BBK 12: "ನೀನು ಯಾವಾಗಾದ್ರೂ ನನ್ನ ಮದ್ವೆಗೆ ಬಂದಿದ್ಯಾ?"; ಗಿಲ್ಲಿಗೆ ಉಗ್ರಾವತಾರ ತೋರಿಸಿದ ಮಂಜು
ಈ ವಾರ ಬಿಗ್ ಬಾಸ್ ಕನ್ನಡ ಸಖತ್ ಇಂಟ್ರೆಸ್ಟಿಂಗ್ ಆಗುವ ಹಾಗೆ ಕಾಣಿಸುತ್ತಿದೆ. ಬಿಗ್ ಬಾಸ್ ಮನೆಯೊಳಗೆ ಕಳೆದ ಸೀಸನ್‌ನ ಸದಸ್ಯರು ಅತಿಥಿಗಳಾಗಿ ಬಂದಿದ್ದಾರೆ. ಅದರಲ್ಲಿ ಉಗ್ರಂ ಮಂಜು, ಮೋಕ್ಷಿತಾ ಪೈ, ತ್ರಿವಿಕ್ರಮ್, ಚೈತ್ರಾ ಕುಂದಾಪುರ ಹಾಗೂ ರಜತ್ ಕಿಶನ್ ಬಂದಿದ್ದಾರೆ. ಅತಿಥಿಗಳು ಮನೆಯೊಳಗೆ ಕಾಲಿಡುತ್ತಿದ್ದಂತೆ ಗಿಲ್ಲಿ ಕ್ವಾಟ್ಲೆ ಕೊಡುವುದಕ್ಕೆ ಶುರು ಮಾಡಿದ್ದಾರೆ.
ಮನೆಗೆ ಅತಿಥಿಗಳು ಬರುತ್ತಿದ್ದಂತೆ ಗಿಲ್ಲಿ ಡಾಮಿನೇಟ್ ಮಾಡಿದ್ದಾರೆ. ಅದರಲ್ಲೂ ಟ್ರಿಗರ್ ಮಾಡಿದರೆ, ರೊಚ್ಚಿಗೇಳು ಇಬ್ಬರು ಸ್ಪರ್ಧಿಗಳನ್ನೇ ಟಾರ್ಗೆಟ್ ಮಾಡಿದ್ದಾರೆ. ಉಗ್ರಂ ಮಂಜು ಹಾಗೂ ರಜತ್ ಕಿಶನ್ ಇಬ್ಬರ ತಾಳ್ಮೆ ಪರೀಕ್ಷೆ ಮಾಡಿದ್ದಾರೆ. ಆದರೆ, ಅತಿಥಿಗಳ ಮುಂದೆ ಗಿಲ್ಲಿ ನಡೆದುಕೊಂಡ ರೀತಿ ಅವರಿಗೆ ನೆಗೆಟಿವ್ ಆಗುತ್ತಿದೆ. ಬೇಕು ಬೇಕಂತಲೇ ಅತಿಥಿಗಳನ್ನು ಟ್ರಿಗರ್ ಮಾಡಿದಂತೆ ಕಾಣುತ್ತಿತ್ತು.

ಬಿಗ್ ಬಾಸ್ ಮನೆಯೊಳಗೆ ಉಗ್ರಂ ಮಂಜುಗೆ ಅದ್ಧೂರಿ ಸ್ವಾಗತ ಸಿಕ್ಕಿತ್ತು. ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿರುವ ಉಗ್ರಂ ಮಂಜು ವಿವಾಹಕ್ಕೆ ಸಿದ್ಧವಾಗುತ್ತಿದ್ದಾರೆ. ಹೀಗಾಗಿ ಮನೆಯ ಸದಸ್ಯರಿಗೆ ಬಿಗ್ ಬಾಸ್ ಉಗ್ರಂ ಮಂಜು ಮದುವೆ ಆಗುತ್ತಿರುವ ವಿಷಯವನ್ನು ಅನೌನ್ಸ್ ಮಾಡಿದರು. ಹೀಗೆ ಅನೌನ್ಸ್ ಮಾಡುತ್ತಿದ್ದಂತೆ ಗಿಲ್ಲಿ ಮೂರನೇ ಮದುವೆನಾ? ಏಳನೇ ಮದುವೆನಾ? ಎಂದು ಗೇಲಿ ಮಾಡಿದರು. ಇದು ಆ ಕ್ಷಣಕ್ಕೆ ತಮಾಷೆಯಾಗಿ ಕಂಡರೂ ಉಗ್ರಂ ಮಂಜು ಅಪ್‌ಸೆಟ್ ಆದರು.
ಗಿಲ್ಲಿ ಆಡಿದ ಈ ಮಾತಿಗೆ ಉಗ್ರಂ ಮಂಜು ಗರಂ ಆಗಿರೋದು ಇಂದಿನ ಎಪಿಸೋಡ್‌ನಲ್ಲಿ ಕ್ರಿಯರ್ ಎದ್ದು ಕಾಣುತ್ತಿತ್ತು. ಅಲ್ಲದೆ ಗಿಲ್ಲಿಯನ್ನು ಕರೆದು ವೈಯಕ್ತಿಕ ವಿಚಾರಕ್ಕೆ ಬಂದರೆ, ನೀನು ಸಪ್ಲೇಯರ್ ನಾನು ಅತಿಥಿ ಅನ್ನೋದನ್ನು ಮರೆಯಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು. ಹೀಗೆ ಗಿಲ್ಲಿ ಎದುರಿಗೆ ಕಂಡಾಗಲೆಲ್ಲ ಉಗ್ರಂ ಮಂಜು ಕಿಡಿಕಾರುತ್ತಲೇ ಇದ್ದಾರೆ. ಇದನ್ನು ಅರಿತ ಗಿಲ್ಲಿ ಸಮಜಾಯಿಷಿ ಕೊಡುವುದಕ್ಕೆ ಮುಂದಾಗಿದ್ದರು. ಯಾವುದೋ ಯೂಟ್ಯೂಬ್ ಚಾನೆಲ್‌ನಲ್ಲಿ ನಿಮ್ಮ ಮದುವೆ ಬಗ್ಗೆ ನೋಡಿದ್ದೆ. ಅದಕ್ಕೆ ಹೀಗೆ ಹೇಳಿದೆ ಕ್ಷಮಿಸಿ ಎಂದರೂ ಉಗ್ರಂ ಮಂಜು ತಣ್ಣಗಾಗುವ ಲಕ್ಷಣ ಕಾಣಲಿಲ್ಲ.
