ರಾಹುಲ್ - ಮಾಲಿನಿ ಮದುವೆ ವಿಚಾರ ಪರಿಗೆ ತಿಳಿದೇ ಬಿಡ್ತು: ಮುಂದೇನು?

ಇಷ್ಟು ದಿನ ಹೂವಿ ಜೊತೆಗೆ ಆನಂದದಿಂದ ರಾಹುಲ್ ಕಾಲ ಕಳೆದಿದ್ದಾನೆ. ಗಂಡನ ಪ್ರೀತಿ ಕೊಟ್ಟಿದ್ದಾನೆ. ಅಳಿಯನಾಗಿ ಮನೆ ಮಂದಿ ಜೊತೆಗೆಲ್ಲಾ ಹೇಗಿರಬೇಕು ಅಷ್ಟು ಸಲಿಗೆಯಿಂದ ಇದ್ದ. ಆದರೆ ಅನಿವಾರ್ಯ ಕಾರಣಗಳಿಂದ ಅವಳನ್ನು ಬಿಟ್ಟು, ರಾಹುಲ್ ಬೆಂಗಳೂರಿಗೆ ನಡೆದಿದ್ದಾನೆ. ಎಲ್ಲರಿಂದಲೂ ಮುಚ್ಚಿಟ್ಟ ಸತ್ಯವನ್ನು ಮತ್ತೆ ಮುಚ್ಚಿಡಲು ಯತ್ನಿಸಿದ್ದಾರೆ. ಆದರೆ ಸತ್ಯ ಈಗ ಪರಿಯ ಮುಂದೆ ಬಟಾ ಬಯಲಾಗಿದೆ.

ಹೂವಿ ಬದುಕಲ್ಲಿ ಹುಲಿಯಾ ಪಾತ್ರ ತುಂಬಾ ಮುಖ್ಯವಾದದ್ದಾಗಿದೆ. ತಂದೆ ಇಲ್ಲದ ಹೂವಿಗೆ ತಂದೆಯ ಪಾತ್ರವನ್ನೇ ಕೊಟ್ಟು ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾನೆ. ಅದರಂತೆ ಪರಿ ಕೂಡ. ಪರಿಗು ತನ್ನೆತ್ತವರು ಯಾರೆಂದು ತಿಳಿದಿಲ್ಲ. ಆದರೆ ಹುಲಿಯನೇ ಅಪ್ಪ ಅಮ್ಮನಾಗಿ ಜವಾಬ್ದಾರಿ ತೆಗೆದುಕೊಂಡಿದ್ದಾನೆ. ಈಗ ರಜೆಗೆಂದು ಪರಿ ಚನ್ನವಲ್ಸೆಗೆ ಬಂದಿದ್ದಾನೆ. ಬಂದವನಿಗೆ ಶಾಕ್ ಎನಿಸುವ ವಿಚಾರ ಕೇಳಿದೆ.

ಪರಿಗೆ ಹುಟ್ಟಿದೆ ಹೂವಿ ಮೇಲೆ ಪ್ರೀತಿ

ಪರಿಗೆ ಹುಟ್ಟಿದೆ ಹೂವಿ ಮೇಲೆ ಪ್ರೀತಿ

ಪರಿ ಹುಲಿಯಾ ಸಾಕಿದ ಮಗ. ಸಿಟಿಯಲ್ಲಿ ಓದುತ್ತಿರುವ ಹುಡುಗ. ಸದ್ಯ ಊರಿಗೆ ರಜೆಗೆಂದು ಬಂದಿದ್ದಾನೆ. ಆದರೆ ಪರಿ ಮನಸ್ಸಲ್ಲಿ ಹೂವಿ ಬಗ್ಗೆ ಅದೇನೋ ಕಾಳಜಿ. ಅದನ್ನು ಪ್ರೀತಿ ಎಂದೇ ಹೇಳಬಹುದು. ಹೂವಿಯ ಬಳಿ ಅಷ್ಟು ಖುಷಿಯಿಂದ ಇರುತ್ತಾನೆ. ಅಷ್ಟೇ ಏಕೆ ಎಷ್ಟೋ ಸಲ ಹೂವಿ ಮತ್ತು ರಾಹುಲ್ ಮದುವೆ ನಡೆದಿದ್ದೇ ತಪ್ಪಾಯಿತು, ಅಂದು ನಾನಿರಬೇಕಿತ್ತು. ಇದೆಲ್ಲವನ್ನು ನಡೆಯುವುದಕ್ಕೆ ಬಿಡುತ್ತಿರಲಿಲ್ಲ ಎನ್ನುತ್ತಿರುತ್ತಾ‌ನೆ. ಹೂವಿಯನ್ನು ಅಪಾರ ಪ್ರೀತಿ ಮಾಡುವವನಂತೆ ಕಾಣಿಸುತ್ತಾನೆ. ಆದರೆ ಹೂವಿಗೆ ಅದರ ಅರಿವಿದ್ದಂತೆ ಕಾಣುತ್ತಿಲ್ಲ.

