Bigg Boss:ಬಿಗ್ ಬಾಸ್ ಮನೆಯಲ್ಲಿ ಬ್ಲ್ಯಾಕ್ ಮ್ಯಾಜಿಕ್ ನಡೀತಾ? ಮನೆಯಿಂದ ಹೊರ ಬಂದವರು ಹೇಳಿದ್ದೇನು?

ಬಿಗ್ ಬಾಸ್ ಅನ್ನೋದು ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡುತ್ತಿರುವ ಒಂದು ರಿಯಾಲಿಟಿ ಶೋ. ಕಳೆದ 19 ವರ್ಷಗಳಿಂದ ಬಿಗ್ ಬಾಸ್ ಪ್ರತಿ ಸೀಸನ್‌ನಲ್ಲೂ ಏನಾದರೂ ಒಂದು ವಿಶೇಷ ಸಂಗತಿಯನ್ನು ಹೊತ್ತು ಬರುತ್ತಿದೆ. ಇತ್ತೀಚೆಗೆ ಬಿಗ್ ಬಾಸ್ ಶೋನಲ್ಲಿ ಹೆಚ್ಚಾಗಿ ವಿವಾದಗಳೇ ನೋಡುವುದಕ್ಕೆ ಸಿಗುತ್ತಿದೆ. ಅದರಲ್ಲೂ ಬಿಗ್ ಬಾಸ್ ಹಿಂದಿಯಲ್ಲಂತೂ ಕಿತ್ತಾಟದ ಮಿತಿಯೇ ಮೀರಿದೆ.

ಸದ್ಯ ಸಲ್ಮಾನ್ ಖಾನ್ ನಡೆಸಿ ಕೊಡುತ್ತಿರುವ 'ಬಿಗ್ ಬಾಸ್ 19' ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ನಾಳೆ (ಡಿಸೆಂಬರ್ 7) 19ನೇ ಸೀಸನ್‌ನ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಇದರಲ್ಲಿ ಬಿಗ್ ಬಾಸ್ ಸೀಸನ್ 19ರ ವಿನ್ನರ್ ಯಾರು ಅನ್ನೋದು ಹೊರಬೀಳಲಿದೆ. ಈ ಮಧ್ಯೆ ಗ್ರ್ಯಾಂಡ್ ಫಿನಾಲೆಗೂ ಮುನ್ನ ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಟಾಪ್ ಸ್ಪರ್ಧಿಯೊಬ್ಬರ ಬ್ಲ್ಯಾಕ್ ಮ್ಯಾಜಿಕ್ ಬಗ್ಗೆ ಸಂದರ್ಶನವೊಂದರಲ್ಲಿ ಕ್ಲಾರಿಟಿ ಕೊಟ್ಟಿದ್ದಾರೆ.

Bigg Boss 19 Grand Finale Is black magic practiced by Tanya Mittal on Baseer Ali Malti Chahar response

ಬಿಗ್ ಬಾಸ್ ಮನೆಯೊಳಗಿರುವ ಸ್ಪರ್ಧಿಗಳಲ್ಲಿ ಬಸೀರ್ ಅಲಿ ಅನ್ನೊರು ಸಹ ಸ್ಪರ್ಧಿಯಾಗಿರುವ ತಾನಿಯಾ ಮಿತ್ತಲ್ ಮೇಲೆ ಬ್ಲ್ಯಾಕ್ ಮ್ಯಾಜಿಕ್ ಮಾಡಿಸಿರುವ ಆರೋಪ ಮಾಡಿದ್ದರು. ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿತ್ತು. ಅಲ್ಲಿಗೆ ಮತ್ತೆ ತಣ್ಣಗಾಗಿದ್ದ ಈ ಸಂಗತಿ ಈಗ ಮತ್ತೆ ಚರ್ಚೆಗೆ ಬಂದಿದೆ. ಅದೂ ಗ್ರ್ಯಾಂಡ್ ಫಿನಾಲೆ ನಡೆಯುವುದಕ್ಕೂ ಮುನ್ನ. ಅದಕ್ಕೆ ಕಾರಣ, ಗ್ರ್ಯಾಂಡ್ ಫಿನಾಲೆಗೂ ಮುನ್ನ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮಾಲ್ತಿ ಚಹರ್.

ಬಿಗ್ ಬಾಸ್ ಮನೆಯಿಂದ ಮಾಲ್ತಿ ಚಹರ್ ಹೊರ ಬರುತ್ತಿದ್ದಂತೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಇದರಲ್ಲಿ ಇದೇ ಸೀಸನ್‌ನ ಸ್ಪರ್ಧಿಯಾಗಿದ್ದ ಬಸೀರ್ ಅಲಿ ಎಂಬುವವರು ಸಹ ಸ್ಪರ್ಧಿ ತಾನಿಯಾ ಮಿತ್ತಲ್ ವಿರುದ್ಧ ಬ್ಲಾಕ್ ಮ್ಯಾಜಿಕ್ ಆರೋಪ ಮಾಡಿದ್ದನ್ನು ಖಂಡಿಸಿದ್ದಾರೆ. ಬಸೀರ್ ಅಲಿ ಮನೆಯೊಳಗೆ ಇದ್ದಾಗ, 'ಡೈನೋ ಪಾರ್ಕ್' ಅನ್ನೋ ಟಾಸ್ಕ್ ಸಮಯದಲ್ಲಿ ತಾನಿಯಾ ಮಿತ್ತಲ್ ತಮ್ಮ ಫೋಟೋ ಸ್ಪರ್ಶಿಸಿ, ಕೆಲವು ಮಂತ್ರಗಳನ್ನು ಹೇಳಿ, ಏನೋ ಊದಿದ್ದಾರೆಂದು ಆರೋಪಿಸಿದ್ದರು. ಈ ಘಟನೆ ತನ್ನ ಮೇಲೆ ಪರಿಣಾಮ ಬೀರಿತ್ತು. ಅದೇ ದಿನ ತಾನು ಆಸ್ವಸ್ಥನಾಗಿದ್ದೆ. ಇದು ಬ್ಲ್ಯಾಕ್ ಮ್ಯಾಜಿಕ್ ಅಲ್ಲದೆ ಮತ್ತೇನೂ ಅಲ್ಲ ಎಂದು ಹೇಳಿಕೊಂಡಿದ್ದರು.

