BBK 12: ಮನೆ ಮಂದಿಯ ಮನಸ್ಸು ಗೆದ್ದ ಸೂರಜ್.. ರಘು-ರಿಶಾ ವಿರುದ್ಧ ಗರಂ ಆಗಿದ್ಯಾಕೆ?

ವೈಲ್ಡ್ ಕಾರ್ಡ್ ಮೂಲಕ ರಘು, ರಿಶಾ ಗೌಡ ಹಾಗೂ ಸೂರಜ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂವರು ಮನೆಯೊಳಗೆ ಎಂಟ್ರಿ ಕೊಡುತ್ತಿದ್ದಂತೆ ಮನೆಯೊಳಗೆ ಹಲ್‌ಚಲ್ ಎಬ್ಬಿಸಿದ್ದಾರೆ. ಅದರಲ್ಲೂ ರಘು ಹಾಗೂ ರಿಶಾ ಗೌಡ ಈಗಾಗಲೇ ಮನೆಯೊಳಗೆ ಇರುವ ಸದಸ್ಯರನ್ನು ಟಾರ್ಗೆಟ್ ಮಾಡಿ ಮಾತಾಡುತ್ತಿದ್ದಾರೆ. ಅದರಲ್ಲೂ ಪ್ರಬಲ ಸ್ಪರ್ಧಿಗಳಾಗಿರುವ ಅಶ್ವಿನಿ ಗೌಡ ಹಾಗೂ ಕಾಕ್ರೋಚ್ ಸುಧಿ ವಿರುದ್ಧ ಮಾತಾಡಿದ್ದೇ ಹೆಚ್ಚು.

ಇನ್ನು ಟಾಸ್ಕ್ ಅಂತ ಬಂದಾಗಲೂ ಮ್ಯೂಟಂಟ್ ರಘು ಮೇಲು ಗೈ ಸಾಧಿಸಿದ್ದಾರೆ. ಇನ್ನೊಂದು ಕಡೆ ಬಿಗ್ ಬಾಸ್ ಮನೆಗೆ ಬಾಸ್ ಎಂಬಂತೆ ಆಗಿದ್ದ ಅಶ್ವಿನಿ ಗೌಡರನ್ನು ಸೈಲೆಂಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಯೊಳಗೆ ಕಾಲಿಡುತ್ತಿದ್ದಂತೆ ಅವರ ಕಣ್ಣಲ್ಲಿ ನೀರಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಘು ಹಾಗೂ ರಿಶಾ ಗೌಡ ಇಬ್ಬರೂ ಅಗ್ರೆಸಿವ್ ಆಗಿಯೇ ಆಟ ಆಡುತ್ತಿದ್ದಾರೆ.

BBK 12 wild card contestant Suraj Singh appreciated by other members shows angry on Raghu and Risha Gowda

ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಕೆಲವು ಅಧಿಕಾರಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಹೀಗಾಗಿ ಇವರಿಗೆ ಮನೆಯಲ್ಲಿ ಸ್ಪೆಷಲ್ ಪವರ್ ಬಂದಿದ್ದು, ಉಳಿದ ಸ್ಪರ್ಧಿಗಳನ್ನು ಡಾಮಿನೇಟ್ ಮಾಡುತ್ತಲೇ ಇದ್ದಾರೆ. ಇಂದು (ಅಕ್ಟೋಬರ್ 23) ಪ್ರೋಮೊದಲ್ಲಿ ಬಿಗ್ ಬಾಸ್ ಟ್ವಿಸ್ಟ್ ಕೊಟ್ಟಿದೆ. ರಘು ಹಾಗೂ ರಿಶಾ ತೆಗೆದುಕೊಂಡ ನಿರ್ಧಾರದ ವಿರುದ್ಧ ಮನೆ ಮಂದಿ ತಿರುಗಿಬಿದ್ದಿದ್ದಾರೆ. ಆದರೆ, ಸೂರಜ್ ನಿರ್ಧಾರಕ್ಕೆ ಮನೆಯ ಸದಸ್ಯರು ಮನ ಸೋತಿದ್ದಾರೆ. ಅಷ್ಟಕ್ಕೂ ಸೂರಜ್‌ಗೆ ಮೆಚ್ಚುಗೆ ವ್ಯಕ್ತವಾಗಿದ್ದೇಕೆ? ತಿಳಿಯುವುದಕ್ಕೆ ಮುಂದೆ ಓದಿ.

