ಗಗನಗಾಗಿ ಡ್ರೋನ್ ಉರುಳು ಸೇವೆ; "ಗಿಲ್ಲಿ ಬಡವ ಇರಬಹುದು ಹೃದಯದಲ್ಲಿ ತುಂಬಾ ದೊಡ್ಡ ವ್ಯಕ್ತಿ ಎಂದ ನೆಟ್ಟಿಗರು

ವೀಕೆಂಡ್ ಬಂತು ಅಂದರೆ ಮನರಂಜನಾ ವಾಹಿನಿಗಳು ವೀಕ್ಷಕರನ್ನು ಟಿವಿ ಮುಂದೆ ಕಟ್ಟಿ ಹಾಕುವುದಕ್ಕೆ ಒಂದರ ಹಿಂದೊಂದು ಪ್ರೋಮೋಗಳನ್ನು ಬಿಡುತ್ತಾರೆ. ಅದರಲ್ಲೂ ರಿಯಾಲಿಟಿ ಶೋಗಳ ಪ್ರೋಮೋಗಳಂತೂ ವೀಕ್ಷಕರ ಕುತೂಹಲವನ್ನು ಹೆಚ್ಚು ಮಾಡುತ್ತಲೇ ಇರುತ್ತೆ. ಇಂತಹ ರಿಯಾಲಿಟಿ ಶೋಗಳಲ್ಲಿ 'ಭರ್ಜರಿ ಬ್ಯಾಚುಲರ್' ಕೂಡ ಒಂದು. ಪ್ರತಿ ವಾರವೂ ಈ ಶೋ ಕಿರುತೆರೆ ವೀಕ್ಷಕರಿಗೆ ಕಿಕ್ ಕೊಡುತ್ತಿದೆ.

ಜೀ ಕನ್ನಡದ ಭರ್ಜರಿ ಬ್ಯಾಚುಲರ್ಸ್ ಶೋ ಈ ವಾರ ಮತ್ತಷ್ಟು ಮನರಂಜನೆಯನ್ನು ಹೊತ್ತು ತಂದಂತೆ ಕಾಣುತ್ತಿದೆ. ಯಾಕಂದ್ರೆ, ಈ ವಾರ ಡೆಡಿಕೇಷನ್ ರೌಂಡ್ ಇಟ್ಟಿದ್ದಾರೆ. ಎಲ್ಲಾ ಸ್ಪರ್ಧಿಗಳು ರಿಯಾಲಿಟಿ ಶೋನಾ ತಮ್ಮ ಪಾರ್ಟ್ನರ್‌ಗೆ ಡಿಡಿಕೇಟ್ ಮಾಡುವ ರೌಂಡು ಇದೆ. ಈ ರೌಂಡ್‌ನಲ್ಲಿ ಡ್ರೋನ್ ಪ್ರತಾಪ್ ಈ ಶೋನಲ್ಲಿ ಪಾರ್ಟ್ನರ್ ಆಗಿರುವ ಗಗನಗಾಗಿ ಉರುಳು ಸೇವೆ ಮಾಡಿದ್ದಾರೆ.

'ಭರ್ಜರಿ ಬ್ಯಾಚುಲರ್' ಶೋನಲ್ಲಿ ಡ್ರೋನ್ ಪ್ರತಾಪ್ ಹಾಗೂ ಗಗನಾ ಇಬ್ಬರೂ ಜೋಡಿಯಾಗಿ ಪರ್ಫಾರ್ಮ್ ಮಾಡುತ್ತಿದ್ದಾರೆ. ಇವರಿಬ್ಬರೂ ಶೋ ಆರಂಭ ಆದಲ್ಲಿಂದ ಗಮನ ಸೆಳೆಯುತ್ತಿದ್ದಾರೆ. ಈ ವಾರ ಕೂಡ ಡ್ರೋನ್ ಪ್ರತಾಪ್ ಹಾಗೂ ಗಗನಾ ಗಮನ ಸೆಳೆದಿದ್ದಾರೆ. ಡ್ರೋನ್ ಉರುಳು ಸೇವೆ ಪ್ರೋಮೊದಲ್ಲಿ ಹೈಲೈಟ್ ಆಗಿದೆ. ಡ್ರೋನ್ ಒಳ್ಳೆಯತನಕ್ಕೆ ಗಗನಾ ಕಣ್ಣೀರು ಹಾಕಿದ್ದಾರೆ. ರವಿಚಂದ್ರನ್ ಹಾಗೂ ರಚಿತಾ ರಾಮ್ ಮೆಚ್ಚುಗೆ ಸೂಚಿಸಿದ್ದಾರೆ.

Bharjari Bachelors Drone Pratap prayed to God to make Gagana a famous actress in Sandalwood

