರಡು ತಿಂಗಳ ಪ್ರೀತಿ ಅಷ್ಟೇ. ಲಾಂಗ್ ಡ್ರೈವ್ ಒಂದು ಕಡೆ ಕರೆದುಕೊಂಡು ಹೋಗುತ್ತೇನೆ. ಮನೆಗೆ ಟೆಂಪಲ್‌ಗೆ ಹೋಗಿ ಬರುತ್ತೇನೆ ಎಂದು ಹೇಳಿ ಬಂದಿದ್ದರು. ಅವಳ ಮ್ಯೂಚವಲ್ ಫ್ರೆಂಡ್ ಬಂದರೆ ಓಕೆನಾ ಅಂತ ಕೇಳುತ್ತೇನೆ. ಅವಳನ್ನು ಕರೆದುಕೊಂಡು ಮೂರೂ ಜನ ಹೊರಡುತ್ತೇವೆ. ಎಲ್ಲಿಗೆ ಹೋಗಿದ್ದು, ಮಂಗಳೂರಿನ ವನ ದುರ್ಗ ಟೆಂಪಲ್‌ಗೆ ಲಾಂಗ್ ಡ್ರೈವ್. ಅಲ್ಲಿ ಆ ತಾಯಿಯ ಆಶೀರ್ವಾದ ಪಡೆದುಕೊಳ್ಳುತ್ತೇನೆ. ಅಲ್ಲಿನ ಗುರುಗಳ ಹತ್ತಿರ ಈತರ ವಿಚಾರವಿದೆ ಎಂದು ಹೇಳಿಕೊಳ್ಳುತ್ತೇನೆ. ಒಳ್ಳೆಯದಾಗುತ್ತೆ ಹೋಗು. ಒಳ್ಳೆಯ ಹುಡುಗಿ ಅಂತ ಹೇಳುತ್ತಾರೆ ಅಷ್ಟೇ. ತುಂಬಾ ಸಿಂಪಲ್ ಹುಡುಗಿ, ಸಂಬಂಧಗಳಿಗೆ ಬೆಲೆ ಕೊಡುತ್ತಾಳೆ. ಪ್ರೀತಿ-ವಿಶ್ವಾಸಕ್ಕೆ ಬೆಲೆ ಕೊಡುತ್ತಾಳೆ." ಎಂದಿದ್ದಾರೆ.

ಹಾಗೇ ಬಿಗ್ ಬಾಸ್ ಮನೆಗೆ ಹೋಗುತ್ತೇನೆ ಅಂದಾಗ ಏನಂದ್ರು? ಅನ್ನೋದನ್ನು ಹೇಳಿದ್ದಾರೆ. "ಬಿಗ್ ಬಾಸ್ ಮನೆಗೆ ಹೋಗುತ್ತೇನೆ ಅಂದಾಗ ಹೋಗಿ ಬಾ.. ಅಶ್ವಿನಿಯವರಿಗೆ ಗೌರವ ಕೊಟ್ಟು ಬಿಡು. ಅವರ ಅಪೋಸಿಟ್ ಬೀಳುವುದಕ್ಕೆ ಹೋಗಬೇಡ ಅಂದರು. ರಾಶಿಕಾ, ಕಾವ್ಯಾ, ಸ್ಪಂದನಾ ಇವರೆಲ್ಲ ಇದ್ದಾರಲ್ಲ ನೋಡು ಪರ್ವಾಗಿಲ್ಲ. ಫ್ಲರ್ಟ್ ಮಾಡುತ್ತೀಯಾ ಮಾಡು. ಆದರೆ, ರಿಂಗ್ ಇದೆಯಲ್ಲ ಅದನ್ನು ಮರೆಯಬೇಡ ಅಂದರು. ಐ ಲವ್ ಯು ಅಂತೆಲ್ಲ ಪ್ರಪೋಸ್ ಮಾಡಿದ್ದೇನೂ ಇಲ್ಲ. ಟೆಂಪಲ್‌ಗೆ ಹೋಗಿ ವಾಪಾಸ್ ಬರೋವರೆಗೂ ಏನೂ ಇಲ್ಲ. ಬರುವಾಗ ಏಕ್‌ಧಮ್ ಒಂದೇ ಮಾತು ಮದುವೆ ಆಗೋಣ ಅಂತ ಅಂದೆ. ಅದಕ್ಕೆ ಅವಳು ಬೇಡ. ಇನ್ನೂ ಸ್ವಲ್ಪ ಅರ್ಥ ಮಾಡಿಕೊಳ್ಳೋಣ ಅಂದಳು. ಅದಕ್ಕೆ ನಾನು ಅರ್ಥ ಮಾಡಿಕೊಂಡಿದ್ದು ಆಯ್ತು ಅಂದೆ. ನಿಶ್ವಿತಾರ್ಥ ಆಯ್ತು. ಆದರೆ, ನನ್ನ ಮದುವೆಗೆ ಬಿಗ್ ಬಾಸ್ ಮನೆಯಲ್ಲಿ ಕಲರ್ಸ್‌ ಕನ್ನಡ ಇಷ್ಟೊಂದು ಸರ್ಪ್ರೈಸ್ ಕೊಡುತ್ತೆ ಅಂತ ಅಂದುಕೊಂಡಿರಲಿಲ್ಲ." ಎಂದು ಹೇಳಿದ್ದಾರೆ.

More from Filmibeat

English summary
BBK 12 Ugramm Manju Love Story revealed in Bigg Boss house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X