BBK 12: ಧ್ರುವಂತ್-ಅಶ್ವಿನಿ ಗೌಡಗೆ ಕೆಟ್ಟ-ಕೊಳಕು ಪದ ಪ್ರಯೋಗ ಮಾಡಿದ ರಜತ್: ಮನೆ ವಾತಾವರಣ ಹೇಗಿದೆ?
ಬಿಗ್ ಬಾಸ್ ಕನ್ನಡ ಸೀಸನ್ 12 ಹೊಸ ರೂಪ ಪಡೆದುಕೊಂಡಿದೆ. ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ಮಾಯವಾಗಿ ವಿಲನ್ ಎಂಟ್ರಿ ಕೊಟ್ಟಾಗಿದೆ. ಬಿಗ್ ಬಾಸ್ ಎನ್ನುತ್ತಿದ್ದವರೆಲ್ಲ ಈಗ ವಿಲನ್ ಎಂದು ಕರೆಬೇಕಾದ ಪರಿಸ್ಥಿತಿಯಿದೆ. ಈ ಮಧ್ಯೆ ರಜತ್ ಹಾಗೂ ಧ್ರುವಂತ್-ಅಶ್ವಿನಿ ಗೌಡ ನಡುವೆ ಕಿತ್ತಾಟ ನಡೆದಿದೆ. ಇಂದಿನ ಎಪಿಸೋಡ್‌ನಲ್ಲಿ ರಜತ್ ಇವರಿಬ್ಬರ ಮೇಲೆ ಬಳಿಸಿದ ಪದಗಳಿಗೆ ಆಕ್ಷೇಪಗಳು ವ್ಯಕ್ತವಾಗುತ್ತಿವೆ.
ನಿನ್ನೆಯ ಎಪಿಸೋಡ್‌ನಲ್ಲಿ ಇಂತಹದ್ದೊಂದು ವಾಗ್ಯುದ್ಧ ರಜತ್, ಅಶ್ವಿನಿ ಗೌಡ ಹಾಗೂ ಧ್ರುವಂತ್ ಮಧ್ಯೆ ನಡೆದಿತ್ತು. ಇನ್ನೇನು ಹೊಡೆದಾಟ ನಡದೇ ಬಿಡುತ್ತೆ. ಧ್ರುವಂತ್ ಹಾಗೂ ರಜತ್ ಇಬ್ಬರೂ ಬಿಗ್ ಬಾಸ್ ಮನೆಯಿಂದ ಹೊರ ಬಂದೇ ಬಿಡುತ್ತಾರೆ ಎಂದು ಅನಿಸಿತ್ತು. ಆ ಮಟ್ಟಿಗೆ ಇಬ್ಬರು ರೊಚ್ಚಿಗೆದ್ದಿದ್ದರು. ಆ ವೇಳೆ ಮನೆಯವರೆಲ್ಲರೂ ಮಧ್ಯ ಪ್ರವೇಶ ಮಾಡಿ ಇಬ್ಬರನ್ನೂ ತಡೆದರು. ಹೀಗಾಗಿ ಕಿತ್ತಾಡಿಕೊಂಡು ಎಲಿಮಿನೇಟ್ ಆಗಬೇಕಿದ್ದ ಈ ಜೋಡಿ ಸೈಲೆಂಟ್ ಆಗಿತ್ತು.

ಆದರೆ, ನಿನ್ನೆಯ ಎಪಿಸೋಡ್‌ನಲ್ಲಿ ಟಾಸ್ಕ್ ವೇಳೆ ರಜತ್ ಬಳಸಿದ ಪದಗಳು ಮನೆ ಮಂದಿಯ ನಿದ್ದೆ ಕೆಡಿಸಿತ್ತು. ನಾಮಿನೇಟ್ ಮಾಡುವ ಟಾಸ್ಕ್‌ನಲ್ಲಿ ತಮ್ಮ ಹೆಸರು ತೆಗೆದುಕೊಂಡಿದ್ದಕ್ಕೆ ರಜತ್ ರಾಂಗ್ ಆಗಿದ್ದರು. ಮೊದಲೇ ರಜತ್ ಅವರದ್ದು ಡಾಮಿನೇಟಿಂಗ್ ಪರ್ಸನಾಲಿಟಿ. ಹೀಗಾಗಿ ಯಾರಾದರೂ ಟ್ರಿಗರ್ ಮಾಡಿದರೆ, ಬಹುಬೇಗನೇ ಕೆರಳಿ ಕೆಂಡವಾಗುತ್ತಾರೆ. ನಾಮಿನೇಷನ್ ಟಾಸ್ಕ್‌ನಲ್ಲೂ ಕೂಡ ಅದೇ ಆಗಿದ್ದು.
