BBK 12: ಬಿಗ್‌ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಬಾಲಾಜಿ ಬಸ್ ಕಥೆ ಹೇಳಿದ ಮಲ್ಲಮ್ಮ; ಕೇಳಿದ್ರೆ ಬಿದ್ದು ಬಿದ್ದು ನಗ್ತೀರ!
ಬಿಗ್ ಬಾಸ್ ಕನ್ನಡದ 12ನೇ ಸೀಸನ್‌ನಲ್ಲಿ ಇಬ್ಬರು ಸ್ಪರ್ಧಿಗಳು ಕಿರುತೆರೆ ವೀಕ್ಷಕರ ಮನಗೆದ್ದಿದ್ದಾರೆ. ಯಾವುದೇ ಹಿನ್ನೆಲೆಯಿಲ್ಲದೆ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದ ಈ ಇಬ್ಬರು ಸ್ಪರ್ಧಿಗಳ ಮೇಲೆ ವಿಶೇಷ ಒಲವಿದೆ. ಅದರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ ಮಲ್ಲಮ್ಮ ಕೂಡ ಒಬ್ಬರು. ಆದರೆ, ದುರಾದೃಷ್ಟವಶಾತ್ ಕಳೆದ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ.
ಆರ್ಥಿಕವಾಗಿ ಸಬಲರಲ್ಲದ, ಶಿಕ್ಷಣದಿಂದ ವಂಚಿತರಾಗಿರುವ ಮಲ್ಲಮ್ಮ ಬಿಗ್ ಬಾಸ್ ಅಂತಹ ವೇದಿಕೆಯಲ್ಲಿ ಮೂವತ್ತು ದಿನಗಳ ಕಾಲ ಮನೆಯೊಳಗೆ ಇದ್ದರು. ಅಲ್ಲಿನ ಯುವ ಸಮುದಾಯದವರೊಂದಿಗೆ ಅನ್ಯೋನ್ಯವಾಗಿ ಹೊಂದಿಕೊಂಡಿದ್ದರು. ಕೆಲವೊಮ್ಮೆ ಬಿಗ್ ಬಾಸ್‌ಗೆ ಇವರು ಸವಾಲು ಎನಿಸಿದ ಸನ್ನಿವೇಶ ಕೂಡ ಇತ್ತು. ಆದರೆ, ಬಿಗ್ ಬಾಸ್ ಮನೆಯೊಳಗಿನ ಆಟವನ್ನು ಬಹುಬೇಗನೇ ಮಲ್ಲಮ್ಮ ಅರ್ಥ ಮಾಡಿಕೊಂಡಿದ್ದರು.

ಆದರೆ, ಕಳೆದ ವಾರ ಮಲ್ಲಮ್ಮ ಅವರಿಗೆ ಕಡಿಮೆ ವೋಟ್ ಬಿದ್ದಿದ್ದರಿಂದ ಎಲಿಮಿನೇಟ್ ಆಗಲೇ ಬೇಕಾಯ್ತು. ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಮಲ್ಲಮ್ಮ ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಮನೆಯೊಳಗೆ ಎಂಟ್ರಿ ಕೊಡುವ ಕ್ಷಣದಿಂದ ಎಲಿಮಿನೇಟ್ ಆಗುವವರೆಗಿನ ಕ್ಷಣಗಳನ್ನು ಮೆಲುಗು ಹಾಕಿದ್ದಾರೆ. ಕೆಲವು ಇಂಟ್ರೆಸ್ಟಿಂಗ್ ಸ್ಟೋರಿಗಳನ್ನು ತಮ್ಮದೇ ಸ್ಟೈಲ್‌ನಲ್ಲಿ ವಿವರಿಸಿದ್ದಾರೆ. ಅದರಲ್ಲೊಂದು ಬಾಲಾಜಿ ಬಸ್ ಸ್ಟೋರಿ.
ಮಲ್ಲಮ್ಮ ಬಿಗ್ ಬಾಸ್ ಮನೆಯೊಳಗೆ ಹೋಗೋದು ಕನ್ಫರ್ಮ್ ಆಗಿತ್ತು. ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೂ ಮುನ್ನ ಸ್ಪರ್ಧಿಗಳನ್ನು ಕಲರ್ಸ್ ಕನ್ನಡ ತುಂಬಾನೇ ಗೌಪ್ಯವಾಗಿ ಇಟ್ಟಿರುತ್ತೆ. ಮನೆಯೊಳಗೆ ಪ್ರವೇಶ ಮಾಡುವುದಕ್ಕೆ ಕೆಲವು ದಿನಗಳಿಂದಲೇ ಅವರ ಮೇಲೆ ನಿಗಾ ಇಟ್ಟಿರುತ್ತಾರೆ. ಇನ್ನು ಬಿಗ್ ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ಮುಂದೆ ನಿಲ್ಲಿಸುವವರೆಗೂ ಅವರನ್ನು ರಹಸ್ಯವಾಗಿಯೇ ಇಟ್ಟಿರುತ್ತಾರೆ.

