ಸಮನ್ವಿಗೂ ಮುನ್ನ ಮೊದಲ ಮಗುವನ್ನು ಕಳೆದುಕೊಂಡಿದ್ದ ಅಮೃತ ನಾಯ್ಡು ಕುಟುಂಬ!
ಕನ್ನಡದ ಮನೆ ಮನಗಳಲ್ಲಿ ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮಕ್ಕಳು ಸ್ಥಾನ ಪಡೆದುಕೊಂಡಿದ್ದಾರೆ. ವಾರಾಂತ್ಯ ಬಂತು ಎಂದರೆ ಸಾಕು ಮನೆ ಮಂದಿ ಎಲ್ಲಾ ಮುದ್ದು ಮಕ್ಕಳ ತುಂಟಾಟ ನೋಡಲು ಟಿವಿ ಮುಂದೆ ಹಾಜರಾಗಿ ಬಿಡುತ್ತಿದ್ದರು. ಅಂತಹ ಮುದ್ದು ಮಕ್ಕಳಲ್ಲಿ ಕಲಾವಿದೆ ಅಮೃತಾ ನಾಯ್ಡು ಅವರ ಮಗಳು ಸಮನ್ವಿ ಎಲ್ಲರನ್ನು ಬಿಟ್ಟು ಬಾರದ ಲೋಕಕ್ಕೆ ಹೋಗಿಬಿಟ್ಟಿದ್ದಾಳೆ.
ಸಮನ್ವಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ. ಕಾರ್ಯಕ್ರಮದ ಮೂಲಕ ಎಲ್ಲರಿಗೂ ಹತ್ತಿರ ಆಗಿದ್ದ ಆರು ವರ್ಷದ ಈ ಪುಟ್ಟ ಬಾಲಕಿ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾಳೆ. ಇದು ಕರುನಾಡ ಜನರ ಮನಸ್ಸನ್ನು ಗಾಸಿಗೊಳಿಸಿದೆ. ಯಾಕೆಂದರೆ ಈ ಬಾಲಕಿ ತಮ್ಮ ಮುದ್ದು ನಗುವಿನಿಂದ, ತುಂಟಾಟದಿಂದ ಎಲ್ಲರ ಮನ ಗೆದ್ದಿದ್ದಳು.
ನಿಜಕ್ಕೂ ಇದು ಕುಟುಂಬಸ್ಥರಿಗೆ ತುಂಬಲಾಗದ ನಷ್ಟವೇ ಸರಿ. ಅಮೃತಾ ನಾಯ್ಡು ಅವರ ಕುಟುಂಬಕ್ಕೆ ಇದು ದುರದೃಷ್ಟಕರ ಸಂಗತಿ. ನೋವಿನ ಸಂಗತಿ ಏನೆಂದರೆ ಸಮನ್ವಿಗೂ ಮೊದಲು ಜನಿಸಿದ್ದ, ಅಮೃತಾ ಅವರ ಹೆಣ್ಣು ಮಗು ಒಂದು ಮನೆಗೆ ಬರುವ ಮುನ್ನವೇ ಕೊನೆಯುಸಿರೆಳೆದಿತ್ತು.

ಹುಟ್ಟಿದ 20 ದಿನಕ್ಕೆ ಮೊದಲ ಮಗು ನಿಧನ!
ಈ ಕಾರ್ಯಕ್ರಮ ಒಂದು ಸಂಚಿಕೆಯಲ್ಲಿ ಅಮೃತ ಅವರು ತಮ್ಮ ಮೊದಲ ಮಗುವಿನ ಬಗ್ಗೆ ಹೇಳಿಕೊಂಡು ಕಣ್ಣೀರು ಹಾಕಿದ್ದರು. ಯಾಕೆಂದರೆ ಮೊದಲ ಮಗು ಆದ ಸಂತೋಷ ಅವರಿಗೆ ಎಚ್ಚು ದಿನ ಇರಲಿಲ್ಲ. ಈ ಬಗ್ಗೆ ಅಮೃತ ಅವರು ಹೀಗೆ ಹೇಳಿಕೊಂಡಿಡದ್ದಾರೆ. "7 ತಿಂಗಳಿಗೆ ಮಗು ಹುಟ್ಟಿತು. ಏಳು ತಿಂಗಳಿಗೆ ಹುಟ್ಟಿದಕ್ಕೆ ಚಿಕಿತ್ಸೆ ನೀಡಬೇಕಾಗಿತ್ತು. 20 ದಿನಗಳ ಕಾಲ ಮಗು ಜೀವಂತವಾಗಿ ಇತ್ತು. ಆ ಪುಟ್ಟ ಕಂದನಿಗೆ ಚಿಕಿತ್ಸೆ ನೀಡುತ್ತಿರುವುದನ್ನು ನೋಡಲು ಆಗುತ್ತಿರಲಿಲ್ಲ. ಆದರೆ ಹೆಚ್ಚು ದಿನ ಮಗು ಬದುಕಲಿಲ್ಲ. ನಮ್ಮ ಕಣ್ಣ ಮುಂದೆಯೇ ಮಗು ಕೊನೆಯುಸಿರೆಳೆಯಿತು. ಆ ನೋವನ್ನು ತಡೆಯಲು ಸಾಧ್ಯ ಆಗಲಿಲ್ಲ". ಎಂದು ಹೇಳುತ್ತಾ ಅಮೃತ ಅವರು ವೇದಿಕೆ ಮೇಲೆ ಕಣ್ಣೀರು ಹಾಕಿದ್ದರು.