ಕ್ಯಾಪ್ಟನ್ಸಿ ಟಾಸ್ಕ್ ಕೋಲಾಹಲ

ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಗಳು ಮನೆಯೊಳಗೆ ಎಂಟ್ರಿ ಕೊಡುತ್ತಿದ್ದಂತೆ ಕ್ಯಾಪ್ಟನ್ಸಿ ಟಾಸ್ಕ್ ಎದುರಾಗಿತ್ತು. ಅಗ್ರೆಸಿವ್ ಆಗಿ ಮನೆಯೊಳಗೆ ಬಂದಿದ್ದ ರಘು ಹಾಗೂ ರಿಶಾ ಖಡಕ್‌ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಇದಕ್ಕೆ ಸೂರಜ್ ಕೂಡ ಸಾಥ್ ಕೊಟ್ಟಿದ್ದರು. ಮನೆಯಲ್ಲಿ ಪ್ರಬಲ ಸ್ಪರ್ಧಿ ಎನಿಸಿಕೊಂಡಿದ್ದ ಅಶ್ವಿನಿ ಗೌಡ ಹಾಗೂ ಕಾಕ್ರೋಚ್ ಸುಧಿಯನ್ನು ಈ ಟಾಸ್ಕ್ ಹೊರಗೆ ಇಟ್ಟಿದ್ದರು. ಕ್ಯಾಪ್ಟನ್ಸಿ ಟಾಸ್ಕ್‌ನ ತಂಡಗಳಿಗೆ ರಘು, ರಿಶಾ ಹಾಗೂ ಸೂರಜ್ ನಾಯಕರಾಗಿದ್ದರು. ಇನ್ನು ಇವರದ್ದೇ ಡಾಮಿನೇಷನ್ ಅನ್ನುವಾಗಲೇ ಸೂರಜ್ ತೆಗೆದುಕೊಂಡ ನಿರ್ಧಾರ ಮನೆ ಮಂದಿಯ ಮೆಚ್ಚುಗೆಗೆ ಕಾರಣವಾಗಿದೆ.

ರಘು-ರಿಶಾ ವಿರುದ್ಧ ತಂಡದಿಂದಲೇ ವಿರೋಧ

ಬಿಗ್ ಬಾಸ್ ಈ ಮೂವರಿಗೂ ಟಾಸ್ಕ್ ಒಂದನ್ನು ನೀಡಿತ್ತು. ಮೂರು ತಂಡಗಳ ಕ್ಯಾಪ್ಟನ್ ಆಗಿರುವ ಇವರಿಗೆ ವಿಶೇಷ ಆಯ್ಕೆಯೊಂದನ್ನು ನೀಡಲಾಗಿತ್ತು. ಬಿಗ್‌ ಬಾಸ್ ಕೊಟ್ಟಿರುವ ನಾಣ್ಯ ತೆಗೆದುಕೊಂಡರೇ ನೇರವಾಗಿ ಕ್ಯಾಪ್ಟನ್ಸಿ ಆಟಕ್ಕೆ ಆಯ್ಕೆಯಾಗುತ್ತೀರಿ. ಈ ವೇಳೆ ತಂಡದ ಸದಸ್ಯರು ಹೊರಗೆ ಉಳಿಯುತ್ತಾರೆ ಎಂದಿತ್ತು. ರಘು ಹಾಗೂ ರಿಶಾ ಇಬ್ಬರೂ ಪವರ್ ನಾಣ್ಯವನ್ನು ತೆಗೆದುಕೊಂಡರು. ಆದರೆ, ಸೂರಜ್ ಮಾತ್ರ ತಂಡದೊಂದಿಗೆ ಇರುವುದಕ್ಕೆ ನಿರ್ಧರಿಸಿದ್ದರು. ಇದರಿಂದ ರಘು ಹಾಗೂ ರಿಶಾ ತಂಡದ ಸದಸ್ಯರು ತಿರುಗಿಬಿದ್ದಿದ್ದಾರೆ. ಧನುಷ್, ರಕ್ಷಿತಾ, ಅಶ್ವಿನಿ ಗೌಡ ಸೇರಿದಂತೆ ಮನೆ ಮಂದಿಯ ಸದಸ್ಯರು ತಿರುಗಿಬಿದ್ದಿದ್ದಾರೆ.

