ಅಸುರಾಧಿಪತಿಯನ್ನೇ ಗೋಳಾಡಿಸಿದ್ರು;ಕಾಕ್ರೋಚ್ ಬೆಂಬಲಕ್ಕೆ ನಿಲ್ತಾರಾ ಕಿಚ್ಚ? ಮನೆ ಬಾಗಿಲು ಮತ್ತೆ ತೆರೆದಿದ್ದೇಕೆ?
ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭ ಆದ ಎರಡು ವಾರದಲ್ಲಿ ಏನೇನೋ ಆಗಿ ಹೋಗಿದೆ. ಮನೆಯ ಹೊರಗೆ ಒಂದು ಕಥೆಯಾದರೆ, ಮನೆಯೊಳಗೆ ಇನ್ನೊಂದು ಕಥೆ. ಎರಡು ದಿನ ಬಿಗ್ ಬಾಸ್ ಮನೆಗೆ ಬೀಗ ಬಿದ್ದು, ಮನೆಯಿಂದ ಹೊರ ಬರಬೇಕಾದ ಪರಿಸ್ಥಿತಿ ಎದುರಾಗಿತ್ತು. ಎರಡು ದಿನ ಹೊರಗೆ ಏನಾಗುತ್ತಿದೆ ಅನ್ನೋದು ಗೊತ್ತಾಗದೇ ಎರಡು ರೆಸಾರ್ಟ್‌ನಲ್ಲಿ ಇರಬೇಕಾದ ಪರಿಸ್ಥಿತಿಯಿತ್ತು.
ಎಲ್ಲಾ ಮುಗಿಸಿ ಒಳಗೆ ಬರುತ್ತಿದ್ದಂತೆ ಎಲಿಮಿನೇಷನ್ ಬಂದೇ ಬಿಟ್ಟಿದೆ. ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರಗೆ ಹೋಗುತ್ತೇವೋ ಅನ್ನೋ ಆತಂಕದಲ್ಲಿ ಮನೆ ಮಂದಿ ಇದ್ದಾರೆ. ಆದಕ್ಕೂ ಮುನ್ನ ಇಂದು (ಅಕ್ಟೋಬರ್ 11) 'ವಾರದ ಕಥೆ ಕಿಚ್ಚನ ಜೊತೆ'ಯಲ್ಲಿ ಏನೇನು ನಡೆಯುತ್ತೋ? ಯಾರಿಗೆಲ್ಲ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳುತ್ತಾರೋ? ಯಾರಿಗೆ ಚಪ್ಪಾಳೆ ಕೊಡುತ್ತಾರೋ ಇವತ್ತಿನ ಎಪಿಸೋಡ್‌ನಲ್ಲಿ ರಿವೀಲ್ ಆಗಲಿದೆ.

ಈಗಾಗಲೇ ಕಲರ್ಸ್ ಕನ್ನಡ ಒಂದು ಪ್ರೋಮೊವನ್ನು ಹೊರಬಿಟ್ಟಿದೆ. ಈ ವಾರ ಬಿಗ್ ಬಾಸ್ ಮನೆಯ ಸದಸ್ಯರಿಗೆ ಕಿಚ್ಚ ಸುದೀಪ್ ಚಳಿ ಬಿಡಿಸೋ ಸುಳಿವು ಸಿಕ್ಕಿದೆ. ಕಾಕ್ರೋಚ್ ಸುಧಿಯಿಂದ ಹಿಡಿದು ಮನೆಯ ಮಂದಿಯ ಒಬ್ಬೊಬ್ಬ ಸದಸ್ಯನಿಗೂ ಇವರು ಕಿಚ್ಚ ಕ್ಲಾಸ್ ತೆಗೆದುಕೊಳ್ಳೋದು ಕರ್ಫರ್ಮ್. ಈ ಮಧ್ಯೆ ಬಿಗ್ ಬಾಸ್ ಮನೆಯ ಬಾಗಿಲು ಮತ್ತೆ ಓಪನ್ ಮಾಡಿಸಿದ್ದಾರೆ. ಮತ್ತೇನು ಟ್ವಿಸ್ಟ್ ಕಾದಿದೆಯೋ ಅನ್ನೋ ಕುತೂಹಲ ಹುಟ್ಟಿಕೊಂಡಿದೆ.
ಅಸೂರ ಟಾಸ್ಕ್ ಪರ್ಫಾಮೆನ್ಸ್ ಹೇಗಿತ್ತು?
ಕಿಚ್ಚನ ಮೊದಲ ಪ್ರಶ್ನೆನೇ ಕಾಕ್ರೋಚ್ ಸುಧಿಗೆ ಕೊಟ್ಟ ಅಸುರನ ಟಾಸ್ಕ್ ಹೇಗಿತ್ತು? ಅನ್ನೋದು. ಅದಕ್ಕೆ ಮನೆ ಮಂದಿಯೆಲ್ಲ ಕಾಕ್ರೋಚ್ ವಿರುದ್ಧವಾಗಿಯೇ ಕೊಟ್ಟಿದ್ದಾರೆ. ಒಬ್ಬರೊಬ್ಬರದ್ದು ಒಂದು ಕಮೆಂಟ್ ಬಿದ್ದಿದೆ. ಪ್ರೋಮೊದಲ್ಲಿ ತೋರಿಸಿರುವಂತೆ ಜಾಹ್ನವಿ "ಕ್ರೌರ್ಯ, ಅಟ್ಟಹಾಸ ಕೇವಲ ಮೇಕಪ್‌ಗೆ ಅಷ್ಟೇ ಸೀಮಿತವಾಗಿತ್ತು" ಎಂದು ಹೇಳಿದ್ದಾರೆ. "ಅಸುರ ಅನ್ನೋದಕ್ಕಿಂತ ಒಬ್ಬ ಜೋಕರ್ ತರ ಇದ್ದರು" ರಾಶಿಕಾ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.