ಮತ್ತೊಮ್ಮೆ ಗಿಲ್ಲಿ ನಟನನ್ನು ಕರೆದು ಉಗ್ರಂ ಮಂಜು ಕ್ಲಾಸ್ ತೆಗೆದುಕೊಂಡರು. "ಯೂಟ್ಯೂಬ್‌ನಲ್ಲಿ ಬಂತು ಅಂತ ಹೀಗೆಲ್ಲ ಮಾತಾಡುತ್ತಾರಾ? ನೀನು ಯಾವಾಗಾದ್ರೂ ನನ್ನ ಮದ್ವೆಗೆ ಬಂದಿದ್ಯಾ? ನೀನು ಆಡಿದ ಮಾತನ್ನು ಎಷ್ಟು ಜನರು ನೋಡಿರಲ್ಲ. ಚೆನ್ನಾಗಿ ಆಡುತ್ತಿದ್ದೀರ. ಆದರೆ, ಇದನ್ನೆಲ್ಲ ತಿಳಿದುಕೊಂಡು ಮಾತಾಡಬೇಕು ಅಲ್ವ?" ಗರಂ ಆಗಿದ್ದರು.
ಇನ್ನೊಂದು ಕಡೆ ಗಿಲ್ಲಿ ಟ್ರಿಗರ್ ಮಾಡುತ್ತಿರೋದು ಅತಿಥಿಗಳಿಗೆ ಗೊತ್ತಾಗಿದೆ. ಉಗ್ರಂ ಮಂಜು ಜೊತೆ ರಜತ್ ಹಾಗೂ ತ್ರಿವಿಕ್ರಮ್ ಸೇರಿಕೊಂಡು ಗಿಲ್ಲಿಯನ್ನು ರೋಸ್ಟ್ ಮಾಡುವುದಕ್ಕೆ ರೆಡಿಯಾಗಿದ್ದಾರೆ. ಬಿಗ್ ಬಾಸ್ ಕೊಟ್ಟಿರೋ ಟಾಸ್ಕ್‌ಗಳಲ್ಲಿ ಗಿಲ್ಲಿಯನ್ನು ಕಾಡುವುದಂತೂ ಗ್ಯಾರಂಟಿ. ಈ ಗ್ಯಾಪ್‌ನಲ್ಲಿಯೇ ಗಿಲ್ಲಿ ಇರುವಲ್ಲಿಗೆ ಹೋಗಿ ರಜತ್ ಅವರದ್ದೇ ಸ್ಟೈಲ್‌ನಲ್ಲಿ ಬುದ್ಧಿ ಮಾತು ಹೇಳಿದ್ದಾರೆ. ಬಿಟ್ಟಿ ಊಟ ತಿನ್ನುವುದಕ್ಕೆ ಬಂದಿದ್ದೀರಾ ಎಂದು ಗಿಲ್ಲಿ ಕೇಳಿದ್ದಕ್ಕೆ ರಜತ್ ಕೆಂಡಾಮಂಡಲವಾಗಿದ್ದರು. ಹೀಗಾಗಿ ಕಾಮಿಡಿಯನ್ನು ಇನ್ನೊಬ್ಬರಿಗೆ ಹರ್ಟ್ ಆಗದ ಹಾಗೆ ಮಾಡುವಂತೆ ಬುದ್ಧಿ ಮಾತು ಹೇಳಿದ್ದಾರೆ.
ಸಾಲದ್ದಕ್ಕೆ ಅಂತ ಗಿಲ್ಲಿಯನ್ನು ರೋಸ್ಟ್ ಮಾಡುವುದಕ್ಕೆ ಕಾವ್ಯಾರನ್ನು ತಂಗಿಯನ್ನಾಗಿ ಮಾಡಿದ್ದಾರೆ. ಕಾವ್ಯಾ ತಂಗಿ ಅಲ್ಲ ಅಂತ ಅದೆಷ್ಟೇ ಹೇಳಿದರೂ, ರಜತ್-ತ್ರಿವಿಕ್ರಮ್ ಇಬ್ಬರೂ ಬಿಡಲೇ ಇಲ್ಲ. ಇತ್ತ ಕಾವ್ಯಾ ಕೂಡ ಗಿಲ್ಲಿ ನನ್ನ ಅಣ್ಣ ಎಂದು ಹೇಳಿದರು. ಇದು ಗಿಲ್ಲಿಗೆ ಬೇಸರ ಆಗಿರುವಂತೆ ಕಾಣುತ್ತಿತ್ತು. ಇನ್ನು ಮುಂದಿನ ಸಂಚಿಕೆಯಲ್ಲಿ ಸಖತ್ ಮನರಂಜನೆ ಬಾಕಿಯಿದೆ.


Click it and Unblock the Notifications