ಸಮನ್ವಿಯಲ್ಲೇ ಮೊದಲ ಮಗುವನ್ನು ಕಾಣುತ್ತಿದ್ದ ಕುಟುಂಬ!
ಮೊದಲ ಮಗು ಇಲ್ಲವಾದ ನೋವನ್ನು ಸಮನ್ವಿ ಮರೆಸಿದ್ದಳು. ಮೊದಲ ಮಗು ಕೂಡ ಹೆಣ್ಣು ಮಗು ಆಗಿತ್ತು. ಹಾಗಾಗಿ ಅದೇ ಮಗು ಮತ್ತೆ ಸಮನ್ವಿ ರೂಪದಲ್ಲಿ ಬಂದಿಗೆ ಎಂದು ಕುಟುಂಬಸ್ಥರು ಸಮಾಧಾನ ಮಾಡಿಕೊಂಡಿದ್ದರಂತೆ. ಈ ವಿಚಾರವನ್ನೂ ಅಮೃತ ಅವರು ಹಂಚಿಕೊಂಡಿದ್ದರು. ಆದರೆ ಈಗ ಸಮನ್ವಿ ಕೂಡ ಅಮ್ಮನ್ನನ್ನು ಬಿಟ್ಟು ದೂರಾಗಿದ್ದಾಳೆ. ಅಪಘಾತದ ಸ್ಥಳದಲ್ಲೇ ಸಮನ್ವಿ ಮೃತ ಪಟ್ಟಿದ್ದಾಳೆ. ಅಮೃತಾ ಅವರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಟಿ ತಾರ, ಸೃಜನ್ ಲೋಕೇಶ್ ಭಾವುಕ!
ಇನ್ನು ಈ ವಿಚಾರ ಕೇಳಿದ ರಿಯಾಲಿ ಶೋ ಸ್ಪರ್ಧಿಗಳು ಮತ್ತು ಜಡ್ಜ್‌ಗಳೂ ಭಾವುಕರಾಗಿದ್ದಾರೆ. ಮಗ ಸಮನ್ವಿಯನ್ನು ನೆನೆದು ಭಾವುಕವಾಗಿದ್ದಾರೆ. 7 ವಾರಗಳ ಕಾಲ ಕಾರ್ಯಕ್ರಮದಲ್ಲಿ ಸಮನ್ವಿ ಭಾಗಿ ಆಗಿದ್ದಳು. ಅಂತೆಯೇ ಜಡ್ಜ್‌ಗಳಾದ ನಟಿ ತಾರ, ಅನುಪ್ರಭಾಕರ್ ಮತ್ತು ಸೃಜನ್ ಲೋಕೇಶ್ ಅವರ ಮೆಚ್ಚಿನ ಸ್ಪರ್ಧಿ ಕೂಡ ಆಗಿದ್ದಳು. ಹಾಗಾಗಿ ನಟಿ ತಾರಾ ಭಾವುಕರಾಗಿ ಸಮನ್ವಿ ಬಗ್ಗೆ ಮಾತನಾಡಿದ್ದಾರೆ. ಇನ್ನು ಸೃಜನ್ ಲೋಕೇಶ್ ಪೋಸ್ಟ್ ಹಂಚಿ ಕೊಂಡು ಸಮನ್ವಿ ಬಗ್ಗೆ ಬರೆದುಕೊಂಡಿದ್ದಾರೆ.

8ನೇ ವಾರಕ್ಕೆ ಎಲಿಮಿನೇಟ್ ಆಗಿದ್ದ ಅಮೃತ-ಸಮನ್ವಿ!
ಕಾರ್ಯಕ್ರಮ ಆರಂಭದಿಂದ ಸಮನ್ವಿ ಮತ್ತು ಅಮೃತಾ ಇಬ್ಬರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗಿ ಆಗಿ, ಮನರಂಜನೆ ನೀಡುತ್ತಿದ್ದರು. ಮೊದಲ ವಾರದಿಂದ 7 ವಾರಗಳ ತನಕ ಅಮ್ಮ, ಮಗಳ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಆದರೆ 8ನೇ ವಾರಕ್ಕೆ ಇಬ್ಬರು ಕಾರ್ಯಕ್ರಮದಿಂದ ಎಲಿಮಿನೇಟ್ ಆದರು. ಇದನ್ನು ಕೂಡ ಅಮೃತಾ ಅವರು ಸ್ಪೂರ್ಟಿವ್ ಆಗಿ ತೆಗೆದುಕೊಂಡು, ಖುಷಿಯಿಂದಲೇ ಶೋನಿಂದ ಹೊರ ಬಂದಿದ್ದರು.


Click it and Unblock the Notifications