ಬಿಗ್ ಬಾಸ್ ಕನ್ನಡ 12ನೇ ಸೀಸನ್ ಮಲ್ಲಮ್ಮ ಸ್ಪೆಷಲ್ ಎಂಟ್ರಿಯಾಗಿದ್ದರು. ಇಲ್ಲಿವರೆಗೂ ಬಿಗ್ ಬಾಸ್ ಹಾಕಿದ್ದ ಎಲ್ಲಾ ನಿಯಮಗಳನ್ನು ಮುರಿದು ಮನೆಯೊಳಗೆ ಪ್ರವೇಶ ಮಾಡಿದ್ದರು. ಇನ್ನು ಬಿಗ್ ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ಮುಂದೆ ಮಲ್ಲಮ್ಮ ನಿಲ್ಲುವುದಕ್ಕೆ ಕೆಲವೇ ಗಂಟೆಗಳು ಇದೆ ಅನ್ನುವಾಗ ಅವರ ಮುಖ ಕಪ್ಪು ಬಟ್ಟೆಯನ್ನು ಕಟ್ಟಿದ್ದರು. ಆನಂತರ ಬಾಲಾಜಿ ಬಸ್‌ನಲ್ಲಿ ಕೂರಿಸಿದ್ದರು ಎಂದು ಹೇಳಿದ್ದಾರೆ. ಮಲ್ಲಮ್ಮ ಹೇಳಿದ ಈ ಬಾಲಾಜಿ ಬಸ್ ಕಥೆ ಕೇಳಿದರೆ, ನಿಮ್ಮ ಹೊಟ್ಟೆ ಕೂಡ ಹುಣ್ಣಾಗುತ್ತೆ.
"ನನಗೆ ಮೊದಲು ಕಣ್ಣಿಗೆ ಬಟ್ಟೆ ಕಟ್ಟಿಸಿಕೊಂಡು ಬಾಲಾಜಿ ಬಸ್‌ನ ಹಾಗೆ ಇತ್ತು. ಅಲ್ಲಿಗೆ ಕರೆದುಕೊಂಡು ಹೋದರು. ಮಲಕೊಂಡು ಹೋಗುತ್ತೇವಲ್ಲ. ಆತರ ಇತ್ತು. ಬೆಡ್ ಇತ್ತು. ಬಾತ್ ರೂಮ್ ಎಲ್ಲಾ ಇತ್ತು." ಎಂದು ಹೇಳುತ್ತಾರೆ. ಆ ವೇಳೆ ಅವರನ್ನು ಮಾತಾಡಿಸುತ್ತಿದ್ದ ವ್ಯಕ್ತಿ ಅದು ಬಾಲಾಜಿ ಬಸ್ ಅಲ್ಲ. ಅದನ್ನು ಕ್ಯಾರಾವ್ಯಾನ್ ಎನ್ನುತ್ತಾರೆಂದು ತಿಳಿಸಿ ಹೇಳಿದರು. ಇದನ್ನು ಮಲ್ಲಮ್ಮ ಟಾಕ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಹೇಳಿಕೊಂಡಿದ್ದಾರೆ.
ಹಾಗೇ ಈ ಸ್ಪೆಷಲ್ ಸಂದರ್ಶನದಲ್ಲಿ ಒಂದು ವಿಡಿಯೋ ಕೂಡ ಪ್ಲೇ ಮಾಡಲಾಗಿದೆ. ಹಿಂದೊಂದು ವಿಡಿಯೋ ಮಾಡುವಾಗ "ನಾನು ಶೂಟ್‌ನಲ್ಲಿ ಇದ್ದೀನಿ. ನಾನು ಕ್ಯಾರಾವ್ಯಾನ್‌ನಲ್ಲಿ ಇದ್ದೀನಿ ಅಂತ ಹೇಳಿದ್ರಲ್ಲ. ನಿಮಗೆ ನೆನಪಿದೆಯೇ?" ಎಂದು ಪ್ರಶ್ನೆ ಮಾಡಿದ್ದರು. ಆ ಹಳೇ ವಿಡಿಯೋದಲ್ಲಿ ಮಲ್ಲಮ್ಮ ಫೋನ್ ಹಿಡಿದು "ನಾನು ಈಗ ಬ್ಯುಸಿ ಇದ್ದೀನಿ. ಶೂಟಿಂಗ್‌ಗೆ ಹೋಗುತ್ತಿದ್ದೀನಿ. ಕ್ಯಾರಾವ್ಯಾನ್‌ನಲ್ಲಿ ಹೋಗುತ್ತೇವೆ" ಎಂದು ಹೇಳಿದ್ದಾರೆ. ಅಂದು ಹೇಳಿದ್ದೇ ಅವರ ಜೀವನದಲ್ಲಿ ನಡೆದಿದೆಯೆಂದು ಹೇಳಿದ್ದಾರೆ.


Click it and Unblock the Notifications











