For Quick Alerts
  ALLOW NOTIFICATIONS  
  For Daily Alerts

  ಇನ್ ಟು ದಿ ವೈಲ್ಡ್: ರಜನಿಕಾಂತ್ ಕಾರ್ಯಕ್ರಮದ ಪ್ರೋಮೋ ಹಂಚಿಕೊಂಡ ಬಿಯರ್ ಗ್ರಿಲ್ಸ್

  |

  ಸೂಪರ್ ಸ್ಟಾರ್ ರಜನಿಕಾಂತ್ ಕಾಣಿಸಿಕೊಂಡಿರುವ 'ಇನ್ ಟು ದಿ ವೈಲ್ಡ್' ಕಾರ್ಯಕ್ರಮದ ಕಂತಿನ ಆಕರ್ಷಕ ಪ್ರೋಮೋವನ್ನು ಬ್ರಿಟನ್‌ನ ಸಾಹಸಿ ಬಿಯರ್ ಗ್ರಿಲ್ಸ್ ಹಂಚಿಕೊಂಡಿದ್ದಾರೆ.

  ಕರ್ನಾಟಕದ ಬಂಡೀಪುರದಲ್ಲಿ ಅರಣ್ಯ ಹಾಗೂ ಪ್ರಾಣಿಗಳ ಕುರಿತಾದ ಈ ಕಾರ್ಯಕ್ರಮವನ್ನು ಚಿತ್ರೀಕರಿಸಲಾಗಿತ್ತು. ಬಿಯರ್ ಗ್ರಿಲ್ಸ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಪ್ರೋಮೋದಲ್ಲಿ ರಜನಿಕಾಂತ್ ಬಂಡೀಪುರದ ಕಾಡಿನಲ್ಲಿ ವಾಹನ ಚಾಲನೆ ಮಾಡಿಕೊಂಡು ಹೋಗುವ ವಿಡಿಯೋ ತೋರಿಸಲಾಗಿದೆ.

  'ಮ್ಯಾನ್ ವರ್ಸಸ್ ವೈಲ್ಡ್' ಕಾರ್ಯಕ್ರಮ ಸರಣಿಗಳಿಂದ ಜನಪ್ರಿಯರಾಗಿರುವ 45 ವರ್ಷದ ಬಿಯರ್ ಗ್ರಿಲ್ಸ್, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕಾರ್ಯಕ್ರಮ ನಡೆಸಿದ್ದು, ಭಾರಿ ವೀಕ್ಷಣೆಗೆ ಒಳಪಟ್ಟಿತ್ತು.

  ರಜನಿಕಾಂತ್ ಕಾಡಿನ ಎತ್ತರವಾದ ಮರಗಳ ನಡುವೆ ಸಾಗುವ ದೃಶ್ಯಕ್ಕೆ ಬಿಯರ್ ಗ್ರಿಲ್ಸ್ ಹಿನ್ನೆಲೆ ಧ್ವನಿ ಕೇಳಿಸುತ್ತದೆ. 'ಅವರು ತುಂಬಾ ಭಯಪಟ್ಟುಕೊಂಡಿದ್ದಾರೆ. ಆದರೆ ಅವರು ಎಂದಿಗೂ ಅದರಿಂದ ಹಿಂದೆ ಸರಿಯುವುದಿಲ್ಲ. ಅವರು ಎಂದೆಂದಿಗೂ ಪಾಸಿಟಿವ್ ಆಗಿರುತ್ತಾರೆ' ಎಂದು ಹೇಳಿದ್ದಾರೆ.

  'ಸೂಪರ್ ಸ್ಟಾರ್ ರಜನಿಕಾಂತ್ ಯಾವುದಕ್ಕೂ ಜಗ್ಗದೆ ಪಾಸಿಟಿವ್ ಆಗಿರುತ್ತಾರೆ ಮತ್ತು ತಮ್ಮ ಉತ್ಸಾಹವನ್ನು ಎಂದಿಗೂ ಬಿಡುವುದಿಲ್ಲ. ತಮ್ಮ ಎಡೆಗೆ ಎದುರಾಗುವ ಪ್ರತಿ ಸವಾಲನ್ನೂ ಎದುರಿಸಿಕೊಂಡು ಕಾಡಿನಲ್ಲಿ ಹೋಗುವುದು ಕಾಣಿಸುತ್ತದೆ' ಎಂದು ಬಿಯರ್ ಗ್ರಿಲ್ಸ್ ಬರೆದಿದ್ದಾರೆ.

  ಮಾರ್ಚ್ 23ರಂದು ಡಿಸ್ಕವರಿ ಚಾನೆಲ್‌ನಲ್ಲಿ ರಾತ್ರಿ 8 ಗಂಟೆಗೆ ವೈಲ್ಡ್ ವಿತ್ ಬಿಯರ್ ಗ್ರಿಲ್ಸ್ ವೀಕ್ಷಿಸಿ. ತಲೈವಾ ಇನ್ ಡಿಸ್ಕವರಿ ಎಂದು ಹ್ಯಾಷ್ ಟ್ಯಾಗ್ ಬಳಸಿ ಹೇಳಿದ್ದಾರೆ.

  English summary
  Bear Grylls shared a trailer of Into The Wild episode featuring Rajinikanth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X