BBK 12: ರಜತ್, ಚೈತ್ರಾ ಕುಂದಾಪುರ ಮನೆಯಲ್ಲೇ ಉಳಿದುಕೊಳ್ಳುವುದಕ್ಕೊಂದು ಕಾರಣವಿದೆ; ಕಿಚ್ಚ ಕೊಟ್ಟ ಸುಳಿವೇನು?

ಕಳೆದೊಂದು ವಾರದಿಂದ ಬಿಗ್ ಬಾಸ್‌ನಲ್ಲಿ ಹೈ ಡ್ರಾಮವೇ ನಡೆದಿತ್ತು. ಮನೆಯೊಳಗೆ ಅತಿಥಿಯಾಗಿ ಕಳೆದ ಸೀಸನ್‌ನ ಜನಪ್ರಿಯ ಸದಸ್ಯರು ಆಗಮಿಸಿದ್ದರು. ಒಂದು ವಾರಗಳ ಕಾಲ ಉಗ್ರಂ ಮಂಜು, ಮೋಕ್ಷಿತಾ ಪೈ, ತ್ರಿವಿಕ್ರಮ್, ರಜತ್ ಹಾಗೂ ಚೈತ್ರಾ ಕುಂದಾಪುರ ಈ ಐವರು ಮಂದಿ ಎಂಟ್ರಿ ಕೊಟ್ಟಿದ್ದರು. ಮನೆಯಲ್ಲಿ ಐವರ ಅತಿಥಿ ಸತ್ಕಾರ ಮಾಡಬೇಕಿತ್ತು. ಹೀಗಾಗಿ ಟಾಸ್ಕ್‌ಗಳ ಜೊತೆಗೆ ಎರಡೂ ಸೀಸನ್ ಸ್ಪರ್ಧಿಗಳ ಪೈಪೋಟಿಗೆ ಬಿದ್ದಿದ್ದರು.

ಅತಿಥಿಗಳು ಬಂದು ಒಂದು ವಾರವಾಗಿತ್ತು. ಅದೇ ಸಮಯಕ್ಕೆ ವಾರದ ಕತೆ ಕಿಚ್ಚನ ಜೊತೆನೂ ಶುರುವಾಗಿತ್ತು. ವೀಕೆಂಡ್‌ನ ಮೊದಲ ದಿನ ಬಿಗ್ ಬಾಸ್ ಮನೆಯ ಸದಸ್ಯರಿಗೆ ಕ್ಲಾಸ್ ತೆಗೆದುಕೊಳ್ಳಲಾಗುತ್ತೆ. ವಾರದ ಉದ್ದಕ್ಕೂ ಮನೆಯ ಸದಸ್ಯರು ಹೇಗೆ ನಡೆದುಕೊಂಡರು? ಯಾರದ್ದು ತಪ್ಪು? ಯಾರದ್ದು ಸರಿ? ಅನ್ನೋ ಚರ್ಚೆಗಳು ಆಗುತ್ತವೆ. ಈ ವಾರ ಇಂತಹ ಚರ್ಚೆ ಆಗುವುದಕ್ಕೆ ಹೆಚ್ಚು ಅವಕಾಶಗಳು ಇದ್ದವು. ಅದಕ್ಕೆ ಕಾರಣ ಗಿಲ್ಲಿ ಹಾಗೂ ಉಗ್ರಂ ಮಂಜು ನಡುವಿನ ಕಿತ್ತಾಟ.

