"ನಾನು ಗಿಲ್ಲಿಯಿಂದ ಮಾತ್ರ ಬೆಳೆದಿದ್ದೇನೆ ಅಂದ್ಕೊಂಡ್ರೆ ತಪ್ಪು"; ಯಶಸ್ವಿನಿ

ಬಿಗ್ ಬಾಸ್ ಕನ್ನಡ ಸೀಸನ್ 12 ಅನ್ನು ಗೆದ್ದ ಬಳಿಕ ಗಿಲ್ಲಿ ಜನಪ್ರಿಯತೆ ನಾಲ್ಕೈದು ಪಟ್ಟು ಹೆಚ್ಚಾಗಿದೆ. ಅಸಂಖ್ಯಾತ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಗಿಲ್ಲಿಗೆ ಸಿನಿಮಾರಂಗದಿಂದ ಆಫರ್‌ಗಳು ಬರೋದು ಹೆಚ್ಚಾಗಿವೆ. ಇವೆಂಟ್‌ಗಳಲ್ಲಿ ಹೆಚ್ಚಾಗು ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೇ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದಕ್ಕೆ ಬೇಕಾಗಿರೋ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಇದೇ ವೇಳೆ ಭರ್ಜರಿ ಬ್ಯಾಚುಲರ್‌ನಲ್ಲಿ ಗಿಲ್ಲಿಗೆ ಜೋಡಿಯಾಗಿದ್ದ ಯಶಸ್ವಿನಿ ಸಂದರ್ಶನ ನೀಡಿದ್ದಾರೆ. ಇದರಲ್ಲಿ ಗಿಲ್ಲಿ ಬಗ್ಗೆ ಯಶಸ್ವಿ ಕೊಟ್ಟ ಹೇಳಿಕೆಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. 'ಭರ್ಜರಿ ಬ್ಯಾಚುಲರ್‌' ರಿಯಾಲಿಟಿ ಶೋ ಉದ್ದಕ್ಕೂ ಗಿಲ್ಲಿ ಯಶಸ್ವಿಯನ್ನು ಕಾಲೆಳೆದಿದ್ದ ವೀಕ್ಷಕರಿಗೆ ಮನರಂಜನೆ ನೀಡಿದ್ದರು.

Bharjari Bachelor Yashaswini Says She Didn t Grow Because of Bigg Boss Kannada Winner Gilli

ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಯಶಸ್ವಿ ಕೊಟ್ಟ ಹೇಳಿಕೆಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿವೆ. ಗಿಲ್ಲಿ ಇಂದು ಈ ಮಟ್ಟಕ್ಕೆ ಬೆಳೆಯುವುದಕ್ಕೆ ನಾನು ನೀಡಿದ ಅವಕಾಶವೂ ಒಂದು ಕಾರಣ ಎಂದು ಹೇಳಿದ್ದು, ವೈರಲ್ ಆಗುತ್ತಿದೆ. ಗಿಲ್ಲಿ ಅಭಿಮಾನಿಗಳು ಈ ವಿಡಿಯೋವನ್ನು ಇಟ್ಟುಕೊಂಡು ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಅಷ್ಟಕ್ಕೂ ಗಿಲ್ಲಿ ಬಗ್ಗೆ ಯಶಸ್ವಿ ಏನು ಹೇಳಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ.

Also Read
ಬಿಗ್ ಬಾಸ್‌ನಲ್ಲಿ ತಟ್ಟೆ ತೊಳೆಯೂ ಹಿಂದೇಟು ಹಾಕ್ತಿದ್ದ ಗಿಲ್ಲಿ.. ಜಿಮ್‌ನಲ್ಲಿ ಭಾರೀ ಕಸರತ್ತು
ಬಿಗ್ ಬಾಸ್‌ನಲ್ಲಿ ತಟ್ಟೆ ತೊಳೆಯೂ ಹಿಂದೇಟು ಹಾಕ್ತಿದ್ದ ಗಿಲ್ಲಿ.. ಜಿಮ್‌ನಲ್ಲಿ ಭಾರೀ ಕಸರತ್ತು

ಯಶಸ್ವಿ ಕಿರುತೆರೆಯಲ್ಲಿ ತಮ್ಮದೇ ಆದ ಸಾಧನೆ ಮಾಡಿದ್ದಾರೆ. ರಿಯಾಲಿಟಿ ಶೋ, ಧಾರಾವಾಹಿ ಅಂತ ಬ್ಯುಸಿಯಾಗಿದ್ದಾರೆ. ಅದರಲ್ಲೂ 'ಭರ್ಜರಿ ಬ್ಯಾಚುಲರ್ಸ್'ನಲ್ಲಿ ಗಿಲ್ಲಿಗೆ ಜೋಡಿಯಾಗಿ ವೀಕ್ಷಕರಿಗೆ ಸಖತ್ ಮನರಂಜನೆ ನೀಡಿದ್ದರು. ಗಿಲ್ಲಿ ಈಗ ಜನಪ್ರಿಯತೆಯ ಉತ್ತುಂಗದಲ್ಲಿ ಇದ್ದಾರೆ. ಹೀಗಾಗಿ ಸಂದರ್ಶನದಲ್ಲಿ ಗಿಲ್ಲಿ ಬಗ್ಗೆ ಕೇಳಿದ ಪ್ರಶ್ನೆಗೆ ಯಶಸ್ವಿನಿ ಕೊಟ್ಟ ಪ್ರತಿಕ್ರಿಯೆ ಹೀಗಿದೆ. "ಭರ್ಜರಿ ಬ್ಯಾಚುಲರ್ಸ್‌ ಶೋನಲ್ಲಿ ನಾನು ಒಂದು ವೇಳೆ ಗಿಲ್ಲಿಗೆ ಮಾತನಾಡಲು ಅವಕಾಶ ಕೊಡದೇ ಇದ್ದಿದ್ದರೆ, ಅವನ ಅದ್ಭುತ ಪ್ರತಿಭೆ ಹೊರ ಬರುತ್ತಿರಲಿಲ್ಲವೇನೋ..? ಆ ವೇದಿಕೆಯಲ್ಲಿ ಅವನಿಗೆ ಒಂದು ಸ್ಪೇಸ್‌ ಮಾಡಿಕೊಟ್ಟಿದ್ದೀನಿ. ಗಿಲ್ಲಿ ಇಲ್ಲಿಯವರೆಗೆ ಬರುವುದಕ್ಕೆ ಸಣ್ಣ ಪ್ರಯತ್ನ ಮಾಡಿದ್ದಕ್ಕೆ ನನಗೆ ಹೆಮ್ಮೆಯಿದೆ" ಎಂದು ಯಶಸ್ವಿನಿ ಸಂದರ್ಶನದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