BBK 12 wild card contestant Suraj Singh appreciated by other members shows angry on Raghu and Risha Gowda

ನೆಟ್ಟಿಗರು ಏನಂದ್ರು?

ಪ್ರೋಮೊ ನೋಡುತ್ತಿದ್ದಂತೆ ನೆಟ್ಟಿಗರು ಸೂರಜ್ ಪರ ನಿಂತಿದ್ದಾರೆ. "ಎಲ್ಲ ತಂಡದವರನ್ನು ಒಟ್ಟಿಗೆ ಕರೆದುಕೊಂಡು ಕೊಂಡು ಹೋಗುವುದು ಒಂದು ಉತ್ತಮ ನಾಯಕನ ಕರ್ತವ್ಯ" ಎಂದು ಒಬ್ಬರು ಹೇಳಿದ್ದರೆ, ಇನ್ನೊಬ್ಬರು "ಸೂರಜ್ ಸರಿಯಾದ ನಿರ್ಧಾರ ತಗೊಂಡ್ರು ನಿಸ್ವಾರ್ಥಿ" ಎಂದಿದ್ದಾರೆ. "ತಂಡ ಗೆದ್ದರೆ ಸಾಕು ಅನ್ನೋನೇ ನಿಜವಾದ ನಾಯಕ.. ತಂಡ ಸೋತರೂ ಪರ್ವಾಗಿಲ್ಲ. ತಾನು ಮಾತ್ರ ಗೆಲ್ಲಬೇಕು ಅನ್ನೋನು ನಾಲಾಯಕ್" ಎಂದು ಮತ್ತೊಬ್ಬರು ಹೇಳಿದ್ದಾರೆ. "ಸೂರಜ್ ಒಬ್ಬ ಒಳ್ಳೆಯ ನಾಯಕ" ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

ನಾಮಿನೇಷನ್‌ನಿಂದ ಮೂವರು ಸೇಫ್

ಈ ವಾರ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟವರು ಮೂವರನ್ನು ನಾಮಿನೇಷನ್‌ನಿಂದ ಸೇಫ್ ಮಾಡಿದ್ದಾರೆ. ಮಲ್ಲಮ್ಮ, ಅಭಿಷೇಕ್ ಹಾಗೂ ಕಾಕ್ರೋಚ್ ಸುಧಿ ನಾಮಿನೇಷನ್‌ ಪ್ರಕ್ರಿಯೆಯಿಂದ ಹೊರಗೆ ಉಳಿದಿದ್ದಾರೆ. ಹಾಗೇ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟ ರಘು, ರಿಶಾ ಹಾಗೂ ಸೂರಜ್ ಈ ಮೂವರು ಸ್ಪರ್ಧಿಗಳನ್ನು ನಾಮಿನೇಷನ್ ಮಾಡುವ ಹಾಗಿಲ್ಲ. ಹೀಗಾಗಿ ಉಳಿದವರು ನಾಮಿನೇಷನ್ ಪ್ರಕ್ರಿಯೆಯಿಂದ ಪಾರಾಗಬೇಕಿದೆ.

More from Filmibeat

English summary
BBK 12 wild card contestant Suraj Singh appreciated by other members shows angry on Raghu and Risha Gowda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X