BBK 12: ಬಿಗ್ ಬಾಸ್ ಮನೆಗೆ ರೊಮ್ಯಾಂಟಿಕ್ ಎಂಟ್ರಿ ಕೊಟ್ಟ ಸೂರಜ್ ಸಿಂಗ್; ರಿಷಿಕಾಗೆ ಗುಲಾಬಿ.. ಕುಣಿದಾಡಿದ ಗಿಲ್ಲಿ

ಬಿಗ್ ಬಾಸ್ ಕನ್ನಡ ಸೀಸನ್ 12 ಮೂರನೇ ವಾರ ಕಳೆದು ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ನಿನ್ನೆ (ಅಕ್ಟೋಬರ್ 19) ನಡೆದ ಗ್ರ್ಯಾಂಡ್ ಓಪನಿಂಗ್ 2.0ನಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡುವ ಮೂವರು ಸ್ಪರ್ಧಿಗಳನ್ನು ರಿವೀಲ್ ಮಾಡಲಾಗಿತ್ತು. ಆದರೆ, ಮನೆಯೊಳಗೆ ಪ್ರವೇಶ ಮಾಡಿರಲಿಲ್ಲ. ಆದರೆ, ಇಂದು (ಅಕ್ಟೋಬರ್ 20) ಒಬ್ಬೊಬ್ಬರಾಗಿ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡಿಸಲಾಗುತ್ತಿದೆ.

ಬೆಳಗ್ಗೆನೇ ಬಿಗ್ ಬಾಸ್ ಮನೆಯ ಸದಸ್ಯರನ್ನು ಎಬ್ಬಿಸಿದ್ದು ಮ್ಯೂಟಂಟ್ ರಘು. ಮನೆಯೊಳಗೆ ಎಂಟ್ರಿ ಕೊಡುತ್ತಿದ್ದಂತೆ ಅಶ್ವಿನಿ ಗೌಡ, ಜಾಹ್ನವಿ ವಿರುದ್ಧ ರಘು ತಿರುಗಿಬಿದ್ದಿದ್ದರು. ಮಧ್ಯಾಹ್ನದ ವೇಳೆ ರಿಶಾ ಗೌಡ ಎಂಟ್ರಿ ಕೊಡಿಸಲಾಗಿದೆ. ಇವರು ಒಳಗೆ ಬರುತ್ತಿದ್ದಂತೆ ಮನೆಯ ಪ್ರತಿಯೊಬ್ಬ ಸದಸ್ಯರ ವಿರುದ್ಧ ಕಿಡಿಕಾರಿದ್ದಾರೆ. ಆರಂಭದಲ್ಲಿಯೇ ಇಬ್ಬರು ಸ್ಪರ್ಧಿಗಳು ಮನೆಯ ಸದಸ್ಯರನ್ನು ಎದುರಾಕಿಕೊಂಡಿದ್ದಾರೆ.

BBK 12 wild card contestant Suraj Singh gave rose to rishika Shetty and Gilli Nata safe

ಇನ್ನು ಮೂರನೇ ವೈಲ್ಡ್ ಕಾರ್ಡ್ ಎಂಟ್ರಿ ಸೂರಜ್ ಸಿಂಗ್. ಬಿಗ್ ಬಾಸ್ ಮನೆಯೊಳಗೆ ಇವರದ್ದು ರೊಮ್ಯಾಂಟಿಕ್ ಎಂಟ್ರಿಯಾಗಿದೆ. ಸ್ಮಿಂಗ್ ಪೂಲ್‌ನಿಂದ ಮೇಲೆದ್ದು ಬರುವ ಸೂರಜ್ ಒದ್ದೆ ಶರ್ಟ್ ಅನ್ನು ಬಿಚ್ಚಿ ಸಿಕ್ಸ್ ಪ್ಯಾಕ್ ತೋರಿಸಿದ್ದಾರೆ. ಕಿಚ್ಚ ನಿನ್ನೆಯೇ ವಾರ್ನಿಂಗ್ ಕೊಟ್ಟಿದ್ದರು. ಈಗ ನಿರೀಕ್ಷೆಯಂತೆಯೇ ಯಾರಿಗೆಲ್ಲ ಹಾರ್ಟ್ ಬ್ರೇಕ್ ಆಗುತ್ತೋ ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ.

ರಿಷಿಕಾಗೆ ರೋಸ್ ಕೊಟ್ಟ ಸೂರಜ್

ಸ್ವಿಮ್ಮಿಂಗ್ ಪೂಲ್‌ನಿಂದ ಎದ್ದು ಬರುತ್ತಿದ್ದಂತೆ ಬಿಗ್ ಬಾಸ್ ಸೂರಜ್ ಸಿಂಗ್‌ಗೆ ಟಾಸ್ಕ್ ಕೊಟ್ಟಿದ್ದರು. ಬಿಗ್ ಬಾಸ್ ಮನೆಯಲ್ಲಿರುವ ಸುಂದರವಾದ ಸ್ತ್ರೀ ಸದಸ್ಯೆ ಯಾರು? ಯಾರಿಗೆ ಗುಲಾಬಿ ಕೊಡುವುದಕ್ಕೆ ಇಷ್ಟ ಪಡುತ್ತೀರಿ ಎಂದು ಕೇಳಿದ್ದರು. ಸೂರಜ್ ನೇರವಾಗಿ ರಿಷಿಕಾ ಶೆಟ್ಟಿ ಬಳಿಗೆ ಬಂದು ರೋಸ್ ಕೊಟ್ಟಿದ್ದಾರೆ. ಇತ್ತೀಚೆಗೆ ರಿಲೀಸ್ ಮಾಡಿರುವ ಈ ಪ್ರೋಮೊದಲ್ಲಿ ಈ ರೊಮ್ಯಾಂಟಿಕ್ ಎಲಿಮೆಂಟ್ ರಿವೀಲ್ ಆಗಿದ್ದು, ಗಿಲ್ಲಿ ನಟ ಕುಣಿದು ಕುಪ್ಪಳಿಸಿದ್ದಾರೆ.