ಪರಿಗೆ ಇನ್ನೂ ಹೂವಿ ಮೇಲಿದೆ ಪ್ರೀತಿ

ಪರಿಗೆ ಇನ್ನೂ ಹೂವಿ ಮೇಲಿದೆ ಪ್ರೀತಿ

ಹೂವಿ ಮತ್ತು ರಾಹುಲ್ ಮದುವೆ ಅನಿವಾರ್ಯತೆಯಿಂದ ಆದದ್ದು ಎಂಬುದು ಪರಿಗೂ ಗೊತ್ತಾಗಿದೆ. ರಾಹುಲ್ ಮತ್ತು ಹೂವಿ ನಡುವೆ ಎಲ್ಲವೂ ಸರಿ ಇಲ್ಲ ಎಂಬುದು ತಿಳಿದಿದೆ. ಇದೇ ಕಾರಣಕ್ಕೆ ಆಗಾಗ ಗಂಡ ಹೆಂಡತಿ ಸಂಬಂಧದ ಬಗ್ಗೆ ಪರಿ, ಹೂವಿ ಬಳಿ ಕೇಳುತ್ತಾ ಇರುತ್ತಾನೆ. ಆದರೆ ಹೂವಿ ನಾವಿಬ್ಬರು ಚೆನ್ನಾಗಿಯೇ ಇದ್ದೇವೆ ಎಂದಿದ್ದಾಳೆ. ಅಷ್ಟೆ ಯಾಕೆ ಅವಳಿಗೆ ಹತ್ತಿರವಾಗಲು ಯತ್ನಿಸುತ್ತಿರುತ್ತಾನೆ. ದೇವಸ್ಥಾನದಲ್ಲಿ ಪೂಜೆ ನಡೆದಾಗಲೂ, ರಾತ್ರಿಯೆಲ್ಲಾ ಹೂವಿ ಜೊತೆಗೆ ನಾನಿರುತ್ತೇನೆ ಎಂದಿದ್ದ. ಆದರೆ ಹೂವಿ, ರಾಹುಲ್ ಕಡೆಗೆ ವಾಲುತ್ತಿದ್ದ ಕಾರಣಕ್ಕೆ ಸ್ವಲ್ಪ ದೂರವೇ ನಿಂತಿದ್ದಾನೆ.

ಪರಿ ಮೊಬೈಲ್ ಬಳಸಿ ತಪ್ಪು ಮಾಡಿದಳಾ ಹೂವಿ

ಪರಿ ಮೊಬೈಲ್ ಬಳಸಿ ತಪ್ಪು ಮಾಡಿದಳಾ ಹೂವಿ

ರಾಹುಲ್ ಅಷ್ಟು ದಿನ ಚನ್ನವಲ್ಸೆಯಲ್ಲಿದ್ದು, ಬೆಂಗಳೂರಿಗೆ ವಾಪಾಸ್ಸಾದ ಬಳಿಕ ಹೂವಿಯ ಮನಸ್ಸಲ್ಲಿ ಮಂಕು ಕವಿದಿದೆ. ಯಾರ ಜೊತೆಗೂ ಮಾತನಾಡದೆ ಮಂಕಾಗಿ ಕುಳಿತಿದ್ದಾಳೆ‌. ಇದನ್ನು ಕಂಡ ಗೌರ, ಮಗಳ ಮನಸ್ಸನ್ನು ಅರ್ಥ ಮಾಡಿಕೊಂಡಿದ್ದಾಳೆ. ಅಳಿಯಂದಿರಿಗೆ ಫೋನ್ ಮಾಡಿ ಮಾತನಾಡಲು ಹೇಳಿದ್ದಾಳೆ. ಹೂವಿ, ರಾಹುಲ್‌ಗೆ ಫೋನ್ ಮಾಡಲು ಪರಿ ಮೊಬೈಲ್ ಬಳಸಿದ್ದಾಳೆ. ಇದೇ ಅಲ್ಲಿ ದೊಡ್ಡ ಪ್ರಮಾದವಾಗಿದೆ. ಮುಚ್ಚಿಟ್ಟ ಸತ್ಯ ಬಯಲಾಗುವುದಕ್ಕೆ ದಾರಿಯಾಗಿದೆ.

ಹೂವಿ ಇನ್ನು ಸತ್ಯ ಮುಚ್ಚಿಡುತ್ತಾಳಾ?

ಪರಿ ಮೊಬೈಲ್ ನಿಂದ ಹೂವಿ, ರಾಹುಲ್ ಗೆ ಕಾಲ್ ಮಾಡಿದ್ದಾಳೆ. ಆಗ ಮಾಲಿನಿ ಪಕ್ಕದಲ್ಲಿಯೇ ಇದ್ದಾಳೆ‌. ರಾಹುಲ್ ಆ ನಂಬರ್ ನಿಂದ ಬಂದ ಕರೆಯನ್ನು ಅನೌನ್ ನಂಬರ್ ಎಂದೇ ಹೇಳಿದ್ದಾನೆ. ಆದರೆ ಅಷ್ಟೊತ್ತು ಮಾತನಾಡುವಂಥದ್ದು ಏನಿತ್ತು ಎಂಬುದು ಮಾಲಿನಿಗೆ ಅನುಮಾನ ಮೂಡಿದೆ. ಆ ಕಡೆ ಪರಿಗೂ ಹೂವಿಯ ಮಾತು ಅನುಮಾನ ಬರಿಸಿದೆ. ಮಾಲಿ‌ನಿ, ರಾಹುಲ್ ಮಲಗಿದ ಮೇಲೆ ಮೊಬೈಲ್ ತೆಗೆದು, ಅದೇ ನಂಬರ್‌ಗೆ ಕರೆ ಮಾಡಿದ್ದಾಳೆ. ಪರಿಗೆ ಎಲ್ಲಾ ಸತ್ಯವನ್ನು ಹೇಳಿದ್ದಾಳೆ. ಇದನ್ನು ಕೇಳಿದ ಪರಿ ಶಾಕ್ ಆಗಿದ್ದಾನೆ.

More from Filmibeat

English summary
Bettada Hoo Serial August 3rd Episode Written Update. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X