BBK10 Top 2 Contestants: 6ನೇ ಸ್ಥಾನದಿಂದ 3ನೇ ಸ್ಥಾನ ಯಾರಿಗೆ? ಕಿಚ್ಚನ ಪಕ್ಕ ನಿಂತಿದ್ಯಾರು?
ಬಿಗ್‌ಬಾಸ್ ಕನ್ನಡ ಸೀಸನ್ 10ರ ಫಿನಾಲೆ ಗ್ರ್ಯಾಂಡ್ ಆಗಿ ಶುರುವಾಗಿದೆ. ಕಿಚ್ಚ ಸುದೀಪ್ ಎಂಟ್ರಿಯಿಂದ ಹಿಡಿದು, ವೇದಿಕೆಗೆ ಬಂದ್ಮೇಲೆ ಕಾರ್ಯಕ್ರಮಗಳನ್ನು ತೆಗೆದುಕೊಂಡು ಹೋಗ್ತಿರೋ ರೀತಿ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಇದೂವರೆಗೂ ಬಿಗ್ ಬಾಸ್ ಮನೆಯಲ್ಲಿ ನಡೆದ ಸಂಕ್ಷಿಪ್ತ ಚಿತ್ರಣವನ್ನು ಕೊಡುತ್ತಿದ್ದಾರೆ.
ಇದೇ ವೇಳೆ ಮನೆಯೊಳಗೆ ಇರುವ ಆರು ಮಂದಿ ಸ್ಪರ್ಧಿಗಳಲ್ಲಿ ಯಾರು ಟೈಟಲ್ ಗೆಲ್ಲುತ್ತಾರೆ? ಅನ್ನೋ ಕುತೂಹಲವೂ ಹೆಚ್ಚಾಗುತ್ತಿದೆ. ಆರು ಮಂದಿ ಸ್ಪರ್ಧಿಗಳ ಜೊತೆಗೆ ಅವರ ಸಂಬಂಧಿಗಳು ಹಾಗೂ ಈಗಾಗಲೇ ಎಲಿಮಿನೇಟ್ ಆಗಿರುವ ಸ್ಪರ್ಧಿಗಳು ಆಸೀನರಾಗಿದ್ದಾರೆ. ಇವರ ಸಮ್ಮುಖದಲ್ಲಿ ಕಿಚ್ಚ ಸುದೀಪ್ ಬಿಗ್ ಬಾಸ್ ಸೀಸನ್ 10 ವಿನ್ನರ್ ಅನ್ನು ಆಯ್ಕೆ ಮಾಡುತ್ತಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 10ರ ಫಿನಾಲೆಯಲ್ಲಿ ಆರು ಮಂದಿ ಇದ್ದಾರೆ. ತುಕಾಲಿ ಸಂತೋಷ್, ವರ್ತೂರು ಸಂತೋಷ್, ಕಾರ್ತಿಕ್, ವಿನಯ್, ಸಂಗೀತಾ, ಡ್ರೋನ್ ಪ್ರತಾಪ್ ಫಿನಾಲೆಯಲ್ಲಿ ಇದ್ದಾರೆ. ಇವರಲ್ಲಿ ಟಾಪ್ 2ನಲ್ಲಿ ಯಾರೆಲ್ಲ ಇರುತ್ತಾರೆ? ಅನ್ನೋ ಕುತೂಹಲವಿದೆ. ಆದರೆ, ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಮೊದಲ ಟಾಪ್ 2 ಸ್ಥಾನದಲ್ಲಿ ಯಾರಿರುತ್ತಾರೆ? ಅನ್ನೋದನ್ನು ಕೆಲವರು ಲೀಕ್ ಮಾಡಿದ್ದಾರೆ. ಅದ್ಯಾರು ಅನ್ನೋದನ್ನು ತಿಳಿಯಲು ಮುಂದೆ ಓದಿ..

6ನೇ ಸ್ಥಾನ ಯಾರಿಗೆ?
ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಆರು ಮಂದಿಯ ಪಟ್ಟಿಯೊಂದು ಹರಿದಾಡುತ್ತಿದ್ದೆ. ಇದರಲ್ಲಿ ಫಿನಾಲೆಯಲ್ಲಿ ಎಲಿಮಿನೇಟ್ ಆದ ಮೊದಲನೇ ಸ್ಪರ್ಧಿ ತುಕಾಲಿ ಸಂತೋಷ್ ಎಂದು ಹೇಳುತ್ತಿದ್ದಾರೆ. ಈಗಾಗಲೇ ಲೀಕ್ ಆಗಿರೋ ಪಟ್ಟಿಯ ಪ್ರಕಾರ, 6ನೇ ಸ್ಥಾನ ತುಕಾಲಿ ಸಂತೋಷ್‌ಗೆ ಸಿಕ್ಕಿದೆ.