ಇದೇ ಎಪಿಸೋಡ್‌ನಲ್ಲಿ ಕಾಕ್ರೋಚ್ ಸುದ್ದಿ ಕೆಲವು ಪದಗಳನ್ನು ಬಳಸಿದ್ದರು. ಅದರಲ್ಲೊಂದು 'ಸಡೇ'. ಈಗ ಅದೇ ಪದವನ್ನು ರಜತ್ ಕೂಡ ಬಳಸಿದ್ದಾರೆ. ಅಷ್ಟೇ ಅಲ್ಲದೆ ಇನ್ನೂ ಕೆಲವು ಕೆಟ್ಟ ಪದಗಳನ್ನು ಬಳಸಿದ್ದರು. ಅದು ಮನೆಯವರಿಗೆ ಹಿಡಿಸಲಿಲ್ಲ. ಎಲ್ಲರೂ ತೀವ್ರವಾಗಿ ರಜತ್ ಅನ್ನು ಖಂಡಿಸಿದ್ದರು. ಅದರಲ್ಲೂ ಅಶ್ವಿನಿ ಗೌಡ, ಧ್ರುವಂತ್, ಸೂರಜ್, ರಾಶಿಕಾ, ಸ್ಪಂದನಾ ಸೇರಿದಂತೆ ಹಲವು ಮಂದಿ ತಿರುಗೇಟು ನೀಡುವ ಪ್ರಯತ್ನ ಮಾಡಿದ್ದರು.
ಸೂರಜ್ ಹಾಗೂ ರಾಶಿಕಾ ಅವರನ್ನೂ ರಜತ್ ಟಾರ್ಗೆಟ್ ಮಾಡಿದ್ದರು. ಮನೆಯೊಳಗೆ ಗಲಾಟೆ ನಡೆಯುತ್ತಿದ್ದರೂ, ತಮಗೆ ಏನೂ ಸಂಬಂಧವೇ ಇಲ್ಲವೇನೋ ಎನ್ನುವಂತೆ ಇರುತ್ತೀರಾ. ಮನೆಯ ಹೊರಗೆ ಕೂತು ರೊಮ್ಯಾನ್ಸ್ ಮಾಡುತ್ತೀರಾ ಎನ್ನುತ್ತಿದ್ದಂತೆ ರಾಶಿಕಾ ಹಾಗೂ ಸೂರಜ್ ಇಬ್ಬರೂ ರಾಂಗ್ ಆದರು. ಇಬ್ಬರೂ ರಜತ್ ಮಾತುಗಳನ್ನು ಖಂಡಿಸಿದ್ದರು.
ಇನ್ನೂ ಸ್ಪಂದನಾ ಬಿಗ್ ಬಾಸ್ ಮನೆಯಲ್ಲಿ ಇರುವುದಕ್ಕೇ ಯೋಗ್ಯರಲ್ಲ ಎಂದು ರಜತ್ ನೇರವಾಗಿಯೇ ಹೇಳಿದ್ದರು. ಒಂದೇ ಒಂದು ಮಾತಿನಲ್ಲಿ ಪರ್ಫಾಮೆನ್ಸ್ ಏನೂ ಇಲ್ಲ ಎಂದು ರಜತ್ ಹೇಳುತ್ತಿದ್ದಂತೆ ಸ್ಪಂದನಾ ಟ್ರಿಗರ್ ಆಗಿದ್ದರು. ಹೀಗೆ ಒಂದೊಂದು ಕಾರಣಕ್ಕೆ ಅಶ್ವಿನಿ ಗೌಡ, ಧ್ರುವಂತ್, ಸೂರಜ್, ರಾಶಿಕಾ ಅವರನ್ನು ಎದುರಾಕಿಕೊಂಡಿದ್ದರು. ರಜತ್ ಆಡಿದ ಮಾತು ಕಿಚ್ಚನ ಮುಂದೆ ಬರುತ್ತೆ. ಅಂದು ರಜತ್‌ಗೆ ಕ್ಲಾಸ್ ತೆಗೆದುಕೊಳ್ಳುವುದಂತೂ ಪಕ್ಕಾ. ಹಾಗಂತ ಇಷ್ಟೆಲ್ಲ ಗಲಾಟೆ ಆದ್ಮೇಲೂ ರಜತ್ ಅವರನ್ನು ಮನೆ ಮಂದಿ ಹೇಗೆ ನೋಡುತ್ತಿದ್ದಾರೆ ಅನ್ನೋದು ಕುತೂಹಲವಿತ್ತು.
ಆದ್ರೀಗ ಇಂದಿನ (ಡಿಸೆಂಬರ್ 10) ಎಪಿಸೋಡ್‌ನಲ್ಲಿ ಏನೂ ಆಗಿಯೇ ಇಲ್ಲ ಎಂಬಂತೆ ಕೂತಿದ್ದಾರೆ. ಅಶ್ವಿನಿ ಗೌಡ, ಸೂರಜ್, ರಾಶಿಕಾ ಎಲ್ಲರೂ ನಾರ್ಮಲ್ ಆಗಿದ್ದಾರೆ. ಆದರೆ, ಧ್ರುವಂತ್ ಹಾಗೂ ರಜತ್ ಮಾತಾಡುತ್ತಿಲ್ಲ. ಹಾಗಂತ ಎಲ್ಲವೂ ತಣ್ಣಗಿದೆ ಅಂತಲ್ಲ. ಅಶ್ವಿನಿ ಗೌಡ ಹಾಗೂ ರಾಶಿಕಾ ಇಬ್ಬರಲ್ಲೂ ಅಸಮಧಾನವಿದ್ದು, ಇಬ್ಬರೂ ರಜತ್ ಬಗ್ಗೆ ಮಾತಾಡಿಕೊಂಡಿದ್ದಾರೆ.


Click it and Unblock the Notifications