ಡೆಡಿಕೇಷನ್ ರೌಂಡ್‌ನಲ್ಲಿ ಡ್ರೋನ್ ಪ್ರತಾಪ್ ಡೆಡಿಕೇಷನ್ ಇಷ್ಟ ಆಗಿದೆ. ಗಗನಾ ಸ್ಯಾಂಡಲ್‌ವುಡ್‌ನಲ್ಲಿ ಖ್ಯಾತ ನಟಿಯಾಗಲಿ ಅಂತ ಡ್ರೋನ್ ಪ್ರತಾಪ್ ಉರುಳು ಸೇವೆ ಮಾಡಿದ್ದಾರೆ. ಇದು ಗಗನಾಗೆ ಸರ್ಪ್ರೈಸ್ ಕೊಟ್ಟಿದೆ. ಡ್ರೋನ್ ಉರುಳು ಸೇವೆ ಮಾಡಿದ್ದು ನೋಡಿ ಗಳಗಳನೇ ಕಣ್ಣೀರು ಹಾಕಿದ್ದಾರೆ. ಇದರೊಂದಿಗೆ ದೇವಸ್ಥಾನದ ನೆಲದ ಮೇಲೆ ಆಹಾರ ಸೇವಿಸಿದ್ದಾರೆ. ಗಗನಾಗಾಗಿ ವಿಶೇಷ ಪೂಜೆಯನ್ನು ಮಾಡಿಸಿ, ಪ್ರಸಾದವನ್ನು ತಂದು ವೇದಿಕೆ ಮೇಲೆ ತಿನ್ನಿಸಿದ್ದಾರೆ. ಇವಿಷ್ಟು ಪ್ರೋಮೊದಲ್ಲಿ ರಿವೀಲ್ ಮಾಡಲಾಗಿದೆ.

ಡ್ರೋನ್ ಪ್ರತಾಪ್ ಉರುಳು ಸೇವೆ ಮಾಡಿದ ಪ್ರೋಮೊ ರಿವೀಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್‌ಗಳನ್ನು ಮಾಡುವುದಕ್ಕೆ ಶುರು ಮಾಡಿದ್ದಾರೆ. ನೆಟ್ಟಿಗರೊಬ್ಬರು "ನಿನ್ನ ಬೆಳವಣ್ಣಿಗೆ ನೋಡಿ ಉರ್ಕೊಂಡು ಕಾಮೆಂಟ್ ಹಾಕುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ನೀನು ಬೆಳಿ ಗುರು" ಎಂದು ಧೈರ್ಯ ತುಂಬಿದ್ದಾರೆ." ಇನ್ನೊಬ್ಬರು "ಪ್ರತಾಪ್ ಅಣ್ಣನ ಪ್ರೀತಿ ತುಂಬಾ ದೊಡ್ಡದು. ಸದಾ ಇರಲಿ ನಿಮ್ಮ ಪ್ರೀತಿ ಹೀಗೆ" ಹರ್ಷ ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ ಗಿಲ್ಲಿ ನಟನ ಸಪೋರ್ಟ್‌ ಮಾಡಿ ಕೆಲವರು ಕಮೆಂಟ್ ಮಾಡಿದ್ದಾರೆ. " ಗಿಲ್ಲಿ ಬಡವ ಇರಬಹುದು. ಆದರೆ, ಮನದಿಂದ ತುಂಬಾ ದೊಡ್ಡ ವ್ಯಕ್ತಿ" ಎಂದು ಗಿಲ್ಲಿ ಹಾಗೂ ಗಗನ ಜೋಡಿ ಬಗ್ಗೆ ಮಾತಾಡಿದ್ದಾರೆ. ಮತ್ತೊಬ್ಬರು "ಗಿಲ್ಲಿ ನಟ ಇಲ್ಲ ಅಂದಿದ್ರೆ ಈ ಗಗನಾ ಯಾರು ಅಂತ ಯಾರಿಗೂ ಗೊತ್ತೇ ಇರ್ಲಿಲ್ಲ" ಎಂದು ಕೋಪ ಹೊರ ಹಾಕಿದ್ದಾರೆ. ಮತ್ತೊಬ್ಬರು "ಕಾಗೆ ಹಾರಿಸೋ ಪ್ರತಾಪ್. ಡವ್ ರಾಣಿ ಗಗನಾ. ಕ್ಯಾಮೆರಾ ಮುಂದೆ ಭಯಂಕರ ನಾಟಕ ಮಾಡ್ತೀರ" ಎಂದಿದ್ದಾರೆ. ಇಷ್ಟೆಲ್ಲ ಕಮೆಂಟ್ ಬಂದರೂ, "ಯಾರು ಏನೇ ಅಂದರೂ ದೇವರು ಇದ್ದಾನೆ. ನೀನು ಬೆಳಿ ಪ್ರತಾಪ್" ಎಂದು ಹುರಿದುಂಬಿಸಿದ್ದಾರೆ.

ಇನ್ನು ಡ್ರೋನ್ ಪ್ರತಾಪ್ ಡೆಡಿಕೇಷನ್‌ಗೆ ತೀರ್ಪುಗಾರರಾಗಿರುವ ಕ್ರೇಜಿ ಸ್ಟಾರ್ ರವಿಚಂದ್ರನ್ ಖುಷಿ ವ್ಯಕ್ತಪಡಿಸಿದ್ದಾರೆ. ಒಳ್ಳೆಯ ಕೆಲಸ ಮಾಡಿದ್ದೀಯ. ನಿನ್ನ ಮನಸ್ಸಿನಲ್ಲಿರುವ ಪ್ರೀತಿ, ವಿಶ್ವಾಸವನ್ನು ನಿನ್ನದೇ ರೀತಿಯಲ್ಲಿ ವ್ಯಕ್ತಪಡಿಸಿದ್ದೀಯ ಎಂದು ಹೇಳಿದ್ದಾರೆ. ಇನ್ನು ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ನಲ್ಲಿ ಈ ವಾರ ಡ್ರೋನ್ ಪ್ರತಾಪ್, ಗಗನಾ ಸಿಕ್ಕಾಪಟ್ಟೆ ಹೈಲೈಟ್ ಆಗಿದ್ದಾರೆ.

More from Filmibeat

English summary
Bharjari Bachelors Drone Pratap prayed to God to make Gagana a famous actress in Sandalwood.
Read more about: reality show tv show god
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X