5ನೇ ಸ್ಥಾನದಲ್ಲಿ ಯಾರು?
ಬಿಗ್ ಬಾಸ್ ಸೀಸನ್ 10ರ ಫಿನಾಲೆಯಲ್ಲಿ ಕಿಚ್ಚ ಸುದೀಪ್ ಪಕ್ಕ ನಿಲ್ಲುವ ಇಬ್ಬರು ಸ್ಪರ್ಧಿಗಳ ಪಟ್ಟಿಯಲ್ಲಿ ವಿನಯ್ ಇರಬಹುದು ಎಂದು ಗೆಸ್ ಮಾಡಲಾಗಿತ್ತು. ಆದರೆ, ಈಗ ಲೀಕ್ ಆಗಿರುವ ಪಟ್ಟಿಯಲ್ಲಿ ವಿನಯ್ ಗೌಡ ಫಿನಾಲೆಯಲ್ಲಿ ಎಲಿಮಿನೇಟ್ ಆಗಿರುವ 2ನೇ ಸ್ಫರ್ಧಿಯಾಗಿ ಹೊರಬಂದಿದ್ದಾರೆ ಎನ್ನಲಾಗಿದೆ. ಈ ಮೂಲಕ 5ನೇ ಸ್ಥಾನದಲ್ಲಿದ್ದಾರೆ.

4ನೇ ಸ್ಥಾನದಲ್ಲಿ ವರ್ತೂರು ಸಂತೋಷ್
ವರ್ತೂರು ಸಂತೋಷ್‌ಗೆ ಜನಪ್ರಿಯತೆ ಹೆಚ್ಚಾಗಿದೆ. ಬಿಗ್ ಬಾಸ್ ಗೆಲ್ಲುವ ಸಂಭಾವೀಯ ಪಟ್ಟಿಯಲ್ಲಿ ವರ್ತೂರು ಸಂತೋಷ್ ಹೆಸರು ಕೂಡ ಇತ್ತು. ಆದ್ರೀಗ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ಮೂರನೇ ಸ್ಪರ್ಧಿ ವರ್ತೂರ್ ಸಂತೋಷ್ ಹೊರಬಂದಿದ್ದಾರೆ ಎಂದು ಲೀಕ್ ಆಗಿರುವ ಪಟ್ಟಿ ಹೇಳುತ್ತಿದೆ. ಈ ಮೂಲಕ ವರ್ತೂರು ಸಂತೋಷ್‌ಗೆ 4ನೇ ಸ್ಥಾನ ಸಿಕ್ಕಿದೆ.

3ನೇ ಸ್ಥಾನ ಸಂಗೀತಾ ಶೃಂಗೇರಿ
ಬಿಗ್ ಬಾಸ್ ಕನ್ನಡ ಸೀಸನ್ 10 ಫಿನಾಲೆ ಆರಂಭ ಆಗುವುದಕ್ಕೂ ಮುನ್ನ, ಈ ಬಾರಿ ಗೆಲ್ಲುವುದೇ ಸಂಗೀತಾ ಎಂಬ ಸುದ್ದಿ ಹಬ್ಬಿತ್ತು. ಆದರೆ, ಹೊರಬಿದ್ದಿರೋ ಪಟ್ಟಿಯಲ್ಲಿ ಸಂಗೀತಾ ಶೃಂಗೇರಿ 3ನೇ ಸ್ಥಾನದಲ್ಲಿದ್ದಾರೆ ಎಂದು ಹೇಳಲಾಗಿದೆ.

ಟಾಪ್ 2 ಸ್ಥಾನದಲ್ಲಿ ಯಾರು?
ಇನ್ನು ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ ಪಕ್ಕ ನಿಲ್ಲುವ ಇಬ್ಬರು ಸ್ಪರ್ಧಿಗಳ ಹೆಸರು ಕೂಡ ಲೀಕ್ ಮಾಡಿದ್ದಾರೆ. ಒಂದ್ಕಡೆ ಡ್ರೋನ್ ಪ್ರತಾಪ್ ಹಾಗೂ ಇನ್ನೊಂದು ಕಡೆ ಕಾರ್ತಿಕ್ ಮಹೇಶ್ ಇರುತ್ತಾರೆ ಎಂದು ಹೇಳಲಾಗಿದೆ. ಆದರೆ, ಈ ಪಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಯಷ್ಟೇ. ನಾಳೆ (ಜನವರಿ 28) ಗ್ರ್ಯಾಂಡ್ ಫಿನಾಲೆಯಲ್ಲಿ ರಿವೀಲ್ ಆಗಲಿದೆ. ಆ ವೇಳೆ ಈ ಲೀಕ್ ಆಗಿರೋ ಪಟ್ಟಿ ನಿಜನಾ? ಅಲ್ವಾ ಅನ್ನೋದು ಗೊತ್ತಾಗುತ್ತೆ.


Click it and Unblock the Notifications











