Bigg Boss 2025: ಸಲ್ಮಾನ್ ಖಾನ್, ನಾಗಾರ್ಜುನ, ಮೋಹನ್‌ಲಾಲ್, ಸುದೀಪ್.. ಯಾರಿಗೆ ಎಷ್ಟೆಷ್ಟು ಸಂಭಾವನೆ?
2025ನೇ ಸಾಲಿನ ಬಿಗ್‌ಬಾಸ್ ಪರ್ವ ಆರಂಭ ಆಗಿದೆ. ಬಿಗ್ ಬಾಸ್ ಹಿಂದಿ 19ನೇ ಸೀಸನ್ ಈಗಾಗಲೇ ಶುರುವಾಗಿದೆ. ಸಲ್ಮಾನ್ ಖಾನ್ 19ನೇ ಸೀಸನ್‌ನ ಮೊದಲ ವಾರದ ಬಿಗ್ ಬಾಸ್ ರಿಯಾಲಿಟಿ ಶೋ ಅನ್ನು ನಡೆಸಿಕೊಟ್ಟಿದ್ದೂ ಆಗಿದೆ. ಇದರ ಹಿಂದೇನೆ ಮಲಯಾಳಂನಲ್ಲಿ, ತೆಲುಗಿನಲ್ಲಿ ಹಾಗೂ ನಂತರ ಕನ್ನಡದಲ್ಲಿಯೂ ಬಿಗ್ ಬಾಸ್ ಆರಂಭ ಆಗುತ್ತಿದೆ. ಮಲಯಾಳಂನಲ್ಲಿ ಮೋಹನ್‌ಲಾಲ್ ಬಿಗ್ ಬಾಸ್ ಸೀಸನ್ 7ರ ನಿರೂಪಣೆ ಮಾಡುತ್ತಿದ್ದಾರೆ. ಹಿಂದಿ ಜೊತೆ ಮಲಯಾಳಂ ಕೂಡ ಆರಂಭ ಆಗಿದೆ. ತೆಲುಗಿನಲ್ಲಿ ನಾಗಾರ್ಜುನ ಹಾಗೂ ಕನ್ನಡದಲ್ಲಿ ಕಿಚ್ಚ ಸುದೀಪ್ ನಡೆಸಿಕೊಡಲಿದ್ದಾರೆ.
ಹಿಂದಿ ಹಾಗೂ ಮಲಯಾಳಂನಲ್ಲಿ ಹೊಸ ಸೀಸನ್‌ಗಳು ಆರಂಭ ಆಗಿವೆ. ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ತೆಲುಗು ಹಾಗೂ ಕನ್ನಡ ವರ್ಷನ್‌ಗಳು ಆರಂಭ ಆಗಲಿವೆ. ಪ್ರತಿ ವರ್ಷ ಬಾಗ್ ಬಾಸ್ ಆರಂಭ ಆದಾಗಲೂ ಸ್ಟಾರ್‌ಗಳ ಅಭಿಮಾನಿಗಳಿಗೆ ಈ ವರ್ಷ ಎಷ್ಟು ಸಂಭಾವನೆ ತೆಗೆದುಕೊಂಡರು ಅನ್ನೋ ಕುತೂಹಲ ಹುಟ್ಟಿಕೊಳ್ಳುತ್ತೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಸಲ್ಮಾನ್ ಖಾನ್, ನಾಗಾರ್ಜುನ, ಮೋಹನ್‌ಲಾಲ್ ಹಾಗೂ ಕಿಚ್ಚ ಸುದೀಪ್ ಪಡೆದಿರುವ ಸಂಭಾವನೆ ಬಗ್ಗೆ ಚರ್ಚೆಯಾಗುತ್ತಿದೆ. ಹಾಗಿದ್ದರೆ, ಯಾರೆಲ್ಲ ಎಷ್ಟೆಷ್ಟು ಸಂಭಾವನೆ ಪಡೆದು ನಿರೂಪಣೆ ಮಾಡುತ್ತಿದ್ದಾರೆಂದು ನೋಡುವುದಾದರೇ..