ಬಸೀರ್ ಅಲಿ ಮಾಡಿದ್ದ ಈ ಆರೋಪಗಳಿಗೆ ಮಾಲ್ತಿ ಚಹರ್ ಸರಿಯಾಗೇ ತಿರುಗೇಟು ಕೊಟ್ಟಿದ್ದಾರೆ. ಬಸೀರ್ ಅಲಿ 'ಬ್ಲ್ಯಾಕ್ ಮ್ಯಾಜಿಕ್' ಅಂತೆಲ್ಲ ಮಾತಾಡುತ್ತಾರೆ. ಅವರಿಗೆ ಕಾಲಾ ಜಾದೂ ಅನ್ನೋದು ಚಿಕ್ಕ ವಿಷಯ ಅಂತ ಅನಿಸುತ್ತಿದೆ. ಬಸೀರ್ ಕೇವಲ ಮನರಂಜನೆಗಾಗಿ ಇಂತಹ ಮಾತುಗಳನ್ನು ಆಡುತ್ತಾರೆ. ಬಿಗ್ ಬಾಸ್ ವೀಕ್ಷಕರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಅವರು ಮನೆಯೊಳಗಿನ ನಡೆದ ಸಂಗತಿಗಳನ್ನು ಸುಮ್ಮನೆ ಉತ್ಪ್ರೇಕ್ಷೆ ಮಾಡುತ್ತಾರೆಂದು ಅಭಿಪ್ರಾಯ ಪಟ್ಟಿದ್ದಾರೆ.

Bigg Boss 19 Grand Finale Is black magic practiced by Tanya Mittal on Baseer Ali Malti Chahar response

ಈ ಮೂಲಕ ಬಿಗ್ ಬಾಸ್ ಮನೆಯಲ್ಲಿ ಬ್ಲ್ಯಾಕ್ ಮ್ಯಾಜಿಕ್ ನಡೆದಿಲ್ಲವೆಂದು ಕ್ಲಾರಿಟಿ ಕೊಟ್ಟಿದ್ದಾರೆ. ಹಾಗೇ ಇನ್ನೊಬ್ಬ ಸ್ಪರ್ಧಿ ಕುನಿಕಾ ಸದಾನಂದ್ ಎಂಬುವವರು ಇವರನ್ನು ಸಲಿಂಗಿ ಎಂದು ಕರೆದಿದ್ದರು. ಇದನ್ನು ಕೇಳಿ ಕುನಿಕಾ ಸದಾನಂದ್ ವಿರುದ್ಧ ಮಾಲ್ತಿ ಕೆರಳಿ ಕೆಂಡವಾಗಿದ್ದರು. ವೀಕೆಂಡ್‌ನಲ್ಲಿ ಈ ವಿಷಯ ಸಿಕ್ಕಾಪಟ್ಟೆ ವಿವಾದವನ್ನು ಸೃಷ್ಟಿಸಿತ್ತು. ಕುನಿಕಾ ಬಿಗ್ ಬಾಸ್ ಮನೆಯಿಂದ ಹೊರ ಹೋಗುವಾಗ ಮಾಲ್ತಿ ಆಕೆಯನ್ನು ಬೀಳ್ಕೊಟ್ಟಿರಲಿಲ್ಲ. ಕ್ಷಮೆ ಕೇಳಿದ ಬಳಿಕವೇ ತಬ್ಬಿಕೊಂಡು ಬೀಳ್ಕೊಟ್ಟಿದ್ದರು.

ನಾಳೆ (ಡಿಸೆಂಬರ್ 7) ನಡೆಯಲಿರುವ ಬಿಗ್ ಬಾಸ್ 19 ಗ್ರ್ಯಾಂಡ್ ಫಿನಾಲೆಯಲ್ಲಿ ಐದು ಮಂದಿ ಫೈನಲಿಸ್ಟ್‌ಗಳು ಇದ್ದಾರೆ. ಗೌರವ್ ಖನ್ನಾ, ಅಮಲ್ ಮಲಿಕ್, ಪ್ರಣೀತ್ ಮೋರೆ, ಫರ್ಹಾನಾ ಭಟ್ ಮತ್ತು ತಾನಿಯಾ ಮಿತ್ತಲ್ ಫೈನಲ್ ಸ್ಪರ್ಧಿಗಳಾಗಿದ್ದಾರೆ. ಇವರಲ್ಲಿ ಯಾರು ಗೆಲ್ಲುತ್ತಾರೆ ಅನ್ನೋದು ಇನ್ನೇನು ಕೆಲವೇ ಕ್ಷಣಗಳಲ್ಲಿ ತಿಳಿಯಲಿದೆ. ಮಾಲ್ತಿ ಚಹರ್ ಆರನೇ ಸ್ಪರ್ಧಿಯಾಗಿದ್ದರು.

More from Filmibeat

English summary
Bigg Boss 19 Grand Finale: Is black magic practiced by Tanya Mittal on Baseer Ali Malti Chahar response.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X