BBK 12 ugramm Manju Mokshita Trivikram Out there is the reason Rajat and Chaitra Kundapura still inside

ಇನ್ನೊಂದು ಕಡೆ ಬಿಗ್ ಬಾಸ್ ಮನೆಯ ಸದಸ್ಯರ ಲೆಕ್ಕಾಚಾರ ತಲೆ ಕೆಳಗಾಗಿದೆ. ಅತಿಥಿಗಳಾಗಿ ಬಂದವರು ವೀಕೆಂಡ್‌ನಲ್ಲಿ ಮನೆಯಿಂದ ಹೊರಗೆ ಹೋಗಬಹುದೆಂದು ನಿರೀಕ್ಷೆ ಮಾಡಿದ್ದರು. ಅದಕ್ಕೆ ಕಿಚ್ಚ ಸುದೀಪ್ ಟ್ವಿಸ್ಟ್ ಕೊಟ್ಟಿದ್ದಾರೆ. ಅತಿಥಿಗಳಾಗಿ ಎಂಟ್ರಿ ಕೊಟ್ಟಿದ್ದ ಐದು ಮಂದಿಗಳ ಪೈಕಿ ಮೂವರನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಕರೆದುಕೊಂಡರೆ, ಇನ್ನು ಇಬ್ಬರನ್ನು ಮನೆಯಲ್ಲಿಯೇ ಉಳಿಸಿದ್ದಾರೆ. ರಜತ್ ಹಾಗೂ ಚೈತ್ರಾ ಕುಂದಾಪುರ ಸ್ಪರ್ಧಿಗಳಾಗಿ ಮನೆಯೊಳಗೆ ಕಂಟಿನ್ಯೂ ಆಗುತ್ತಿದ್ದಾರೆ.

ಈಗಾಗಲೇ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮೂವರು ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ರಘು, ಸೂರಜ್ ಹಾಗೂ ರಿಶಾಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಡಲಾಗಿತ್ತು. ಅವರಲ್ಲಿ ರಿಶಾ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದರು. ಈಗ 50 ದಿನಗಳಾದ್ಮೇಲೆ ಮತ್ತೆ ಇಬ್ಬರನ್ನು ಮನೆಯೊಳಗೆ ಕಳುಹಿಸಲಾಗಿದೆ. ಉಗ್ರಂ ಮಂಜು, ಮೋಕ್ಷಿತಾ ಪೈ ಹಾಗೂ ತ್ರಿವಿಕ್ರಮ್ ಮೂವರನ್ನು ಮನೆಯಿಂದ ಹೊರಗೆ ಕರೆಸಿಕೊಳ್ಳುತ್ತಿದ್ದಂತೆ, ಇಬ್ಬರು ಮನೆಯೊಳಗೆ ಉಳಿದುಕೊಂಡಿದ್ದಕ್ಕೆ ಕಾರಣವಿದೆ ಎಂದಿದ್ದಾರೆ. ಈ ಮೂಲಕ ಕಿಚ್ಚ ಸುದೀಪ್ ಮನೆಯಲ್ಲಿನ ಸದಸ್ಯರು ಹಾಗೂ ವೀಕ್ಷಕರ ತಲೆಗೆ ಹುಳ ಬಿಟ್ಟಿದ್ದಾರೆ.

ಬಿಗ್ ಬಾಸ್‌ನ ಮುಂದಿನ ಸಂಚಿಕೆಗಳಲ್ಲಿ ಈ ಸೀಕ್ರೆಟ್ ಏನು ಅನ್ನೋದು ಒಂದೊಂದಾಗಿಯೇ ಹೊರಬೀಳಲಿದೆ. ಇಲ್ಲಿವರೆಗೂ ಅತಿಥಿಗಳಾಗಿ ನಡೆಸಿಕೊಂಡಿದ್ದು, ಇನ್ಮುಂದೆ ಸ್ಪರ್ಧಿಗಳಾಗಿ ನೋಡಲಾಗುತ್ತೆ ಎಂದು ಕಿಚ್ಚ ಸುದೀಪ್ ಎಚ್ಚರಿಕೆಯನ್ನೂ ನೋಡಿದ್ದಾರೆ. ಕಳೆದ ಸೀನಸ್‌ನ ಈ ಇಬ್ಬರು ಸ್ಪರ್ಧಿಗಳನ್ನು ಮನೆಯೊಳಗೆ ಉಳಿಸಿದ್ದು ಯಾಕೆ? ಸದ್ಯ ಈ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಕೆಲವರು ಸೋಶಿಯಲ್ ಮೀಡಿಯಾಗಳಲ್ಲಿ ಗೆಸ್ ಮಾಡುವುದಕ್ಕೂ ಶುರು ಮಾಡಿದ್ದಾರೆ.