ಅಸಹಾಯಕತೆ ಹೊರ ಹಾಕಿದ ಕಾಕ್ರೋಚ್
ಮನೆ ಮಂದಿಯೆಲ್ಲ ಅಸುರಾಧಿಪತಿ ಕಾಕ್ರೋಚ್ ಸುಧಿಯ ಪರ್ಫಾಮೆನ್ಸ್‌ಗೆ ನೆಗೆಟಿವ್ ಕಮೆಂಟ್‌ಗಳನ್ನು ಕೊಡುತ್ತಿದ್ದರು. ಇತ್ತ ಕಿಚ್ಚ ಸುದೀಪ್ ಮುಂದೆ ಕಾಕ್ರೋಚ್ ಸುಧಿ ಅಸಹಾಯಕೆತೆ ಹೊರ ಹಾಕಿದ್ದರು. "ಕಾಲಿಗೆ ಒಂದು ಬಿದ್ದಿಲ್ಲ ಅಣ್ಣ ನಾನು, ಇನ್ನು ಏನು ಮಾಡಬೇಕು? ಇನ್ನು ಹೇಗಿರಬೇಕು. ಇವರ ಹತ್ತಿರ ಇನೇನೂ ಆಗಲ್ಲ ಅಣ್ಣ" ಎಂದು ಹೇಳುತ್ತಾ ಸುಧಿ ಇನ್ನೇನು ಅಳುವುದೊಂದು ಬಾಕಿಯಿತ್ತು.
ಮತ್ತೆ ಮನೆ ಬಾಗಿಲು ಓಪನ್ ಆಗಿದ್ದೇಕೆ?
ಅಸುರ ಟಾಸ್ಕ್‌ನಲ್ಲಿ ಕಾಕ್ರೋಚ್ ಸುಧಿ ಸೋತಿರೋದು ಮೇಲ್ನೋಟಕ್ಕೆ ಕನ್ಫರ್ಮ್ ಆಗಿದೆ. ಕಾಕ್ರೋಚ್ ಸುಧಿ ಎಷ್ಟೇ ಅಸಮಧಾನ ಹೊರ ಹಾಕಿದರೂ ಕಿಚ್ಚನಿಗೂ ಸಮಾಧಾನ ಆದಂತೆ ಕಾಣುತ್ತಿಲ್ಲ. ಒಟ್ನಲ್ಲಿ ಈ ಎಪಿಸೋಡ್‌ನಲ್ಲಿ ಯಾರೆಲ್ಲ ವೀಕ್ಷಕರಿಗೆ ಮನರಂಜನೆ ಕೊಟ್ಟಿದ್ದಾರೋ ಅವರು ಮನೆಯಲ್ಲಿ ಉಳಿದುಕೊಳ್ಳುತ್ತಾರೆ. ಇನ್ನು ಯಾರೆಲ್ಲ ಸೈಲೆಂಟ್ ಆಗಿದ್ದರೋ ಅವರಲ್ಲಿ ಯಾರು ಮನೆಯಿಂದ ಹೊರ ಹೋಗೋದು ಕನ್ಫರ್ಮ್. ಏನಕ್ಕೂ 'ವಾರದ ಕಥೆ ಕಿಚ್ಚನ ಜೊತೆ'ಯಲ್ಲಿ ನೋಡಿ ಎಂಜಾಯ್ ಮಾಡಿ.
ಮಲ್ಲಮ್ಮ-ರಕ್ಷಿತಾ ಟ್ರೆಂಡಿಂಗ್
ಬಿಗ್ ಬಾಸ್ ಮನೆಯಲ್ಲಿ ಸೆಲೆಬ್ರೆಟಿಗಳನ್ನು ಬಿಟ್ಟು ಇಬ್ಬರು ಸ್ಪರ್ಧಿಗಳ ಜೊತೆ ಕಿಚ್ಚನ ಮಾತುಕತೆ ಹೇಗಿರುತ್ತೆ? ಎಂದು ನೋಡುವುದಕ್ಕೆ ಕಾದು ಕೂತಿದ್ದಾರೆ. ಈಗ ಮನೆಯಲ್ಲಿರುವ 17 ಮಂದಿಯಲ್ಲಿ ಮಲ್ಲಮ್ಮ ಒಬ್ಬರಾದರೆ, ಇನ್ನೊಬ್ಬರು ರಕ್ಷಿತಾ ಶೆಟ್ಟಿ. ಇವರ ಮೇಲೂ ಮನೆಯಿಂದ ಹೊರಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ. ಹೀಗಾಗಿ ಇವರಿಬ್ಬರೊಂದಿಗೆ ವಾರದ ಕಥೆ ಹೇಗಿರುತ್ತೆ ಅನ್ನೋದು ಇಂದು ರಾತ್ರಿ 9ಗಂಟೆಯಿಂದ ನೋಡಬಹುದು.


Click it and Unblock the Notifications