ಕುಣಿದಾಡಿದ ಗಿಲ್ಲಿ ನಟ

ಗಿಲ್ಲಿ ನಟನಿಗೆ ನಟಿ ಕಾವ್ಯಾ ಶೈವ ಮೇಲೆ ಮನಸ್ಸಾಗಿದೆ ಅನ್ನೋ ವಾತಾವರಣ ಮನೆಯೊಳಗಿದೆ. ಅದಕ್ಕೆ ಕಿಚ್ಚ ಸುದೀಪ್ ಕಾವ್ಯಾ ಅವರನ್ನು ತಂಗಿ ಅಂತ ಒಪ್ಪಿಕೊಳ್ಳುತ್ತಿರಾ? ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಗಿಲ್ಲಿ ನಟ ಸುತರಾಂ ಒಪ್ಪಿರಲಿಲ್ಲ. ಇತ್ತ ಕಾವ್ಯಾ ಶೈವ ಕೂಡ ಕಸಿನ್ ತರ ಎಂದು ಹೇಳಿದ್ದರು. ಈಗ ಮಾಡಲ್ ಸೂರಜ್ ಎಂಟ್ರಿಯಿಂದ ಇಬ್ಬರ ಮಧ್ಯೆ ಏನಾದರೂ ಬಿರುಕು ಮೂಡಬಹುದೇ? ಅನ್ನೋ ಪ್ರಶ್ನೆಯಿತ್ತು. ಸೂರಜ್ ಸೀದಾ ರಾಶಿಕಾ ಶೆಟ್ಟಿಗೆ ಗುಲಾಬಿ ಕೊಟ್ಟಿದ್ದರಿಂದ ಗಿಲ್ಲಿ ನಟ ನಿರಾಳ ಆಗಿದ್ದು, ಕುಣಿದು ಕುಪ್ಪಳಿಸಿದ್ದಾರೆ.

ಕಾವ್ಯಾರ ಆ ನೋಟ

ಸೂರಜ್ ಸಿಂಗ್ ಸದ್ಯ ಬಿಗ್ ಬಾಸ್ ಮನೆಯೊಳಗೆ ಇರುವ ಹ್ಯಾಂಡ್ಸಮ್ ಹಂಕ್. ಮನೆಯೊಳಗೆ ಇರುವ ಕೆಲವರ ಮನಸ್ಸನ್ನು ಕದಿಯೋದಂತೂ ಪಕ್ಕಾ. ಆದರೆ, ಪ್ರೋಮೊದಲ್ಲಿ ಕಾವ್ಯಾ ಅವರ ಒಂದು ನೋಟ ಪ್ರಶ್ನೆಯನ್ನು ಹುಟ್ಟಾಕಿದೆ. ಕಿಚ್ಚ ಸುದೀಪ್ ಪಾಪ ಗಿಲ್ಲಿ ಅಂದಿದ್ದು ನಿಜವಾಗುತ್ತಾ? ಅನ್ನೋ ಅನುಮಾನ ಮೂಡುತ್ತೆ. ಕಾವ್ಯಾಗೆ ಮೊದಲ ನೋಟದಲ್ಲಿಯೇ ಸೂರಜ್ ಮೇಲೆ ಮನಸ್ಸಾಗಿದೆಯೇ? ಈ ಪ್ರೋಮೊ ಆ ಸೂಚನೆಯನ್ನೇನೋ ಕೊಡುತ್ತಿದೆ.

ಮೂವರ ಎಂಟ್ರಿ ಮನೆ ಮಂದಿಗೆ ಭೀತಿ

ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಯೊಳಗೆ ಮೂವರ ಎಂಟ್ರಿ ಆಗಿದೆ. ಮ್ಯೂಟಂಟ್ ರಘು, ರಿಶಾ ಗೌಡ ಹಾಗೂ ಸೂರಜ್ ಸಿಂಗ್ ಎಂಟ್ರಿ ಕೊಟ್ಟಿದ್ದಾಗಿದೆ. ಈಗಾಗಲೇ ರಘು, ರಿಶಾ ಗೌಡರಿಂದ ಮನೆ ಮಂದಿ ಕಂಗಾಲಾಗಿದ್ದಾರೆ. ಅತ್ತ ಸೂರಜ್ ತಮ್ಮ ಹ್ಯಾಂಡ್‌ಸಮ್ ಲುಕ್‌ನಿಂದ ಗಮನ ಸೆಳೆಯೋದು ಪಕ್ಕಾ. ಹೀಗಾಗಿ ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಜೋರಾಗಿದೆ.

More from Filmibeat

English summary
BBK 12 wild card contestant Suraj Singh gave rose to rishika Shetty and Gilli Nata safe.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X