BBK 12 ugramm Manju Mokshita Trivikram Out there is the reason Rajat and Chaitra Kundapura still inside

ಬಿಗ್ ಬಾಸ್ ಪಂಡಿತರ ಲೆಕ್ಕಾಚಾರದ ಪ್ರಕಾರ, ಈ ಬಾರಿಯ ಬಿಗ್ ಬಾಸ್ ಸೀಸನ್ 12 ಒನ್ ಮ್ಯಾನ್ ಶೋ ರೀತಿ ಆಗಿದೆ. ಗಿಲ್ಲಿ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿ ಹೊರ ಹೊಮ್ಮಿದ್ದಾರೆ. ಹೀಗಾಗಿ ಈ ಶೋ ಗೆಲ್ಲೋದು ಗಿಲ್ಲಿನೇ ಅಂತ ವೀಕ್ಷಕರು ಭವಿಷ್ಯ ನುಡಿದಿದ್ದಾರೆ. ಹೀಗೆ ಆದರೆ, ಈ ಸೀಸನ್ ಹಿನ್ನಡೆಯನ್ನು ಅನುಭವಿಸುತ್ತೆ. ಅಶ್ವಿನಿ ಗೌಡ ಮನೆಯಲ್ಲಿ ಸದ್ದು ಮಾಡುತ್ತಿದ್ದರೂ, ಅವರಿಗೆ ನೆಗೆಟಿವ್ ಕಮೆಂಟ್‌ಗಳೇ ಹೆಚ್ಚಾಗಿ ಬರುತ್ತಿವೆ.

ಇನ್ನು ರಘು ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಬಹುದೆಂಬ ನಿರೀಕ್ಷೆಯಿತ್ತು. ಮನೆಯೊಳಗೆ ಗಿಲ್ಲಿ ಹಾಗೂ ರಘು ಒಂದಾಗಿದ್ದಾರೆ. ಇಲ್ಲಿವರೆಗೂ ಹಾವು-ಮುಂಗುಸಿಯಂತೆ ಕಿತ್ತಾಡುತ್ತಿದ್ದ ಅಶ್ವಿನಿ ಗೌಡ ಹಾಗೂ ಗಿಲ್ಲಿ ಒಬ್ಬರಿಗೊಬ್ಬರು ಬೆಂಬಲಕ್ಕೆ ನಿಂತಿದ್ದಾರೆ. ಒಂದು ಲೆಕ್ಕಾಚಾರದ ಪ್ರಕಾರ ರಜತ್ ಹಾಗೂ ಚೈತ್ರಾ ಕುಂದಾಪುರ ಸೀಸನ್ 12 ಸ್ಪರ್ಧಿಗಳಿಗೆ ಪ್ರಬಲ ಸ್ಪರ್ಧಿಗಳಾಗುವ ಸಾಧ್ಯತೆಯಿದೆ. ಅಶ್ವಿನಿ-ಗಿಲ್ಲಿ ಜಂಟಿಯಾಗಿ ರಜತ್-ಚೈತ್ರಾ ಕುಂದಾಪುರ ಅವರನ್ನು ಎದುರಿಸುವ ಪ್ಲ್ಯಾನ್ ಮಾಡಿರಬಹುದು. ಒಟ್ನಲ್ಲಿ ವೀಕೆಂಡ್ ಮುಗಿಯುತ್ತಿದ್ದಂತೆ ಅಸಲಿ ಆಟ ಶುರುವಾಗಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X