Bharjari Bachelor Yashaswini Says She Didn t Grow Because of Bigg Boss Kannada Winner Gilli

ಗಿಲ್ಲಿ ಬಿಗ್ ಬಾಸ್‌ಗೆ ಹೋಗಿ ಬಂದ್ಮೇಲೆ ಜನಪ್ರಿಯತೆ ಹೆಚ್ಚಾಗಿದೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿಯಿಂದಲೇ ಯಶಸ್ವಿನಿ ಬೆಳೆದಿದ್ದು ಎಂಬ ಮಾತುಗಳು ಕೇಳಿ ಬಂದಿದ್ದವು. ಹೀಗಾಗಿ ಇದೇ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. "ಗಿಲ್ಲಿಯಿಂದ ನಾನು ಬೆಳೆದಿಲ್ಲ. ಯಾರಾದರೂ ಹಾಗೆ ಭಾವಿಸಿದರೆ ಅದು ತಪ್ಪು. ಇಬ್ಬರೂ ಸರಿಸಮನಾಗಿ ಕೆಲಸ ಮಾಡಿದ್ದು, ರಿಯಾಲಿಟಿ ಶೋನಲ್ಲಿ ನಮ್ಮಿಬ್ಬರ ಜೋಡಿ ವರ್ಕ್‌ಔಟ್ ಆಗಿದೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಗಿಲ್ಲಿ ಬಗ್ಗೆ ಯಶಸ್ವಿನಿ ನೀಡಿದ ಹೇಳಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಗಿಲ್ಲಿ ಅಭಿಮಾನಿಗಳು ಯಶಸ್ವಿನಿ ಹೇಳಿಕೆಯನ್ನು ಟೀಕಿಸುತ್ತಿದ್ದಾರೆ. ಅವರು ಆಡಿದ ಮಾತುಗಳು ಸರಿಯಿಲ್ಲ ಎಂದಿದ್ದಾರೆ. ಆದರೆ, ಯಶಸ್ವಿನಿ ಗಿಲ್ಲಿ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. "ಗಿಲ್ಲಿ ತುಂಬಾ ಎತ್ತರಕ್ಕೆ ಬೆಳೆದಿದ್ದು, ಜನರಿಗೆ ಪ್ರೀತಿ ಸಿಕ್ಕಿದೆ. ಅದನ್ನು ಅವನು ಹೇಗೆ ಉಳಿಸಿಕೊಳ್ಳುತ್ತಾನೆ ಅನ್ನೋದು ಅವನಿಗೆ ಬಿಟ್ಟ ವಿಚಾರ" ಎಂದು ಯಶಸ್ವಿನಿ ಹೇಳಿದ್ದಾರೆ.

ಗಿಲ್ಲಿ ಬಿಗ್ ಬಾಸ್ ಗೆದ್ದ ಬಳಿಕವೂ ಇಬ್ಬರ ಫ್ರೆಂಡ್‌ಶಿಫ್ ಹಾಗೇ ಉಳಿದುಕೊಂಡಿದೆ ಎಂದು ಹೇಳಿದ್ದಾರೆ. "ಗಿಲ್ಲಿ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿರುವುದರಿಂದ ನೇರವಾಗಿ ಭೇಟಿಯಾಗಿಲ್ಲ. ಆದರೆ, ಫೋನ್ ಮೂಲಕ ಸಂಪರ್ಕದಲ್ಲಿ ಇದ್ದೇವೆ. ರಿಯಾಲಿಟಿ ಶೋನಿಂದ ಹೊರಬಂದ ಮೇಲೆ ನಿನ್ನ ಬದುಕು ಎಷ್ಟು ಬದಲಾಗಿದೆ ಅಂತ ಹೇಳಿದ್ದೆ. ನನಗಂತೂ ಅವನ ಬೆಳವಣಿಗೆಯಿಂದ ಖುಷಿಯಾಗಿದೆ" ಎಂದು ಯಶಸ್ವಿನಿ ಹೇಳಿದ್ದಾರೆ.

English summary
Bharjari Bachelor Yashaswini Says She Didn’t Grow Because of Bigg Boss Kannada Winner Gilli.
Read more about: yashaswini gilli actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X