ಸಲ್ಮಾನ್ ಖಾನ್-ಬಿಗ್ ಬಾಸ್ 19
ಬಿಗ್ ಬಾಸ್ ಸೀಸನ್ ಆರಂಭ ಆದಲ್ಲಿಂದಲೂ ಬೇರೆ ಭಾಷೆಯ ನಿರೂಪಕರಿಗೆ ಹೋಲಿಕೆ ಮಾಡಿದರೆ ಸಲ್ಮಾನ್ ಖಾನ್‌ಗೆ ಅತೀ ಹೆಚ್ಚು ಸಂಭಾವನೆ ಸಿಗುತ್ತೆ. ಈಗಾಗಲೇ 19 ಸೀಸನ್ ನಡೆಯುತ್ತಿದೆ. ಈ 19 ಸೀಸನ್‌ಗಳಲ್ಲಿ ಮಧ್ಯೆ ಕೆಲವನ್ನು ಬೇರೆ ನಟರು ಹೋಸ್ಟ್ ಮಾಡಿದ್ದಾರೆ. ಅದನ್ನು ಬಿಟ್ಟರೆ, ಸಲ್ಮಾನ್ ಖಾನ್ ಅತೀ ಹೆಚ್ಚು ಸೀಸನ್‌ಗಳನ್ನು ಹೋಸ್ಟ್ ಮಾಡಿದ್ದಾರೆ.
ಈ ಬಾರಿ ಸಲ್ಮಾನ್ ಖಾನ್ ಈ ಹಿಂದೆ ತೆಗೆದುಕೊಳ್ಳುತ್ತಿದ್ದ ಸಂಭಾವನೆಯನ್ನು ಕಡಿಮೆ ಮಾಡಿಕೊಂಡಿದ್ದಾರೆ ಎಂದು ವರದಿಗಳಾಗಿದ್ದವು. ಏಪ್ಯಾನೆಟ್ ನ್ಯೂಸ್ ಪ್ರಕಾರ, ಸಲ್ಮಾನ್ ಖಾನ್ ಈ ಬಾರಿ ಸೀಸನ್ 19ಕ್ಕೆ ಸುಮಾರು 120 ಕೋಟಿ ರೂಪಾಯಿಯಿಂದ 150 ಕೋಟಿ ರೂಪಾಯಿವರೆಗೂ ಸಂಭಾವನೆಯನ್ನು ಪಡೆದಿದ್ದಾರೆಂದು ವರದಿಯಾಗಿದೆ. ಈ ಮೂಲಕ ಕಿರುತೆರೆಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಎಂದು ಹೇಳಲಾಗಿದೆ.
ನಾಗಾರ್ಜುನ- ಬಿಗ್ ಬಾಸ್ 9
ಬಿಗ್‌ಬಾಸ್ ತೆಲುಗು ಸೀಸನ್ 9 ಇನ್ನೇನು ಕೆಲವೇ ದಿನಗಳಲ್ಲಿ ಆರಂಭ ಆಗುತ್ತಿದೆ. ಈ ಬಾರಿ ಕೂಡ ನಾಗಾರ್ಜುನ ಅವರೇ ನಿರೂಪಣೆ ಮಾಡುತ್ತಿದ್ದಾರೆ. ಟಾಲಿವುಡ್‌ನ ಸ್ಟೈಲಿಶ್ ಆಕ್ಟರ್ ನಾಗಾರ್ಜುನಗೆ ಕೂಡ ಒಳ್ಳೆಯ ಸಂಭಾವನೆಯೇ ಸಿಗುತ್ತಿದೆ. ಹಲವು ಸೀಸನ್‌ಗಳು ತೆಲುಗು ಬಿಗ್ ಬಾಸ್‌ನ ಫೇಸ್ ಆಗಿದ್ದ ನಾಗಾರ್ಜುನ 9ನೇ ಸೀಸನ್‌ನಲ್ಲಿ ಸುಮಾರು 30 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್‌ನಲ್ಲಿ ಸಲ್ಮಾನ್ ಖಾನ್ ಬಿಟ್ಟರೆ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟ ನಾಗಾರ್ಜುನ.

ಮೋಹನ್‌ಲಾಲ್- ಬಿಗ್ ಬಾಸ್ 7
ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಬಿಗ್ ಬಾಸ್ ಮಲಯಾಳಂನ 7ನೇ ಸೀಸನ್ ಅನ್ನು ನಿರೂಪಣೆ ಮಾಡುತ್ತಿದ್ದಾರೆ. ಅಪಾರ ಅಭಿಮಾನಿಗಳನ್ನ ಹೊಂದಿರುವ ಮೋಹನ್‌ಲಾಲ್ ನಿರೂಪಣಾ ಶೈಲಿಗೆ ಮಲಯಾಳಿಗಳು ಫಿದಾ ಆಗಿದ್ದಾರೆ. ಈಗಾಗಲೇ 7ನೇ ಸೀಸನ್ ಆರಂಭ ಆಗಿದ್ದು, ಮೋಹನ್‌ಲಾಲ್ ಬಿಗ್ ಬಾಸ್ 7ನೇ ಸೀಸನ್ ಅನ್ನು ನಿರೂಪಣೆ ಮಾಡುವುದಕ್ಕೆ ಬರೋಬ್ಬರಿ ₹7 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಕಿಚ್ಚ ಸುದೀಪ್- ಬಿಗ್‌ಬಾಸ್ 12
ಕನ್ನಡದಲ್ಲಿ ಕಳೆದ 11 ಸೀಸನ್‌ಗಳನ್ನೂ ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿದ್ದಾರೆ. ಬೇರೆ ಭಾಷೆಗಳಿಗೆ ಹೋಲಿಸಿದರೆ, ಎಲ್ಲಾ ಸೀಸನ್‌ಗಳನ್ನು ಒಬ್ಬರೇ ನಿರೂಪಣೆ ಮಾಡಿದ ಏಕೈಕ ನಿರೂಪಕ ಕಿಚ್ಚ ಸುದೀಪ್ ಎನಿಸಿಕೊಂಡಿದ್ದಾರೆ. 12ನೇ ಸೀಸನ್ ನಿರೂಪಣೆ ಮಾಡುವುದಿಲ್ಲ ಎಂದು ಹೇಳಿದ್ದರು. ಬಳಿಕ ಕಲಸ್ ಕನ್ನಡ ಕಿಚ್ಚನ ಮನವೊಲಿಸಿ ನಿರೂಪಣೆಗೆ ಒಪ್ಪಿಸಿದ್ದರು. ಇನ್ನು ಸಂಭಾವನೆ ಕಡೆಗೆ ಬರೋದಾರೆ, 12ನೇ ಸೀಸನ್ ಅನ್ನು ನಿರೂಪಣೆ ಮಾಡುವುದಕ್ಕೆ ಕಿಚ್ಚ ಸುದೀಪ್ ಬರೋಬ್ಬರಿ 8 ರಿಂದ 10 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಇದು ಕಲರ್ಸ್ ಕನ್ನಡದಿಂದಾಗಲಿ, ಕಿಚ್ಚನ ಕಡೆಯಿಂದಾಗಲಿ ಅಧಿಕೃತವಾಗಿ ಬಂದಿಲ್ಲ.


Click it and Unblock the Notifications











